ರೇಷನ್ ಕಾರ್ಡ್ (Ration Card) ಸದ್ಯದ ಮಟ್ಟಿಗೆ ದೇಶದಾದ್ಯಂತ ಹೆಚ್ಚು ಸುದ್ದಿಯಲ್ಲಿರುವ ವಿಷಯ ಎಂದೇ ಹೇಳಬಹುದು. ಯಾಕೆಂದರೆ ರೇಷನ್ ಕಾರ್ಡ್ ಇಲ್ಲದೇ ಇದ್ದರೆ ಯಾವುದೇ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಆಗುವುದಿಲ್ಲ.
7777
ಅದರಲ್ಲೂ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ (BPL) ಸರಕಾರದಿಂದ ಸಿಗುವ ಪ್ರಧಾನ ಮಂತ್ರಿ ಉಜ್ವಲ್ ಯೋಜನೆಯಂತಹ ಯೋಜನೆಯ ಅನುಕೂಲತೆಗಳು ಅಥವಾ ಬಡತನ ರೇಖೆಗಿಂತ ಕೆಳಗಿರುವ ರೈತರಿಗೆ ನೀಡುವ ಅನುದಾನಗಳು ಮತ್ತು ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನವು ಮತ್ತು ಕರ್ನಾಟಕ ಸರ್ಕಾರ ಘೋಷಿಸಿರುವ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಯ ಹಣ.
ಮನೆ ಕಟ್ಟಿಸುವ ಸಮಯದಲ್ಲಿ ಈ ರೀತಿ ಪ್ಲಾನ್ ಮಾಡಿದರೆ ಹಣ ಉಳಿತಾಯ ಮಾಡಬಹುದು
ಪಡಿತರ ಚೀಟಿ ಆಧಾರಿತವಾಗಿ ನೀಡುವ ಶೈಕ್ಷಣಿಕ ಹಾಗೂ ವೈದ್ಯಕೀಯ ಶುಲ್ಕಗಳ ವಿನಾಯಿತಿ ಇತ್ಯಾದಿಯಾಗಿ ಇನ್ಯಾವುದೇ ಯೋಜನೆಯ ಪ್ರಯೋಜನಗಳನ್ನು ಪಡೆಯಲು ರೇಷನ್ ಕಾರ್ಡ್ ಕಡ್ಡಾಯ. ಹಾಗಾಗಿ ರೇಷನ್ ಕಾರ್ಡ್ ಗೆ ಇರುವ ಪ್ರಾಮುಖ್ಯತೆ ಈಗ ಎಲ್ಲರಿಗೂ ಅರಿವಾಗಿದೆ ಎಂದರೆ ತಪ್ಪಾಗಲಾರದು.
ರೇಷನ್ ಕಾರ್ಡ್ ಹೊಂದಿರುವುದು ಮಾತ್ರವಲ್ಲದೆ ರೇಷನ್ ಕಾರ್ಡ್ ಗಳಲ್ಲಿ ಮಾಹಿತಿಗಳು ಸರಿಯಾಗಿರಬೇಕು. ಕೆಲವರಿಗೆ ರೇಷನ್ ಕಾರ್ಡ್ ನಲ್ಲಿರುವ ಮಾಹಿತಿ ವ್ಯತ್ಯಾಸವಾಗಿ ಸರ್ಕಾರದ ಯೋಚನೆಗಳ ಸಹಾಯ ಪಡೆಯಲು ತೊಂದರೆ ಆಗಿದ್ದರೆ
ಹೊಸ ವೋಟರ್ ಐಡಿ ಗೆ ಅರ್ಜಿ ಸಲ್ಲಿಸಲು ತಿದ್ದುಪಡಿ ಮಾಡಿಸಲು ಕಡೇ ಅವಕಾಶ, ಮೊಬೈಲ್ ನಲ್ಲೇ ಅಪ್ಲೈ ಮಾಡವ ವಿಧಾನ ಇಲ್ಲಿದೆ ನೋಡಿ
ಅನೇಕ ಕುಟುಂಬಗಳು ರೇಷನ್ ಕಾರ್ಡ್ ನೇ ಪಡೆದಿಲ್ಲ ಅವರು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಕಾಯುತ್ತಿದ್ದಾರೆ ಮತ್ತು ಕೆಲವರು ರೇಷನ್ ಕಾರ್ಡ್ ಗಳಲ್ಲಿ ತಿದ್ದುಪಡಿ ಮಾಡಿಸಿಕೊಳ್ಳಲು ಕಾಯುತ್ತಿದ್ದಾರೆ ಮತ್ತು ಅನೇಕರು APL ಕಾರ್ಡ್ ನಿಂದ BPL ಗೆ, ಮತ್ತು BPL ನಿಂದ APL ಗೆ ಕಾರ್ಡ್ ಬದಲಾವಣೆ ಮಾಡಿಕೊಳ್ಳಲು ಕಾಯುತ್ತಿದ್ದಾರೆ.
