ಗೃಹಲಕ್ಷ್ಮಿ ಯೋಜನೆಗೆ (Gruhalakshhmi Scheme) ಜುಲೈ 19 ರಿಂದ ಅರ್ಜಿ ಸ್ವೀಕಾರ ಮಾಡಲಾಗುತ್ತಿದೆ. ಕರ್ನಾಟಕ ಸರ್ಕಾರ ಸೂಚಿಸಿರುವ ಸೇವಾ ಕೇಂದ್ರಗಳಾದ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಮತ್ತು ಬಾಪೂಜಿ ಸೇವಾ ಕೇಂದ್ರಗಳಲ್ಲಿ ಹೋಗಿ ಅರ್ಹ ಮಹಿಳೆಯರು ಪೂರಕ ದಾಖಲೆಗಳನ್ನು ಕೊಟ್ಟು ಅರ್ಜಿ ಸಲ್ಲಿಸಬಹುದು.
ಈ ಹಿಂದೆ ಸರ್ಕಾರ ನೀಡಿದ ಸಹಾಯವಾಣಿ ಸಂಖ್ಯೆಗೆ ಪಡಿತರ ಚೀಟಿ ಸಂಖ್ಯೆಯನ್ನು ಆಧಾರ್ ಕಾರ್ಡ್ ಗೆ ಲಿಂಕ್ ಆಗಿದ್ದ ಮೊಬೈಲ್ ಸಂಖ್ಯೆಯಿಂದ SMS ಕಳುಹಿಸಿ ರಿಪ್ಲೈ ಪಡೆದ ಬಳಿಕ ಆ ವೇಳಾಪಟ್ಟಿಯಲ್ಲಿ ಹೋಗಿ ಅರ್ಜಿ ಸಲ್ಲಿಸಬೇಕಾಗಿತ್ತು. ಆದರೆ ಈಗ ಮುಕ್ತವಾಗಿ ವೇಳಾಪಟ್ಟಿ ಪಡೆಯದಿದ್ದರೂ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಈ ಸುದ್ದಿ ತಪ್ಪದೆ ನೋಡಿ : -ಗೃಹಜ್ಯೋತಿ ಯೋಜನೆಯ ರೂಲ್ಸ್ ಚೇಂಜ್, ಸರ್ಕಾರದಿಂದ ಫಲಾನುಭವಿಗಳ ಆಡಿಟ್, ಯಾರೆಲ್ಲಾ ಉಚಿತ ವಿದ್ಯುತ್ ವ್ಯಾಪ್ತಿಯಿಂದ ಹೊರಗೆ ಬೀಳುತ್ತಾರೆ ಗೊತ್ತಾ
ಈಗಾಗಲೇ ಲಕ್ಷಾಂತರ ಮಹಿಳೆಯರು ಅರ್ಜಿ ಸಲ್ಲಿಸಿ ಮಂಜೂರಾತಿ ಪತ್ರವನ್ನು (Acknowledgement) ಕೂಡ ಪಡೆದುಕೊಂಡಿದ್ದಾರೆ. ಆದರೆ ಕೆಲವೆಡೆ ಈ ಮಂಜೂರಾತಿ ಪತ್ರ ಅಥವಾ ಅರ್ಜಿ ಸ್ವೀಕೃತಿ ಪತ್ರ ವಿತರಣೆಯಾಗಿಲ್ಲ. ಈ ಬಗ್ಗೆ ಅನೇಕರಿಗೆ ಗೊಂದಲಗಳಿವೆ. ಅರ್ಜಿ ಸಲ್ಲಿಸಿದ ಪೈಕಿ ಬಹುತೇಕರು ಮಂಜೂರಾತಿ ಪತ್ರವನ್ನು ಪಡೆದಿಲ್ಲ. ಹಾಗಾಗಿ ನಮ್ಮ ಅರ್ಜಿ ಸಲ್ಲಿಕೆ ಆಗಿದಿಯೋ ಇಲ್ಲವೋ ಎನ್ನುವ ಗೊಂದಲದಲ್ಲಿದ್ದಾರೆ.
ಕರ್ನಾಟಕ ಸರ್ಕಾರ ಗೃಹಲಕ್ಷ್ಮೀ ಯೋಜನೆ ಎನ್ನುವ ಹೆಡ್ ಲೈನ್ ಹೊಂದಿರುವ ಈ ಮಂಜೂರಾತಿ ಪತ್ರದಲ್ಲಿ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಮತ್ತು ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆ ಸಚಿವರ ಭಾವಚಿತ್ರದೊಂದಿಗೆ ಅರ್ಜಿ ಸಲ್ಲಿಸಿದವರ ಪಡಿತರ ಚೀಟಿ ಸಂಖ್ಯೆ ಹಾಕಿ ಅವರ ಹೆಸರನ್ನು ಕೂಡ ತಿಳಿಸಿ ಇವರ ಅರ್ಜಿ ಗೃಹಲಕ್ಷ್ಮಿ ಯೋಜನೆಗೆ ಒಪ್ಪಿ ಮಂಜೂರು ಮಾಡಲಾಗಿದೆ ಎಂದು ನೀವು ಅರ್ಜಿ ಸಲ್ಲಿಸಿದ ದಿನಾಂಕವನ್ನು ಕೂಡ ನಮೂದಿಸಲಾಗಿರುತ್ತದೆ.
