ಗೃಹಲಕ್ಷ್ಮಿ 8ನೇ ಕಂತಿನ ಹಣ ಈ ದಿನದಂದು ಬಿಡುಗಡೆ, ಇನ್ನು ಸಹ ಒಂದು ಕಂತಿನ ಹಣ ಪಡೆಯಲಾಗದವರು ಈ ರೀತಿ ಮತ್ತೊಮ್ಮೆ ಅರ್ಜಿ ಸಲ್ಲಿಸಿ

ಗೃಹಲಕ್ಷ್ಮಿ 8ನೇ ಕಂತಿನ ಹಣ ಈ ದಿನದಂದು ಬಿಡುಗಡೆ, ಇನ್ನು ಸಹ ಒಂದು ಕಂತಿನ ಹಣ ಪಡೆಯಲಾಗದವರು ಈ ರೀತಿ ಮತ್ತೊಮ್ಮೆ ಅರ್ಜಿ ಸಲ್ಲಿಸಿ


 




ಕರ್ನಾಟಕ ಸರ್ಕಾರ (Karnataka Government) ಜಾರಿಗೆ ತಂದಿರುವ ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಬಗ್ಗೆ ಎಲ್ಲರಿಗೂ ಕೂಡ ಗೊತ್ತೇ ಇದೆ. ಗೃಹಲಕ್ಷ್ಮಿ ಯೋಜನೆ ಮೂಲಕ ಕರ್ನಾಟಕ ಸರ್ಕಾರವು ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥೆ (Head of the Family) ಆಗಿರುವ ಮಹಿಳೆಯ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು ರೂ.2000 ಸಹಾಯಧನವನ್ನು ಕುಟುಂಬ ನಿರ್ವಹಣೆಗಾಗಿ DBT ಮೂಲಕ ವರ್ಗಾವಣೆ ಮಾಡುತ್ತಿದೆ.

7777

ಗೃಹಲಕ್ಷ್ಮಿ ಯೋಜನೆಯು ಕರ್ನಾಟಕ ವಿಧಾನಸಭಾ ಚುನಾವಣೆ – 2023ರ ವೇಳೆ ಕಾಂಗ್ರೆಸ್ ಸರ್ಕಾರ ಘೋಷಿಸಿದ್ದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿತ್ತು. ಮತ್ತು ಬಹುಮತ ಬೆಂಬಲದೊಂದಿಗೆ ಅಧಿಕಾರಕ್ಕೆ ಬಂದ ನಂತರ ನುಡಿದಂತೆ ನಡೆದ ಸರ್ಕಾರವು ಜುಲೈ 19, 2023ರಿಂದ ಅರ್ಜಿ ಆಹ್ವಾನ ಮಾಡಿ ಆಗಸ್ಟ್ 30, 2023ನೇ ತಾರೀಕಿನಂದು ಮೊದಲ ಕಂತಿನ ಗೃಹಲಕ್ಷ್ಮಿ ಹಣ ಬಿಡುಗಡೆ ಮಾಡಿತ್ತು.


5 ಎಕರೆ ಒಳಗೆ ಭೂಮಿ ಇರುವ ಎಲ್ಲಾ ರೈತರಿಗೂ ಸರ್ಕಾರದಿಂದ ವರ್ಷಕ್ಕೆ 31,000 ಸಿಗಲಿದೆ



ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ (WCD) ನೀಡಿರುವ ಅಂಕಿ ಅಂಶಗಳ ಮಾಹಿತಿ ಪ್ರಕಾರವಾಗಿ 1.20 ಕೋಟಿ ಮಹಿಳೆಯರು ಈವರೆಗೆ ಗೃಹಲಕ್ಷ್ಮಿ ಯೋಜನೆಗೆ ಅರ್ಹರಾಗಿದ್ದಾರೆ. ಆದರೆ ಇನ್ನು ಸಹ ಸಂಪೂರ್ಣವಾಗಿ ಎಲ್ಲಾ ಫಲಾನುಭವಿಗಳ ಖಾತೆಗೂ ಹಣ ತಲುಪಲು ಸಾಧ್ಯವಾಗಿಲ್ಲ.





ರೇಷನ್ ಕಾರ್ಡ್ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಮಾಹಿತಿಗಳಲ್ಲಿ ದಾಖಲೆ ಹೊಂದಾಣಿಕೆ ಆಗದೆ ಇರುವುದು, ಬ್ಯಾಂಕ್ ಖಾತೆಗಳು ಆಕ್ಟಿವ್ ಇಲ್ಲದೆ ಇರುವುದು, ಬ್ಯಾಂಕ್ ಖಾತೆಗಳಿಗೆ ಮತ್ತು ಇ-ಕೆವೈಸಿ ಸಂಬಂಧಿಸಿದ ಸಮಸ್ಯೆಗಳು ಹಾಗೂ ಸರ್ಕಾರದಲ್ಲಿ ಮಟ್ಟದಲ್ಲಿ ಆದ ತಾಂತ್ರಿಕ ತೊಂದರೆಗಳ ಕಾರಣದಿಂದಾಗಿ ಲಕ್ಷಾಂತರ ಫಲಾನುಭವಿಗಳು ಗೃಹಲಕ್ಷ್ಮಿ ಯೋಜನೆ ಹಣದಿಂದ ವಂಚಿತರಾಗಿದ್ದಾರೆ.

