SSC ನೇಮಕಾತಿ, 1876 ಹುದ್ದೆಗಳಿಗೆ ಅರ್ಜಿ ಆಹ್ವಾನ, ವೇತನ 1,12,400 ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ

SSC ನೇಮಕಾತಿ, 1876 ಹುದ್ದೆಗಳಿಗೆ ಅರ್ಜಿ ಆಹ್ವಾನ, ವೇತನ 1,12,400 ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ




 ಕರ್ನಾಟಕದ ಎಲ್ಲ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಅದರಲ್ಲೂ ಪೊಲೀಸ್ ಇಲಾಖೆಯಲ್ಲಿ ಹುದ್ದೆ ಮಾಡಬೇಕು ಎನ್ನುವ ಆಸಕ್ತಿ ಹೊಂದಿ ಪ್ರಯತ್ನ ಮಾಡುತ್ತಿರುವವರಿಗೆ ಸಿಹಿ ಸುದ್ದಿ. 1876 ಪೋಲಿಸ್ ಸಬ್ಜೆಕ್ಟ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ SSC ನೇಮಕಾತಿ ಅನುಸೂಚನೆಯನ್ನು ಹೊರಡಿಸಿದೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಪರೀಕ್ಷೆಗಳನ್ನು ಎದುರಿಸಿ ಕೇಂದ್ರ ಸರ್ಕಾರದ ಅಡಿಯಲ್ಲಿ ಪೊಲೀಸ್ ಕೆಲಸ ನಿರ್ವಹಿಸಬಹುದಾಗಿದೆ.


 

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತಿ ಇರುವವರಿಗೆ ವಿಧಿಸಿರುವ ಶೈಕ್ಷಣಿಕ ವಿದ್ಯಾರ್ಹತೆ, ವಯೋಮಿತಿ ಮತ್ತು ವಯೋಮಿತಿ ಸಡಿಲಿಕೆ ಇವುಗಳ ವಿವರ ಹಾಗೂ ಅರ್ಜಿ ಸಲ್ಲಿಸುವ ವಿಧಾನ, ಪರೀಕ್ಷಾ ವಿಧಾನ, ಆಯ್ಕೆ ವಿಧಾನ, ಅರ್ಜಿ ಶುಲ್ಕ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ, ಬೇಕಾಗುವ ದಾಖಲೆಗಳು ಇವುಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಅಂಕಣವನ್ನು ಪೂರ್ತಿಯಾಗಿ ಓದಿ.

ಉದ್ಯೋಗದ ವಿಧ:- ಕೇಂದ್ರ ಸರ್ಕಾರದ ಉದ್ಯೋಗ

ಪರೀಕ್ಷೆ ನಡೆಸುವ ಕೇಂದ್ರ:- ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC).

ಒಟ್ಟು ಹುದ್ದೆಗಳ ಸಂಖ್ಯೆ:- 1876



ಈ ಸುದ್ದಿ ತಪ್ಪದೆ ನೋಡಿ : -ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿದ್ದೀರಾ.? ಜೀರೋ ವಿದ್ಯುತ್ ಬಿಲ್ ಯಾರಿಗೆಲ್ಲಾ ಮಾತ್ರ ಗೊತ್ತಾ



ಹುದ್ದೆಗಳ ವಿವರ:-

● ಸಬ್ ಇನ್ಸ್ಪೆಕ್ಟರ್ ಎಕ್ಸಿಕ್ಯೂಟಿವ್ ಇನ್ ದೆಹಲಿ – 109 (ಪುರುಷ)

● ಸಬ್ ಇನ್ಸ್ಪೆಕ್ಟರ್ ಎಕ್ಸಿಕ್ಯೂಟಿವ್ ಇನ್ ದೆಹಲಿ – 53 (ಮಹಿಳೆ)

● ಸಬ್ ಇನ್ಸ್ಪೆಕ್ಟರ್ ಜನರಲ್ ಡ್ಯೂಟಿ – 1714.


ಉದ್ಯೋಗ ಸ್ಥಳ:- ಭಾರತದಾತ್ಯಂತ

ವೇತನ ಶ್ರೇಣಿ:- 35,400 ರಿಂದ 1,12,400 ಮಾಸಿಕವಾಗಿ…


ಶೈಕ್ಷಣಿಕ ವಿದ್ಯಾರ್ಹತೆ:-

ಈ ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕಡ್ಡಾಯವಾಗಿ ಭಾರತದಲ್ಲಿ ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಾದರೂ ಪದವಿ ಪಡೆದಿರಬೇಕು.


ವಯೋಮಿತಿ:-

● ಕನಿಷ್ಠ ವಯೋಮಿತಿ 20 ವರ್ಷಗಳು

● ಗರಿಷ್ಠ ವಯೋಮಿತಿ 25 ವರ್ಷಗಳು.


