ಲೇಬರ್ ಕಾರ್ಡ್ ಹೊಂದಿರುವ ಕಾರ್ಮಿಕರಿಗೆ ಉಚಿತವಾಗಿ ಸಿಗಲಿದೆ ಹೊಸ ಸೈಕಲ್, ಇದೊಂದು ದಾಖಲೆ ಜೊತೆ ಅರ್ಜಿ ಸಲ್ಲಿಸಿ ಸಾಕು

ಲೇಬರ್ ಕಾರ್ಡ್ ಹೊಂದಿರುವ ಕಾರ್ಮಿಕರಿಗೆ ಉಚಿತವಾಗಿ ಸಿಗಲಿದೆ ಹೊಸ ಸೈಕಲ್, ಇದೊಂದು ದಾಖಲೆ ಜೊತೆ ಅರ್ಜಿ ಸಲ್ಲಿಸಿ ಸಾಕು


 


ದೇಶದ ಅಭಿವೃದ್ಧಿಗೆ ಕಾರ್ಮಿಕರು (Labours) ಒಂದು ಪ್ರಬಲ ಶಕ್ತಿ ಎನ್ನುವುದು ಎಲ್ಲರಿಗೂ ತಿಳಿದಿದೆ. ಈ ಕಾರಣದಿಂದಲೇ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಕೈಗೊಂಡಿದ್ದಾರೆ. ಅದರಲ್ಲೂ ಬಡತನ ರೇಖೆಗಿಂತ ಕೆಳಗಿರುವ ಕೂಲಿ ಕಾರ್ಮಿಕರಿಗಾಗಿ ಲೇಬರ್ ಕಾರ್ಡ್ ಮತ್ತು ಇ-ಶ್ರಮ್ ಕಾರ್ಡ್ ಗಳನ್ನು ವಿತರಣೆ ಮಾಡಿ ಆ ಮೂಲಕ ಕಾರ್ಮಿಕರ ಬದುಕನ್ನು ಸರಳಗೊಳಿಸಲು.


ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಆರಂಭ. ಆದರೆ ಈ ಈ ವರ್ಗದ ಜನರಿಗೆ ಮಾತ್ರ ಹೊಸ ರೇಷನ್ ಕಾರ್ಡ್ ಸಿಗಲ್ಲ. ಅರ್ಜಿ 


.

ಮತ್ತು ಅವರನ್ನು ಆರ್ಥಿಕವಾಗಿ ಸದೃಢನಾಗಿ ಮಾಡಲು ಶಿಕ್ಷಣದಿಂದ ಹಿಡಿದು ವೈದ್ಯಕೀಯ ಸೌಲಭ್ಯದವರೆಗೂ ಕೂಡ ಅನೇಕ ರಿಯಾಯಿತಿಗಳನ್ನು ಕೊಟ್ಟು ನೆರವಾಗಿದೆ. ಅದೇ ರೀತಿ ಈಗ ಕಾರ್ಮಿಕರ ದೈಹಿಕ ಶ್ರಮವನ್ನು ಅರಿತಿರುವ ಸರ್ಕಾರವು (government) ಆತನಿಗೆ ಉಚಿತ ಸೈಕಲ್ ವಿತರಣೆ (Free Cycle Scheme) ಮಾಡುವ ಮೂಲಕ ಹೊಸ ರೂಪದಲ್ಲಿ ನೆರವಾಗುತ್ತಿದೆ.
ಕೂಲಿ ಕಾರ್ಮಿಕರು ತಾವಿರುವ ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕೆಲಸ ಅರಸಿ ಹೋಗಬೇಕು, ಈ ರೀತಿ ಹೋಗುವ ಬಡ ಕಾರ್ಮಿಕರು ಕಾಲ್ನಡಿಗೆ ಮೂಲಕವೇ ಪ್ರಯಾಣಿಸಬೇಕು. ಅದರಿಂದ ಆತನ ಶ್ರಮ ವ್ಯರ್ಥವಾಗುವುದು ಮಾತ್ರವಲ್ಲದೆ, ಸಮಯದ ವ್ಯರ್ಥವು ಕೂಡ ಆಗುತ್ತದೆ ಇದನ್ನು ಮನಗಂಡ ಸರ್ಕಾರ ಆತನಿಗೆ ಈ ಕಷ್ಟವನ್ನು ತಪ್ಪಿಸಬೇಕು ಎಂದು ಉಚಿತವಾಗಿ ಸೈಕಲ್ ಕೊಡಲು ನಿರ್ಧಾರ ಮಾಡಿದೆ.

