ಒಂದೇ ಕುಟುಂಬದವರು ಎರಡು ಮೂರು ರೇಷನ್ ಕಾರ್ಡ್ ಪಡೆದವರಿಗೆ ಬಿಗ್ ಶಾ-ಕ್, ಸರ್ಕಾರದಿಂದ ಬಂದಿದೆ ಹೊಸ ರೂಲ್ಸ್.

ಒಂದೇ ಕುಟುಂಬದವರು ಎರಡು ಮೂರು ರೇಷನ್ ಕಾರ್ಡ್ ಪಡೆದವರಿಗೆ ಬಿಗ್ ಶಾ-ಕ್, ಸರ್ಕಾರದಿಂದ ಬಂದಿದೆ ಹೊಸ ರೂಲ್ಸ್.


 ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆ (Guarantee Scheme) ಜಾರಿಯಾದ ಮೇಲೆ ರೇಷನ್ ಕಾರ್ಡ್ ಗಳಿಗೆ (Ration card) ಬಹಳಷ್ಟು ಡಿಮ್ಯಾಂಡ್ ಬಂದಿದೆ. ಅದರಲ್ಲೂ BPL ರೇಷನ್ ಕಾರ್ಡ್ ಹೊಂದಿರುವವರಿಗೆ ವೈದ್ಯಕೀಯ, ಶೈಕ್ಷಣಿಕ ಶುಲ್ಕ ಮತ್ತು ಉಚಿತ ಪಡಿತರದಲ್ಲಿ ಹೆಚ್ಚು ರಿಯಾಯಿತಿ (Government facilities for BPL Card holders) ಸಿಗುತ್ತಿರುವುದರಿಂದ ಅನುಕೂಲಸ್ಥರು ಕೂಡ BPL ರೇಷನ್ ಕಾರ್ಡ್ ಗಳನ್ನು ಪಡೆಯುವುದಕ್ಕೆ ಹಾಗೂ ತಮ್ಮ APL ಗಳನ್ನು BPL ಗಳಾಗಿ ಬದಲಾಯಿಸಿಕೊಳ್ಳುವುದಕ್ಕೆ ಬಯಸುತ್ತಿದ್ದಾರೆ.


2016ರಲ್ಲಿಯೇ ಸರ್ಕಾರ BPL ರೇಷನ್ ಕಾರ್ಡ್ ಕುಳಿತು ಮಾನದಂಡ ಜಾರಿಗೆ ತಂದಿದೆ. ಅದನ್ನು ಮೀರಿ ಸರ್ಕಾರಕ್ಕೆ ವಂಚಿಸಿ ರೇಷನ್ ಕಾರ್ಡ್ ಹೊಂದಿರುವವರ ಪತ್ತೆ ಹಚ್ಚುವ ಕಾರ್ಯ ಕೂಡ ನಡೆಯುತ್ತಿದ್ದು, ಅದಕ್ಕೆ ಈಗ ಸಕಾಲವಾಗಿದೆ. ಅಂತವರು ಕಂಡು ಬಂದರೆ ಅವರ ರೇಷನ್ ಕಾರ್ಡ್ ಅನ್ನು ರದ್ದು (Card Cancel) ಮಾಡಲಾಗುವುದು ಎಂದು ಸರ್ಕಾರ ಖಡಕ್ ಎಚ್ಚರಿಕೆ ನೀಡಿದೆ.



ಕಬ್ಬು ಬೆಳೆಗಾರರಿಗೆ ಬಂಪರ್ ಸುದ್ದಿ, ಹೊಸದರ ನಿಗದಿ ಮಾಡಿದ ಕೇಂದ್ರ ಸರ್ಕಾರ, ಪ್ರತಿ ಟನ್ ಗೆ 5,000ರೂ. ಹೆಚ್ಚಳ.


