ಹಿಂದೂಗಳ ಪಾಲಿನ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಶಿವನ ಜ್ಯೋತಿರ್ಲಿಂಗಗಳಲ್ಲಿ ಒಂದಾದ ವಿಶ್ವೇಶ್ವರನು ಇರುವ ಕಾಶಿಯನ್ನು ಜೀವನದಲ್ಲಿ ಒಂದು ಬಾರಿಯಾದರೂ ದರ್ಶನ ಮಾಡಬೇಕು ಎನ್ನುವುದು ಪ್ರತಿಯೊಬ್ಬ ಆಸ್ತಿಕರ ಕನಸು. ಆದರೆ ಇದುವರೆಗೆ ಎಲ್ಲರಿಗೂ ಇದು ಸಾಧ್ಯವಾಗುತ್ತಿರಲಿಲ್ಲ.
ಇದನ್ನು ಮನಗಂಡು ನಮ್ಮ ರಾಜ್ಯದಲ್ಲಿ ಈ ಹಿಂದೆ ಇದ್ದ BJP ಸರ್ಕಾರವು 2022-23 ನೇ ಸಾಲಿನಲ್ಲಿ IRCTC ಮತ್ತು ಭಾರತೀಯ ರೈಲ್ವೆ ಇಲಾಖೆ ಸಹಯೋಗದೊಂದಿಗೆ ಕರ್ನಾಟಕ ಭಾರತ್ ಗೌರವ ಕಾಶಿ ದರ್ಶನ (Karnataka Bharath Gourava Kashi Darshana) ಎನ್ನುವ ಯೋಜನೆಯನ್ನು ಜಾರಿಗೆ ತಂದಿತು. 2022 ಜುಲೈ 29ರಂದು ಲಾಂಚ್ ಆಗಿದ್ದ ಈ ಯೋಜನೆ ಯಶಸ್ವಿಯಾಗಿ ಇಲ್ಲಿಯವರೆಗೆ ನಾಲ್ಕು ಸುತ್ತಿನಲ್ಲಿ ಅನೇಕರು ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾಣದಿಂದ ಕಾಶಿಗೆ ತೆರಳಿ ದರ್ಶನ ಮಾಡಿ ಬಂದಿದ್ದಾರೆ.
ಈ ರೀತಿ ವಿಶೇಷ ಯೋಜನೆಯಿಂದ ಪ್ರಯಾಣ ಹೊರಟವರಿಗೆ ಪೂರಕ ದಾಖಲೆಗಳನ್ನು ಒದಗಿಸಿದಲ್ಲಿ ಸರ್ಕಾರವು 5000 ರೂಪಾಯಿಗಳ ಸಹಾಯಧನವನ್ನು (Subsidy) ಕೂಡ ನೀಡುತ್ತಿತ್ತು. ಇದೀಗ ನೂತನವಾಗಿ ರಾಜ್ಯದಲ್ಲಿ ಸ್ಥಾಪನೆಯಾಗಿರುವ ಕಾಂಗ್ರೆಸ್ ಸರ್ಕಾರವು (Congress government) ಈ ಸಹಾಯಧನವನ್ನು ಹೆಚ್ಚಿಸಿರುವುದು (increase facilities) ಮಾತ್ರವಲ್ಲದೆ ಐದು ಮತ್ತು ಆರನೇ ಸುತ್ತಿನಲ್ಲಿ ಹೊರಡುವ ರೈಲು ಪ್ರಯಾಣಕ್ಕೆ ಟಿಕೆಟ್ ಬುಕ್ ಮಾಡಲು ಕೂಡ ಅವಕಾಶ ಮಾಡಿಕೊಟ್ಟಿದೆ.
ಈ ಬಾರಿ 7,500 ರೂಗಳ ಸಹಾಯಧನವನ್ನು ಪ್ರಯಾಣಿಕರು ಪಡೆಯಲಿದ್ದು ಇದರ ಜೊತೆಗೆ ಕಾಶಿ ಮಾತ್ರವಲ್ಲದೇ ಜೊತೆಗೆ ಅಯೋಧ್ಯೆ, ಗಯಾ ಮತ್ತು ಪ್ರಯಾಗ ರಾಜ್ ಕ್ಷೇತ್ರಗಳನ್ನು ಒಳಗೊಂಡ 9 ದಿನಗಳ ಯಾತ್ರೆಯ ಪ್ಯಾಕೇಜ್ ಸಿಗಲಿದೆ. ಈ ಬಾರಿ ಇನ್ನಷ್ಟು ಕ್ಷೇತ್ರಗಳನ್ನು ಹೆಚ್ಚಿಸಿರುವುದು ಮಾತ್ರವಲ್ಲದೆ ಸಹಾಯಧನವನ್ನು ಹೆಚ್ಚಿಸಿರುವುದು ಯಾತ್ರೆಗೆ ಹೊರಡಲು ಸಜ್ಜಾಗಿದ್ದ ಪ್ರಯಾಣಿಕರ ಸಂತಸವನ್ನು ಇಮ್ಮಡಿಗೊಳಿಸಿದೆ.
