ಈಗ ಸರ್ಕಾರದ ಎಲ್ಲಾ ಸೇವೆಗಳನ್ನು ಹಾಗೂ ಕಛೇರಿ ಕೆಲಸಗಳನ್ನು ಕೂಡ ಮನೆಯಲ್ಲಿ ಕುಳಿತು ಆನ್ಲೈನ್ ನಲ್ಲಿ ಅಪ್ಲೈ ಮಾಡುವ ಮೂಲಕ ಮಾಡಬಹುದು. ಅದೇ ರೀತಿ RTO ಕಛೇರಿಯಿಂದ ನೀಡಲಾಗುವ ಡ್ರೈವಿಂಗ್ ಲೈಸೆನ್ಸ್ (Driving Liecense) ಪಡೆಯಲು ಕೂಡ ಮೊಬೈಲ್ ಮೂಲಕ ಅಥವಾ ಪರ್ಸನಲ್ ಕಂಪ್ಯೂಟರ್ ಮೂಲಕ ನಾವೇ ಅರ್ಜಿ ಸಲ್ಲಿಸಬಹುದು. ಡ್ರೈವಿಂಗ್ ಲೈಸೆನ್ಸ್ ಪಡೆದುಕೊಳ್ಳಲು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಈ ಹಂತಗಳನ್ನು ಪಾಲಿಸಿ.
● ಮೊದಲಿಗೆ ಸರ್ಕಾರದ ಅಧಿಕೃತ ವೆಬ್ಸೈಟ್ ಆದ https://parivahan.gov.in/parivahan/ ಭೇಟಿಕೊಡಿ.
● ಅಫಿಷಿಯಲ್ ಪೇಜ್ ಓಪನ್ ಆಗುತ್ತದೆ, ಅದರಲ್ಲಿ Drivers / Learners Liecense ಈ ಆಪ್ಷನ್ ಕ್ಲಿಕ್ ಮಾಡಿ.
● ನಿಮ್ಮ ರಾಜ್ಯವನ್ನು ಸೆಲೆಕ್ಟ್ ಮಾಡಿ ಮತ್ತೊಂದು ಪೇಜ್ ಓಪನ್ ಆಗುತ್ತದೆ, ಅದರಲ್ಲಿ Apply for Learner Liecense ಆಪ್ಷನ್ ಸೆಲೆಕ್ಟ್ ಮಾಡಿ Continue ಮೇಲೆ ಕ್ಲಿಕ್ ಮಾಡಿ.
ಅನ್ನಭಾಗ್ಯ ಯೋಜನೆಯ ಹಣ ಜಮೆ ದಿನಾಂಕ ನಿಗದಿ.! ಈ ಬಾರಿ ಎಲ್ಲಾ ಜಿಲ್ಲೆಗಳಿಗೂ ಏಕಕಾಲಕ್ಕೆ ಹಣ ಬಿಡುಗಡೆ.! ಯಾವ ದಿನಾಂಕ ದಂದು ಹಣ ಬಿಡುಗಡೆ ಆಗುತ್ತೆ.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ
● Select category of Request ಎನ್ನುವ ಆಪ್ಷನ್ ಬರುತ್ತದೆ. ಹೊಸದಾಗಿ ಅರ್ಜಿ ಸಲ್ಲಿಸುವವರು General ಎಂದು ಸೆಲೆಕ್ಟ್ ಮಾಡಿ Submit ಕೊಡಿ.
● Transport department, government of Karnataka ಪೇಜ್ ಓಪನ್ ಆಗುತ್ತದೆ. ಇದರಲ್ಲಿ ಎರಡು ಆಯ್ಕೆಗಳು ಇರುತ್ತದೆ. ನೀವು aadhar authentication ಮೂಲಕ ಆನ್ಲೈನ್ ನಲ್ಲಿ ಅಪ್ಲೈ ಮಾಡಿ ಲೈಸೆನ್ಸ್ ಪಡೆಯಬಹುದು ಅಥವಾ RTO ಕಚೇರಿಗೆ ಹೋಗಿ ಅರ್ಜಿ ಸಲ್ಲಿಸಿ ಪಡೆಯಬಹುದು.
● Submit Aadhar Authentication ಸೆಲೆಕ್ಟ್ ಮಾಡ ಅರ್ಜಿದಾರರ Aadhar num. ಹಾಕಿ, OTP ಪಡೆದು ಆ ಪ್ರೋಸೆಸ್ ಪೂರ್ತಿಗೊಳಿಸಿ Proceed ಮಾಡಬೇಕು.
● ಈಗ ಮತ್ತೊಂದು ಪೇಜ್ ಓಪನ್ ಆಗುತ್ತದೆ ಇದರಲ್ಲಿ ಡೀಟೇಲ್ ಗಳನ್ನು ತುಂಬಿಸಬೇಕು. Star mark ಇರುವ ಕಡೆ Compulsory ಫಿಲ್ ಮಾಡಲೇಬೇಕು.
