ಇದಕ್ಕಾಗಿ ಸಮಯ ಮತ್ತು ಹಣ ವ್ಯರ್ಥ ಮಾಡಿಕೊಂಡು ಪದೇಪದೇ RTO ಕಛೇರಿಗೆ ಅಲೆದಾಡುವುದು ವಾಹನ ಮಾಲೀಕರರ ಪಾಡಗಿತ್ತು. ಇದರಿಂದ ಸಾಕಷ್ಟು ಮಂದಿ ಬೇಸತ್ತು ಹೋಗಿದ್ದರು. ಇದನ್ನು ಅರಿತು ವಾಹನ ಮಾಲೀಕರು ಮತ್ತು ಸವಾರರಿಗೆ ಅನುಕೂಲವಾಗುವಂತಹ ಒಂದು ಮಹತ್ವದ ನಿರ್ಧಾರಕ್ಕೆ ಕರ್ನಾಟಕ ಸಾರಿಗೆ ಇಲಾಖೆ (Karnataka transport department) ಬಂದಿದೆ.
ಈ ಫಲನುಭವಿಗಳ ರೇಷನ್ ಕಾರ್ಡ್ ರದ್ದು ಇಂಥವರಿಗೆ ಅನ್ನಭಾಗ್ಯ ಅಕ್ಕಿಯೂ ಇಲ್ಲ ದುಡ್ಡು ಇಲ್ಲ ಮಾನದಂಡ ಮೀರಿದವರು ದಂಡ ಕೂಡ ಕಟ್ಟಬೇಕು.! ಹೊಸ ರೂಲ್ಸ್ ಜಾರಿಗೆ ತಂದ ಸರ್ಕಾರ
ಇನ್ನು ಮುಂದೆ ವಾಹನ ಮಾಲೀಕರು ಅಥವಾ ವಾಹನ ಸವಾರರು (Vehicle owners and drivers) ತಮ್ಮ ದಾಖಲೆಗಳನ್ನು ಪಡೆಯುವುದಕ್ಕೆ ಕಚೇರಿಗಳಿಗೆ ಹೋಗುವ ಅವಶ್ಯಕತೆ ಇಲ್ಲ. ಈ ಕುರಿತು ಸಾರಿಗೆ ಇಲಾಖೆ ವಾಹನ ಸವಾರರಿಗೆ ಗುಡ್ ನ್ಯೂಸ್ ಕೊಟ್ಟಿದೆ. DL, RC ಕಾರ್ಡ್ಗಳನ್ನು ಇನ್ನು ಮುಂದೆ ನೇರವಾಗಿ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಿ ಕೊಡುತ್ತಿದೆ.
ಇದುವರೆಗೂ ಕೂಡ ವಾಹನ ಮಾಲೀಕರು ಅಥವಾ ವಾಹನ ಸವಾರರು ತಮ್ಮ RC ಕಾರ್ಡ್ ಮತ್ತು DL ಗಳನ್ನು ಪಡೆಯಬೇಕು ಎಂದರೆ RTO ಕಚೇರಿಗಳಿಗೆ ಭೇಟಿ ಕೊಡಬೇಕಿತ್ತು, ಅಲ್ಲಿ ಅಧಿಕಾರಿಗಳಿಗೆ ತಿಳಿಸಿ ನಂತರ ಅವರು ಪರಿಶೀಲನೆ ನಡೆಸಿ ಅವರ ಹೆಸರಿನಲ್ಲಿರುವ ದಾಖಲೆಗಳನ್ನು ಹುಡುಕಿ ಸಹಿ ಪಡಿದು ವ್ಯಕ್ತಿಯ ಕೈಗೆ ಕೊಟ್ಟು ಕಳುಹಿಸುತ್ತಿದ್ದರು. ಇದು ಬಹಳ ಹಳೆಯ ವಿಧಾನವಾಯಿತು.
ಇತ್ತೀಚಿನ ದಿನಗಳಲ್ಲಿ ಅತ್ಯಂತ ವೇಗವಾಗಿ ಎಲ್ಲಾ ಕ್ಷೇತ್ರದ ಚಟುವಟಿಕೆಗಳು ನಡೆಯುತ್ತಿವೆ. ಹಾಗಾಗಿ ಕಚೇರಿಗಳಿಗೆ ಹೋಗಿ ಕೆಲಸಗಳನ್ನು ಪಡೆದುಕೊಳ್ಳುವ ಮನೋವೃತ್ತಿ ಕಡಿಮೆಯಾಗುತ್ತಿದೆ. ಆಧಾರ್ ಕಾರ್ಡ್, ಪಾನ್ ಕಾರ್ಡ್ ನಂತಹ ದಾಖಲೆಗಳು ಕೂಡ ನೇರವಾಗಿ ಮನೆ ವಿಳಾಸಕ್ಕೆ ಬಂದು ತಲುಪುತ್ತವೆ ಹಾಗಾಗಿ ಈ ನಿಟ್ಟಿನಲ್ಲಿ ಸಾರಿಗೆ ಕೂಡ ಮುಂದೆ ಸಾಗಿದೆ.
