ಇನ್ಮುಂದೆ ಕೇವಲ 600 ರೂಪಾಯಿಗೆ ಸಿಗಲಿದೆ ಗ್ಯಾಸ್ ಸಿಲಿಂಡರ್.! ಹೀಗೆ ಅರ್ಜಿ ಸಲ್ಲಿಸಿ

ಇನ್ಮುಂದೆ ಕೇವಲ 600 ರೂಪಾಯಿಗೆ ಸಿಗಲಿದೆ ಗ್ಯಾಸ್ ಸಿಲಿಂಡರ್.! ಹೀಗೆ ಅರ್ಜಿ ಸಲ್ಲಿಸಿ




 

ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ಜಾರಿಗೆ ತಂದ ಪ್ರಧಾನ ಮಂತ್ರಿ ಉಜ್ವಲ ಯೋಜನೆಯು (PMUY) ದೇಶದ ಕೋಟ್ಯಾಂತರ ಮಹಿಳೆಯರ ಅಡುಗೆಮನೆಯನ್ನು ಬೆಳಗಿಸಿದೆ ಎಂದೇ ಹೇಳಬಹುದು.
ಹೊಗೆ ಮುಕ್ತ ವಾತಾವರಣದಿಂದ ಮಹಿಳೆಯರನ್ನು ರಕ್ಷಿಸಿ, ಆರೋಗ್ಯಕರವಾದ ವಾತಾವರಣದಲ್ಲಿ ಅಡುಗೆ ಮಾಡುವ ರೀತಿ ಅನುಕೂಲತೆ ಮಾಡಿಕೊಟ್ಟು ಮಹಿಳೆಯರ ಆರೋಗ್ಯ ಸುಧಾರಣೆ ಮತ್ತು ಸಮಯ ಉಳಿತಾಯ ಎರಡನ್ನು ಯಶಸ್ವಿಗೊಳಿಸಿದಂತಹ ಯೋಜನೆ ಇದು.






ಈ ಯೋಜನೆ ಮೂಲಕ ದೇಶದ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು (BPL) ಉಚಿತವಾಗಿ ಸರ್ಕಾರದಿಂದ ಗ್ಯಾಸ್ ಕನೆಕ್ಷನ್ ಪಡೆಯುತ್ತಿವೆ ಮತ್ತು ವರ್ಷಕ್ಕೆ 12 ಸಿಲಿಂಡರ್ ಬುಕ್ಕಿಂಗ್ ಮೇಲೆ ಸಬ್ಸಿಡಿ ಕೂಡ ಸಿಗುತ್ತಿದೆ. ಈ ಯೋಜನೆ ಮೂಲಕ ಪ್ರಸ್ತುತವಾಗಿ ರೂ.600 ಗೆ ನೀವು ಗ್ಯಾಸ್ ಸಿಲೆಂಡರ್ ಪಡೆಯಬಹುದು ಹೇಗೆ ಗೊತ್ತಾ?
ಪ್ರಧಾನಮಂತ್ರಿಯ ಉಜ್ವಲ ಯೋಜನೆಯಡಿ ಗ್ಯಾಸ್ ಸಂಪರ್ಕ ಪಡೆದವರಿಗೆ ಕೇಂದ್ರ ಸರ್ಕಾರ ಪ್ರಸ್ತುತವಾಗಿ ರೂ.300 ಸಬ್ಸಿಡಿ ನೀಡುತ್ತಿದೆ. ಹಾಗಾಗಿ ಈಗ 14.2 ಕೆಜಿ ಸಿಲಿಂಡರ್ ದೆಹಲಿಯಲ್ಲಿ 600 ರೂಗಳಿಗೆ ಸಿಗುತ್ತಿದೆ ದೇಶದ ಬಹುತೇಕ ಇತರೆ ಭಾಗಗಳಲ್ಲೂ ಇದೇ ಬೆಲೆಗೆ ಸಿಗುತ್ತಿದೆ.



ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಸಿಗಲಿದೆ ಉಚಿತ ಮೊಬೈಲ್ ಫೋನ್



ಸಿಲಿಂಡರ್ ಖರೀದಿ ಮಾಡುವಾಗ ಗ್ರಾಹಕರು 903 ರೂಗಳನ್ನು ಪಾವತಿಸಬೇಕು, ನಂತರ 300 ರೂಗಳ ಸಬ್ಸಿಡಿ ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಈ ಸಬ್ಸಿಡಿ ಅನುಕೂಲತೆ ಜೊತೆಗೆ ಉಚಿತವಾಗಿ ಗ್ಯಾಸ್ ಸಂಪರ್ಕ ಪಡೆಯುವಾಗ ಒಂದು ಗ್ಯಾಸ್ ಸಿಲಿಂಡರ್, ಗ್ಯಾಸ್ ಸ್ಟವ್ ಮತ್ತು ಗ್ಯಾಸ್ ಲೈಟರ್ ಹಾಗೂ ರೆಗ್ಯುಲೇಟರ್ ಗಳನ್ನು ಕೂಡ ಉಚಿತವಾಗಿ ನೀಡಲಾಗುತ್ತಿದೆ.






ಪ್ರಧಾನ ಮಂತ್ರಿ ಉಜ್ವಲ ಯೋಜನೆ ವ್ಯಾಪ್ತಿಗೆ ಒಳಪಡದ ಗ್ರಾಹಕರು ಇದೇ ಸಿಲಿಂಡರ್ ಖರೀದಿಗೆ 903ರೂ. ಪಾವತಿಸಬೇಕು. 2023-24ನೇ ಸಾಲಿನ ಪ್ರಧಾನಮಂತ್ರಿ ಉಜ್ವಲ ಯೋಜನೆ 2.0 ಯೋಜನೆಗೂ ಕೂಡ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು ಈ ವರ್ಷ ಇನ್ನು ಹೆಚ್ಚಿನ ಮಹಿಳೆಯರಿಗೆ ಉಚಿತ ಗ್ಯಾಸ್ ಸಂಪರ್ಕ ಕಲ್ಪಿಸುವ ಗುರಿಯನ್ನು ಕೇಂದ್ರ ಸರ್ಕಾರ ಇಟ್ಟುಕೊಂಡಿದೆ ಯಾವ ರೀತಿ ಅರ್ಜಿ ಸಲ್ಲಿಸಬೇಕು? ಏನೆಲ್ಲ ದಾಖಲೆಗಳು ಬೇಕು? ಅರ್ಹತೆಗಳೇನು? ಇದರ ಕುರಿತ ವಿವರ ಹೀಗಿದೆ ನೋಡಿ.

ಅರ್ಜಿ ಸಲ್ಲಿಸಲು ಅರ್ಹತೆಗಳು:-

* ಬಡತನ ರೇಖೆಗಿಂತ ಕೆಳಗಿರುವ (BPL) ಕುಟುಂಬದ 18 ವರ್ಷ ತುಂಬಿದ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಬಹುದು
* ಕುಟುಂಬವು ಈಗಾಗಲೇ LPG ಸಂಪರ್ಕ ಹೊಂದಿರಬಾರದು.
* SC/ST, ಪ್ರಧಾನ ಮಂತ್ರಿ ಆವಾಸ್ ಯೋಜನೆ (ಗ್ರಾಮೀಣ), ಅತ್ಯಂತ ಹಿಂದುಳಿದ ವರ್ಗಗಳು (MBC), ಅಂತ್ಯೋದಯ ಅನ್ನ ಯೋಜನೆ (AAY), ಟೀ ಮತ್ತು ಎಕ್ಸ್-ಟೀ ಗಾರ್ಡನ್ ಬುಡಕಟ್ಟುಗಳು, ಅರಣ್ಯವಾಸಿಗಳು, ವಾಸಿಸುವ ಜನರು ದ್ವೀಪಗಳು ಮತ್ತು ನದಿ ದ್ವೀಪಗಳು, SECC ಕುಟುಂಬಗಳು (AHL TIN) ಮುಂತಾದ ಯಾವುದೇ ವರ್ಗಕ್ಕೆ ಸೇರಿದ ಮಹಿಳೆಯು ಅರ್ಜಿ ಸಲ್ಲಿಸಬಹುದು

ಬೇಕಾಗುವ ದಾಖಲೆಗಳು:-

* ಅರ್ಜಿದಾರರ ಗುರುತಿನ ಪುರಾವೆ ಮತ್ತು ವಿಳಾಸದ ಪುರಾವೆಗಾಗಿ ಆಧಾರ್ ಕಾರ್ಡ್
* ಪಡಿತರ ಚೀಟಿ (BPL / AAY)
* ಬ್ಯಾಂಕ್ ಪಾಸ್ ಬುಕ್ ವಿವರ
* ಮೊಬೈಲ್ ಸಂಖ್ಯೆ
* kyc