ಇದರೊಂದಿಗೆ ಸರ್ಕಾರಕ್ಕೆ ಎದುರಾಗಿರುವ ಮತ್ತೊಂದು ಸಮಸ್ಯೆ ಏನೆಂದರೆ ಕೆಲವರು ಒಂದೇ ಕುಟುಂಬದಲ್ಲಿ ವಾಸಿಸುತ್ತಿದ್ದರು ಕೂಡ ಬೇರೆ ಬೇರೆ ರೇಷನ್ ಕಾರ್ಡ್ ಮಾಡಿಕೊಂಡಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ನಗರ ಪ್ರದೇಶಕ್ಕಿಂತ ಈ ಬಗ್ಗೆ ಹೆಚ್ಚು ಉದಾಹರಣೆಯನ್ನು ಕಾಣಬಹುದು. ಕುಟುಂಬದಲ್ಲಿ ತಂದೆ ತಾಯಿ, ಅವರ ಹಿರಿಯ ಮಗ, ಹಿರಿಯ ಸೊಸೆ, ಹಿರಿಯ ಮಗನ ಮಕ್ಕಳು, ಕಿರಿಯ ಮಗ, ಕಿರಿಯ ಸೊಸೆ, ಕಿರಿಯ ಮಗನ ಮಕ್ಕಳು ಹೀಗೆ ಎಲ್ಲರೂ ಒಟ್ಟಿಗೆ ವಾಸ ಮಾಡುತ್ತಿದ್ದರೂ ಕೂಡ ರೇಷನ್ ಕಾರ್ಡ್ ಗಳನ್ನು ಮಾತ್ರ ಪ್ರತಿಯೊಂದು ಕುಟುಂಬವು ಪ್ರತ್ಯೇಕವಾಗಿ ಮಾಡಿಸಿಕೊಂಡಿವೆ.

ತಂದೆ ತಾಯಿ ಒಂದು ರೇಷನ್ ಕಾರ್ಡ್, ಹಿರಿ ಮಗ ಹಿರಿ ಸೊಸೆ ಅವರ ಮಕ್ಕಳು ಒಂದು ರೇಷನ್ ಕಾರ್ಡ್, ಕಿರಿ ಮಗ ಕಿರಿ ಸೊಸೆ ಅವರ ಮಕ್ಕಳು ಬೇರೆ ರೇಷನ್ ಕಾರ್ಡ್ ಹೊಂದಿದ್ದಾರೆ. ಆದರೆ ಇವರೆಲ್ಲರ ರೇಷನ್ ಕಾರ್ಡ್ ವಿಳಾಸ ಮಾತ್ರ ಒಂದನ್ನೇ ತೋರಿಸುತ್ತದೆ ಇದು ಕೂಡ ಒಂದು ರೀತಿಯಲ್ಲಿ ಸರ್ಕಾರಕ್ಕೆ ವಂಚಿಸುವ ಉದ್ದೇಶವೇ ಆಗಿದೆ.
ಯಾಕೆಂದರೆ ಸರ್ಕಾರವು ಒಂದು ಕುಟುಂಬಕ್ಕೆ ಒಂದೇ ರೇಷನ್ ಕಾರ್ಡ್ ಎಂದು ಹೇಳಿರುವುದರಿಂದ ಇವರು ಒಟ್ಟಿಗೆ ಇರುವುದರಿಂದ ಅವರೆಲ್ಲರ ಹೆಸರನ್ನು ಒಳಗೊಂಡಿರುವ ಒಂದೇ ರೇಷನ್ ಕಾರ್ಡನ್ನು ಆ ಕುಟುಂಬ ಹೊಂದಿರಬೇಕು ಆದರೆ ಇವರು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆಯಲು ಈ ರೀತಿ ಪ್ರತ್ಯೇಕವಾದ ರೇಷನ್ ಕಾರ್ಡ್ ಗಳನ್ನು ಮಾಡಿಸಿಕೊಂಡಿದ್ದಾರೆ.

