ಗಿಗ್ ಕಾರ್ಮಿಕರಿಗೆ (Gig Workers) ಸಾಮಾಜಿಕ ಭದ್ರತೆ ಕಲ್ಪಿಸುವ ಬಗ್ಗೆ ಸಿಎಂ ಸಿದ್ದರಾಮಯ್ಯ (CM Siddaramaih) ರವರು 2003-24 ನೇ ಸಾಲಿನ ನೂತನ ಸರ್ಕಾರದ ಬಜೆಟ್‌ನಲ್ಲಿ ಘೋಷಿಸಿದ್ದರು. ಅಂತೆಯೇ ಈಗ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ವತಿಯಿಂದ ಎರಡು ಲಕ್ಷದವರೆಗೆ ಜೀವ ವಿಮೆ (Life Insurance) ಹಾಗೂ ಅಪಘಾತ ವಿಮೆ ಪಡೆಯಲು ಯೋಜನೆ ರೂಪಿಸಿ ಅರ್ಜಿ ಆಹ್ವಾನಿಸಲಾಗಿದೆ.
ಇ-ಕಾಮರ್ಸ್ (e-commerce) ವಲಯದಲ್ಲಿ ಡೆಲಿವರಿ ಬಾಯ್ ಗಳಾಗಿ ದುಡಿಯುವ ಅಸಂಘಟಿತ ವಲಯದ ಕಾರ್ಮಿಕರಾದ ಸ್ವಿಗ್ಗಿ, ಜೊಮ್ಯಾಟೋ, ಇತರೆ ಫುಡ್ ಡೆಲಿವರಿ ಮಾಡುವವರು, ಇ-ಕಾಮರ್ಸ್ ಸಂಸ್ಥೆಗಳಾದ ಅಮೆಜಾನ್, ಫ್ಲಿಪ್‌ಕಾರ್ಟ್, ಬಿಗ್ ಬ್ಯಾಸ್ಕೆಟ್ ಇತರೆ ಸಂಸ್ಥೆಗಳಲ್ಲಿ ಪೂರ್ಣಾವಧಿ/ ಅರೆಕಾಲಿಕ ಡೆಲಿವರಿ ನೌಕರರಾಗಿ (delivery Boys) ಕಾರ್ಯ ನಿರ್ವಹಿಸುತ್ತಿರುವರು ಗಿಗ್ ಕಾರ್ಮಿಕರು ಎಂದು ಕರೆಸಿಕೊಳ್ಳುತ್ತಾರೆ. ಇದುವರೆಗೂ ರಾಜ್ಯದಲ್ಲಿ ಎಷ್ಟಿದೆ ಎಂದು ಗಣತಿ ನಡೆದಿಲ್ಲ. ಆದರೆ 2022ರ ನೀತಿ ಆಯೋಗದ ವರದಿ ಪ್ರಕಾರ ಸುಮಾರು 2.30 ಲಕ್ಷ ಎಂದು ಅಂದಾಜಿಸಲಾಗಿದೆ.
ವಸತಿ ನಿಲಯ ಹುದ್ದೆಗಳ ನೇಮಕಾತಿ.! ವಾರ್ಡನ್ ಸೇರಿದಂತೆ ಹಲವು ಹುದ್ದೆಗಳು ಖಾಲಿ, ವೇತನ 32,670/- ಆಸಕ್ತರು ಅರ್ಜಿ ಸಲ್ಲಿಸಿ
ಯಾರು ಅರ್ಜಿ ಸಲ್ಲಿಸಬಹುದು:-
* ಇ-ಕಾಮರ್ಸ್ ಕಂಪನಿಗಳಲ್ಲಿ ಡೆಲಿವರಿ ಬಾಯ್ ಗಳಾಗಿ ದುಡಿಯುವ ಅಸಂಘಟಿತ ವಲಯದ ಕಾರ್ಮಿಕರಾದ ಸ್ವಿಗ್ಗಿ, ಜೊಮ್ಯಾಟೋ, ಇತರೆ ಫುಡ್ ಡೆಲಿವರಿ ಮಾಡುವವರು, ಇ-ಕಾಮರ್ಸ್ ಸಂಸ್ಥೆಗಳಾದ ಅಮೆಜಾನ್, ಫ್ಲಿಪ್‌ಕಾರ್ಟ್, ಬಿಗ್ ಬ್ಯಾಸ್ಕೆಟ್ ಇತರೆ ಸಂಸ್ಥೆಗಳಲ್ಲಿ ಪೂರ್ಣಾವಧಿ/ ಅರೆಕಾಲಿಕ ಡೆಲಿವರಿ ನೌಕರರಾಗಿ ಕಾರ್ಯ ನಿರ್ವಹಿಸುತ್ತಿರುವರು ಗಿಗ್ ಕಾರ್ಮಿಕರು ಅರ್ಜಿ ಸಲ್ಲಿಸಲು ಅರ್ಹರು.
