ಗೃಹಲಕ್ಷ್ಮಿ ಯೋಜನೆಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಚಿಂತೆ ಬೇಡ, ನಿಮ್ಮ ಮನೆ ಬಾಗಿಲಿಗೆ ಬರುತ್ತಾರೆ ಸಿಬ್ಬಂದಿ ಅವರಿಗೆ ಇದೊಂದು ದಾಖಲೆ ಕೊಟ್ಟರೆ ಸಾಕು ಪ್ರತಿ ತಿಂಗಳು ಸಿಗಲಿದೆ 2000 ರೂಪಾಯಿ.

ಗೃಹಲಕ್ಷ್ಮಿ ಯೋಜನೆಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಚಿಂತೆ ಬೇಡ, ನಿಮ್ಮ ಮನೆ ಬಾಗಿಲಿಗೆ ಬರುತ್ತಾರೆ ಸಿಬ್ಬಂದಿ ಅವರಿಗೆ ಇದೊಂದು ದಾಖಲೆ ಕೊಟ್ಟರೆ ಸಾಕು ಪ್ರತಿ ತಿಂಗಳು ಸಿಗಲಿದೆ 2000 ರೂಪಾಯಿ.

 



ಕಾಂಗ್ರೆಸ್ ಸರ್ಕಾರ ಜಾರಿಗೆ ತರುವುದಾಗಿ ಭರವಸೆ ನೀಡಿರುವ ಗ್ಯಾರಂಟಿ ಕಾರ್ಡ್ ಯೋಜನೆಗಳಲ್ಲಿ ರಾಜ್ಯದ ಮಹಿಳೆಯರು ನಿರೀಕ್ಷೆಯಿಂದ ಕಾಯುತ್ತಿರುವ ಯೋಜನೆ ಗೃಹಲಕ್ಷ್ಮಿ ಯೋಜನೆ ಮುಖ್ಯವಾದದ್ದು. ಗೃಹಲಕ್ಷ್ಮಿ ಯೋಜನೆಗೆ ಜೂನ್ 15ರಿಂದ ಅರ್ಜಿ ಆಹ್ವಾನ ಮಾಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಅವರೇ ತಿಳಿಸಿದ್ದಾರೆ.

<

/p>



ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಇದಕ್ಕೆ ಸಿದ್ಧತೆ ನಡೆಯುತ್ತಿದ್ದು ಈಗ ಕಂದಾಯ ಇಲಾಖೆಯು ಕೂಡ ಇದಕ್ಕೆ ಕೈ ಜೋಡಿಸುತ್ತಿದೆ. ಯಾಕೆಂದರೆ, ಈ ಯೋಜನೆಗೆ 1.30 ಕೋಟಿ ಅರ್ಜಿ ಸಲ್ಲಿಕೆ ಆಗುವ ನಿರೀಕ್ಷೆ ಇರುವುದರಿಂದ ತ್ವರಿತವಾಗಿ ಈ ಕಾರ್ಯವನ್ನು ಪೂರ್ತಿಗೊಳಿಸಲು ಇಂತಹ ನಿರ್ಧಾರಕ್ಕೆ ಬರಲಾಗಿದೆ. ಈ ವಿಷಯವನ್ನು ಕಂದಾಯ ಇಲಾಖೆಯ ಸಚಿವರಾದ ಕೃಷ್ಣಭೈರೇಗೌಡ ಅವರೇ ಪ್ರಸ್ತಾಪಿಸಿದ್ದಾರೆ.


ಜೂನ್ 15ರಿಂದ ಜುಲೈ 15 ರವರೆಗೆ ಅರ್ಜಿ ಸಲ್ಲಿಕೆ ಅವಕಾಶ ನೀಡಿ ಜುಲೈ 15 ರಿಂದ ಆಗಸ್ಟ್ 15 ರವರೆಗೆ ಅದರ ಪರಿಶೀಲನೆ ನಡೆಸಿ ಆಗಸ್ಟ್ 15 ಸ್ವತಂತ್ರ ದಿನಾಚರಣೆಯ ದಿನದಂದು ಈ ಯೋಜನೆಗೆ ಲಾಂಚಿಂಗ್ ಡೇಟ್ ಅನ್ನು ಫಿಕ್ಸ್ ಮಾಡಿರುವ ಕಾರಣ ಆ ದಿನಾಂಕದ ಒಳಗೆ ಎಲ್ಲಾ ಕಾರ್ಯವು ಮುಗಿಯಬೇಕಾಗಿದೆ. ಕಂದಾಯ ಇಲಾಖೆಯು ಒಂದು ವರ್ಷಕ್ಕೆ 1.50 ಕೋಟಿ ಅರ್ಜಿ ಸ್ವೀಕಾರ ಹಾಗೂ ವಿಲೇವಾರಿ ಕೆಲಸವನ್ನು ಮಾಡುತ್ತದೆ.



