ಗೃಹಲಕ್ಷ್ಮಿ ಯೋಜನೆ” ಜಾರಿ ಯಾರು ಅರ್ಜಿ ಸಲ್ಲಿಕೆ ಮಾಡಬಹುದು / ಷರತ್ತುಗಳೇನು ಅರ್ಜಿ ಸಲ್ಲಿಸಲು ಕೊನೆ ದಿನಾಂಕ & ಬೇಕಾಗುವ ದಾಖಲೆಗಳೇನು ನೋಡಿ.!

ಗೃಹಲಕ್ಷ್ಮಿ ಯೋಜನೆ” ಜಾರಿ ಯಾರು ಅರ್ಜಿ ಸಲ್ಲಿಕೆ ಮಾಡಬಹುದು / ಷರತ್ತುಗಳೇನು ಅರ್ಜಿ ಸಲ್ಲಿಸಲು ಕೊನೆ ದಿನಾಂಕ & ಬೇಕಾಗುವ ದಾಖಲೆಗಳೇನು ನೋಡಿ.!


 ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್‌ನ ಬಹು ನಿರೀಕ್ಷಿತ 5 ಗ್ಯಾರಂಟಿಗಳನ್ನು ಶುಕ್ರವಾರ ಘೋಷಣೆ ಮಾಡಿದ್ದಾರೆ. ಮನೆ ಒಡತಿಯ ಖಾತೆಗೆ ಪ್ರತಿ ತಿಂಗಳು 2,000 ರೂ. ಬರುವಂತಹ ಗೃಹಲಕ್ಷ್ಮಿ ಯೋಜನೆಯೂ ಕಾಂಗ್ರೆಸ್ ಗ್ಯಾರಂಟಿಗಳಲ್ಲೊಂದಾಗಿದೆ. ಇದನ್ನು ಸ್ವಲ್ಪ ತಡವಾಗಿ ಜಾರಿಗೆ ತರಲು ರಾಜ್ಯ ಸರಕಾರ ತೀರ್ಮಾನಿಸಿದ್ದು, ಆಗಸ್ಟ್ 15 ರಿಂದ ಜಾರಿಗೆ ಬರುವುದಾಗಿ ಸಿದ್ದರಾಮಯ್ಯ ಘೋಷಿಸಿದ್ದಾರೆ ತಾಂತ್ರಿಕ ಕಾರಣಗಳಿಂದ ಜೂನ್‌ನಲ್ಲಿಯೇ ಯೋಜನೆ ಜಾರಿಗೆ ತರಲು ಸಾಧ್ಯವಾಗುತ್ತಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.


ಹೌದು, ಮುಂದಿನ ಆಗಸ್ಟ್​ 15ರಿಂದ ಪ್ರತಿ ತಿಂಗಳು ರಾಜ್ಯದಲ್ಲಿರುವ ಬಿಪಿಎಲ್ ಹಾಗೂ ಎಪಿಎಲ್ ಕುಟುಂಬಗಳ ಮನೆ ಒಡತಿಯ ಖಾತೆಗೆ 2000 ರೂಪಾಯಿ ಹಣ ವರ್ಗಾವಣೆಯಾಗಲಿದೆ. ಈ ಬಗ್ಗೆ ಮಾಹಿತಿ ನೀಡಿರುವ ಸಿಎಂ, ಮನೆ ಯಜಮಾನಿಗೆ ಪ್ರತಿ ತಿಂಗಳು ಗೃಹಲಕ್ಷ್ಮಿ ಯೋಜನೆಯಡಿ 2,000 ರೂ. ನೀಡುತ್ತೇವೆ. ಇದಕ್ಕಾಗಿ ಮನೆ ಯಜಮಾನಿ ಯಾರು ಎಂಬುದನ್ನು ಮೊದಲು ಸ್ಪಷ್ಟಪಡಿಸಬೇಕು ಹಾಗೂ ಅವರ ಬಳಿ ಬ್ಯಾಂಕ್ ಖಾತೆ ಹಾಗೂ ಆಧಾರ್ ಕಡ್ಡಾಯವಾಗಿ ಇರಬೇಕು ಎಂದು ತಿಳಿಸಿದ್ದಾರೆ.


ಷರತ್ತುಗಳು ಏನು?


* ಎಲ್ಲರಿಗೂ ಈ ಯೋಜನೆ ಅನ್ವಯವಾಗಲಿದೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದು, ಬಿಪಿಎಲ್‌-ಎಪಿಎಲ್‌ ಯಾವುದೇ ಭೇದಭಾವ ಇರುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಯೋಜನೆಗೆ ಯಾವುದೇ ಆದಾಯದ ಮಿತಿ ಇಲ್ಲ ಎಂದಿರುವ ಅವರು, ಸರಕಾರಿ ನೌಕರರಿಗೂ ಇದು ಅನ್ವಯವಾಗಲಿದೆ. ನನ್ನ ಹೆಂಡತಿಗೂ ಯೋಜನೆ ಇದೆ ಎಂದಿದ್ದಾರೆ.


