ಕರ್ನಾಟಕ ಸರ್ಕಾರ ಕಾರ್ಮಿಕ ಇಲಾಖೆಯಿಂದ ಕಟ್ಟಡ ಕಾರ್ಮಿಕ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಮಂಡಳಿಯಲ್ಲಿ ನೋಂದಣಿಯಾಗಿ ಲೇಬರ್ ಕಾರ್ಡ್ (labour card) ಹೊಂದಿರುವವರಿಗೆ ಸರ್ಕಾರದಿಂದ ಸಾಕಷ್ಟು ಪ್ರಯೋಜನಗಳು ಸಿಗುತ್ತಿವೆ.
ಇಂತಹ ಕಾರ್ಮಿಕರಿಗೆ ಉಚಿತ ಪ್ರಯಾಣ, ಆರೋಗ್ಯವೇ ವಿಮೆ, ಉಚಿತ ಟೂಲ್ ಕಿಟ್, ಮಕ್ಕಳ ಮದುವೆಗೆ ಪ್ರೋತ್ಸಾಹ ಧನ ಸೇರಿದಂತೆ ಹತ್ತಾರು ಯೋಜನೆಗಳ ಪ್ರಯೋಜನ ಇದೆ.
ಕಟ್ಟಡ ಕಾರ್ಮಿಕರು ಮಾತ್ರವಲ್ಲದೆ ಕಾರ್ಮಿಕರ ಮಕ್ಕಳಿಗೂ ಕೂಡ ಮಂಡಳಿ ವತಿಯಿಂದ ವಿದ್ಯಾರ್ಥಿ ವೇತನ ವಿದ್ಯಾರ್ಥಿ ಕಿಟ್ ಉಚಿತ ಲ್ಯಾಪ್ಟಾಪ್ ಟ್ಯಾಬ್ ಗಳ ವಿತರಣೆ ಕಾರ್ಯಕ್ರಮವು ನಡೆಯುತ್ತಿದೆ. ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲು ಪ್ರತಿ ವರ್ಷ ಅರ್ಜಿ ಆಹ್ವಾನ ಮಾಡಲಾಗುತ್ತದೆ.
ಯಾರೆಲ್ಲಾ ಈ ವಿದ್ಯಾರ್ಥಿ ವೇತನಕ್ಕಾಗಿ ಕಳೆದ ವರ್ಷ ಅರ್ಜಿ ಸಲ್ಲಿಸಿದರು ಅವರಿಗೆ ಹೊಸ ವರ್ಷದ ಆರಂಭದಲ್ಲಿ ಸಿಹಿ ಸುದ್ದಿ ಸಿಕ್ಕಿದೆ. 2022-23ನೇ ಸಾಲಿನಲ್ಲಿ ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಗಾಗಿ (labiur card scholarships) ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನದ ಹಣ ಜಮೆ ಆಗಿದೆ.
ಮೆಟ್ರಿಕ್ ಪೂರ್ವ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕಾಗಿ ಕಾರ್ಮಿಕರ ಮಕ್ಕಳಿಂದ ಅರ್ಜಿ ಆಹ್ವಾನ ಮಾಡಲಾಗುತ್ತದೆ. ಸದ್ಯಕ್ಕೆ ಡಿಸೆಂಬರ್ ಕೊನೆಯ ವಾರದಿಂದ PUC ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನವು ಜಮೆ ಆಗಿದೆ.
ಆದರೆ ಇದುವರೆಗೂ ಕೂಡ ದ್ವಿತೀಯ ಪಿಯುಸಿ ವಿದ್ಯಾಭ್ಯಾಸಕ್ಕೆ ರೂ.15,000 ವಿದ್ಯಾರ್ಥಿ ವೇತನ ಸಿಗುತ್ತಿತ್ತು ಸರ್ಕಾರವೀಗ ಈ ಹಣವನ್ನು ಕಡಿಮೆಗೊಳಿಸಿ ರೂ.4,600ಗಳನ್ನು ಜಮೆ ಮಾಡಿದೆ. ನೀವು ಕೂಡ ಅರ್ಜಿ ಸಲ್ಲಿಸಿದ್ದರೆ ಯಾವುದೇ ವಿಭಾಗದಲ್ಲಿ ಅರ್ಜಿ ಸಲ್ಲಿಸಿದರು ನಿಮ್ಮ ಅರ್ಜಿ ಸ್ಟೇಟಸ್ ಏನಾಗಿದೆ ಎನ್ನುವುದನ್ನು ಈಗ ನಾವು ಹೇಳುವ ಈ ವಿಧಾನದ ಮೂಲಕ ಚೆಕ್ ಮಾಡಿ ತಿಳಿದುಕೊಳ್ಳಿ.
2250 ಕಾನ್ಸ್ ಟೇಬಲ್ & ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ.! ವೇತನ 32,000
1. ಮೊದಲನೇ ವಿಧಾನ:-
* https://kbocwwb.karnataka.gov.in ಈ ವೆಬ್ ಸೈಟ್ ಗೆ ಭೇಟಿ ಕೊಡಿ.
