ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ವತಿಯಿಂದ(KFCSC) ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರದಲ್ಲಿ (Bangalore) ಹೊಸ ನ್ಯಾಯಬೆಲೆ ಅಂಗಡಿಗಳನ್ನು (fairprice shop) ಮಂಜೂರು ಮಾಡಲಾಗಿದೆ.
ನ್ಯಾಯ ಬೆಲೆ ಅಂಗಡಿ ಆರಂಭಿಸಲು ಆಸಕ್ತಿ ಇರುವರಿಂದ ಅರ್ಜಿ ಕೂಡ ಆಹ್ವಾನಿಸಲಾಗಿದೆ.
ಕರ್ನಾಟಕ ಅಗತ್ಯ ವಸ್ತುಗಳ ಸಾರ್ವಜನಿಕ ವಿತರಣೆ ಪದ್ಧತಿ ನಿಯಂತ್ರಣದ ಆದೇಶದ ಅನ್ವಯ ಕನಿಷ್ಠ ಪಡಿತರ ಚೀಟಿಗಿಂತ ಹೆಚ್ಚಿನ ಪಡಿತರ ಚೀಟಿ ಹೊಂದಿರುವ ಪ್ರದೇಶಗಳಲ್ಲಿ ಹೊಸ ನ್ಯಾಯಬೆಲೆ ಅಂಗಡಿ ಹಾಗೂ ಹೆಚ್ಚುವರಿ ನ್ಯಾಯಬೆಲೆ ತೆರೆಯಲು ನಿಯಮಾನುಸಾರ ಅರ್ಹ ಸಹಕಾರ ಸಂಘ ಮತ್ತು ಸಂಸ್ಥೆಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕರು (Deputy Director) ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿವರ ಹೀಗಿದೆ ನೋಡಿ.
ಸಂಕ್ರಾತಿ ಹಬ್ಬದ ಪ್ರಯುಕ್ತ ರೈತ ಮಹಿಳೆಯರಿಗೆ 12,000 ಗಿಫ್ಟ್ ಮೋದಿ ಸರ್ಕಾರದಿಂದ ಹೊಸ ಯೋಜನೆ
ಹೊಸ ನ್ಯಾಯಬೆಲೆ ಅಂಗಡಿ ಮಂಜುರಾಗಿರುವ ಪ್ರದೇಶಗಳು:-
* ಅಂದರರಾಮೋಹಳ್ಳಿ ಗ್ರಾ.ಪಂಚಾಯಿತಿ ವ್ಯಾಪ್ತಿಯ ಭೀಮನಕುಪ್ಪೆ ಪ್ರದೇಶದಲ್ಲಿ ಒಟ್ಟು ಪಡಿತರ ಚೀಟಿ 600
* ರಾಮೋಹಳ್ಳಿ ಗ್ರಾ.ಪಂಚಾಯಿತಿ ವ್ಯಾಪ್ತಿ ಪ್ರದೇಶದಲ್ಲಿ ಒಟ್ಟು ಪಡಿತರ ಚೀಟಿ 600
* ತಾವರೇಕೆರೆ ಗ್ರಾ.ಪಂಚಾಯಿತಿ ವ್ಯಾಪ್ತಿಯ ತಾವರೇಕೆರೆ ಪ್ರದೇಶದಲ್ಲಿ ಒಟ್ಟು ಪಡಿತರ ಚೀಟಿ 800 ಸೇರಿದಂತೆ ಇನ್ನೂ ಅನೇಕ ಪ್ರದೇಶಗಳಿಗೆ
* ಅಗರ ಗ್ರಾ.ಪಂ ವ್ಯಾಪ್ತಿಯ ಲಕ್ಷ್ಮೀಪುರ ಪ್ರದೇಶದಲ್ಲಿ ಒಟ್ಟು ಪಡಿತರ ಚೀಟಿ 600
* ಅಗರ ಗ್ರಾ.ಪಂ ವ್ಯಾಪ್ತಿಯ ಬಂಜಾರಪಾಳ್ಯ ಪ್ರದೇಶದಲ್ಲಿ ಒಟ್ಟು ಪಡಿತರ ಚೀಟಿ 600
* ವಾರ್ಡ್ 192 ಬೇಗೂರಿನಲ್ಲಿ ಒಟ್ಟು ಪಡಿತರ ಚೀಟಿ 800,
* ವಾರ್ಡ್ 187 ಪುಟ್ಟೇನಹಳ್ಳಿ ಒಟ್ಟು ಪಡಿತರ ಚೀಟಿ 800
* ವಾರ್ಡ್ 190 ಮಂಗಮ್ಮನ ಪಾಳ್ಯದಲ್ಲಿ ಒಟ್ಟು ಪಡಿತರ ಚೀಟಿ 800
