ರಾಜ್ಯದಲ್ಲಿ ಈ ವರ್ಷ ಬರಗಾಲದ (drought) ಪರಿಸ್ಥಿತಿ ಉಂಟಾಗಿದ್ದು, ಮುಂಗಾರು ಮಳೆ ವೈಫಲ್ಯದಿಂದ ರೈತನಿಗೆ (farmers) ಮುಂಗಾರು ಮತ್ತು ಹಿಂಗಾರು ಬೆಳೆಗಳು ನ’ಷ್ಟವಾಗಿವೆ. ಇದರಿಂದ ರೈತನಿಗೆ ಮುಂಗಾರು ಹಂಗಾಮಿನಲ್ಲಿ ಭೂಮಿ ಹದ ಮಾಡಲು ಹಾಗು ಬಿತ್ತನೆ ಬೀಜ, ರಸಗೊಬ್ಬರ ಖರೀದಿಗೆ ಮಾಡಿದ್ದ ಸಾಲ ತೀರಿಸಲು, ಮತ್ತು ಈಗ ಬೆಳೆ ಕೂಡ ಕೈ ಹತ್ತದ ಕಾರಣ ದಿನನಿತ್ಯದ ಜೀವನ ನಿರ್ವಹಣೆಯ ಖರ್ಚುವೆಚ್ಚಕ್ಕೂ ಪರದಾಡುತ್ತಿದ್ದಾನೆ
ಇಂತಹ ಪರಿಸ್ಥಿತಿಯಲ್ಲಿ ರೈತರಿಗೆ ಬೆಳೆ ಪರಿಹಾರ ನಿಧಿ (drought releif) ಹಣ ದೊರಕಿದರೆ ಸಾಕಷ್ಟು ಅನುಕೂಲವಾಗುತ್ತದೆ ಎನ್ನುವುದು ಎಲ್ಲರ ಆಶ್ರಯ. ಅದಕ್ಕಾಗಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪದೇಪದೇ ಮನವಿ ಸಲ್ಲಿಸುತ್ತಿದೆ ಈಗಾಗಲೇ ಕೇಂದ್ರ ಸರ್ಕಾರದಿಂದ ಬರ ಅಧ್ಯಯನ ನಡೆದು ಕೇಂದ್ರ ಸರ್ಕಾರದ ಕೈಪಿಡಿ ಪ್ರಕಾರ 236 ತಾಲೂಕುಗಳು ಸಂಪೂರ್ಣ ಬರ ಹಾಗೂ ಅರೆ ಬಲಪೀಡಿತ ತಾಲೂಕುಗಳು ಎಂದು ಘೋಷಿತವಾಗಿದೆ.
ಪಿಂಕ್ ಕಾರ್ಡ್ ಇದ್ದವರಿಗೆ ಮಾತ್ರ 4ನೇ ಕಂತಿನ ಗೃಹಲಕ್ಷ್ಮಿ ಯೋಜನೆ ಹಣ ಜಮೆ.! ಪಿಂಕ್ ಕಾರ್ಡ್ ಪಡೆಯೋದು ಹೇಗೆ ನೋಡಿ
ಇಂತಹ ಪರಿಸ್ಥಿತಿಯಲ್ಲಿ ಎಲ್ಲರ ಚಿತ್ತವು ಬರ ಪರಿಹಾರದ ನಿಧಿಯತ್ತ ಇದೆ. ಕೇಂದ್ರ ಸರ್ಕಾರವು NDRF ನಿಂದ ಬರ ಪರಿಹಾರದ ಹಣ ಬಿಡುಗಡೆ ಮಾಡಬೇಕು, ಇತ್ತ ರಾಜ್ಯ ಸರ್ಕಾರ ಕೂಡ ಕೇಂದ್ರ ಸರ್ಕಾರದ ನೆರವನ್ನೇ ಕಾಯುತ್ತಿದೆ. ರಾಜ್ಯ ಸರ್ಕಾರ ಕೂಡ ತನ್ನ ಪಾಲಿನ ಪರಿಹಾರದ ಹಣ ನೀಡಬೇಕು ಎನ್ನುವುದು ರೈತರ ಕೂಗು. ಇದೆಲ್ಲದರ ನಡುವೆ ಇತ್ತೀಚೆಗೆ ನಡೆದ ಬೆಳವಣಿಗೆ ಪ್ರಕಾರವಾಗಿ ರೈತರಿಗೆ ಸಮಾಧಾನಕರ ಸುದ್ದಿ ಇದೆ ಎನ್ನಬಹುದು.
ಅದೇನೆಂದರೆ, ವಾರದ ಹಿಂದೆ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ (CM Siddaramaih) ಮತ್ತು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ರವರು (Minister Krishne Bairegowda) ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರನ್ನು ಭೇಟಿ ಮಾಡಿದ್ದ ಫೋಟೋಗಳು ವೈರಲ್ ಆಗಿದ್ದವು. ಈ ಸಂದರ್ಭದಲ್ಲಿ ಮುಖ್ಯವಾಗಿ ಅವರು ಬೆಳೆ ಪರಿಹಾರದ ಬಿಡುಗಡೆ ಬಗ್ಗೆ ಚರ್ಚಿಸಿದ್ದಾರೆ ಎನ್ನುವುದು ತಿಳಿದುಬಂದಿದೆ.