ರೇಷನ್ ಕಾರ್ಡ್ ಕುರಿತು ಬಿಗ್ ಅಪ್ಡೇಟ್, ಇಂದಿನಿಂದ APL / BPL / AAY ಅರ್ಜಿ ಆಹ್ವಾನ, ಎಲ್ಲಿ ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು ನೋಡಿ




ಡಿಸೆಂಬರ್ ತಿಂಗಳಲ್ಲಿ ಗೃಹಲಕ್ಷ್ಮಿ ಪ್ರಗತಿ ಪರಿಶೀಲನ ಸಭೆ ಏರ್ಪಡಿಸಿದ್ದ ಮುಖ್ಯಮಂತ್ರಿಗಳು (CM) ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಗೃಹಲಕ್ಷ್ಮಿ ಕ್ಯಾಂಪ್ ಗಳನ್ನು ಏರ್ಪಡಿಸಿ ಗ್ರಾಮ ಪಂಚಾಯಿತಿ ಸದಸ್ಯರ ಸಮ್ಮುಖದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಸ್ಥಳೀಯ ಅಂಚೆ ಕಚೇರಿ ಹಾಗೂ ಬ್ಯಾಂಕ್ ಸಿಬ್ಬಂದಿಗಳು ಭಾಗಿಯಾಗಿ ಸಮಸ್ಯೆ ಇತ್ಯರ್ಥ ಪಡಿಸಬೇಕು ಎಂದು ಸಲಹೆ ಕೊಟ್ಟಿದ್ದರು.


ಹಾಗೂ ಇನ್ನು ಸಹ ಯಾರೆಲ್ಲಾ ಯೋಜನೆ ಹೊರಗಿದ್ದಾರೆ ಅವರನ್ನು ಕೂಡ ಗೃಹಲಕ್ಷ್ಮಿ ಯೋಜನೆಗೆ ಸೇರ್ಪಡೆ ಮಾಡಬೇಕು ಎಂದು ತಿಳಿಸಿದರು. ಇದಾದ ನಂತರ ಸಹಸ್ರಾರು ಮಂದಿಗೆ ಸಮಸ್ಯೆ ಪರಿಹಾರವಾಗಿ ಹಣ ಬರುತ್ತಿದೆ. ಆದರೆ ನಿಮಗೆ ಇನ್ನೂ ಕೂಡ ಒಂದು ಕಂತಿನ ಹಣ ಬಂದಿಲ್ಲ ಅಥವಾ ಇದುವರೆಗೆ ಎಲ್ಲಾ ಕಂತುಗಳ ಹಣ ಬಂದಿದ್ದು 8ನೇ ಕಂತಿಗೆ ಹಣಕ್ಕೆ ಕಾಯುತ್ತಿದ್ದರೆ ಮತ್ತು ಇದು ಯಾವಾಗ ಬರುತ್ತದೆ ಎಂದು ತಿಳಿದುಕೊಳ್ಳಲು ಕುತೂಹಲ ಇದ್ದರೆ ಇದಕ್ಕೆ ಉತ್ತರ ಹೀಗಿದೆ ನೋಡಿ.


ಇಲಾಖೆ ಅಧಿಕಾರಿಗಳು ನೀಡಿದ ಮಾಹಿತಿಯ ಪ್ರಕಾರವಾಗಿ ಪ್ರತಿ ತಿಂಗಳ 30ನೇ ತಾರೀಖಿನ ಒಳಗೆ ಆ ತಿಂಗಳ ಗೃಹಲಕ್ಷ್ಮಿ ಹಣವನ್ನು ಫಲಾನುಭವಿಗಳ ಖಾತೆಗೆ ತಲುಪಿಸಲು ಕ್ರಮ ಕೈಗೊಳ್ಳಲಾಗಿದೆ. ಆದರೆ RBI ನಿಯಮಗಳು ಮತ್ತು ಇನ್ನಿತರ ಸಮಸ್ಯೆಗಳಿಂದಾಗಿ ಕೆಲವೊಮ್ಮೆ ವಿಳಂಬವಾಗುತ್ತದೆ ಹಾಗಾಗಿ ಇನ್ನು ಸಹ ಅನೇಕರಿಗೆ 7ನೇ ಕಂತಿನ ಹಣ ತಲುಪಿಲ್ಲ.


ಆದರೆ ನಿಶ್ಚಿಂತೆಯಿಂದ ಇರಿ ಈ ತಿಂಗಳ 25ನೇ ತಾರೀಕಿನ ಒಳಗಡೆ ಹಣ ನಿಮ್ಮ ಖಾತೆಗೆ ಜಮೆ ಆಗುತ್ತದೆ ಮತ್ತು ಒಂದು ಕಂತಿನ ಹಣ ಕೂಡ ಪಡೆಯಲು ಆಗದೆ ಇದ್ದರೆ ಮತ್ತೊಮ್ಮೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ ಹತ್ತಿರದಲ್ಲಿರುವ ಯಾವುದೇ ಗ್ರಾಮ ಒನ್, ಕರ್ನಾಟಕ ಒನ್ ಬೆಂಗಳೂರು ಒನ್ ಅಥವಾ ಬಾಪೂಜಿ ಸೇವಾ ಕೇಂದ್ರಗಳಿಗೆ ಹೋಗಿ ಉಚಿತವಾಗಿ ಅರ್ಜಿ ಸಲ್ಲಿಸಿ ನೋಂದಾಯಿಸಿ ಕೊಳ್ಳಬೇಕು ಎಂದು ಇಲಾಖೆ ಅಧಿಕಾರಿಗಳು ಸೂಚಿಸಿದ್ದಾರೆ.


Post a Comment

0 Comments