ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಚಾಲನೆ ಸಿಕ್ಕಿದೆ. ಇವುಗಳಲ್ಲಿ ಅನ್ನಭಾಗ್ಯ ಯೋಜನೆಯ ಪಡಿತರವನ್ನು 10Kg ನೀಡಲಾಗುವುದು ಎನ್ನುವುದು ಸೇರಿತ್ತು. ವಿತರಣೆ ಮಾಡಲು ಅಕ್ಕಿ ಖರೀದಿಗೆ ಸರ್ಕಾರ ಮುಂದಾಗಿದ್ದರೂ ದಾಸ್ತಾನು ಲಭ್ಯವಾಗದ ಕಾರಣ ಫಲಾನುಭವಿಗಳಿಗೆ ಅಕ್ಕಿ ಬದಲು ಹಣವನ್ನೇ ನೀಡುವ ನಿರ್ಧಾರಕ್ಕೆ ಸಚಿವ ಸಂಪುಟ ಸಭೆ ಬಂದಿದೆ.
ಅಂತೆಯೇ ಸೋಮವಾರ ಅಂದರೆ ಜುಲೈ 10 ನೇ ತಾರೀಖಿನಂದು ವಿಧಾನಸೌಧದ ಮುಂಭಾಗದಲ್ಲಿ ಕಾರ್ಯಕ್ರಮ ನಡೆಸಿ ಮಾನ್ಯ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಮತ್ತು ಆಹಾರ ಹಾಗೂ ನಾಗರೀಕ ಸರಬರಾಜು ಸಚಿವರು ಅನ್ನ ಭಾಗ್ಯ ಯೋಜನೆಗೆ ಹಣ ಬಿಡುಗಡೆ ಮಾಡಿದ್ದಾರೆ.
ಜುಲೈ 10 ನೇ ತಾರೀಖಿನಂದು ಕೋಲಾರ ಹಾಗೂ ಮೈಸೂರು ಜಿಲ್ಲೆಯ ಫಲಾನುಭವಿಗಳಿಗೆ ಹಣ ವರ್ಗಾವಣೆ ಆಗಿತ್ತು, ಜುಲೈ 11ನೇ ತಾರೀಕಿನಂದು ಯಾದಗಿರಿ, ಬಾಗಲಕೋಟೆ, ಧಾರವಾಡ, ರಾಮನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿರುವ ಫಲಾನುಭವಿಗಳಿಗೂ ಹಣ ವರ್ಗಾವಣೆ ಆಗಿದೆ.
ಸರ್ಕಾರವು ಹಂತ ಹಂತವಾಗಿ ಎಲ್ಲಾ ಜಿಲ್ಲೆಗಳ ಫಲಾನುಭವಿಗಳಿಗೂ ಹಣ ತಲುಪಿಸುವುದಾಗಿ ಇದೇ ತಿಂಗಳಲ್ಲಿ ಈ ಕಾರ್ಯವನ್ನು ಪೂರ್ತಿಗೊಳಿಸುವುದಾಗಿ ತಿಳಿಸಿದೆ. ಪ್ರತಿ ಸದಸ್ಯನಿಗೆ ಹೆಚ್ಚುವರಿಯಾಗಿದ 5 ಕೆಜಿ ಅಕ್ಕಿ ಬದಲಿಗೆ 170 ಲೆಕ್ಕದಲ್ಲಿ ಕುಟುಂಬದಲ್ಲಿ ಎಷ್ಟು ಸದಸ್ಯರು ಇದ್ದಾರೋ ಅವರ ಒಟ್ಟು ಮೊತ್ತದ ಹಣವನ್ನು ಹೆಡ್ ಆಫ್ ದಿ ಫ್ಯಾಮಿಲಿ ಬ್ಯಾಂಕ್ ಅಕೌಂಟಿಗೆ ನೇರವಾಗಿ ಜಮೆ ಮಾಡಲಾಗುತ್ತಿದೆ.
ಬಡತನ ರೇಖೆಗಿಂತ ಕೆಳಗಿರುವ ಪಡಿತರ ಚೀಟಿ ದಾರರು ಈ ಅನುಕೂಲತೆಯನ್ನು ಪಡೆಯಬಹುದು. ಸರ್ಕಾರವು ಈ ಯೋಜನೆಗಾಗಿ ಯಾವುದೇ ಅರ್ಜಿ ಆಹ್ವಾನ ಮಾಡಿಲ್ಲ. ಪಡಿತರ ಚೀಟಿಯಲ್ಲಿ ಯಾರ ಹೆಸರು ಮೊದಲ ಪುಟದಲ್ಲಿ ಇದೆಯೋ ಅವರನ್ನೇ ಕುಟುಂಬದ ಮುಖ್ಯಸ್ಥರು ಎಂದು ಪರಿಗಣಿಸಿ ಅವರ ಆಧಾರ್ ಕಾರ್ಡ್ ಯಾವ ಬ್ಯಾಂಕ್ ಅಕೌಂಟಿಗೆ ಲಿಂಕ್ ಆಗಿದಿಯೋ ಅವರಿಗೆ ಹಣ ವರ್ಗಾವಣೆ ಮಾಡುತ್ತಿದೆ.
ಹಾಗಾಗಿ ಹಲವರಿಗೆ ತಮ್ಮ ಅಕೌಂಟಿಗೆ ಆಧಾರ್ ಲಿಂಕ್ ಆಗಿದೆಯೋ, KYC ಅಪ್ಡೇಟ್ ಆಗಿದೆಯೋ, ಹಣ ಬರುತ್ತದೋ ಇಲ್ಲವೋ ಎನ್ನುವ ಅನುಮಾನ ಇದೆ. ಈ ರೀತಿ ಅನುಮಾನ ಇದ್ದವರು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಹೋಗಿ ಈ ಸೇವೆಗಳು ಎನ್ನುವುದನ್ನು ಕ್ಲಿಕ್ ಮಾಡಿ DBT ಸ್ಟೇಟಸ್ ಎನ್ನುವುದನ್ನು ಕ್ಲಿಕ್ ಮಾಡಿದರೆ ಹೊಸದೊಂದು ಡ್ಯಾಶ್ ಬೋರ್ಡ್ ಕಾಣುತ್ತದೆ.
