ಗೃಹ ರಕ್ಷಕದಳ (Homeguards) ಸೇರಲು ಯುವಜನತೆ ಹಾತೊರೆಯುತ್ತಿರುತ್ತಾರೆ. ಪ್ರವಾಹ ಸಂದರ್ಭದಲ್ಲಿ, ಟ್ರಾಫಿಕ್ ನಿಯಂತ್ರಣ ಮಾಡಲು ದೊಂ’ಭಿ, ಗ’ಲಾ’ಟೆಗಳಾದ ಸಮಯದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಗೃಹ ರಕ್ಷಣಾ ದಳ ಭಾಗಿಯಾಗಿರುತ್ತದೆ. ಇದು ಮಾತ್ರ ಅಲ್ಲದೆ ಕೇಂದ್ರ ಮತ್ತು ರಾಜ್ಯ ಚುನಾವಣೆಯ ಸಂದರ್ಭದಲ್ಲಿ ಮತ್ತು ದೇಶದ ಪ್ರಮುಖ ಕಾರ್ಯಕ್ರಮದಲ್ಲಿ ಇವರ ಪರೇಡ್ ಹಾಜರಿರುತ್ತದೆ
ಪೊಲೀಸ್ ಮತ್ತು ಮಿಲಿಟರಿ ಸಿಬ್ಬಂದಿ ಕೊರತೆ ಇದ್ದ ಸಮಯದಲ್ಲಿ ಗೃಹ ರಕ್ಷಕದಳ ಭಾಗಿಯಾಗಿ ದೇಶದ ಆಂತರಿಕ ರಕ್ಷಣೆ ಮಾಡುತ್ತದೆ. ಈ ಗೃಹ ರಕ್ಷಣಾದಳ ಸೇರಲು ಆಸಕ್ತಿ ಇರುವ ಯುವ ಜನತೆಗೆ ಈಗ ಅವಕಾಶವೊಂದು ಸಿಗುತ್ತಿದೆ. ಜನವರಿ 5ರ ಒಳಗೆ ನೀವು ಅರ್ಜಿ ಸಲ್ಲಿಸಿ ಗೃಹ ರಕ್ಷಕ ದಳ ಸೇರಬಹುದು. ಈ ನೇಮಕಾತಿಗೆ ಸಂಬಂಧಿಸಿದ ಮಾಹಿತಿ ಹೀಗಿದೆ ನೋಡಿ.
ಈ ದಿನಾಂಕದಂದು 15 ಜಿಲ್ಲೆ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ 4ನೇ ಕಂತಿನ ಹಣ ಜಮೆ ಆಗುತ್ತೆ.! ನಿಮ್ಮ ಮೊಬೈಲ್ ನಲ್ಲಿಯೇ ಹಣ ಜಮೆ ಆಗಿದಿಯೋ ಇಲ್ಲವೋ ಈ ರೀತಿ ಚೆಕ್ ಮಾಡಿ
ಬೆಂಗಳೂರು ಉತ್ತರ ಜಿಲ್ಲೆ ವತಿಯಿಂದ ಬೆಂಗಳೂರು ನಗರ ಜಿಲ್ಲೆಯಲ್ಲಿ ಖಾಲಿ ಇರುವ ಗೃಹರಕ್ಷಕ ಸ್ಥಾನಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಬೆಂಗಳೂರು ಉತ್ತರ ಜಿಲ್ಲಾ ಹೋಮ್ ಗಾರ್ಡ್ಸ್ ಕಮಾಂಡೆಂಟ್ ರವರು ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿ ತಿಳಿಸಿದ್ದಾರೆ.
ಈ ಬಗ್ಗೆ ಆಸಕ್ತಿ ಹೊಂದಿರುವ ಕರ್ನಾಟಕದ ಎಲ್ಲಾ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಸರ್ಕಾರದಿಂದ ಈ ಅರ್ಜಿಗಳನ್ನು ಪಡೆದು ಸಲ್ಲಿಸಲು ಜನವರಿ 5 ಕೊನೆಯ ದಿನಾಂಕವಾಗಿದೆ. ಗೃಹರಕ್ಷಕ ದಳ ಸೇರಲು ಬಯಸುವ ಅಭ್ಯರ್ಥಿಗಳಿಗೆ ಕೆಲ ಕಂಡೀಶನ್ ಗಳನ್ನು ಕೂಡ ಹಾಕಲಾಗಿದ್ದು.