* ವಾರ್ಡ್ 194 ಗೊಟ್ಟಿಗೆರೆ ಒಟ್ಟು ಪಡಿತರ ಚೀಟಿ 800
ಆಶ್ರಯ ಯೋಜನೆ ಸ್ವಂತ ಮನೆ ಇಲ್ಲದವರಿಗೆ ಉಚಿತ ಸೈಟ್ ಹಂಚಿಕೆ ಆಸಕ್ತರು ಅರ್ಜಿ ಸಲ್ಲಿಸಿ
ಅರ್ಜಿ ಸಲ್ಲಿಸಲು ಯಾರಿಗೆ ಅವಕಾಶ:-
* ತಾಲೂಕು ಕೃಷಿ ಪ್ರಾಥಮಿಕ ಪತ್ತಿನ ಮಾರಾಟ ಸರ್ಕಾರ ಸಂಘ, ಪ್ರಾಥಮಿಕ ಕೃಷಿ ಸಹಕಾರ ಸಂಘ
* ವ್ಯವಸಾಯೋತ್ಪನ್ನ ಸಹಕಾರ ಸಂಘ
* ತೋಟಗಾರಿಕೆ ಉತ್ಪನ್ನ ಬಳಕೆದಾರರ ಸಹಕಾರ ಸಂಘ
* ನೊಂದಾಯಿತ ಸಹಕಾರ ಸಂಘ
* ನೊಂದಾಯಿತ ಪ್ರಾಥಮಿಕ ಬಳಕೆದಾರರ ಸಹಕಾರ ಸಂಘ,
* ಬೃಹತ್ ಪ್ರಮಾಣದ ಆದಿವಾಸಿ ವಿವಿಧೋದ್ದೇಶ ಸಹಕಾರ ಸಂಘಗಳು
* ನೊಂದಾಯಿತ ನೇಕಾರರ ಸಹಕಾರ ಸಂಘಗಳು.
* ನೊಂದಾಯಿತ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘಗಳು * ನೊಂದಾಯಿತ ವಿವಿಧೋದ್ದೇಶ ಸಹಕಾರ ಸಂಘ * ವಿಕಲಚೇತನರ ಕಲ್ಯಾಣ ಸಹಕಾರ ಸಂಘಗಳು
* ಬ್ಯಾಂಕ್ ನಡೆಸುತ್ತಿರುವ ಸಹಕಾರ ಸಂಘಗಳು
* ಸಹಕಾರ ಬ್ಯಾಂಕ್ ಗಳು
* ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯಿಂದ ನೊಂದಣಿ ಆಗಿರುವ ಸ್ತೀ ಶಕ್ತಿ ಸಂಘಗಳು ಮಹಿಳಾ ಸ್ವ ಸಹಾಯ ಸಂಘಗಳು
* ವಿಕಲಚೇತನರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರಿಗೂ ಅವಕಾಶ ಕಲ್ಪಿಸಲಾಗಿದೆ.
ಅರ್ಜಿ ಸಲ್ಲಿಸುವುದು ಹೇಗೆ :-
* ಆಸಕ್ತರು ಈ ಕೆಳಗಿನ ವಿಳಾಸಕ್ಕೆ ಭೇಟಿ ಕೊಟ್ಟು ನಿಗದಿತ ಅರ್ಜಿ ಫಾರಂ ಪಡೆಯಬೇಕು, ಸೂಕ್ತ ದಾಖಲೆಗಳ ಜೊತೆಗೆ ತುಂಬಿದ ಅರ್ಜಿ ಫಾರಂ ನ್ನು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಬೆಂಗಳೂರು ನಗರ ಜಿಲ್ಲೆ, ಉಪ ನಿರ್ದೇಶಕರಿಗೆ ಸಲ್ಲಿಸಬೇಕು.
ವಿಳಾಸ:-
ಉಪನಿರ್ದೇಶಕರು,ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ,
ಬೆಂಗಳೂರು ನಗರ ಜಿಲ್ಲೆ,
ಬೆಂಗಳೂರು.
*ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :- 03 ಫೆಬ್ರವರಿ 2024 ಸಂಜೆ 05:00 ಗಂಟೆಯ ಒಳಗಾಗಿ ಸಲ್ಲಿಸಬೇಕು.
0 Comments