ಇನ್ನು ಮುಂದೆ RC ಕಾರ್ಡ್ ಮತ್ತು DL ಗಳನ್ನು ಪೋಸ್ಟಲ್ (through post) ಮೂಲಕವೇ ಸಾರಿಗೆ ಇಲಾಖೆ ಮನೆಗಳಿಗೆ ಕೊರಿಯರ್ (corier) ಮಾಡಲಿದೆ. ಎನ್ವಲಪ್ ಆದ ಕವರ್ನಲ್ಲಿ ಸೂಚನಾ ಫಲಕಗಳೊಂದಿಗೆ (envelop cover with details) ಕೊರಿಯರ್ ವ್ಯವಸ್ಥೆಯಲ್ಲಿ ದಾಖಲೆ ನಿಮ್ಮ ಮನೆಗೆ ಬರಲಿದೆ. ಈ ಸಂಬಂಧ ಅಂಚೆ ಇಲಾಖೆಯೊಂದಿಗೆ RTO ಮಹತ್ವದ ಒಪ್ಪಂದ ಮಾಡಿಕೊಂಡಿದೆ.
ರೇಷನ್ ಕಾರ್ಡ್ ತಿದ್ದುಪಡಿಗೆ ಕೊನೆ ದಿನಾಂಕ ವಿಸ್ತರಣೆ.! ಇನ್ನು ಎಷ್ಟು ದಿನಗಳವರೆಗೆ ಸಿಗಲಿದೆ ಅವಕಾಶ.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ
ಈ ವಿಚಾರವನ್ನು ಸರ್ಕಾರದ ಮುಂದೆ ಪ್ರಸ್ತಾಪ ಮಾಡಿ ಸರ್ಕಾರದಿಂದಲೂ ಅನುಮೋದನೆ ಪಡೆದುಕೊಂಡಿದ್ದಾಗಿದೆ. ಸಾರಿಗೆ ಸಚಿವರ ನೇತೃತ್ವದಲ್ಲಿ ಸಭೆ ನಡೆಸಿ ಈಗ ಅಧಿಕೃತವಾಗಿ ಆದೇಶ ಹೊರಡಿಸಲಾಗಿದೆ. ಕಳೆದ ವಾರ ಬೆಂಗಳೂರಿನಲ್ಲಿ ನಡೆದ ಈ ಸಭೆಗೆ ಮುಖ್ಯ ಅಂಚೆ ಕಚೇರಿ ಆಯುಕ್ತ, ಸಾರಿಗೆ ಮುಖ್ಯ ಆಯುಕ್ತರು ಕೂಡ ಭಾಗಿಯಾಗಿ ನೂತನ ವ್ಯವಸ್ಥೆಗೆ ಒಪ್ಪಿಗೆ ಸೂಚಿಸಿದ್ದಾರೆ.
ಆದಕಾರಣ ಸಾರಿಗೆ ಇಲಾಖೆಯಿಂದ ಹೊರ ಬಿದ್ದಿರುವ ಆದೇಶ ಪತ್ರದ ಪತ್ರಿಕ ಪ್ರಕಟಣೆಯು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ದಿನಾಂಕ 18 ಆಗಸ್ಟ್ 2023 ರಂದು ಸಾರಿಗೆ ಇಲಾಖೆ ವತಿಯಿಂದ ಎಲ್ಲಾ ವಾಹನ ಸವಾರರಿಗೂ ಹಾಗೂ ಮಾಲೀಕರಿಗೂ ಈ ಸಿಹಿ ಸುದ್ದಿ ನೀಡಲಾಗಿದೆ.
ಇನ್ಮುಂದೆ ಸ್ಪೀಡ್ ಪೋಸ್ಟ್ ಮೂಲಕವೇ RC, DL ಕಾರ್ಡ್ಗಳು ಮನೆ ಹುಡುಕಿ ಬರಲಿವೆ. ಅರ್ಜಿದಾರರು ಆನ್ಲೈನ್ ಮೂಲಕವೂ ತಮ್ಮ ದಾಖಲೆಗಳನ್ನು ಟ್ರ್ಯಾಕ್ ಮಾಡಲು ಅವಕಾಶ ನೀಡಲಾಗಿದೆ. ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೆ ತಪ್ಪದೆ ಹಂಚಿಕೊಳ್ಳಿ.
0 Comments