ವಯೋಮಿತಿ ಸಡಿಲಿಕೆ:-

● SC/ST ಅಭ್ಯರ್ಥಿಗಳಿಗೆ 5 ವರ್ಷಗಳು

● OBC ಅಭ್ಯರ್ಥಿಗಳಿಗೆ 3 ವರ್ಷಗಳು.


ಅರ್ಜಿ ಶುಲ್ಕ:-

● SC/ST ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

● ಉಳಿದ ಅಭ್ಯರ್ಥಿಗಳಿಗೆ 100 ರೂ.

● ಆನ್ಲೈನ್ ಬ್ಯಾಂಕಿಂಗ್ ಅಥವಾ SBI ಶಾಖೆಯಲ್ಲಿ ಚಲನ್ ಮೂಲಕ ಕೂಡ ಪಾವತಿ ಮಾಡಬಹುದು.


ಅರ್ಜಿ ಸಲ್ಲಿಸುವ ವಿಧಾನ:-

● ಅರ್ಜಿ ಸಲ್ಲಿಸಲು ಕೇಳಲಾಗಿರುವ ಎಲ್ಲಾ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು sis.nic.in ವೆಬ್ಸೈಟ್ಗೆ ಭೇಟಿ ಕೊಟ್ಟು ಅರ್ಜಿ ಸಲ್ಲಿಸಬಹುದು.

● ಮೊದಲಿಗೆ ಅರ್ಜಿ ಫಾರಂ ನಲ್ಲಿ ಸ್ವ ವಿವರಗಳನ್ನು ಭರ್ತಿ ಮಾಡಿ, ಸಂಬಂಧಪಟ್ಟ ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡುವ ಮೂಲಕ ಅರ್ಜಿ ಸಲ್ಲಿಕೆ ಪೂರ್ತಿಗೊಳಿಸಬಹುದು.

● ಅರ್ಜಿ ಸಲ್ಲಿಕೆ ಯಶಸ್ವಿಯಾದ ಬಳಿಕ ತಪ್ಪದೇ ಅರ್ಜಿ ಸ್ವೀಕೃತಿ ಪತ್ರದ ಪ್ರಿಂಟ್ ಔಟ್ ಪಡೆದುಕೊಳ್ಳಬೇಕು.


ಆಯ್ಕೆ ವಿಧಾನ:-

● ಲಿಖಿತ ಪರೀಕ್ಷೆ

● ದೇಹದಾಢ್ಯತೆ ಮತ್ತು ದೈಹಿಕ ಸಾಮರ್ಥ್ಯದ ಪರೀಕ್ಷೆ

● ವೈದ್ಯಕೀಯ ಪರೀಕ್ಷೆ

● ದಾಖಲೆಗಳ ಪರಿಶೀಲನೆ

● ಸಂದರ್ಶನ



ಈ ಸುದ್ದಿ ತಪ್ಪದೆ ನೋಡಿ : - ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದವರಿಗೆ ಗುಡ್ ನ್ಯೂಸ್.! ಮಂಜೂರಾಯ್ತು ಗೃಹಲಕ್ಷ್ಮಿ ಯೋಜನೆಯ ಹಣ ಈ ರೀತಿ ಚೆಕ್ ಮಾಡಿ




ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-

● ಇತ್ತೀಚಿನ ಭಾವಚಿತ್ರ ಮತ್ತು ಸಹಿ

● ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ

● ಶೈಕ್ಷಣಿಕ ಅಂಕಪಟ್ಟಿಗಳು ಮತ್ತು ಪ್ರಮಾಣ ಪತ್ರಗಳು

● ಜಾತಿ ಮತ್ತು ಆದಾಯ ಪ್ರಮಾಣ ಪತ್ರ

● ಆಧಾರ್ ಕಾರ್ಡ್

● ನಿವಾಸ ದೃಢೀಕರಣ ಪತ್ರ

● ಇನ್ನಿತರೆ ಪ್ರಮುಖ ದಾಖಲೆಗಳು


ಪ್ರಮುಖ ದಿನಾಂಕಗಳು:-

● ಅರ್ಜಿ ಸಲ್ಲಿಸಲು ಆರಂಭ ದಿನಾಂಕ – 22 ಜುಲೈ, 2023

● ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 15 ಆಗಸ್ಟ್, 2023

● ಅರ್ಜಿ ತಿದ್ದುಪಡಿಗೆ ಅವಕಾಶ – 16 ಆಗಸ್ಟ್, 2023 ರಿಂದ 17 ಆಗಸ್ಟ್, 2023 ರವರೆಗೆ.

Post a Comment

0 Comments