ಆದರೆ ಈ ಯೋಜನೆಯಡಿ ನೇರವಾಗಿ ಸೈಕಲ್ ವಿತರಣೆ ಮಾಡುವ ಬದಲು ಸೈಕಲ್ ಕೊಂಡುಕೊಳ್ಳುವ ಕಾರ್ಮಿಕನಿಗೆ ಸಹಾಯಧನ ನೀಡುವ ಮೂಲಕ ನೆರವಾಗಲು ನಿರ್ಧರಿಸಿದೆ. ಅದಕ್ಕಾಗಿ ಮಾರ್ಗಸೂಚಿಯನ್ನು ಕೂಡ ರೂಪಿಸಿದ ಆದೇಶ ಮಾಡಿದೆ. ಈ ಅಂಕಣದಲ್ಲಿ ಈ ಯೋಜನೆಗೆ ಏನೆಲ್ಲಾ ಕಂಡೀಶನ್ ಇದೆ, ಅರ್ಜಿ ಸಲ್ಲಿಸುವುದು ಹೇಗೆ ಹಾಗೂ ಯಾವ ದಾಖಲೆಗಳನ್ನು ಸಲ್ಲಿಸಬೇಕು ಎನ್ನುವ ವಿವರವನ್ನು ತಿಳಿಸಿ ಕೊಡುತ್ತಿದ್ದೇವೆ.

ಉಚಿತ ಸೈಕಲ್ ಯೋಜನೆಯಡಿ ಕಾರ್ಮಿಕ ನಿಗೆ ಸಿಗುವ ಸೌಲಭ್ಯಗಳು:-


● ಕೂಲಿ ಕಾರ್ಮಿಕನು ಹೊಸದಾಗಿ ಸೈಕಲ್ ಖರೀದಿಸಿದಾಗ ಅದರ ರಶೀದಿಯೊಂದಿಗೆ ಹಾಗೂ ಮಾರ್ಗಸೂಚಿಯಲ್ಲಿ ಕೇಳಿರುವ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು, ಪ್ರತಿ ಸೈಕಲ್ ಗೆ 3,500 ರೂಪಾಯಿವರೆಗೆ ಸಹಾಯಧನವು ಆತನ ಬ್ಯಾಂಕ್ ಖಾತೆಗೆ DBT ಮೂಲಕ ವರ್ಗಾವಣೆ ಆಗುತ್ತದೆ.



