ಕಾಂಗ್ರೆಸ್ ಪಕ್ಷವು ವಿಧಾನಸಭೆ ಚುನಾವಣೆಗೂ ಪೂರ್ವವಾಗಿ ಭರವಸೆ ನೀಡಿದ್ದ ಎಲ್ಲ ಗ್ಯಾರಂಟಿ ಕಾರ್ಡ್ ಯೋಜನೆಗಳನ್ನು ( Guaranty Sceme) ಹಂತ ಹಂತವಾಗಿ ರಾಜ್ಯದ ಜನತೆಗಾಗಿ ಜಾರಿಗೆ ತರುತ್ತಿದೆ. ಈಗಾಗಲೇ ಜೂನ್ ತಿಂಗಳಿನಿಂದ ಶಕ್ತಿ ಯೋಜನೆಯ ಪ್ರಯೋಜನವನ್ನು ರಾಜ್ಯದ ಮಹಿಳೆಯರು ಪಡೆಯುತ್ತಿದ್ದಾರೆ ಹಾಗೂ ಜುಲೈ ತಿಂಗಳನಿಂದ ಅರ್ಹ ಫಲಾನುಭವಿಗಳು ಗೃಹಜ್ಯೋತಿ ಮತ್ತು ಅನ್ನಭಾಗ್ಯ ಯೋಜನೆಯ ಪ್ರಯೋಜನವನ್ನು ಪಡೆಯುತ್ತಿದ್ದಾರೆ.
ಗೃಹಲಕ್ಷ್ಮಿ ಯೋಜನೆಗೆ ಈಗಾಗಲೇ ಅರ್ಜಿ ಆಹ್ವಾನ ಪ್ರಕ್ರಿಯೆ ಆರಂಭವಾಗಿದ್ದು ಆಗಸ್ಟ್ ತಿಂಗಳಿಂದ ಕರ್ನಾಟಕದ ಪ್ರತಿ ಕುಟುಂಬದ ಯಜಮಾನಿಯೂ ಕೂಡ 2000ರೂ. ಸಹಾಯಧನವನ್ನು ಪಡೆಯಲಿದ್ದಾರೆ. ಒಟ್ಟಾರೆಯಾಗಿ ಈವರೆಗೆ ನಾಲ್ಕು ಯೋಜನೆಗಳು ಕೂಡ ಚಾಲ್ತಿ ಸಿಕ್ಕಂತಾಗಿದೆ.
ಹಾಗಾಗಿ ರಾಜ್ಯದ ನಿರುದ್ಯೋಗಿ ಯುವಜನತೆಗಾಗಿ ಘೋಷಿಸಿದ್ಧ ಯುವನಿಧಿ ಯೋಜನೆ (Yuva Nidhi Sceme) ಬಗ್ಗೆ ಕೂಡ ಪ್ರಶ್ನೆ ಜೋರಾಗಿತ್ತು. ಈ ಬಗ್ಗೆ ಈಗ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ (CM Siddaramaiah) ಅವರು ಮಾಹಿತಿ ನೀಡಿದ್ದಾರೆ. ಯುವನಿಧಿ ಯೋಜನೆಯಡಿ ಪದವಿ ಪಡೆದ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು 3000 ಮತ್ತು ಡಿಪ್ಲೋಮಾ ಪದವಿ ಪಡೆದ ನಿರುದ್ಯೋಗಿಗಳಿಗೆ 1500 ನಿರುದ್ಯೋಗ ಭತ್ಯೆ ಸಿಗಲಿದೆ.
ಈ ಸುದ್ದಿ ತಪ್ಪದೆ ನೋಡಿ:-ಸ್ಟೇಟಸ್ ನಲ್ಲಿ ದುಡ್ಡು ತೋರಿಸಿದ್ರೂ ಅನ್ನ ಭಾಗ್ಯ ಹಣ ಇನ್ನೂ ನಿಮ್ಮ ಅಕೌಂಟ್ ಗೆ ಬಂದಿಲ್ವಾ.? ಇದಕ್ಕೆ ಅಸಲಿ ಕಾರಣ ಏನು.? ಇದಕ್ಕೆ ಪರಿಹಾರವೇನು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ
ಇದೇ ಡಿಸೆಂಬರ್ ತಿಂಗಳಿನಿಂದ ಯುವನಿಧಿ ಯೋಜನೆ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ. ಈ ಯೋಜನೆ ಬಗ್ಗೆ ಕೈಗೊಂಡಿರುವ ರೂಪುರೇಷೆಗಳು, ಅರ್ಜಿ ಸಲ್ಲಿಸುವ ವಿಧಾನ ಮತ್ತು ಅದಕ್ಕಾಗಿ ನೀಡಬೇಕಾದ ದಾಖಲೆಗಳು ಇನ್ನು ಮುಂತಾದ ಮಾಹಿತಿಗಳನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆಗಳು:-
● ಕರ್ನಾಟಕದಲ್ಲಿ ವಿದ್ಯಾಭ್ಯಾಸ ಪಡೆದ ಮತ್ತು ಕರ್ನಾಟಕದ ವಿದ್ಯಾರ್ಥಿಗಳಿಗೆ ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ.
● 2022-23ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಪದವಿ, ಡಿಪ್ಲೋಮಾ ಮತ್ತು ವೃತ್ತಿಪರ ಕೋರ್ಸ್ ಗಳನ್ನು ಪೂರ್ತಿ ಗೊಳಿಸಿದ ಎಲ್ಲಾ ನಿರುದ್ಯೋಗಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಮತ್ತು ತೃತಿಯ ಲಿಂಗಿಗಳು ಕೂಡ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
● ವಿದ್ಯಾಭ್ಯಾಸ ಪೂರ್ತಿಗೊಂಡು 180 ದಿನಗಳವರೆಗೂ ಕೂಡ ಉದ್ಯೋಗ ಲಭಿಸದೆ ಇದ್ದವರು ಅರ್ಜಿ ಸಲ್ಲಿಸಬಹುದು.
