ಸೆಪ್ಟೆಂಬರ್ ತಿಂಗಳಿನಿಂದ ಅನ್ನಭಾಗ್ಯ ಯೋಜನೆಯ ಹಣ ಬಂದ್, ಆಹಾರ ಇಲಾಖೆ ಸಚಿವ K.H. ಮುನಿಯಪ್ಪ ಅವರಿಂದ ಸ್ಪಷ್ಟನೆ

ಸೆಪ್ಟೆಂಬರ್ ತಿಂಗಳಿನಿಂದ ಅನ್ನಭಾಗ್ಯ ಯೋಜನೆಯ ಹಣ ಬಂದ್, ಆಹಾರ ಇಲಾಖೆ ಸಚಿವ K.H. ಮುನಿಯಪ್ಪ ಅವರಿಂದ ಸ್ಪಷ್ಟನೆ


ಕಾಂಗ್ರೆಸ್ ಪಕ್ಷವು ಈ ವರ್ಷ ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ನೀಡಿದ್ದ 5 ಗ್ಯಾರಂಟಿ ಭರವಸೆ ಯೋಜನೆಗಳ (Guarantee Scheme) ಪೈಕಿ ಅನ್ನಭಾಗ್ಯ (Annabhagya) ಯೋಜನೆಯ ಅಕ್ಕಿಯನ್ನು 10 ಕೆಜಿಗೆ ಏರಿಸಲಾಗುವುದು ಎನ್ನುವುದು ಕೂಡ ಒಂದು. ಈ ಯೋಜನೆ ಪ್ರಕಾರ ಕರ್ನಾಟಕದ ಪ್ರತಿಯೊಬ್ಬ ಫಲಾನುಭವಿಗೂ ಕೂಡ 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುವುದು ಎಂದು ಸರ್ಕಾರ ಮಾತು ಕೊಟ್ಟಿದ್ದು ಹಾಗೆಯೇ ಜುಲೈ ತಿಂಗಳಿನಿಂದ ಇದಕ್ಕೆ ವ್ಯವಸ್ಥೆ ಕೂಡ ಮಾಡಿಕೊಳ್ಳಲಾಗಿತ್ತು.




.


ಅಂತಿಮ ಹಂತದವರೆಗೆ ಸಾಕಷ್ಟು ಪ್ರಯತ್ನ ಪಟ್ಟರು ಕೂಡ ಅಕ್ಕಿ ದಾಸ್ತಾನು ಲಭ್ಯವಾಗದ ಕಾರಣ ಒಬ್ಬ ಸದಸ್ಯನಿಗೆ ಎಂದಿನಂತೆ ಕೇಂದ್ರ ಸರ್ಕಾರದ ವತಿಯಿಂದ 5Kg ಅಕ್ಕಿ ಹಾಗೂ ಇನ್ನುಳಿದ 5Kg ಅಕ್ಕಿ ಬದಲಿಗೆ 1Kg ಅಕ್ಕಿಗೆ 34 ರೂಪಾಯಿಯಂತೆ ಒಬ್ಬ ಸದಸ್ಯನಿಗೆ 5Kg ಅಕ್ಕಿಯ 170 ರೂಗಳನ್ನು ಕುಟುಂಬದ ಮುಖ್ಯಸ್ಥರ ಖಾತೆಗೆ DBT ಮೂಲಕ ವರ್ಗಾವಣೆ ಮಾಡಲು ನಿರ್ಧರಿಸಿತು.