ಆದರೆ ಇಷ್ಟು ಕಾರ್ಯವನ್ನು 2 ತಿಂಗಳ ಒಳಗೆ ಮುಗಿಸಬೇಕಾದ ಅನಿವಾರ್ಯತೆ ಉಂಟಾಗಿರುವುದರಿಂದ ಕೃಷಿ ಇಲಾಖೆ ಮತ್ತು ಇನ್ನಿತರ ಇಲಾಖೆಗಳ ಹೊರಗುತ್ತಿಗೆ ಸಿಬ್ಬಂದಿಗಳನ್ನು ಕೂಡ ಈ ಯೋಜನೆಗೆ ಅರ್ಜಿ ಸ್ವೀಕಾರ ಮಾಡುವುದಕ್ಕೆ ತರಬೇತಿ ನೀಡಿ ನೇಮಿಸಿಕೊಳ್ಳಲು ಕಂದಾಯ ಇಲಾಖೆ ನಿರ್ಧರಿಸಿದೆ. ಈ ವಿಷಯವಾಗಿ ಮತ್ತೊಂದು ಸಿಹಿ ಸುದ್ದಿ ಏನೆಂದರೆ ಇದಕ್ಕಾಗಿ ಮಹಿಳೆಯರು ಕಛೇರಿಯಿಂದ ಕಚೇರಿಗೆ ಅಲೆಯುವ ಅವಶ್ಯಕತೆಯೇ ಇಲ್ಲ. ನಿಮ್ಮ ಮನೆ ಬಾಗಿಲಿಗೆ ಬಂದು ಸಿಬ್ಬಂದಿ ಅರ್ಜಿ ಸ್ವೀಕಾರ ಮಾಡಲಿದ್ದಾರೆ.



ರಾಜ್ಯದಲ್ಲಿರುವ ಎಲ್ಲಾ CSC ಸೆಂಟರ್ ಗಳು, ಬಾಪೂಜಿ ಸೇವಾ ಸಿಂಧು ಕೇಂದ್ರಗಳು, ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಇವುಗಳಲ್ಲಿ ಕೂಡ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿರುವುದರ ಜೊತೆಗೆ PC ಮತ್ತು ಮೊಬೈಲ್ ಮೂಲಕ ಕೂಡ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ. ಇದನ್ನು ಹೊರತುಪಡಿಸಿ ಕಂದಾಯ ಇಲಾಖೆಯ ಸಿಬ್ಬಂದಿಗಳನ್ನು ಬಳಸಿಕೊಂಡು ಪ್ರತಿಯೊಂದು ಮನೆ ಬಾಗಿಲಿಗೆ ಹೋಗಿ ಅರ್ಜಿ ಸ್ಪೀಕಾರ ಮಾಡುವ ನಿರ್ಧಾರಕ್ಕೂ ಕೂಡ ಸರ್ಕಾರ ಬಂದಿದೆ.



ಈ ರೀತಿಯಾಗಿ ಈ ಕಾರ್ಯ ಮುಗಿಸಲು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳ ಮೂಲಕ ತಾಲೂಕು ಮಟ್ಟದಲ್ಲಿ ಸಿಬ್ಬಂದಿಗಳಿಗೆ ತರಬೇತಿ ನೀಡಲು ಸರ್ಕಾರ ಮುಂದಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಜೊತೆಗೆ ಅವರು ಪ್ರಸ್ತಾಪಿಸಿದ ಮತ್ತೊಂದು ಮಹತ್ವದ ಸುದ್ದಿ ಏನೆಂದರೆ, ರಾಜ್ಯದಲ್ಲಿ 78 ಲಕ್ಷ ಮಹಿಳೆಯರು ಕಂದಾಯ ಇಲಾಖೆಯ ಪಿಂಚಣಿಯನ್ನು ಪಡೆಯುತ್ತಿದ್ದಾರೆ.


ಇವರಿಗೆ ಗೃಹಲಕ್ಷ್ಮಿ ಯೋಜನೆಯ ಸಹಾಯಧನ ಸಿಗುವುದಿಲ್ಲ ಎನ್ನುವ ಸುದ್ದಿ ಹರಡಿದೆ ಆದರೆ ಇದೊಂದು ಗಾಳಿ ಸುದ್ದಿ ಆಗಿದ್ದು ಇದು ಸರ್ಕಾರದ ವಿರುದ್ಧ ಮಾಡುತ್ತಿರುವ ಅಪಪ್ರಚಾರ ಆಗಿದೆ. ಮುಖ್ಯಮಂತ್ರಿಗಳೇ ತಿಳಿಸಿದಂತೆ ವಿಧವೆ ವೇತನ, ಅಂಗವಿಕಲ ವೇತನ, ವೃದ್ದಾಪ್ಯ ವೇತನ ಪಡೆಯುತ್ತಿರುವ ಮಹಿಳೆಯರು ಸೇರಿದಂತೆ ತೃತೀಯಲಿಂಗಿಗಳಿಗೂ ಕೂಡ ಗೃಹಲಕ್ಷ್ಮಿ ಯೋಜನೆಯ ಸಹಾಯಧನ ಸಿಗುತ್ತಿದೆ ಎನ್ನುವುದನ್ನು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದ್ದಾರೆ.

Post a Comment

0 Comments