ದನದ ಕೊಟ್ಟಿಗೆ, ಕುರಿ-ಮೇಕೆ ಶೆಡ್, ಕೃಷಿ ಹೊಂಡ, ಬದು ನಿರ್ಮಾಣಕ್ಕೆ ನರೇಗಾದಿಂದ 5 ಲಕ್ಷದ ವರೆಗೆ ನೆರವು, ಕೂಡಲೇ ನಿಮ್ಮ ಗ್ರಾಮ ಪಂಚಾಯಿತಿಯಲ್ಲಿ ಅರ್ಜಿ ಸಲ್ಲಿಸಿ
ಈ ಮಾನದಂಡ ಪೂರೈಸುವವರು ತಮ್ಮ ಇಚ್ಛೆಯಿಂದ ಗೃಹರಕ್ಷಕ ದಳ ಸೇರಿ ಸಮಾಜಕ್ಕೆ ಸೇವೆ ಸಲ್ಲಿಸಬಹುದು ಆಸಕ್ತಿ ಇರುವವರು ಭಾಗವಹಿಸಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ತಪ್ಪದೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.
ಅರ್ಜಿ ಸಲ್ಲಿಸಲು ಕಂಡಿಷನ್ ಗಳು:-
* ಅಭ್ಯರ್ಥಿಗಳು ಕನಿಷ್ಟ SSLC ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು
* ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು 19 ವರ್ಷ ತುಂಬಿರಬೇಕು.
* ಉತ್ತಮ ಆರೋಗ್ಯ ಮತ್ತು ದೇಹದಾರ್ಢ್ಯತೆ ಹೊಂದಿರಬೇಕು. ಇದಕ್ಕೆ ವೈದ್ಯಕೀಯ ಪರೀಕ್ಷೆಗಳು ಕೂಡ ನಡೆಯುತ್ತವೆ.
* ಈ ಬಾರಿ ನೇಮಕಾತಿಯಲ್ಲಿ ಕಂಪ್ಯೂಟರ್ ಟೈಪಿಂಗ್ ಕನ್ನಡ ಮತ್ತು ಇಂಗ್ಲೀಷ್, ಡ್ರೈವರ್ಸ್, ಅಡುಗೆ ಭಟ್ಟರು, ಕಾರ್ಪೆಂಟರ್, ಎಲೆಕ್ಟ್ರೀಷಿಯನ್, ಪೈಂಟರ್ ಮತ್ತು ಪ್ಲಂಬರ್ ಇತ್ಯಾದಿ ಕೌಶಲ್ಯಗಳ ತರಬೇತಿ ಹೊಂದಿರುವವರಿಗೆ ಮೊದಲ ಆದ್ಯತೆ ನೀಡಲಾಗಿದೆ.
* ಆಸಕ್ತರು ಅರ್ಜಿ ನಮೂನೆಗಳನ್ನು ಕಡೆ ದಿನಾಂಕದ ಒಳಗೆ ಈ ಕೆಳಗಿನ ವಿಳಾಸಕ್ಕೆ ಹೋಗಿ ಪಡೆಯಬೇಕು
ವಿಳಾಸ:-
ಸಮಾದೇಷ್ಟರವರ ಕಚೇರಿ,
ಗೃಹರಕ್ಷಕ ದಳ,
ಬೆಂಗಳೂರು ಉತ್ತರ ಜಿಲ್ಲೆ,
ವೆಸ್ಟ್ ಆಫ್ ಕಾರ್ಡ್ ರಸ್ತೆ,
ಅಗ್ನಿಶಾಮಕ ಠಾಣೆ ಪಕ್ಕ,
ರಾಜಾಜಿನಗರ,
ಬೆಂಗಳೂರು-560010
* ಅರ್ಜಿಗಳನ್ನು ಜನವರಿ 5 ಕಡೆಯ ದಿನಾಂಕ ಅಷ್ಟರೊಳಗೆ ಪ್ರತಿದಿನ ಮಧ್ಯಾಹ್ನ 2.30ರಿಂದ 5.00 ಗಂಟೆಯ ವರೆಗೆ ಉಚಿತವಾಗಿ ಅರ್ಜಿ ನಮೂನೆಗಳನ್ನು ವಿತರಿಸಲಾಗುವುದು.
* ಅರ್ಜಿ ನಮೂನೆ ಪಡೆಯುವ ಸಂದರ್ಭದಲ್ಲಿ ಜನ್ಮ ದಿನಾಂಕವುಳ್ಳ ಶಾಲೆಯ ಒರಿಜಿನಲ್ T.C ಅಥವಾ ಒರಿಜಿನಲ್ ಅಂಕಪಟ್ಟಿ ಹಾಜರುಪಡಿಸಿ ಅರ್ಜಿ ಪಡೆಯಬೇಕು.
7777
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:-
ಜಿಲ್ಲಾ ಸಮಾದೇಷ್ಟರವರ ಕಚೇರಿ,
ಗೃಹರಕ್ಷಕ ದಳ,
ಬೆಂಗಳೂರು ಉತ್ತರ ಜಿಲ್ಲೆ,
ವೆಸ್ಟ್ ಆಫ್ ಕಾರ್ಡ್ ರೋಡ್,
ರಾಜಾಜಿನಗರ,
ಬೆಂಗಳೂರು-560010.
ದೂರವಾಣಿ ಸಂಖ್ಯೆ 080-23142542.
0 Comments