ರೈತರಿಗೆ ಮತ್ತೊಂದು ಭಾಗ್ಯ.! ಔಷಧಿ ಸಿಂಪಡಣೆಗೆ ಡ್ರೋನ್ ವಿತರಣೆ ಆಸಕ್ತ ರೈತರು ಅರ್ಜಿ ಸಲ್ಲಿಸಿ




● ಒಂದು ವೇಳೆ ಈಗಾಗಲೇ ಸೈಕಲ್ ಹೊಂದಿದ್ದು ಅದು ಹಾಳಾಗಿದ್ದರೆ ಅಥವಾ ಹಳೆಯದಾಗಿದ್ದರೆ ಮತ್ತೊಮ್ಮೆ ಹೊಸ ಸೈಕಲ್ ಖರೀದಿ ಮಾಡಿದರು ಕೂಡ ಅವರಿಗೂ ಈ ಸಹಾಯಧನ ಲಭಿಸುತ್ತದೆ.
● ಸರ್ಕಾರವು ಬಡತನ ರೇಖೆಗಿಂತ ಕೆಳಗಿರುವ ಆರ್ಥಿಕವಾಗಿ ಹಿಂದುಳಿದ ದುರ್ಬಲ ವರ್ಗದ ಕಾರ್ಮಿಕರಿಗೆ ಇದನ್ನು ನೀಡಲು ಉದ್ದೇಶಿಸಿರುವುದರಿಂದ ಇದಕ್ಕಾಗಿ ಸೂಚಿಸುತ್ತಿರುವ ದಾಖಲೆಗಳನ್ನು ತಪ್ಪದೆ ಕಾರ್ಮಿಕರು ಹೊಂದಿದ್ದಲ್ಲಿ ಮಾತ್ರ ಆತನಿಗೆ ಈ ಸಹಾಯಧನ ಸಿಗುತ್ತದೆ.


ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-


● ಕಾರ್ಮಿಕರ ಆಧಾರ್ ಕಾರ್ಡ್
● ಕಾರ್ಮಿಕರ ಲೇಬರ್ ಕಾರ್ಡ್ ಅಥವಾ ಇ-ಶ್ರಮ್ ಕಾರ್ಡ್
● ಕಾರ್ಮಿಕರ ಬ್ಯಾಂಕ್ ಖಾತೆ ವಿವರ
● ಆದಾಯದ ಪ್ರಮಾಣಪತ್ರ
● ನಿವಾಸದ ಪ್ರಮಾಣಪತ್ರ
● ಅರ್ಜಿದಾರರ ಗುರುತಿನ ಚೀಟಿ
● ಮೊಬೈಲ್ ನಂಬರ
● ಪಾಸ್ಪೋರ್ಟ್ ಅಳತೆಯ ಭಾವಚಿತ್ರ
● ಸೈಕಲ್ ಖರೀದಿಸಿರುವ ರಶೀದಿ
● ವಿವರಗಳನ್ನು ಬರೆದು ಸಹಿ ಮಾಡಿರುವ ಅರ್ಜಿ ಫಾರಂ.

ಅರ್ಜಿ ಸಲ್ಲಿಸುವ ವಿಧಾನ:-


● ಕರ್ನಾಟಕದ ಕಾರ್ಮಿಕರು ಅರ್ಜಿ ಸಲ್ಲಿಸುವುದಾದರೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಇನ್ನೂ ಕೂಡ ಅವಕಾಶ ಮಾಡಿಕೊಟ್ಟಿಲ್ಲ ಹಾಗಾಗಿ ಆಫ್ಲೈನ್ ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು.
● ಅರ್ಜಿ ಸಲ್ಲಿಸಲು ಇಚ್ಚಿಸುವವರು ಈ ಯೋಜನೆಗಾಗಿ ಇರುವ ಅರ್ಜಿ ಫಾರಂ ಅನ್ನು ಕಾರ್ಮಿಕ ಇಲಾಖೆ ವೆಬ್ಸೈಟ್ ಇಂದ ಡೌನ್ಲೋಡ್ ಮಾಡಿಕೊಂಡು ವಿವರಗಳನ್ನು ತುಂಬಿಸಿ ಕೇಳಲಾದ ಪುರಾವೆಗಳ ಜೊತೆ ಅಂಚೆ ಮೂಲಕ ಹತ್ತಿರದಲ್ಲಿರುವ ಕಾರ್ಮಿಕ ಇಲಾಖೆ ಕಛೇರಿಗೆ ತಲುಪಿಸಿಕೊಡಬೇಕು.
● ಕಾರ್ಮಿಕ ಇಲಾಖೆ ಅಧಿಕಾರಿಗಳು ನಿಮ್ಮ ಅರ್ಜಿಯನ್ನು ಪರಿಶೀಲನೆ ಮಾಡಿ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಲಿದ್ದಾರೆ.


Post a Comment

0 Comments