ಕರ್ನಾಟಕ ಸರ್ಕಾರದ ಗ್ಯಾರೆಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಜಾರಿಯಾಗಿ ಆರು ತಿಂಗಳಾಗುತ್ತಿದ್ದು, ಯಶಸ್ವಿಯಾಗಿ ಎಲ್ಲಾ ಫಲಾನುಭವಿಗಳಿಗೂ ನಾಲ್ಕನೇ ಕಂತಿನ ಹಣ ತಲುಪಿದೆ ಮತ್ತು ಈಗ ಹಂತ ಹಂತವಾಗಿ 5ನೇ ಕಂತಿನ ಕೂಡ ವರ್ಗಾವಣೆ ಆಗುತ್ತಿದೆ.
5ನೇ ಕಂತಿಗೆ ಸರ್ಕಾರದಿಂದ ಹಣ ಬಿಡುಗಡೆ ಕೂಡ ಆಗಿದೆ ಆದರೆ 6ನೇ ಕಂತಿನ ಹಣ ಪಡೆಯಬೇಕು ಎಂದರೆ ಸರ್ಕಾರದ ವತಿಯಿಂದ ಕೆಲ ಕಂಡೀಶನ್ ಹೇರಲಾಗಿದೆ. ಈಗಾಗಲೇ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗೃಹಲಕ್ಷ್ಮಿ ಕ್ಯಾಂಪ್ ಗಳನ್ನು ನಡೆಸಿ(Gruhalakshmi Camp) ಗೃಹಲಕ್ಷ್ಮಿ ಹಣ ಪಡೆಯಲು ಇರುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸೂಚಿಸಲಾಗಿದೆ.
ಇನ್ಮುಂದೆ ಕೇವಲ 600 ರೂಪಾಯಿಗೆ ಸಿಗಲಿದೆ ಗ್ಯಾಸ್ ಸಿಲಿಂಡರ್.! ಹೀಗೆ ಅರ್ಜಿ ಸಲ್ಲಿಸಿ
ಈ ಕ್ಯಾಂಪ್ ನಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಸಮೀಪದ ಬ್ಯಾಂಕ್ ಸಿಬ್ಬಂದಿಗಳು, ಅಂಚೆ ಕಛೇರಿ ಸಿಬ್ಬಂದಿಗಳು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಬಾಗಿಯಾಗಿ ತಮ್ಮ ಗ್ರಾಮದಲ್ಲಿ ಗೃಹಲಕ್ಷ್ಮಿ ಫಲಾನುಭವಿಗಳಿಗೆ ಆಗಿರುವ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಮುಖ್ಯಮಂತ್ರಿಗಳು ಸೂಚನೆ ಕೊಟ್ಟಿದ್ದಾರೆ.
ಇದೀಗ ಗೃಹಲಕ್ಷ್ಮಿ ಯೋಜನೆಯಂತೆ ಅನ್ನಭಾಗ್ಯ ಯೋಜನೆ ಹಣ ವರ್ಗಾವಣೆ ಸಮಸ್ಯೆ ಕುರಿತು ಕೂಡ ಇದೇ ರೀತಿಯಾದ ಆದೇಶ ಹೊರ ಬಿದ್ದಿದೆ. 13 ಜನವರಿ 2024 ರಂದು ಕರ್ನಾಟಕ ಸರ್ಕಾರದ ವತಿಯಿಂದ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಹಣ ತಲುಪಲು ಆಗಿರುವ ತೊಡಕುಗಳನ್ನು ನಿವಾರಿಸಿಕೊಡುವಂತೆ, ಸೂಚನೆಗಳನ್ನು ಒಳಗೊಂಡ ಆಜ್ಞಾಪತ್ರ ಬಿಡುಗಡೆ ಆಗಿದೆ.
ಆ ಪ್ರಕಾರವಾಗಿ ತಿಳಿಸಿರುವುದೇನೆಂದರೆ, ಸರ್ಕಾರದ ವತಿಯಿಂದ 5KG ಹೆಚ್ಚುವರಿ ಅಕ್ಕಿಯ ಬದಲಾಗಿ KGಗೆ 34 ರೂಪಾಯಿಯಂತೆ ಕುಟುಂಬದ ಮುಖ್ಯಸ್ಥರ ಖಾತೆಗೆ DBT ಮೂಲಕ ವರ್ಗಾವಣೆ ಮಾಡಲಾಗುತ್ತಿದೆ ಆದರೆ ಅನೇಕ ಫಲಾನುಭವಿಗಳು DBT ಮೂಲಕ ಹಣ ಪಡೆಯಲು ಸಮಸ್ಯೆಗಳಾಗಿವೆ.