ಈಗಾಗಲೇ ಅರ್ಜಿ ಸಲ್ಲಿಸಿ ಅನುಮೋದನೆ ಆಗಿದ್ದರು ಕಳೆದ ವರ್ಷ ಕರ್ನಾಟಕ ವಿಧಾನಸಭಾ ಚುನಾವಣೆ – 2023 ನೀತಿ ಸಂಹಿತೆ ಕಾರಣದಿಂದ ಸ್ಥಗಿತಗೊಳಿಸಲಾಗಿದ್ದ ರೇಷನ್ ಕಾರ್ಡ್ ವಿತರಣೆಗೆ ಯಾವಾಗ ಅನುಮತಿ ಸಿಗುತ್ತದೆ ಎಂದು ಕಾಯುತ್ತಿದ್ದಾರೆ. ಇವರೆಲ್ಲರಿಗೂ ಕೂಡ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳಿಂದ ಸಿಹಿ ಸುದ್ದಿ ಸಿಕ್ಕಿದೆ.
ಸ್ವತಃ ಆಹಾರ ಸಚಿವರಾದ ಕೆ.ಎಚ್ ಮುನಿಯಪ್ಪ ರವರೇ (Minister K.H Muniyappa) ವಾರದ ಹಿಂದೆ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಸ್ಪಷ್ಟಪಡಿಸಿದ್ದರು. ಅದೇನೆಂದರೆ, ಇದೇ ಏಪ್ರಿಲ್ 01, 2024 ರಿಂದ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಆಹ್ವಾನ ಮಾಡಲಾಗುತ್ತಿದೆ ಯಾರು ಅರ್ಜಿ ಸಲ್ಲಿಸಬಹುದು ಏನೆಲ್ಲಾ ದಾಖಲೆಗಳನ್ನು ನೀಡಬೇಕು ಮತ್ತು ಎಲ್ಲಿ ಅರ್ಜಿ ಸಲ್ಲಿಸಬೇಕು ಎನ್ನುವುದರ ವಿವರ ತಿಳಿದುಕೊಳ್ಳಲು ಲೇಖನವನ್ನು ಕೊನೆಯವರೆಗೂ ಓದಿ.
ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಕಂಡಿಷನ್ ಗಳು:-
* ಕರ್ನಾಟಕದ ನಿವಾಸಿ ಆಗಿರಬೇಕು* ಈಗಾಗಲೇ ರೇಷನ್ ಕಾರ್ಡ್ ಇದ್ದದ್ದೇ ಆದಲ್ಲಿ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ
* ಹೊಸದಾಗಿ ಮದುವೆ ಆಗಿರುವ ದಂಪತಿಗಳು ಮಾತ್ರ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು
* ಕುಟುಂಬ ಹಿರಿಯ ಮಹಿಳಾ ಸದಸ್ಯರ ಒಬ್ಬರ ಹೆಸರಿನಲ್ಲಿ ಆದಾಯ ಪ್ರಮಾಣ ಪತ್ರವನ್ನು ಪಡೆದುಕೊಂಡು ದಾಖಲೆಯಾಗಿ ಸಲ್ಲಿಸಬೇಕು
ಬೇಕಾಗುವ ದಾಖಲೆಗಳು:-
* ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್* ವೋಟರ್ ಐಡಿ
* ಕುಟುಂಬದ ಮುಖ್ಯಸ್ಥೆ ಮಹಿಳೆಯ ಹೆಸರಿನಲ್ಲಿ ಆದಾಯ ಪ್ರಮಾಣ ಪತ್ರ
* ಎಲ್ಲ ಸದಸ್ಯರ ಬಯೋಮೆಟ್ರಿಕ್ ಮಾಹಿತಿ
* ಕುಟುಂಬದ ಒಬ್ಬ ಸದಸ್ಯರ ಮೊಬೈಲ್ ಸಂಖ್ಯೆ
* ಇನ್ನಿತರ ಪ್ರಮುಖ ದಾಖಲೆಗಳು
ಎಲ್ಲಿ ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು:-
* ಹತ್ತಿರದಲ್ಲಿರುವ ಯಾವುದೇ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಅಥವಾ ಬಾಪೂಜಿ ಸೇವಾ ಕೇಂದ್ರ ಸೇವಾ ಸಿಂಧು ಕೇಂದ್ರ ಈ ರೀತಿ ಸಾರ್ವಜನಿಕ ಕೇಂದ್ರಗಳಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ* ವೈಯಕ್ತಿಕವಾಗಿ ಕಂಪ್ಯೂಟರ್ ಅಥವಾ ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ
* ಹೆಚ್ಚಿನ ಮಾಹಿತಿಗಾಗಿ ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ www.ahara.kar.nic.in ಗೆ ಭೇಟಿ ನೀಡಿ.
0 Comments