* ಅರ್ಜಿದಾರರ ವಯಸ್ಸು 18 ರಿಂದ 60 ವರ್ಷದ ಒಳಗಿರಬೇಕು. * ಅರ್ಜಿದಾರರು ಆದಾಯ ತೆರಿಗೆ ಪಾವತಿದಾರರಾಗಿರಬಾರದು.
* ಸಂಘಟಿತ ವಲಯದಲ್ಲಿ ದುಡಿಯುವ ಕಾರ್ಮಿಕರಿಗೆ ಸಿಗುವ ESI / EPF ಮುಂತಾದ ಸೌಲಭ್ಯಗಳಲ್ಲಿ ಹೊಂದಿರಬಾರದು.
* ಇ-ಶ್ರಮ್ ಕಾರ್ಡ್ ಹೊಂದಿರಬೇಕು ಇಲ್ಲದೆ ಇರುವವರು ಸೇವಾಸಿಂಧು ಪೋರ್ಟಲ್‌ನಲ್ಲಿ ಅಗತ್ಯ ದಾಖಲೆ ಸಲ್ಲಿಸಿ ಇ-ಶ್ರಮ್ ಗುರುತಿನ ಚೀಟಿ ಪಡೆಯಿರಿ.
ಬೇಕಾಗುವ ದಾಖಲೆಗಳು:-
* ನಿಗದಿತ ನಮೂನೆಯಲ್ಲಿ ಉದ್ಯೋಗದಾತರಿಂದ ಪಡೆದ ಉದ್ಯೋಗ ಪ್ರಮಾಣ ಪತ್ರ ಅಥವಾ ತಮ್ಮ ಕಂಪನಿ ನೀಡಿರುವ ಗುರುತಿನ ಚೀಟಿ.
* ಆಧಾರ್ ಕಾರ್ಡ್ ಸಂಖ್ಯೆ
* ಇ- ಶ್ರಮ್ ಗುರುತಿನ ಚೀಟಿ ಸಂಖ್ಯೆ
* ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ
* ವಿಳಾಸ ಖಾತರಿಗೆ ಮತದಾರರ ಗುರುತಿನ ಚೀಟಿ ಅಥವಾ ಚಾಲನಾ ಪರವಾನಗಿ ಅಥವಾ ಆಧಾರ್ ಅಥವಾ ಪಾಸ್‌ಪೋರ್ಟ್ ಅಥವಾ ಬ್ಯಾಂಕ್ ಪಾಸ್‌ಬುಕ್ ಇವುಗಳಲ್ಲಿ ಯಾವುದಾದರು ಒಂದು.
ಈ ಲಿಸ್ಟ್ ನಲ್ಲಿ ಹೆಸರು ಇರುವ ರೈತರಿಗೆ ಬೆಳೆ ಪರಿಹಾರ ಹಣ ಸಿಗಲ್ಲ.! ನಿಮ್ಮ ಹೆಸರು ಇದೆಯೇ.? ಮೊಬೈಲ್ ನಲ್ಲಿ ಈ ರೀತಿ ಚೆಕ್ ಮಾಡಿ
ವಿಮೆ ಕುರಿತ ವಿವರ:-
* ಮ’ರ’ಣ ಪ್ರಕರಣದಲ್ಲಿ 2 ಲಕ್ಷ ರೂ. ಅಪಘಾತ ವಿಮೆ ಪರಿಹಾರ ಹಾಗೂ 2 ಲಕ್ಷ ರೂ. ಜೀವ ವಿಮೆ ಪರಿಹಾರ ಸೇರಿ ಒಟ್ಟು 4 ಲಕ್ಷ ರೂ. ಪರಿಹಾರ.