ಅರ್ಜಿ ಸಲ್ಲಿಸುವ ವಿಧಾನ:-

* ಗೂಗಲ್ ನಲ್ಲಿ LPG GAS free ಎಂದು ಸರ್ಚ್ ಮಾಡಿ ಅಥವಾ ನೇರವಾಗಿ PMUY ಅಧಿಕೃತ ವೆಬ್ಸೈಟ್ https://www.pmuy.gov.in/kn/ujjwala2.html ಲಿಂಕ್ ಕ್ಲಿಕ್ ಮಾಡಿ
* ಮುಖಪುಟದಲ್ಲಿ Click here to apply for New Ujjwala 2.0 connection ಮೇಲೆ ಕ್ಲಿಕ್ ಮಾಡಿ

* ತಕ್ಷಣ ನಿಮಗೆ ಭಾರತದಲ್ಲಿ ಗ್ಯಾಸ್ ಸಂಪರ್ಕ ನೀಡುವ ಕಂಪನಿಗಳಾದ Bharath, Indian, HP ಕಂಪನಿಗಳ ಆಪ್ಷನ್ ಕಾಣುತ್ತದೆ ನಿಮಗೆ ಯಾವ ಕಂಪನಿ ಕನೆಕ್ಷನ್ ನಿಮ್ಮ ಮನೆಗೆ ಹತ್ತಿರದಲ್ಲಿದೆ ಅದನ್ನು ಸೆಲೆಕ್ಟ್ ಮಾಡಿ, ನೀವು ಯಾವ ಕಂಪನಿ ಸೆಲೆಕ್ಟ್ ಮಾಡಿದ್ದಿರಾ ಆ ವೆಬ್ಸೈಟ್ ಓಪನ್ ಆಗುತ್ತದೆ.



DCC ಬ್ಯಾಂಕ್ ನೇಮಕಾತಿ, 10th ಪಾಸ್ ಆದವರು ಅರ್ಜಿ ಸಲ್ಲಿಸಿ ವೇತನ 58,250/-



* Type of Connection ಆಪ್ಷನ್ ನಲ್ಲಿ Regular LPG connection or Ujwala 2.0 New connection ಎನ್ನುವ ಆಯ್ಕೆಗಳು ಕಾಣುತ್ತದೆ ಅದರಲ್ಲಿ ಎರಡನೇ ಆಯ್ಕೆಯಾದ Ujjwala 2.0 New Connection ಎನ್ನುವುದನ್ನು ಸೆಲೆಕ್ಟ್ ಮಾಡಿ.
* ನೀಡಿರುವ terms and Conditions ಓದಿಕೊಂಡು Declaration check nox ನಲ್ಲಿ right mark click ಮಾಡಿ,
* ನಂತರ ನಿಮ್ಮ State and District ಸೆಲೆಕ್ಟ್ ಮಾಡಿ showlist ಎನ್ನುವುದರ ಮೇಲೆ ಕ್ಲಿಕ್ ಮಾಡಿ.







* ಆಗ ನಿಮ್ಮ ಜಿಲ್ಲೆಯಲ್ಲಿ ಇರುವ ನೀವು ಆರಿಸಿದ ಎಲ್ಲಾ ಕಂಪನಿಯ ಏಜೆನ್ಸಿಗಳ ಲಿಸ್ಟ್ ಬರುತ್ತದೆ, ಅದರಲ್ಲಿ ನಿಮ್ಮ ಮನೆಗೆ ಸಮೀಪವಾಗಿರುವುದನ್ನು select ಮಾಡಿ, Continue ಮೇಲೆ click ಮಾಡಿ ಅರ್ಜಿ ಸಲ್ಲಿಕೆ ಮುಂದುವರಿಸಬೇಕು.
* ಮೊಬೈಲ್ ನಲ್ಲಿಯೇ ಅರ್ಜಿ ಸಲ್ಲಿಸಬಹುದು ತಿಳಿಯದೆ ಇದ್ದರೆ ಈಗ ನಾವು ಮೇಲೆ ತಿಳಿಸಿದ ದಾಖಲೆ ತೆಗೆದುಕೊಂಡು ಹತ್ತಿರದಲ್ಲಿರುವ ಗ್ಯಾಸ್ ಏಜೆನ್ಸಿಗೆ ಹೋದರೆ ಸುಲಭವಾಗಿ ನಿಮಗೆ ಅರ್ಜಿ ಹಾಕಿ ಕೊಡುತ್ತಾರೆ.

Post a Comment

0 Comments