ಹಾಗಾಗಿ ಮುಂದೆ ಏನಾದರೂ ಸರ್ಕಾರವು ಈ ಕುರಿತು ಕ್ರಮಗಳನ್ನು ಕೈಗೊಂಡರೆ ಇಂತವರಿಗೆ ಸಮಸ್ಯೆ ಆಗಲಿದೆ. ಒಂದುವೇಳೆ ಅವರು ಪ್ರತ್ಯೇಕ ರೇಷನ್ ಕಾರ್ಡ್ ಗೆ ಪ್ರತ್ಯೇಕ ವಿಳಾಸ ಗಳನ್ನು ಹೊಂದಿದ್ದರೆ ಯಾವುದೇ ಸಮಸ್ಯೆ ಆಗುವುದಿಲ್ಲ ಆದರೆ ಎಲ್ಲರ ರೇಷನ್ ಕಾರ್ಡ್ ಕೂಡ ಒಂದೇ ಮನೆಯ ವಿಳಾಸವನ್ನು ತಿಳಿಸುತ್ತಿದ್ದರೆ ಆಗ ಅವರಿಗೆ ಸಮಸ್ಯೆ ತಲೆದೋರಿ ಅವರ ಕಾರ್ಡ್ ಗಳು ರದ್ದಾಗುವ ಪರಿಸ್ಥಿತಿಯು ಕೂಡ ಬರಬಹುದು.


ಮಹಿಳೆಯರಿಗೆ ಪ್ರತಿ ತಿಂಗಳು 2500 ರೂಪಾಯಿ ಹಣ ಹಾಗೂ ಉಚಿತ ಸಿಲಿಂಡರ್ ಘೋಷಣೆ ಮಾಡಿದ ಸೋನಿಯಾ ಗಾಂಧಿ



ಹಾಗೆಯೇ ಕೆಲವರು ಕುಟುಂಬದಲ್ಲಿ ಮೃ’ತ ಪಟ್ಟವರ ಹೆಸರನ್ನು ತೆಗೆದುಹಾಕಿಸದೇ ಅದೇ ರೀತಿ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಈ ರೀತಿ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚಿಗೆ ಜಾರಿಯಲ್ಲಿವೆ ಎನ್ನುವುದು ಸರ್ಕಾರದ ಕ್ರಮಕ್ಕೆ ಬಂದಿದೆ ಹಾಗಾಗಿ ಆಹಾರ ಇಲಾಖೆಗೆ ಇದರ ಕುರಿತು ಲಿಸ್ಟ್ ಕೊಡುವಂತೆ ಸೂಚಿಸಿದೆ ಮತ್ತು ಈಗ ನಕಲಿ ಕಾರ್ಡ್ ಗಳನ್ನು ಪತ್ತೆಹಚ್ಚುವುದು, ನಕಲಿ ಫಲಾನುಭವಿಗಳನ್ನು ತೆಗೆದು ಹಾಕುವುದು, ಅರ್ಹತಮಾನದಂಡ ಮೀರಿ BPL ರೇಷನ್ ಕಾರ್ಡ್ ಪಡೆದಿರುವ ಬಗ್ಗೆ ತನಿಖೆಗೆ ಗಮನ ಕೊಟ್ಟಿದೆ.

ಇದರಿಂದ ಸಾವಿರಾರು ನಕಲಿ ಫಲಾನುಭವಿಗಳ BPL ಕಾರ್ಡುಗಳು ರದ್ದಾಗಬಹುದು ಎಂದು ಊಹಿಸಲಾಗಿದೆ ಒಂದು ರಾಜ್ಯಕ್ಕೆ ಇಂತಿಷ್ಟೇ BPL ಕಾರ್ಡ್ ಎನ್ನುವ ಮಿತಿ ಇರುವುದರಿಂದ ಈ ರೀತಿ ನಕಲಿ ಫಲಾನುಭವಿಗಳನ್ನು ತೆಗೆದು ಹಾಕಿ ಆಸ್ಥಾನಕ್ಕೆ ಅರ್ಹ ಫಲಾನುಭವಿಗಳಿಗೆ ಅವಕಾಶ ಕೊಡಲು ಸರ್ಕಾರ ನಿರ್ಧಾರ ಮಾಡಿದೆ ಎನ್ನುವ ಮಾಹಿತಿ ಇದೆ.

Post a Comment

0 Comments