ಗ್ರಾಮೀಣ ಕೈಗಾರಿಕೆ ಇಲಾಖೆ ವತಿಯಿಂದ 2023-24ನೇ ಸಾಲಿನಲ್ಲಿ ಆಯಾ ಜಿಲ್ಲಾ ಪಂಚಾಯಿತಿ ಮೂಲಕ ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತವಾಗಿ ಸುಧಾರಿತ ಸಲಕರಣೆ ಸರಬರಾಜು ಯೋಜನೆ ಹಮ್ಮಿಕೊಳ್ಳಲಾಗಿದೆ. ಈ ಯೋಜನೆಯ ಮೂಲಕ ಕಮ್ಮಾರಿಕೆ, ಬಡಿಗೆತನ, ದೋಬಿ, ಕಲ್ಲು ಹೊಡೆಯುವ, ಗೋಡೆ ಕಟ್ಟುವ, ಕ್ಷೌರಿಕ, ಎಲೆಕ್ಟ್ರಿಷಿಯನ್ ಗಳು.
ಉಚಿತವಾಗಿ ಸರ್ಕಾರದಿಂದ ತಮ್ಮ ಕಸುಬಿಗೆ ಬೇಕಾದ ಟೂಲ್ ಕಿಟ್ ಗಳನ್ನು ಉಚಿತವಾಗಿ ಪಡೆಯಬಹುದು ಇದರೊಂದಿಗೆ ಉಚಿತವಾಗಿ ಅರ್ಹ ಮಹಿಳೆಯರಿಗೆ ವಿದ್ಯುತ್ಚಾಲಿತ ಹೊಲಿಗೆ ಯಂತ್ರ ಕೂಡ ವಿತರಣೆ ಮಾಡಲಾಗುತ್ತಿದೆ, ಇದಕ್ಕೂ ಕೂಡ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಳ್ಳಬಹುದು. ಎಲ್ಲಿ ಅರ್ಜಿ ಸಲ್ಲಿಸಬೇಕು?, ಏನೆಲ್ಲಾ ದಾಖಲೆಗಳು ಬೇಕು? ಯಾವ ಜಿಲ್ಲೆಯವರಿಗೆ ಏನು ಅನುದಾನ ಸಿಗುತ್ತಿದೆ ಎನ್ನುವ ಪೂರ್ತಿ ಮಾಹಿತಿಯನ್ನು ತಿಳಿದುಕೊಳ್ಳಲು ಅಂಕಣವನ್ನು ಕೊನೆಯವರೆಗೂ ಓದಿ.
2022-23ನೇ ಸಾಲಿನ ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಬಿಡುಗಡೆ, ವಿದ್ಯಾರ್ಥಿಗಳು ಹಣ ಬಂದಿದೆಯೇ ಎಂದು ಈ ರೀತಿ ಸ್ಟೇಟಸ್ ಚೆಕ್ ಮಾಡಿಕೊಳ್ಳಿ
ಅರ್ಹತೆಗಳೇನು:-
ಗ್ರಾಮೀಣ ಭಾಗದ ವೃತ್ತಿಪರ ಕುಶಲಕರ್ಮಿಗಳು ಈ ಯೋಜನೆ ನೆರವು ಪಡೆಯಲು ಅರ್ಜಿ ಸಲ್ಲಿಸಬಹುದು.
ಗ್ರಾಮೀಣ ಪ್ರದೇಶದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಶಲಕರ್ಮಿಗಳಿಗೆ ಬಂಡವಾಳ ಹೂಡಿಕೆಗೆ ಸಹಾಯಧನ ಯೋಜನೆಯಡಿ ಸಹಾಯಧನ ನೀಡಲಾಗುತ್ತಿದೆ, ಅರ್ಜಿ ಸಲ್ಲಿಸಬಹುದು.
777777< /p>
ಅರ್ಜಿ ಸಲ್ಲಿಸುವವರು ಕೇಳಲಾಗುವ ಎಲ್ಲಾ ಪೂರಕ ದಾಖಲೆಗಳನ್ನು ತಪ್ಪದೇ ಅರ್ಜಿಯೊಂದಿಗೆ ಸಲ್ಲಿಸಬೇಕು.
ಸದ್ಯಕ್ಕೀಗ ಗದಗ ರಾಯಚೂರು ಹಾಸನ ಯಾದಗಿರಿ ಮೈಸೂರು ಮಂಡ್ಯ ಚಿಕ್ಕಬಳ್ಳಾಪುರ ಚಾಮರಾಜನಗರ ಕೋಲಾರ ಬೆಂಗಳೂರು ನಗರ ಬೀದರ್ ಜಿಲ್ಲೆಯ ಫಲಾನುಭವಿಗಳ ಆಯಾ ಜಿಲ್ಲೆ ಅಥವಾ ತಾಲೂಕು ಮಟ್ಟದಲ್ಲಿ ಯಾವ ವರ್ಗದವರಿಗೆ ಅರ್ಜಿ ಆಹ್ವಾನಿಸಲಾಗಿದೆ ಎನ್ನುವುದನ್ನು ಅಧಿಸೂಚನೆಯಲ್ಲಿ ನೋಡಿಕೊಂಡು ಅರ್ಜಿ ಸಲ್ಲಿಸಬೇಕು.