ಜಿಲ್ಲಾವಾರು ಲಿಂಕ್ ಗಳು ಇರುತ್ತವೆ ಅದನ್ನು ಕ್ಲಿಕ್ ಮಾಡಿದರೆ ಒಂದು ಡ್ಯಾಶ್ ಬೋರ್ಡ್ ಕಾಣುತ್ತದೆ. ಅದರಲ್ಲೂ ಕೊನೆ ಆಪ್ಷನ್ನಲ್ಲಿ ಸ್ಟೇಟಸ್ ಆಫ್ DBT ಇರುತ್ತದೆ. ಅದನ್ನು ಕ್ಲಿಕ್ ಮಾಡಿ ನಿಮ್ಮ ಪಡಿತರ ಚೀಟಿಯ ಸಂಖ್ಯೆಯನ್ನು ಹಾಕಿದರೆ ಯಾರ ಹೆಸರಿಗೆ ಹಣ ವರ್ಗಾವಣೆ ಆಗುತ್ತದೆ, ಅವರ ಆಧಾರ್ ನಂಬರ್, ಎಷ್ಟು ಸದಸ್ಯರ ಲೆಕ್ಕ ತೆಗೆದುಕೊಳ್ಳಲಾಗಿದೆ.
ಅವರದ್ದು ಕಾರ್ಡ್ ಟೈಪ್, ಎಷ್ಟು Kg ಅಕ್ಕಿಗೆ ಹಣ ಪಡೆಯಲು ಎಲಿಜಬಲ್ ಇದ್ದಾರೆ, ಎಷ್ಟು ಮೊತ್ತದ ಹಣ ವರ್ಗಾವಣೆ ಆಗುತ್ತಿದೆ. ಎನ್ನುವುದನ್ನು ತೋರಿಸಿ ಪಾವತಿ ಪ್ರಕ್ರಿಯೆ ಪ್ರಗತಿಯಲ್ಲಿದೆ ಎನ್ನುವ ಘೋಷಣೆ ಬರುತ್ತದೆ. ಈ ರೀತಿ ಬಂದರೆ ಗ್ಯಾರಂಟಿಯಾಗಿ ಹಣ ಒಂದೆರಡು ದಿನಗಳಲ್ಲಿ ಬರ್ತಾವ್ನೆ ಆಗುತ್ತದೆ ಎಂದರ್ಥ ಮತ್ತು ಸಂಪೂರ್ಣ ವಿವರವೂ ಕೂಡ ಅದರಲ್ಲೇ ಸಿಕ್ಕಿದ ರೀತಿ ಆಗುತ್ತದೆ.
ಒಂದು ವೇಳೆ ನಿಮ್ಮ ಕುಟುಂಬದಲ್ಲಿ ಹೆಚ್ಚು ಸದಸ್ಯರಿದ್ದು ಕಡಿಮೆ ಸದಸ್ಯರ ಸಂಖ್ಯೆ ತೋರಿಸುತ್ತಿದ್ದರೆ ಅವರ KYC ಅಪ್ಡೇಟ್ ಆಗದೆ ಇರುವುದು ಕಾರಣ ಇರಬಹುದು, ಅದನ್ನು ಸರಿ ಮಾಡಿಸಿ ಹಾಗೆ ಅಂತ್ಯೋದಯ ರೇಷನ್ ಕಾರ್ಡ್ ಇರುವವರಿಗೆ ಸರ್ಕಾರವು ಬೇರೆ ಮಾರ್ಗಸೂಚಿ ಕೈಗೊಂಡಿರುವುದರಿಂದ 4 ಜನರಿಗಿಂತ ಹೆಚ್ಚು ಸದಸ್ಯರು ಇದ್ದಾಗ ಮಾತ್ರ ಅವರಿಗೆ ಹೆಚ್ಚುವರಿ ಅಕ್ಕಿ ಹಣ ಸಿಗುತ್ತದೆ.
ಅವರು ಸಹ ಈ ಮೇಲೆ ತಿಳಿಸಿದ ರೀತಿಯಲ್ಲಿ ಚೆಕ್ ಮಾಡಿ ಪೂರ್ತಿ ವಿವರವನ್ನು ತಿಳಿದುಕೊಳ್ಳಬಹುದು. ಹಣ ಮಂಜೂರು ಆಗಿರುವುದು ತೋರಿಸಿ ಆಧಾರ್ ಕಾರ್ಡ್ ಸೀಡಿಂಗ್ ಆಗಿಲ್ಲ, KYC ಅಪ್ಡೇಟ್ ಆಗಿಲ್ಲ ಎಂದರೆ ಅದನ್ನು ಕೂಡ ಸೂಚಿಸಲಾಗಿರುತ್ತದೆ. ನೀವು ಹತ್ತಿರದ ಗ್ರಾಮವನ್ನು ಅಥವಾ ಬೆಂಗಳೂರು ಕೇಂದ್ರಗಳಲ್ಲಿ ಹೋಗಿ KYC ಅಪ್ಡೇಟ್ ಮಾಡಿಸಿದರೆ ನಿಮಗೆ ಖಾತೆಗೆ ಹಣ ವರ್ಗಾವಣೆ ಆಗುತ್ತದೆ.
0 Comments