ಈ ರೀತಿ ಹಣ ಪಡೆಯುವುದಕ್ಕೆ ಇರುವ ಪ್ರಮುಖ ತೊಡಕು ಏನೆಂದರೆ ಬ್ಯಾಂಕ್ ಖಾತೆಗಳಿಗೆ ಆಧಾರ್ ಸೀಡಿಂಗ್ ಮತ್ತು NPCI ಮ್ಯಾಪಿಂಗ್ ಆಗದೆ ಇರುವುದು ಮತ್ತು ಇ-ಕೆವೈಸಿ (E-KYC) ಆಗದೇ ಇರುವುದು ಎಂದು ಕಂಡು ಬಂದಿರುವುದರಿಂದ ಈ ಸಮಸ್ಯೆಗಳನ್ನು ಬಗೆಹರಿಸಲು ಶಿಬಿರಗಳನ್ನು (Camp) ಏರ್ಪಡಿಸಲಾಗುತ್ತಿದೆ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು, ನಿಮ್ಮ ಗ್ರಾಮದ ನ್ಯಾಯಬೆಲೆ ಅಂಗಡಿ ಮಾಲೀಕರು, ಅಂಚೆ ಕಚೇರಿ ಸಿಬ್ಬಂದಿಗಳು ಮತ್ತು ಸ್ಥಳೀಯ ಬ್ಯಾಂಕ್ ಸಿಬ್ಬಂದಿಗಳು ಭಾಗಿಯಾಗಿರುತ್ತಾರೆ, DBT ಮೂಲಕ ಹಣ ಪಡೆಯಲಾಗದ ಫಲಾನುಭವಿಗಳು ಈ ಶಿಬಿರಗಳಲ್ಲಿ ಭಾಗಿಯಾಗಿ ಸಮಸ್ಯೆ ಪರಿಹಾರಪಡಿಸಿ ಕೊಳ್ಳಬಹುದು ಎಂದು ತಿಳಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಸಿಗಲಿದೆ ಉಚಿತ ಮೊಬೈಲ್ ಫೋನ್
ಮತ್ತು ಪ್ರತಿಯೊಂದು ತಾಲೂಕು ಪ್ರತ್ಯೇಕವಾದ ದಿನಾಂಕವನ್ನು ನಿಗದಿಪಡಿಸಿ ಘೋಷಿಸಲಾಗಿದೆ. ಈ ರೀತಿ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲು ಸಮಸ್ಯೆ ಆಗಿರುವ ಫಲಾನುಭವಿಗಳು ರೇಷನ್ ಕಾರ್ಡ್, ಕುಟುಂಬದ ಮುಖ್ಯಸ್ಥರ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಪ್ರತಿ ತೆಗೆದು ಕೊಂಡು ಹೋಗಿ ಈ ಶಿಬಿರದಲ್ಲಿ ಪಾಲ್ಗೊಂಡು ಸಮಸ್ಯೆ ಪರಿಹರಿಸಿಕೊಳ್ಳಬಹುದು.
ಗೃಹಲಕ್ಷ್ಮಿ ಯೋಜನೆಯ 6ನೇ ಕಂತಿನ ಹಣ ವರ್ಗಾವಣೆ ಆಗಬೇಕು ಎಂದರು ಕೂಡ ಇದನ್ನೇ ಪಾಲಿಸಬೇಕು ಎಂದು ಸರ್ಕಾರ ಮತ್ತೊಮ್ಮೆ ಸೂಚನೆ ಕೊಟ್ಟಿದೆ. ತಮ್ಮ ಬ್ಯಾಂಕ್ ಖಾತೆಗಳಿಗೆ ಆಧಾರ್ ಸೀಡಿಂಗ್ NPCI ಮ್ಯಾಪಿಂಗ್ ಮತ್ತು ರೇಷನ್ ಕಾರ್ಡ್ ಇ-ಕೆವೈಸಿ ಮಾಡಿಸಿದರೆ ಮಾತ್ರ ಅಂತಹ ಫಲಾನುಭವಿಗಳು 6ನೇ ಕಂತಿನ ಗೃಹಲಕ್ಷ್ಮಿ ಹಣ ಮತ್ತು ಅನ್ನ ಭಾಗ್ಯ ಯೋಜನೆ ಹಣ ಪಡೆಯಲು ಸಾಧ್ಯವಾಗುತ್ತದೆ.
ಹಾಗಾಗಿ ತಪ್ಪದೆ ಇನ್ನು ಯಾರೆಲ್ಲ ಈ ಪ್ರಕ್ರಿಯೆ ಪೂರ್ತಿಗೊಳಿಸಿಲ್ಲ ಕೂಡಲೇ ನಿಮ್ಮ ಖಾತೆ ಯಾವ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿದೆ ಅರ್ಜಿ ಸಲ್ಲಿಸಿ ಕೇಳಲಾಗುವ ಪೂರಕ ದಾಖಲೆಗಳನ್ನು ಕೊಟ್ಟು ಸಮಸ್ಯೆ ಪರಿಹರಿಸಿಕೊಳ್ಳಿ.
0 Comments