ಈ ಸುದ್ದಿ ತಪ್ಪದೆ ನೋಡಿ :-ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿದ್ದೀರಾ.? ಜೀರೋ ವಿದ್ಯುತ್ ಬಿಲ್ ಯಾರಿಗೆಲ್ಲಾ ಮಾತ್ರ ಗೊತ್ತಾ
ನಗದು ಹಣವನ್ನು ಆಧಾರ್ ಲಿಂಕ್ ಮಾಡಲಾದ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುವುದು ಇದು ಕಂಪ್ಯೂಟರ್ ರಚಿತ ದಾಖಲೆಯಾಗಿದ್ದು, ಸಹಿ ಅಗತ್ಯ ಇರುವುದಿಲ್ಲ. ಈ ದಾಖಲೆಯ ನೈಜತೆಯನ್ನು QR Code ಸ್ಕ್ಯಾನ್ ಮಾಡಿ ಪರಿಶೀಲಿಸಬಹುದು ಎಂದು ತಿಳಿಸಿ ಕೆಳಗೆ QR Code ಮತ್ತು ಅರ್ಜಿ ಮಂಜೂರಾತಿ ಆದೇಶ ಸಂಖ್ಯೆಯನ್ನು ಕೂಡ ನಮೂದಿಸಲಾಗಿರುತ್ತದೆ.
ಕೆಲವೆಡೆ ಅರ್ಜಿ ಸಲ್ಲಿಸಿದ ತಕ್ಷಣವೇ ಸ್ಥಳದಲ್ಲಿಯೇ ಅವರ ಮಂಜೂರಾತಿ ಪತ್ರವನ್ನು ಕೂಡ ನೀಡುತ್ತಿದ್ದಾರೆ. ಆದರೆ ಹಲವೆಡೆ ಕಾರಣಾಂತರಗಳಿಂದ ಇದನ್ನು ನೀಡಲಾಗುತ್ತಿಲ್ಲ ಆದರೆ ನಿಮ್ಮ ಅರ್ಜಿ ಸಲ್ಲಿಕೆ ಯಶಸ್ವಿಯಾಗಿದೆ ಎಂದು ಖಚಿತವಾಗಿ ತಿಳಿಸಿ ಕಳುಹಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅರ್ಜಿ ಸ್ಟೇಟಸ್ ತಿಳಿಯಲು ಅಥವಾ ಗೃಹಲಕ್ಷ್ಮಿ ಯೋಜನೆ ಹಣ ಬಂದಿಲ್ಲ ದೂರು ಸಲ್ಲಿಸಲು ಮಂಜೂರಾತಿ ಪತ್ರ ಅಗತ್ಯ ದಾಖಲೆಯಾಗಿ ಬೇಕಾಗುತ್ತದೆ.
ಹಾಗಾಗಿ ಇದನ್ನು ಪಡೆದಿಲ್ಲದ ಮಹಿಳೆಯರು ಗೊಂದಲಕ್ಕೊಳಗಾಗಿದ್ದಾರೆ ಆದರೆ ಈ ಬಗ್ಗೆ ಚಿಂತೆ ಬೇಡ ಇದಕ್ಕೊಂದು ಪರ್ಯಾಯಮಾರ್ಗ ಸಿದ್ಧವಾಗುತ್ತಿದೆ. ಅರ್ಜಿ ಸಲ್ಲಿಸಿರುವ ಮಹಿಳೆಯರು ಸ್ವೀಕೃತಿ ಪತ್ರ ಪಡೆಯದೆ ಇದ್ದರೂ ಕೂಡ ನಿಶ್ಚಿಂತರಾಗಿರಬಹುದು. ನೀವು ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸ್ಟೇಟಸ್ ಚೆಕ್ ಮಾಡಲು ಅಥವಾ ಮಂಜೂರಾತಿ ಪತ್ರವನ್ನು ಪಡೆದಿಲ್ಲ ಎಂದರೆ ಅದನ್ನು ಡೌನ್ಲೋಡ್ ಮಾಡಿಕೊಳ್ಳಲು ಮುಂದಿನ ದಿನಗಳಲ್ಲಿ ಅವಕಾಶ ನೀಡುವ ಸಾಧ್ಯತೆ ಇದೆ.
https://sevasindhugs.karnataka.gov.in/ ಮೂಲಕ ಗೃಹಜ್ಯೋತಿ ಯೋಜನೆಯ ಅರ್ಜಿ ಸ್ಟೇಟಸ್ ಚೆಕ್ ಮಾಡಿದ ರೀತಿ ಗೃಹಲಕ್ಷ್ಮಿ ಯೋಜನೆ ಅರ್ಜಿ ಸ್ಟೇಟಸ್ ಕೂಡ ಚೆಕ್ ಮಾಡಿ ಮಂಜೂರಾತಿ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಲು ಅವಕಾಶ ಸಿಗುವ ಸಾಧ್ಯತೆಗಳಿವೆ. ಸರ್ಕಾರವೇ ಸೂಚಿಸಿರುವ ಸೇವಾ ಸಿಂಧು ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಿರುವುದರಿಂದ ಅರ್ಜಿ ಸಲ್ಲಿಕೆ ಯಶಸ್ವಿ ಆಗಿದೆ ಎಂದು ತಿಳಿಸಿದ ಎಲ್ಲರ ಅರ್ಜಿಗಳು ಸೀಕೃತವಾಗಿರುತ್ತವೆ ಎನ್ನುವ ಭರವಸೆಯನ್ನು ಇಡಬಹುದು.
0 Comments