● ಈ ರೀತಿ ನೋಂದಣಿ ಮಾಡಿಕೊಂಡ ನಿರುದ್ಯೋಗಿಗಳಿಗೆ ಅವರ ನೋಂದಣಿ ಮಾಡಿಕೊಂಡ ದಿನದಿಂದ ಗರಿಷ್ಠ 2 ವರ್ಷಗಳವರೆಗೆ ಮಾತ್ರ ಯುವನಿಧಿ ಯೋಜನೆಯ ನಿರುದ್ಯೋಗ ಭತ್ಯೆ ಪಡೆಯಲು ಅರ್ಹರಾಗಿರುತ್ತಾರೆ.
● ಒಂದು ವೇಳೆ ಮಧ್ಯಂತರದಲ್ಲಿ ಫಲಾನುಭವಿಗಳು ಖಾಸಗಿ ಅಥವಾ ಸರ್ಕಾರಿ ಕ್ಷೇತ್ರದಲ್ಲಿ ಉದ್ಯೋಗ ಪಡೆದುಕೊಂಡರೆ ಅದನ್ನು ಘೋಷಿಸಿಕೊಳ್ಳಬೇಕು ನಂತರ ನಿರುದ್ಯೋಗ ಭತ್ಯೆಯನ್ನು ಕಡಿತಗೊಳಿಸಲಾಗುತ್ತದೆ.
● ನಿರುದ್ಯೋಗ ಸ್ಥಿತಿಯ ಬಗ್ಗೆ ಸ್ವತಂತ್ರ ಪರಿಶೀಲನೆ ಇರಬೇಕು, ಉದ್ಯೋಗ ಪಡೆದ ನಂತರ ತಪ್ಪು ಘೋಷಣೆ ಅಥವಾ ಘೋಷಿಸಲು ವಿಫಲರಾದರೆ ದಂಡ ವಿಧಿಸಲಾಗುವುದು ಎಂದು ತಿಳಿಸಲಾಗಿದೆ.
ಈ ಸುದ್ದಿ ತಪ್ಪದೆ ನೋಡಿ:-ರೈತರ ಬ್ಯಾಂಕ್ ಖಾತೆಗೆ ಶುಕ್ರವಾರ ಕೇಂದ್ರ ಸರ್ಕಾರದ ವತಿಯಿಂದ 2000 ರೂಪಾಯಿಗಳ ಸಹಾಯಧನ ಬರುತ್ತದೆ, ಆದರೆ ಹಣ ಪಡೆಯಲು ಈ ಕೆಲಸ ಕಡ್ಡಾಯ
ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಈ ಕೆಳಕಂಡವರು ಅರ್ಹರಾಗಿರುವುದಿಲ್ಲ:-
● ಉನ್ನತ ವ್ಯಾಸಂಗಕ್ಕೆ ದಾಖಲಾಗಿ ವಿದ್ಯಾಭ್ಯಾಸ ಮುಂದುವರಿಸುವವರು
● ಶಿಶಿಕ್ಷು (Apprentice) ವೇತನ ಪಡೆಯುತ್ತಿರುವವರು
● ಕೇಂದ್ರ ಅಥವಾ ರಾಜ್ಯ ಸರ್ಕಾರದ ವಿವಿಧ ಯೋಜನೆ ಅಡಿ ಯಾವುದಾದರೂ ಬ್ಯಾಂಕುಗಳಲ್ಲಿ ಸಾಲ ಪಡೆದು ಸ್ವಯಂ ಉದ್ಯೋಗ ಮಾಡುತ್ತಿರುವವರು.
ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ:-
● ಈ ಯೋಜನೆಗೆ ಅರ್ಜಿ ಸಲ್ಲಿಸಲು ವೆಬ್ಸೈಟ್ ಅನ್ನು ಸಿದ್ಧಪಡಿಸಲಾಗುತ್ತಿದ್ದು, ಫಲಾನುಭವಿಗಳು ಕೇಳಲಾಗುವ ವೈಯಕ್ತಿಕ ವಿವರಕ್ಕೆ ಸಂಬಂಧಪಟ್ಟ ಹಾಗೆ ಗುರುತಿನ ಚೀಟಿ ಮತ್ತು ಶೈಕ್ಷಣಿಕ ವಿದ್ಯಾರ್ಹತೆ ಸಂಬಂಧ ಪಟ್ಟ ಹಾಗೆ ಕೆಲ ಪ್ರಮುಖ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಸೇವಾ ಸಿಂಧು ತಂತ್ರಾಂಶದ ಮೂಲಕ ಅರ್ಜಿ ಸಲ್ಲಿಸಬೇಕು.
● ಅರ್ಜಿ ಸಲ್ಲಿಕೆ ಪೂರ್ತಿಗೊಂಡ ಬಳಿಕ ದಾಖಲೆಗಳ ಪರಿಶೀಲನೆ ನಡೆದು ನಿರಂತರವಾಗಿ ಫಲಾನುಭವಿಗಳ ಖಾತೆಗೆ ಪ್ರತಿ ತಿಂಗಳು ನಿರುದ್ಯೋಗ ಭತ್ಯೆಯನ್ನು DBT ಮೂಲಕ ವರ್ಗಾವಣೆ ಮಾಡಲಾಗುತ್ತದೆ.
0 Comments