ಹೆಂಡತಿಗೆ ಗಂಡನ ಆಸ್ತಿಯ ಮೇಲೆ ಹಕ್ಕು ಇರೋದಿಲ್ವಾ.? ಕಾನೂನು ಏನು ಹೇಳುತ್ತೆ ನೋಡಿ



ಅದೇ ರೀತಿ ಕರ್ನಾಟಕದಾದ್ಯಂತ ಜುಲೈ ತಿಂಗಳಿನಲ್ಲಿ ಲಕ್ಷಾಂತರ ಕುಟುಂಬಗಳು ಅನ್ನ ಭಾಗ್ಯ ಯೋಜನೆ ಹೆಚ್ಚುವರಿ ಅಕ್ಕಿಯ ಹಣವನ್ನು ಪಡೆದಿವೆ, ಆಗಸ್ಟ್ ತಿಂಗಳಿನಲ್ಲಿ ಕೂಡ ಪಡೆಯಲಿವೆ. ಈ ಯೋಜನೆ ಆರಂಭವಾದ ಸಮಯದಲ್ಲಿಯೇ ಅಕ್ಕಿ ವ್ಯವಸ್ಥೆಯಾಗುವವರೆಗೂ ಕೂಡ ಇದೇ ರೀತಿಯಾಗಿ ಹೆಚ್ಚುವರಿ ಅಕ್ಕಿ ಹಣ ನೀಡಲು ಪ್ರಯತ್ನಿಸುತ್ತೇವೆ.


ಆದರೆ ಶೀಘ್ರವೇ ಸಮಸ್ಯೆಯನ್ನು ಬಗೆಹರಿಸಿ ಮಾತು ಕೊಟ್ಟಿದ್ದ ರೀತಿ 10Kg ಅಕ್ಕಿಯನ್ನು ನೀಡಲು ಪ್ರಯತ್ನಿಸುತ್ತೇವೆ ಎಂದು ಹೇಳಿದ್ದರು. ಈಗ ಅದೇ ರೀತಿಯಾಗಿ ಸೆಪ್ಟೆಂಬರ್ ತಿಂಗಳಲ್ಲಿಯೇ ಹಣದ ಬದಲು ಅಕ್ಕಿ ಸಿಗುವ ಸಾಧ್ಯತೆ ಇದೆ ಎನ್ನುವ ಸುದ್ದಿ ಇದೆ. ಈ ಬಗ್ಗೆ ಕರ್ನಾಟಕ ರಾಜ್ಯದ ಆಹಾರ ಮತ್ತು ನಾಗರೀಕ ಸರಬರಾಜು ಸಚಿವರಾದ ಕೆ.ಎಚ್ ಮುನಿಯಪ್ಪ (Food and Civil Supply Minister K.H Muniyappa) ಅವರೇ ಸುದ್ದಿಗೋಷ್ಠಿಯಲ್ಲಿ ಮಾತನಾಡುವಾಗ ಸೂಚನೆ ಕೊಟ್ಟಿದ್ದಾರೆ.

ಇಷ್ಟರಲ್ಲೇ ಅನ್ನ ಭಾಗ್ಯ ಫಲಾನುಭವಿಗಳಿಗೆ 10Kg ಅಕ್ಕಿ ವಿತರಣೆ ಮಾಡವಷ್ಟು ಅಕ್ಕಿ ದಾಸ್ತಾನು ಲಭ್ಯವಾಗಲಿದೆ. ಸೆಪ್ಟೆಂಬರ್ ತಿಂಗಳಿನಿಂದ ಹೆಚ್ಚುವರಿ ಅಕ್ಕಿಗೆ ಹಣ ನೀಡುತ್ತಿರುವುದನ್ನು ನಿಲ್ಲಿಸಿ, ಅಕ್ಕಿಯನ್ನೇ ವಿತರಣೆ ಮಾಡಲು ಪ್ರಯತ್ನಿಸಲಿದ್ದೇವೆ ಎಂದು ಸುಳಿವು ಕೊಟ್ಟಿದ್ದಾರೆ. ರಾಷ್ಟ್ರೀಯ ಭದ್ರತಾ ಆಹಾರ ಕಾಯ್ದೆಯಡಿ (NFSA) ಹೆಚ್ಚುವರಿ ಅಕ್ಕಿಗೆ ನೀಡಲು ಬೇಕಾಗುವಷ್ಟು ಅಕ್ಕಿಯನ್ನು ಕೊಡಿ ಎಂದು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರವನ್ನು (Request for Central government) ಮನವಿ ಮಾಡಿತ್ತು.