ರೈತರಿಗೆ ಉಚಿತ ಮೇವಿನ ಬೀಜಗಳ ಕಿಟ್ ವಿತರಣೆ
ಬೇಕಾಗುವ ದಾಖಲೆಗಳು:-
1. ಹೊಲಿಗೆ ಯಂತ್ರವನ್ನು ಪಡೆಯಲು:* ಪಾಸ್ಪೋರ್ಟ್ ಗಾತ್ರದ ಭಾವಚಿತ್ರ
* ಜಾತಿ ಪ್ರಮಾಣ ಪತ್ರ
* ಹೊಲಿಗೆ ತರಬೇತಿ ಪಡೆದ ಪ್ರಮಾಣ ಪತ್ರ
* ಮರಗೆಲಸ ಕಸುಬಿನ ಹಾಗೂ ದೋಬಿ ಕಸುಬಿನ ಕುಶಲಕರ್ಮಿಯಾಗಳು ಆಯಾ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯವರಿಂದ ಪಡೆದ ದೃಡೀಕರಣ ಪತ್ರ ಅಥವಾ ಕಾರ್ಮಿಕ ಇಲಾಖೆಯಿಂದ ವಿತರಿಸಿದ ಕುಶಲಕರ್ಮಿ ಗುರುತಿನ ಚೀಟಿ ಪ್ರತಿ
2. ಸಹಾಯಧನ ಪಡೆಯಲು ಬೇಕಾಗಿರುವ ದಾಖಲೆಗಳು:
* ಪಾಸ್ಪೋರ್ಟ್ ಗಾತ್ರದ ಭಾವಚಿತ್ರ
* ಜಾತಿ ಪ್ರಮಾಣ ಪತ್ರ
* ಬ್ಯಾಂಕ್ ಪಾಸ್ ಬುಕ್
* ನಿಗದಿತ ನಮೂನೆಯಲ್ಲಿ ಬ್ಯಾಂಕ್‌ನಿಂದ ಸಾಲ ಮಂಜೂರಾತಿ
ಹಾಗೂ ಬಿಡುಗಡೆಯಾಗಿರುವ ಪತ್ರ
* ಉದ್ಯಮ ನೊಂದಣಿ ಪತ್ರ
* ಸ್ಥಳೀಯ ಸಂಸ್ಥೆಯಿಂದ ಪಡೆದ ಪರವಾನಿಗೆ ಪತ್ರ
ಅರ್ಜಿ ಸಲ್ಲಿಸುವ ವಿಧಾನ:-
* ಪ್ರತಿ ಜಿಲ್ಲೆಗಳಿಗೆ ಇಲಾಖೆ ವತಿಯಿಂದ ಅರ್ಜಿ ಸಲ್ಲಿಸಲು ಪ್ರತ್ಯೇಕ ನೀಡಲಾಗಿದೆ. ಇಲಾಖೆ ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಟ್ಟು ನಿಮ್ಮ ಜಿಲ್ಲೆಯ ಲಿಂಕ್ ಕ್ಲಿಕ್ ಮಾಡಿ.* ವೈಯಕ್ತಿಕ ವಿವರಣೆಗಳನ್ನು ಕೇಳಲಾಗುತ್ತದೆ ಅವುಗಳನ್ನು ಸಂಪೂರ್ಣವಾಗಿ ಭರ್ತಿ ಮಾಡಿ.
* ಯಾವ ಯೋಜನೆ ನೆರವು ಬಯಸಿದ್ದೀರಾ ಆ ಯೋಜನೆಯನ್ನು ಸೆಲೆಕ್ಟ್ ಮಾಡಿಕೊಳ್ಳಿ.
* ಘೋಷಣೆಯಲ್ಲಿ I Agree ಎಂಬ ಚೆಕ್ ಬಾಕ್ಸ್ ಮೇಲೆ right mark ಕ್ಲಿಕ್ ಮಾಡಿ.
* attach annexure ಮೇಲೆ ಕ್ಲಿಕ್ ಮಾಡಿ ಕೇಳಲಾದ ದಾಖಲೆಗಳನ್ನು ಅಪ್ಲೋಡ್ ಮಾಡಿ. ಕೊನೆಯದಾಗಿ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ
ಪ್ರಮುಖ ದಿನಾಂಕಗಳು:-
ಜಿಲ್ಲಾವಾರು ಪ್ರತ್ಯೇಕವಾಗಿ ಕೊನೆಯ ದಿನಾಂಕಗಳನ್ನು ನಿರ್ಧರಿಸಲಾಗಿದೆ. ನೀವು ಅಧಿಸೂಚನೆಯನ್ನು ಓದಿದ ಸಮಯದಲ್ಲಿ ಈ ವಿಷಯದ ಬಗ್ಗೆ ಕೂಡ ಗಮನಹರಿಸಿಕೊಂಡು ಕೊನೆಯ ದಿನಾಂಕ ಮುಗಿಯುವುದರ ಒಳಗೆ ಅರ್ಜಿ ಸಲ್ಲಿಸುವುದು ಒಳ್ಳೆಯದು.
0 Comments