* ಅರ್ಜಿ ಸಲ್ಲಿಸಲು ಆಫ್‌ಲೈನ್‌, ಆನ್‌ಲೈನ್‌ ಎರಡರಲ್ಲೂ ಅವಕಾಶ ನೀಡಲಾಗುವುದು. ಇದಕ್ಕಾಗಿ ಸಾಫ್ಟ್‌ವೇರ್‌ ತಯಾರು ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.


* ಇದಲ್ಲದೆ ಈಗಾಗಲೇ ವಿಧವಾ ವೇತನ, ವೃದ್ಧಾಪ್ಯ ವೇತನ, ಅಂಗವಿಕಲ ಪಿಂಚಣಿ ಸೇರಿ ಸಾಮಾಜಿಕ ಭದ್ರತಾ ಯೋಜನೆಗಳ ಅಡಿಯಲ್ಲಿ ಹಣ ಪಡೆಯುತ್ತಿರುವವರಿಗೆ ಹೆಚ್ಚುವರಿಯಾಗಿ ಈ ಗೃಹಲಕ್ಷ್ಮೀ ಹಣವನ್ನು ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದಾರೆ.


ಅರ್ಜಿ ಸಲ್ಲಿಕೆ



* ಗೃಹಲಕ್ಷ್ಮಿ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಲು ಮೊದಲು ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ವಿವರ ಸಲ್ಲಿಸಬೇಕು.

* ಮನೆಯ ಯಜಮಾನಿ ಯಾರು ಎಂಬುದನ್ನು ಆಯಾ ಮನೆಯವರೇ ಉಲ್ಲೇಖಿಸಬೇಕು.

* ಈ ಯೋಜನೆಗೆ ಆನ್‌ಲೈನ್ ಮೂಲಕ ಅರ್ಜಿ ಹಾಕಬೇಕು.

* ಜೂನ್ 15 ರಿಂದ ಜುಲೈ 15 ರ ಅವಧಿಯಲ್ಲಿ ಅರ್ಜಿ ಹಾಕಬೇಕು.

* ಈ ಯೋಜನೆ ಆಗಸ್ಟ್ 15 ರಿಂದ ಚಾಲನೆಯಾಗಲಿದೆ.



ಗೃಹಲಕ್ಷ್ಮಿ ಯೋಜನೆ ಈ ತಿಂಗಳು ಜಾರಿಗೆ ಬರುವುದಿಲ್ಲ. ಆಗಸ್ಟ್ 15 ರಂದು ಯೋಜನೆ ಜಾರಿಗೆ ಬರಲಿದೆ. ಮನೆಯ ಯಜಮಾನಿ ಅತ್ತೆಯೋ ಅಥವಾ ಸೊಸೆಯೋ ಎಂಬುದನ್ನು ಆಯಾ ಮನೆಯವರೇ ಅರ್ಜಿಯಲ್ಲಿ ಉಲ್ಲೇಖಿಸಿ, ಸಂಬಂಧಿಸಿದ ದಾಖಲಾತಿ ಸಲ್ಲಿಸಬೇಕು. ಆದರೆ ಆಕೆಗೆ 18 ವರ್ಷ ತುಂಬಿರಬೇಕು. ಆಗಸ್ಟ್ 15 ಕ್ಕೆ ಕುಟುಂಬ ಯಜಮಾನಿಯ ಖಾತೆಗೆ ಹಣ ಬರುತ್ತದೆ. ಎಪಿಎಲ್ ಮತ್ತು ಬಿಪಿಎಲ್ ಕಾರ್ಡುದಾರರು ಎಲ್ಲರೂ ಇದಕ್ಕಾಗಿ ಅರ್ಜಿ ಹಾಕಬಹುದು.



ಸಾಮಾಜಿಕ ಭದ್ರತಾ ಪಿಂಚಣಿ ಪಡೆಯುವವರಿಗೂ ಗೃಹಲಕ್ಷ್ಮಿ ಸಿಗಲಿದೆ. ಅಂಗವಿಕಲ, ವಿಧವಾವೇತನ ಸೇರಿ ಸಾಮಾಜಿಕ ಭದ್ರತೆ ಪಿಂಚಣಿ ಪಡೆಯುವವರಿಗೂ ಇದು ಅನ್ವಯ ಆಗುತ್ತದೆ. ಕುಟುಂಬದ ಯಜಮಾನಿಗೆ ಮಾತ್ರ ಹಣ ಬರುತ್ತದೆ. ಅರ್ಜಿ ಹಾಕಿದ ಮೇಲೆ ಅಕೌಂಟ್, ಆಧಾರ್, ಮಾಹಿತಿ ಪಡೆದು ಯೋಜನೆ ಜಾರಿಗೊಳಿಸುತ್ತೇವೆ. ಯಾವ ಷರತ್ತು ನಿಗದಿ ಮಾಡಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟ

Post a Comment

0 Comments