ಗ್ಯಾಸ್ ಸಬ್ಸಿಡಿ ಪಡೆಯಲು e-KYC, ಕಡ್ಡಾಯ ನಿಮ್ಮ ಮೊಬೈಲ್ ನಲ್ಲಿ e-KYC ಅಪ್ಡೇಟ್ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ
ರಾಜ್ಯದ ರೈತರ ಪರಿಸ್ಥಿತಿ ಅರಿತಿರುವ ಕೇಂದ್ರ ಸರ್ಕಾರವು ಶೀಘ್ರವೇ ಬೆಳೆ ಪರಿಹಾರ ಹಣ ಬಿಡುಗಡೆ ಮಾಡುವ ಬಗ್ಗೆ ಭರವಸೆ ನೀಡಿದೆ. ಹಾಗಾಗಿ ರಾಜ್ಯದಲ್ಲಿ ಬೆಳೆ ಪರಿಹಾರ ಬಿಡುಗಡೆಗೆ ಕ್ರಮ ಕೈಗೊಳ್ಳಲು ತಯಾರಿ ಸಿದ್ದವಾಗಿದೆ. ಈಗಾಗಲೇ ರಾಜ್ಯ ಸರ್ಕಾರವು ಸುತ್ತೋಲೆ ಹೊರಡಿಸಿ ಈ ಬಾರಿ ಪರಿಹಾರ ತಂತ್ರಾಂಶದ (Parihara) ಬದಲು ಫ್ರೂಟ್ ತಂತ್ರಾಂಶದಲ್ಲಿ (FRUITS) ಹಣ ಬಿಡುಗಡೆ ಮಾಡಲಾಗುವುದು ಆದ್ದರಿಂದ ಪ್ರತಿಯೊಬ್ಬ ರೈತರು ಕೂಡ ನೋಂದಾಯಿಸಿಕೊಂಡು FID ಪಡೆಯಬೇಕು.
ಈ ರೀತಿ ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿಯಾಗಿರುವ ರೈತನ ಖಾತೆಗೆ ಮಾತ್ರ ಹಣ ಬಿಡುಗಡೆ ಆಗುವುದು ಎನ್ನುವ ಸೂಚನೆ ಕೊಟ್ಟಿದೆ. ಯಾವುದೇ ಮಧ್ಯವರ್ತಿ ಕಾಟ ಇಲ್ಲದೆ ಪರಿಹಾರದ ಹಣ ನೇರವಾಗಿ ರೈತನ ಖಾತೆಗೆ dbt ಮೂಲಕ ತಲುಪಲು FID ಅನುಕೂಲವಾಗುತ್ತದೆ. ಹಾಗಾಗಿ ಈ ಕುರಿತು ಅಭಿಯಾನಗಳನ್ನು ನಡೆಸಲಾಗುತ್ತಿದೆ. ಈಗಾಗಲೇ ಶೇಕಡ 50% ಅದಕ್ಕಾಗಿ ಕಾಲಾವಕಾಶವನ್ನು ನೀಡಲಾಗಿದ್ದು ಶೀಘ್ರದಲ್ಲೇ ಫ್ರೂಟ್ಸ್ ತಂತ್ರಾಂಶದಲ್ಲಿ ಹಣ ಬಿಡುಗಡೆ ಆಗುವ ಕುರಿತು ಕಂದಾಯ ಸಚಿವರು ಸುಳಿವು ಬಿಟ್ಟುಕೊಟ್ಟಿದ್ದಾರೆ.
ಅವರು ತಿಳಿಸಿರುವ ಪ್ರಕಾರವಾಗಿ ತಾಲೂಕುವಾರು ಫ್ರೂಟ್ಸ್ ತಂತ್ರಾಂಶದಲ್ಲಿ ಹಣ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಇದಕ್ಕಾಗಿ ಮೊದಲಿಗೆ ಒಂದು ತಾಲೂಕಿನಲ್ಲಿ ಪ್ರಯೋಗ ಮಾಡಿ ಆ ತಾಲೂಕಿನ ಎಲ್ಲಾ ರೈತರು ಕೂಡ ಯಶಸ್ವಿಯಾಗಿ ಹಣ ಪಡೆಯುವಂತಾದರೆ ಅದೇ ಮಾದರಿಯಲ್ಲಿ ಮುಂದುವರಿಸುವುದು ಅಥವಾ ಇದರಲ್ಲಿ ಲೋಪ ದೋಷಗಳು ಕಂಡು ಬಂದರೆ ಅದನ್ನು ಸರಿಪಡಿಸಿಕೊಂಡು.
ಇನ್ನಿತರ ತಾಲೂಕುಗಳಿಗೆ ಹಣ ವರ್ಗಾವಣೆ ಮಾಡುವುದು ಎಂದು ಇಲಾಖೆ ನಿರ್ಧಾರ ಮಾಡಿದೆ ಎನ್ನುವ ಮಾಹಿತಿಯನ್ನು ಕಂದಾಯ ಸಚಿವರು ತಿಳಿಸಿದ್ದಾರೆ. ಆದ್ದರಿಂದ ರೈತರು ಶೀಘ್ರವೇ ತಮ್ಮ RTC ಸಂಖ್ಯೆ, ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಹಾಗೂ ಮೊಬೈಲ್ ಸಂಖ್ಯೆ ಕೊಡುವ ಮೂಲಕ ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಾಯಿಸಿಕೊಂಡು FID ಸಂಖ್ಯೆ ಪಡೆಯಿರಿ.
0 Comments