* ಮುಖಪುಟದಲ್ಲಿcluck here to view education assistance status ಎನ್ನುವ ಆಯ್ಕೆ ಕಾಣುತ್ತದೆ ಅದನ್ನು ಕ್ಲಿಕ್ ಮಾಡಿ.
* ಮುಖ್ಯವಾಗಿ ನಿಮ್ಮ acknowledgement No. ಕೇಳಲಾಗುತ್ತದೆ. ಇದರೊಂದಿಗೆ ಕೇಳಲಾಗುವ ನಿಮ್ಮ ಕೆಲ ವೈಯುಕ್ತಿಕ ಮಾಹಿತಿ ಸಲ್ಲಿಸಿದಾಗ ನಿಮ್ಮ ಅರ್ಜಿ ಸಲ್ಲಿಕೆ ಯಶಸ್ವಿಯಾಗಿದೆಯೇ? ಅದು ಪರಿಶೀಲನೆ ಹಂತದಲ್ಲಿದಯೆ ಅಥವಾ ಹಣ ವರ್ಗಾಯಿಸಲಾಗಿದಯೇ ಇಲ್ಲವೇ ಈಗಾಗಲೇ ಹಣವನ್ನು ಖಾತೆಗೆ ಹಾಕಲಾಗಿದೆ ಎನ್ನುವ ಸ್ಪಷ್ಟ ಮಾಹಿತಿ ತಿಳಿಯುತ್ತದೆ.
* ನೀವು ಅರ್ಜಿ ಸಲ್ಲಿಸುವಾಗ ನಿಮಗೆ ನೀಡಿರುವ ಅರ್ಜಿ ಸ್ವೀಕೃತಿ ಪ್ರತಿಯ ಸಂಖ್ಯೆ ಮೂಲಕ ನೀವು ಈ ರೀತಿಯಾಗಿ ನಿಮ್ಮ ಅರ್ಜಿ ಸ್ಟೇಟಸ್ ಯಾವ ಹಂತದಲ್ಲಿದೆ ಎನ್ನುವುದನ್ನು ಚೆಕ್ ಮಾಡಿ ತಿಳಿದುಕೊಳ್ಳಬಹುದು.
2. ಎರಡನೇ ವಿಧಾನ:-
* ತಂದೆ ಅಥವಾ ತಾಯಿ ಲೇಬರ್ ಕಾರ್ಡ್ ಹೊಂದಿದ್ದರೆ ಮಕ್ಕಳು ಅವರ ಲೇಬರ್ ಕಾರ್ಡ್ ನಿಂದ ಅರ್ಜಿ ಸಲ್ಲಿಸಿರುತ್ತಾರೆ, ಹೀಗಾಗಿ ಪೋಷಕರ ಮಾಹಿತಿಯನ್ನು ಹಾಕಿ ಮತ್ತೊಂದು ವಿಧಾನದ ಮೂಲಕ ಚೆಕ್ ಮಾಡಬಹುದು.
* ಕರ್ನಾಟಕ ಸರ್ಕಾರವು ಅಭಿವೃದ್ಧಿಪಡಿಸಿರುವ DBT ಕರ್ನಾಟಕ ಆಪ್ (DBT Karnataka app) ಡೌನ್ಲೋಡ್ ಮಾಡಿಕೊಳ್ಳಿ, ನೀವು ತಂದೆಯ ಲೇಬರ್ ಕಾಡ್ ಮೇಲೆ ಅರ್ಜಿ ಸಲ್ಲಿಸಿದರೆ ತಂದೆಯ ಆಧಾರ್ ಕಾರ್ಡ್ ಸಂಖ್ಯೆ ನಮೂದಿಸಿ, OTP generate ಆಗುತ್ತದೆ. pin set ಮಾಡಿ ಆಪ್ ಓಪನ್ ಮಾಡಿ.
ರೈತರಿಗೆ ಉಪಯುಕ್ತಕಾರಿಯಾದ ಹೊಸ ಎಲೆಕ್ಟ್ರಿಕಲ್ ಟ್ರಾಕ್ಟರ್ ಬಿಡುಗಡೆ.! ಬೆಲೆ ಕೊಡ ತುಂಬಾ ಕಡಿಮೆ
* ನಂತರ Payment Status ಭಾಗದಲ್ಲಿ ಚೆಕ್ ಮಾಡಿದರೆ ನಿಮಗೆ ಸರ್ಕಾರದಿಂದ ಯಾವುದೇ ವಿದ್ಯಾರ್ಥಿ ವೇತನ ಪ್ರೋತ್ಸಾಹಧನ ಅಥವಾ ಕಲ್ಯಾಣ ಯೋಜನೆಗಳ ಹಣ ವರ್ಗಾವಣೆ ಆಗಿದ್ದರೂ ಅದರ ವಿವರ ಬರುತ್ತದೆ. ಅದರಲ್ಲಿ Education Assistance for Construction Workers Scheme ನಿಂದ ಹಣ ವರ್ಗಾವಣೆಯಾಗಿದೆಯೇ ಎನ್ನುವುದನ್ನು ಚೆಕ್ ಮಾಡಿ.
0 Comments