ಸದ್ಯಕ್ಕೀಗ ಪ್ಲಾನ್ ಮಾಡಲಾಗಿರುವ ಈ ಹೊಸ ಪ್ಯಾಕೇಜ್ಗೆ ಒಬ್ಬ ಯಾತ್ರಾರ್ಥಿಗೆ 22,500ರೂ. ಖರ್ಚಾಗಲಿದೆ ಎಂದು ಊಹಿಸಲಾಗಿದ್ದು. ಅದರಲ್ಲಿ ಕರ್ನಾಟಕ ಸರ್ಕಾರದ ವತಿಯಿಂದ 7,500 ಸಹಾಯಧನ ಸಿಗಲಿದೆ. 15 ಸಾವಿರ ರೂಪಾಯಿಗಳನ್ನು ಯಾತ್ರಾರ್ಥಿಗಳು ಪಾವತಿಸಬೇಕಾಗುತ್ತದೆ. ಈ ವಿಶೇಷ ವ್ಯವಸ್ಥೆ ಬಗ್ಗೆ ಇದೀಗ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ (Transport Minister Ramalinga Reddy) ಅವರು ಘೋಷಿಸಿದ್ದಾರೆ. ಈ ವಿಶೇಷ ಯೋಜನೆ ಬಗ್ಗೆ ಇನ್ನಷ್ಟು ಮಾಹಿತಿ ಹೀಗಿದೆ ನೋಡಿ.
ಈ ಪ್ಯಾಕೇಜ್ ನ ವಿಶೇಷತೆಗಳು:-
● ಮೂರು ಟೈಲ್ AC ರೈಲಿನಲ್ಲಿ ಪ್ರಯಾಣಿಸಲು ಅವಕಾಶ ಮಾಡಿಕೊಡಲಾಗಿದ್ದು, ಊಟ ವಸತಿ ವ್ಯವಸ್ಥೆಯ ಜೊತೆಗೆ ಸ್ಥಳೀಯ ಸಾರಿಗೆ ಹಾಗೂ ದರ್ಶನದ ವ್ಯವಸ್ಥೆ ಇರುತ್ತದೆ.
● ಯಾತ್ರಾರ್ಥಿಗಳ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ವೈದ್ಯಕೀಯ ತಂಡವನ್ನು ಕೂಡ ನೇಮಿಸಲಾಗಿದೆ.
● ಪ್ರಯಾಣಿಕರಿಗೆ ಆಧುನಿಕ ಪ್ಯಾಂಟ್ರಿ ಕಾರಿನಲ್ಲಿ ತಯಾರಿಸಿದ ತಾಜಾ ಸ್ಥಳೀಯ ಆಹಾರವನ್ನು ನೀಡಲಾಗುತ್ತದೆ.
● ಯಶವಂತಪುರ, ತುಮಕೂರು, ದಾವಣಗೆರೆ, ಬೀರೂರು, ಹಾವೇರಿ, ಹುಬ್ಬಳ್ಳಿ, ಬೆಳಗಾವಿ, ರಾಯಭಾಗ ಈ ನಿಲ್ದಾಣಗಳಲ್ಲಿ ರೈಲು ಹತ್ತುವ ಹಾಗೂ ಇಳಿಯುವ ಅವಕಾಶಗಳಿವೆ.
ಪ್ರಮುಖ ದಿನಾಂಕಗಳು.
● 5ನೇ ಸುತ್ತಿನ ಯಾತ್ರೆಗೆ ರೈಲು ಹೊರಡುವ ದಿನಾಂಕ – 29.08.2023
● ರೈಲು ಆಗಮಿಸುವ ದಿನಾಂಕ – 06.09.2023.
● ಆರನೇ ಸುತ್ತಿನ ಯಾತ್ರೆಗೆ ರೈಲು ಹೊರಡುವ ದಿನಾಂಕ – 23.09.2023.
● ರೈಲು ಆಗಮಿಸುವ ದಿನಾಂಕ – 01.10
2023.
ಹೆಚ್ಚಿನ ಮಾಹಿತಿಗೆ ಸಹಾಯವಾಣಿ ಸಂಖ್ಯೆಗಳು:-
8595931291, 8595931292, 859593124.
● ಟಿಕೆಟ್ ಬುಕ್ಕಿಂಗ್ ಆಗಿ ಹಾಗೂ ಇನ್ನೂ ಹೆಚ್ಚಿನ ಮಾಹಿತಿಗಾಗಿ irctctourism.com ವೆಬ್ ಸೈಟ್ ಗೆ ಭೇಟಿ ಕೊಡಿ.
0 Comments