● ನಿಮ್ಮ ಹತ್ತಿರದ RTO, ನಿಮ್ಮ POB, Qualification, e-mail I’d, mobile num. alternative num. ಇತ್ಯಾದಿ ಮಾಹಿತಿಗಳನ್ನು ಫಿಲ್ ಮಾಡಬೇಕು.
● Present adress ಮತ್ತು Permanent address ಈ ಮಾಹಿತಿಗಳನ್ನು ಫಿಲ್ ಮಾಡಿ.
ವಾಹನ ಸವಾರರಿಗೆ ಗುಡ್ ನ್ಯೂಸ್ ಕೊಟ್ಟ ಸಾರಿಗೆ ಇಲಾಖೆ.! ಇನ್ಮುಂದೆ RC ಮತ್ತು DL ಗಾಗಿ ಅಲೆದಾಡಬೇಕಿಲ್ಲ. ಮನೆ ಬಾಗಿಲಿದೆ ಪೋಸ್ಟಲ್ ಮೂಲಕ ಬರಲಿದೆ
● ನೀವು ದ್ವಿಚಕ್ರ ವಾಹನ ಅಥವಾ ನಾಲ್ಕು ಚಕ್ರದ ವಾಹನ ಯಾವುದರ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಅರ್ಜಿ ಸಲ್ಲಿಸುತ್ತಿದ್ದೀರಾ ಅದನ್ನು ಸೆಲೆಕ್ಟ್ ಮಾಡಬೇಕು.
● ನೀವು Driving School ಇಂದ ಡ್ರೈವಿಂಗ್ ಕಲಿಯುತ್ತಿದ್ದರೆ ಆಪ್ಷನ್ ಅಲ್ಲಿ ಡ್ರೈವಿಂಗ್ ಸ್ಕೂಲ್ ಹೆಸರನ್ನು ಫಿಲ್ ಮಾಡಬೇಕು.
● ನಂತರ Self declaration farm ಸೆಲೆಕ್ಟ್ ಮಾಡಿ.
● ಇದು ನಿಮ್ಮ Physical fitness ಕುರಿತಾಗಿ ಇರುತ್ತದೆ. ಎರಡನೇ ಪ್ರಶ್ನೆಗೆ YES ಎಂದು ಸೆಲೆಕ್ಟ್ ಮಾಡಿ, ಉಳಿದ ಎಲ್ಲದಕ್ಕೂ NO ಎಂದು ಕ್ಲಿಕ್ ಮಾಡಿ Submit ಕೊಡಿ.
● ಎಲ್ಲಾ ವಿವರಗಳು ಸರಿಯಾಗಿದಿಯೇ ಎನ್ನುವುದನ್ನು ಮತ್ತೊಮ್ಮೆ ಚೆಕ್ ಮಾಡಿಕೊಂಡು ಅದಕ್ಕಾಗಿ ಇರುವ ಆಪ್ಷನ್ ನಲ್ಲಿ YES ಎಂದು ಸೆಲೆಕ್ಟ್ ಮಾಡಿ ಸಬ್ಮಿಟ್ ಕೊಟ್ಟರೆ ಮೂರು ಪಾಪ್ ಆಫ್ ಮೆಸೇಜ್ ಬರುತ್ತದೆ. ಮೂರನೇ ಮೆಸೇಜ್ ನಲ್ಲಿ ನಿಮ್ಮ ಅಪ್ಲಿಕೇಶನ್ ಸಕ್ಸಸ್ ಆಗಿರುವ ಬಗ್ಗೆ ಮಾಹಿತಿ ಬಂದಿರುತ್ತದೆ.
● application reference slip ಕೂಡ ಪೇಜ್ ಮೇಲೆ ಓಪನ್ ಆಗುತ್ತದೆ ಅದರಲ್ಲಿ ರೆಫರೆನ್ಸ್ ನಂಬರ್ ಸೇರಿದಂತೆ ಎಲ್ಲ ಮಾಹಿತಿ ಇರುತ್ತದೆ. ನೀವು ಅದನ್ನು ಪ್ರಿಂಟ್ ಪಡೆದುಕೊಳ್ಳಬಹುದು ಅಥವಾ ಡೌನ್ಲೋಡ್ ಮಾಡಿ ಇಟ್ಟುಕೊಳ್ಳಬಹುದು.
● ಕೊನೆಯಲ್ಲಿ Fee payment ಆಪ್ಷನ್ ಸೆಲೆಕ್ಟ್ ಮಾಡಿ Online payment ವಿಧಾನದ ಮೂಲಕ ಅರ್ಜಿ ಶುಲ್ಕ ಪಾವತಿಯನ್ನು ಪೂರ್ತಿಗೊಳಿಸಿದರೆ ಈ ಪ್ರಕ್ರಿಯೆ ಪೂರ್ತಿಗೊಳುತ್ತದೆ.
0 Comments