2005ರಲ್ಲಿ ಹಿಂದು ಉತ್ತರಾಧಿಕಾರಿ ಕಾಯ್ದೆ ಮತ್ತೊಮ್ಮೆ ತಿದ್ದುಪಡಿ ಆಗಿ ಹೆಣ್ಣು ಮಕ್ಕಳಿಗೆ ಗಂಡು ಮಕ್ಕಳಷ್ಟೇ ಪಿತ್ರಾರ್ಜಿತ ಆಸ್ತಿಯಲ್ಲಿ ಅಧಿಕಾರ ಇರುತ್ತದೆ ಎನ್ನುವ ಐತಿಹಾಸಿಕ ತೀರ್ಪನ್ನು ಸುಪ್ರೀಂಕೋರ್ಟ್ ನೀಡಿದೆ. ಇದರ ಜೊತೆಗೆ ಒಂದು ವೇಳೆ ತಂದೆ ತಾಯಿ ಅವರ ಸ್ವಯಾರ್ಜಿತ ಆಸ್ತಿಯನ್ನು ಯಾವುದೇ ಪತ್ರ ಮಾಡದೆ ಅಥವಾ ದಾನ ಪತ್ರ ಮಾಡದ ಯಾವ ಮಕ್ಕಳಿಗೂ ಕೊಡದೆ ಹಾಗೆ ಬಿಟ್ಟು ಮರಣ ಹೊಂದಿದ ಪಕ್ಷದಲ್ಲಿ ಆ ಆಸ್ತಿಯಲ್ಲೂ ಕೂಡ ಎಲ್ಲಾ ಮಕ್ಕಳಿಗೂ ಸಮಾನವಾದ ಹಕ್ಕು ಇರುತ್ತದೆ.
ಆದರೆ ಇಂದು ಕೂಡು ಕುಟುಂಬದ ಆಸ್ತಿ ಭಾಗವಾಗುವಾಗ ಹೆಣ್ಣು ಮಕ್ಕಳು ತಮ್ಮ ಪಾಲಿನ ಆಸ್ತಿಯನ್ನು ಕೇಳಿದರೆ ತಂದೆ ಹಾಗೂ ಸಹೋದರರ ಜೊತೆ ವೈ ಮನಸು ಉಂಟಾಗುತ್ತದೆ. ಎಷ್ಟೋ ಬಾರಿ ಇದು ಇತ್ಯರ್ಥವಾಗದೆ ಕೋರ್ಟ್, ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತುವ ತನಕವೂ ಹೋಗುತ್ತದೆ ಹಾಗಾಗಿ ಎಲ್ಲರೂ ಕಾನೂನಿನ ಬಗ್ಗೆ ಕೆಲವು ಮೂಲ ನಿಯಮಗಳನ್ನು ತಿಳಿದುಕೊಳ್ಳುವುದು ಒಳ್ಳೆಯದು.
ಪಿತ್ರಾರ್ಜಿತ ಆಸ್ತಿಯಲ್ಲಿ ಅಥವಾ ತಂದೆಯು ಘೋಷಿಸದೆ ಉಳಿಸಿ ಹೋದ ಸ್ವಯಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಪಾಲು ಸಿಗದೇ ಇದ್ದ ಪಕ್ಷದಲ್ಲಿ ಅವರು ಕೋರ್ಟಿನಲ್ಲಿ ಧಾವೇ ಹೂಡುವ ಮೂಲಕ ನ್ಯಾಯ ಪಡೆಯಬಹುದು. ಆದರೆ ಮದುವೆಯಾಗಿ ಹೋಗಿರುವ ಹೆಣ್ಣು ಮಕ್ಕಳು ಗಂಡು ಮಕ್ಕಳಷ್ಟೇ ಆಸ್ತಿಯಲ್ಲಿ ಹೇಗೆ ಅಧಿಕಾರ ಹೊಂದಲು ಸಾಧ್ಯ, ಅವರಿಗೂ ಕೂಡ ಸಮಪಾಲು ಕೂಡಲೇ ಬೇಕಾ ಎನ್ನುವುದು ಗಂಡು ಮಕ್ಕಳ ಪ್ರಶ್ನೆ.
ಹೆಣ್ಣು ಮಕ್ಕಳು ಕುಟುಂಬದ ಆಸ್ತಿ ವಿಭಾಗ ಆಗುವಾಗ ಹಕ್ಕು ಬಿಡುಗಡೆ ಪತ್ರ ಮಾಡಿಕೊಡುವ ಮೂಲಕ ಪ್ರೀತಿ ವಿಶ್ವಾಸಕ್ಕಾಗಿ ತಮ್ಮ ಪಾಲಿನ ಆಸ್ತಿಯನ್ನು ಸಹೋದರರಿಗೆ ಬಿಟ್ಟುಕೊಡುತ್ತಿದ್ದೇವೆ ಅಥವಾ ಇದಕ್ಕೆ ಬದಲಾಗಿ ಉಡುಗೊರೆ ರೂಪದಲ್ಲಿ ಬೇರೆ ಏನನ್ನಾದರೂ ಪಡೆದು ಈ ಆಸ್ತಿಯ ಮೇಲೆ ಹಕ್ಕನ್ನು ಬಿಡುತ್ತೇವೆ ಎಂದು ರಿಲೀಸ್ ಡೀಡ್ ಮಾಡಿದ್ದರೆ ಮಾತ್ರ ಅವರಿಗೆ ಆಸ್ತಿಯ ಮೇಲೆ ಹಕ್ಕು ಇರುವುದಿಲ್ಲ.
