ರಾಜ್ಯದಲ್ಲಿ ಗ್ಯಾರಂಟಿ ಕಾರ್ಡ್ ಯೋಜನೆಗಳು (Gyarantee Scheme) ಜಾರಿಯಾದ ಮೇಲೆ ರೇಷನ್ ಕಾರ್ಡ್ (Ration card) ಪ್ರಮುಖ ದಾಖಲೆ ಎಂದು ಎಲ್ಲರಿಗೂ ಮನವರಿಕೆಯಾಗಿದೆ. ಯಾಕೆಂದರೆ, ಈಗ ಗ್ಯಾರಂಟಿ ಕಾರ್ಡ್ ಯೋಜನೆಗಳಾದ ಅನ್ನಭಾಗ್ಯ ಯೋಜನೆ (Annabhagya Scheme) ಮತ್ತು ಗೃಹಲಕ್ಷ್ಮಿ ಯೋಜನೆಗೆ (Gruhalakshmi Scheme) ಕಡ್ಡಾಯವಾಗಿ ರೇಷನ್ ಕಾರ್ಡ್ ಇರಲೇಬೇಕು.
ಈ ಯೋಜನೆಗಳಿಗೆ ಕುಟುಂಬದ ಮುಖ್ಯಸ್ಥರ ಸ್ಥಾನದಲ್ಲಿ ಮಹಿಳೆಯರ ಹೆಸರು ಇರಬೇಕು, ಆ ಮಹಿಳೆಯ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಮಾಹಿತಿಗಳಲ್ಲಿರುವಂತೆ ರೇಷನ್ ಕಾರ್ಡ್ ಅಲ್ಲಿ ಹೆಸರು ಇರಬೇಕು ಇನ್ನಿತ್ಯಾದಿ ಕಂಡೀಷನ್ ಗಳು ಇವೆ. ಹಾಗಾಗಿ ಎಲ್ಲರೂ ಸಹ ರೇಷನ್ ಕಾರ್ಡ್ ಈ ಮಾಹಿತಿಗಳನ್ನು ಸರಿಪಡಿಸಿಕೊಳ್ಳುವುದಕ್ಕೆ ಒದ್ದಾಡುತ್ತಿದ್ದಾರೆ.
ಎಲ್ಲಾ ಸಾರ್ವಜನಿಕರಿಗೆ ಗುಡ್ ನ್ಯೂಸ್, ಸರ್ಕಾರದಿಂದ ದ್ವಿಚಕ್ರ ವಾಹನಗಳ ಉಚಿತ ವಿತರಣೆ, ಆಸಕ್ತರು ಈಗಲೇ ಅರ್ಜಿ ಹಾಕಿ
ಇದುವರೆಗೂ ಕೂಡ ರೇಷನ್ ಕಾರ್ಡನ್ನು ಒಂದು ಗಂಭೀರ ದಾಖಲೆ ಎಂದು ಪರಿಗಣಿಸಿರದ ಕಾರಣಕ್ಕಾಗಿ ಈ ಸಮಸ್ಯೆಯಾಗಿದೆ. ಜನಸಾಮಾನ್ಯರ ಈ ಸಮಸ್ಯೆ ಅರಿತ ಸರ್ಕಾರ ಈಗ ಇವುಗಳ ತಿದ್ದುಪಡಿಗೆ (Ration card correction permission) ಅವಕಾಶ ಮಾಡಿಕೊಟ್ಟಿದೆ.
ರೇಷನ್ ಕಾರ್ಡ್ ನಲ್ಲಿ ಹೆಸರು ಬದಲಾವಣೆ ಮಾಡುವುದು, ಅಥವಾ ನ್ಯಾಯಬೆಲೆ ಅಂಗಡಿ ಬದಲಾಯಿಸಿಕೊಳ್ಳುವುದು, ಹೆಸರು ತಿದ್ದುಪಡಿ ಮಾಡುವುದು ಅಥವಾ ಕುಟುಂಬದ ಮುಖ್ಯಸ್ಥರ ಸ್ಥಾನದಲ್ಲಿ ಹೆಸರು ಬದಲಾಯಿಸುವುದು, ಪಡಿತರ ಚೀಟಿಗೆ ಹೊಸ ಹೆಸರು ಸೇರ್ಪಡೆ ಮಾಡುವುದು ಇನ್ನು ಮುಂತಾದ ಯಾವುದೇ ತಿದ್ದುಪಡಿ ಇದ್ದರೂ ಕೂಡ ಅದನ್ನು ಸರಿ ಮಾಡಿಸಿಕೊಳ್ಳಲು ಸರ್ಕಾರ 4 ದಿನಗಳ ಅವಕಾಶ ನೀಡಿದೆ
ಕಳೆದ ವಾರವಷ್ಟೇ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಕೆ.ಎಚ್ ಮುನಿಯಪ್ಪರವರು ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸ್ವೀಕರಿಸುವುದು, ರೇಷನ್ ಕಾರ್ಡ್ ಗಳಿಗೆ ತಿದ್ದುಪಡಿಗೆ ಅನುಮತಿ ನೀಡಲಾಗುವುದು ಹಾಗೆ ಚುನಾವಣೆ ನೀತಿ ಸಂಹಿತೆ ಕಾರಣದಿಂದಾಗಿ ವಿತರಣೆಯಾಗದೆ ಉಳಿದಿದ್ದ ಕಾರ್ಡ್ ಗಳ ವಿಲೇವಾರಿಗೆ ಶೀಘ್ರವೇ ಅವಕಾಶ ನೀಡಲಾಗುವುದು ಎಂದು ತಿಳಿಸಿದ್ದರು.
ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಮೊಬೈಲ್ ಸಂಖ್ಯೆ ಕಳೆದು ಹೋದರೆ ಹೊಸ ನಂಬರ್ ಸೇರಿಸುವುದು ಹೇಗೆ.? ನಿಮ್ಮ ಮೊಬೈಲ್
ಜನಸಾಮಾನ್ಯರಿಂದ ಕೂಡ ರೇಷನ್ ಕಾರ್ಡ್ ತಿದ್ದುಪಡಿಗೆ ಹೆಚ್ಚಾಗಿ ಮನವಿ ಕೇಳಿ ಬರುತ್ತಿರುವದರಿಂದ ಈ ಸಮಸ್ಯೆಯನ್ನು ಸರಿಪಡಿಸಿಕೊಳ್ಳಲು ಸದ್ಯಕ್ಕೆ ನಾಲ್ಕು ದಿನಗಳ ಮಟ್ಟಿಗೆ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳಲು ಇಲಾಖೆ ಅನುಮತಿ ನೀಡಿದೆ. ಹಾಗೆಯೇ ಸಮಯ ಕೂಡ ನಿಗದಿ ಮಾಡಿದೆ. ಆಗಸ್ಟ್ 16 2023 ರಿಂದ 19 ಆಗಸ್ಟ್ 2023ರ ವರೆಗೆ ಬೆಳಗ್ಗೆ 10 ರಿಂದ ಸಂಜೆ 4 ಗಂಟೆ ಒಳಗಾಗಿ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಬಹುದು
ಪ್ರೈವೇಟ್ ಸೆಕ್ಟರ್ ನಲ್ಲಿ ಅನುಮತಿ ನೀಡಿರುವ ಬಗ್ಗೆ ಮಾಹಿತಿ ಇಲ್ಲ, ಆದರೆ ಸರ್ಕಾರ ಸೂಚಿಸುವ ಸೇವಾ ಕೇಂದ್ರಗಳಾದ ಗ್ರಾಮ ಒನ್/ ಬೆಂಗಳೂರು ಒನ್ / ಕರ್ನಾಟಕ ಒನ್/ ಬಾಪೂಜಿ ಸೇವಾ ಕೇಂದ್ರಗಳಿಗೆ ಹೋಗಿ ತಿದ್ದುಪಡಿ ಮಾಡಿಸಿಕೊಳ್ಳಬಹುದು. ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಕಡೆ ದಿನಾಂಕ ಸರ್ಕಾರ ನಿಗದಿ ಮಾಡಿಲ್ಲ ಹೀಗಾಗಿ ತಿದ್ದುಪಡಿ ಮಾಡಿಸಿಕೊಂಡು ಪಡಿತರ ಚೀಟಿ ಪಡೆದ ನಂತರ ಕೂಡ ಮಹಿಳೆಯರು ಅರ್ಜಿ ಸಲ್ಲಿಸಿ ಮುಂದಿನ ತಿಂಗಳಿನಿಂದ ಗೃಹಲಕ್ಷ್ಮಿ ಯೋಜನೆಗೆ ಫಲಾನುಭವಿಗಳು ಆಗಬಹುದು.
ಲೇಬರ್ ಕಾರ್ಡ್ ಹೊಂದಿರುವ ಕಾರ್ಮಿಕರಿಗೆ ಉಚಿತವಾಗಿ ಸಿಗಲಿದೆ ಹೊಸ ಸೈಕಲ್, ಇದೊಂದು ದಾಖಲೆ ಜೊತೆ ಅರ್ಜಿ ಸಲ್ಲಿಸಿ ಸಾಕು
ಹಾಗಾದರೆ ನಿಮ್ಮ ರೇಷನ್ ಕಾರ್ಡ್ ಅಲ್ಲಿ ಸಮಸ್ಯೆಗಳಿದ್ದರೆ ಈ ಕೂಡಲೇ ಈ ಮೇಲೆ ತಿಳಿಸಿದ ಸಮಯಕ್ಕೆ ಆ ಸೇವಾಕೇಂದ್ರಗಳಿಗೆ ಹೋಗಿ ಸರಿಪಡಿಸಿಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಸ್ನೇಹಿತರ ಜೊತೆಗೂ ತಪ್ಪದೇ ಹಂಚಿಕೊಳ್ಳಿ.
ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಲು ಬೇಕಾಗುವ ದಾಖಲೆಗಳು:-
● ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್
● ಕುಟುಂಬದ ಎಲ್ಲಾ ಸದಸ್ಯರ ಬಯೋಮೆಟ್ರಿಕ್ ಮಾಹಿತಿ (5 ವರ್ಷದ ಒಳಗಿನ ಮಕ್ಕಳನ್ನು ಹೊರತುಪಡಿಸಿ)
● 5 ವರ್ಷದ ಒಳಗಿರುವ ಮಕ್ಕಳ ಜನನ ಪ್ರಮಾಣ ಪತ್ರ
● ಕುಟುಂಬದ ಸದಸ್ಯರಲ್ಲಿ ಒಬ್ಬರ ಆದಾಯ ಪ್ರಮಾಣ ಪತ್ರ
● ಕುಟುಂಬ ಸದಸ್ಯರಲ್ಲಿ ಒಬ್ಬರ ಮೊಬೈಲ್ ಸಂಖ್ಯೆ.
0 Comments