ಹೊಸ ರೇಷನ್ ಕಾರ್ಡ್ ಪಡೆಯಲು, ರೇಷನ್ ಕಾರ್ಡ್ ಹೆಸರು ಸೇರ್ಪಡೆ, ಹೆಸರು ತೆಗೆದು ಹಾಕುವುದು, ಎಲ್ಲಾ ರೀತಿಯ ತಿದ್ದುಪಡಿಗೆ 1 ತಿಂಗಳ ಕಾಲಾವಕಾಶ ನೀಡಿದ ಸರ್ಕಾರ



ಆದರೆ ಕೇಂದ್ರ ಸರ್ಕಾರ ಇದಕ್ಕೆ ನಿರಾಕರಿಸಿತ್ತು. ಬಳಿಕ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಲ್ಲೂ ಕೂಡ ಅಕ್ಕಿಗಾಗಿ ರಾಜ್ಯ ಸರ್ಕಾರ ಮನವಿ ಮಾಡಿದ್ದು, ಕೊನೆ ಹಂತದವರೆಗೂ ಸತತ ಪ್ರಯತ್ನ ಮಾಡಿದ ಮೇಲೂ ಅಕ್ಕಿ ದಾಸ್ತಾನು ಲಭ್ಯವಾಗದ ಕಾರಣ ಕೇಂದ್ರಕ್ಕೆ 1Kg ಅಕ್ಕಿಗೆ 34 ರೂಪಾಯಿ ಕೊಟ್ಟು ಖರೀದಿ ಮಾಡಲು ನಿರ್ಧಾರ ಮಾಡಿದ್ದೆವು. ಈಗ ಅದೇ ಮಾನದಂಡದಲ್ಲಿ ಅಕ್ಕಿ ಬದಲು ಹಣವನ್ನೇ ನೀಡಲಿದ್ದೇವೆ ಎಂದು ಹಣ ನೀಡಲು ಸರ್ಕಾರ ಮುಂದಾಯಿತು.

ನವ ದೆಹಲಿಯಲ್ಲಿ (Dehli Meeting) ಆಗಸ್ಟ್ 3ರಂದು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ(C.M Siddaramaih) ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ(P.M Narendra Modi) ಅವರನ್ನು ಭೇಟಿ ಆಗಿ ಮತ್ತೊಮ್ಮೆ ಅನ್ನ ಭಾಗ್ಯ ಯೋಜನೆ ಹೆಚ್ಚುವರಿ ಅಕ್ಕಿಗಾಗಿ ಮನವಿ ಮುಂದಿಟ್ಟಿದ್ದಾರೆ ಎನ್ನುವ ಮಾಹಿತಿ ಇದೆ. ಕೇಂದ್ರ ಸರ್ಕಾರದ ಸಹಾಯ ಹಸ್ತದ ಹೊರತಾಗಿ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಂದಲೂ ಕೂಡ ಅಕ್ಕಿ ತರಿಸಿಕೊಳ್ಳುವುದಕ್ಕೆ ರಾಜ್ಯ ಸರ್ಕಾರ ಯೋಜನೆ ರೂಪಿಸಿಕೊಂಡಿದೆ ಎನ್ನುವ ಸುದ್ದಿಗಳು ಇದೆ. ಒಟ್ಟಿನಲ್ಲಿ ಶೀಘ್ರವೇ ಕರ್ನಾಟಕದ ರಾಜ್ಯದ ಅನ್ನಭಾಗ್ಯ ಯೋಜನೆ ಫಲಾನುಭವಿಗಳಿಗೆ 10Kg ಅಕ್ಕಿಭಾಗ್ಯ ಸಿಗಲಿದೆ.


 

Post a Comment

0 Comments