ಇಲ್ಲವಾದಲ್ಲಿ ಅವರಿಗೂ ಕೂಡ ಆಸ್ತಿ ವಿಭಾಗ ಆಗುವ ವೇಳೆ ಪಾಲು ಕೊಡಲೇಬೇಕಾಗುತ್ತದೆ. ಒಂದು ವೇಳೆ ಹೆಣ್ಣು ಮಕ್ಕಳಿಗೆ ಈಗಾಗಲೇ ಮದುವೆ ಸಮಯದಲ್ಲಿ ಮತ್ತು ನಂತರವು ತವರು ಮನೆಯ ಜವಾಬ್ದಾರಿಗಾಗಿ ಸಾಕಷ್ಟು ಹಣವನ್ನು ಖರ್ಚು ಮಾಡಲಾಗಿರುತ್ತದೆ. ಆ ಸಮಯದಲ್ಲಿ ಆಸ್ತಿಯನ್ನು ಅಡವಿಟ್ಟು ತಂದೆಯು ಆ ಜವಾಬ್ದಾರಿಗಳನ್ನು ನಿರ್ವಹಿಸಿರುತ್ತಾರೆ.
ಬಳಿಕ ತಂದೆ ಮೃತಪಟ್ಟಿದ್ದಲ್ಲಿ ಆ ಹೊರೆ ಗಂಡು ಮಕ್ಕಳ ಮೇಲೆ ಬೀಳುತ್ತದೆ. ಗಂಡು ಮಗನು ತಾನು ದುಡಿದು ಅಡಮಾನ ಇಟ್ಟಿದ್ದ ಆಸ್ತಿಯನ್ನು ಬಿಡಿಸಿಕೊಂಡರೆ ನಂತರ ಹೆಣ್ಣು ಮಕ್ಕಳಿಗೂ ಕೂಡ ಅದರಲ್ಲಿ ಪಾಲು ಕೊಡಬೇಕಾ ಎನ್ನುವುದು ಹಲವರ ಪ್ರಶ್ನೆ. ಆದರೆ ಆತ ಆ ಅಡಮಾನ ಇಟ್ಟಿದ್ದ ಜಮೀನನ್ನು ಬಿಡಿಸಿಕೊಂಡ ಆದಾಯದ ಮೂಲ ಯಾವುದು ಎನ್ನುವುದು ಪ್ರಶ್ನೆಯಾಗುತ್ತದೆ.
ಆತ ಮತ್ತೆ ತನ್ನ ಪಿತ್ರಾರ್ಜಿತ ಆಸ್ತಿಯ ಮೂಲದಿಂದ ಆದಾಯ ಪಡೆದು ಈ ಆಸ್ತಿಯನ್ನು ಬಿಡಿಸಿಕೊಂಡರೆ ಅದು ಆತನ ಸ್ವಯಾರ್ಜಿತ ಆಸ್ತಿ ಆಗುವುದಿಲ್ಲ ಒಂದು ವೇಳೆ ಕೋರ್ಟಿ ನಲ್ಲಿ ಆತ ಅದು ತನ್ನ ಸ್ವಯಾರ್ಜಿತ ಆಸ್ತಿ ಎನ್ನುವುದನ್ನು ಸಾಬೀತುಪಡಿಸಲು ವಿಫಲನಾದರೆ ಆಗ ಹೆಣ್ಣು ಮಕ್ಕಳಿಗೂ ಕೂಡ ಭಾಗ ಕೊಡಬೇಕಾಗುತ್ತದೆ. ಈ ಕುರಿತು ಹೈಕೋರ್ಟ್ ಇತ್ತೀಚೆಗೆ ತುಮಕೂರಿನ ಒಂದು ಪ್ರಕರಣದಲ್ಲಿ ಮಹತ್ವದ ತೀರ್ಪನ್ನು ನೀಡಿದೆ. ಸಾಲ ತೀರಿಸಿದ ಮಾತ್ರಕ್ಕೆ ಅಥವಾ ವ್ಯಾಜ್ಯಕ್ಕೆ ಸಂಬಂಧಿಸಿದ ಭೂಮಿಯಲ್ಲಿ ವ್ಯಕ್ತಿಯ ವೈಯುಕ್ತಿಕ ಹಕ್ಕು ಸೃಷ್ಟಿ ಆಗುವುದಿಲ್ಲ ಎನ್ನುವ ತೀರ್ಪನ್ನು ಹೈ ಕೋರ್ಟ್ ನೀಡಿದೆ.
0 Comments