* ಅ’ಪ’ಘಾ’ತ’ದಿಂದಾಗುವ ಸಂಪೂರ್ಣ ಶಾಶ್ವತ/ ಭಾಗಶಃ ದುರ್ಬಲತೆ ಉಂಟಾಗಿದ್ದರೆ ಶೇಕಡಾವಾರು ದುರ್ಬಲತೆ ಆಧಾರದಲ್ಲಿ 2 ಲಕ್ಷ ರೂ.ವರೆಗೆ ಪರಿಹಾರ ಮತ್ತು 1 ಲಕ್ಷ ರೂ.ವರೆಗೆ ಆಸ್ಪತ್ರೆ ವೆಚ್ಚ ಮರುಪಾವತಿ.
* ಮುಖ್ಯವಾದ ವಿಷಯವೇನೆಂದರೆ ಈ ಸೌಲಭ್ಯಗಳು ಕರ್ತವ್ಯದಲ್ಲಿದ್ದಾಗ ಹಾಗೂ ಕರ್ತವ್ಯದಲ್ಲಿ ಇಲ್ಲದಿದ್ದಾಗಲೂ ಸಂಭವಿಸುವ ಅ’ಪ’ಘಾ’ತಕ್ಕೂ ಅನ್ವಯ.
* ಆದರೆ ಆ’ತ್ಮ’ಹ’ತ್ಯೆ ಪ್ರಕರಣಗಳಲ್ಲಿ ಮತ್ತು ಅ’ಪ’ಘಾ’ತ ಸಂದರ್ಭದಲ್ಲಿ ಮದ್ಯಪಾನ ಅಥವಾ ಮಾದಕ ದ್ರವ್ಯ ಸೇವಿಸಿದ್ದರೆ, ಬುದ್ಧಿ ಭ್ರಮಣೆಯ ಕಾರಣಕ್ಕೆ ಅ’ಪ’ಘಾ’ತ ಸಂಭವಿಸಿದೆ ಎಂದು ಕಂಡು ಬಂದರೆ, ಅಪರಾಧ ಉದ್ದೇಶಕ್ಕೆ ಮಾಡಿದ ಯಾವುದಾದರೂ ಕಾನೂನು ಉಲ್ಲಂಘನೆಯ ಕಾರಣಕ್ಕೆ ಅ’ಪ’ಘಾ’ತ ಸಂಭವಿಸಿದ್ದು ಎನ್ನುವುದು ಕಂಡು ಬಂದರೆ ಅಂತಹ ಪ್ರಕರಣಗಳಲ್ಲಿ ವಿಮಾ ಸೌಲಭ್ಯ ಸಿಗುವುದಿಲ್ಲ.
ಎಲ್ಲಿ ಮಾಡಿಸಬೇಕು:-
ಯಾವುದೇ CSC ಕೇಂದ್ರಗಳಿಗೆ ಭೇಟಿ ಕೊಟ್ಟು ಈ ಮೇಲೆ ತಿಳಿಸಿದ ದಾಖಲೆಗಳನ್ನು ನೀಡುವ ಮೂಲಕ ನೋಂದಾಯಿಸಿಕೊಂಡು ಈ ಸೌಲಭ್ಯ ಪಡೆಯಬಹುದು
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:-
* ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಕಚೇರಿ ಅಥವಾ ತಾಲ್ಲೂಕು ಕಾರ್ಮಿಕ ನಿರೀಕ್ಷಕರ ಕಛೇರಿ ಬೇಟಿ ಕೊಟ್ಟು ಮಾಹಿತಿ ಪಡೆಯಿರಿ
* ಸಹಾಯವಾಣಿ ಸಂಖ್ಯೆ: 155214
0 Comments