ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿದ್ದೀರಾ.? ಜೀರೋ ವಿದ್ಯುತ್ ಬಿಲ್ ಯಾರಿಗೆಲ್ಲಾ ಮಾತ್ರ ಗೊತ್ತಾ

ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿದ್ದೀರಾ.? ಜೀರೋ ವಿದ್ಯುತ್ ಬಿಲ್ ಯಾರಿಗೆಲ್ಲಾ ಮಾತ್ರ ಗೊತ್ತಾ



ಕರ್ನಾಟಕದ ಎಲ್ಲ ಜನತೆ ಈಗ ಗ್ಯಾರಂಟಿ ಕಾರ್ಡ್ ಯೋಜನೆಗಳ (Gyaranty Scheme) ಪ್ರಯೋಜನ ಪಡೆಯುತ್ತಿದ್ದಾರೆ. ಹಲವು ವರ್ಗಗಳ ಶ್ರೇಯೋಭಿವೃದ್ಧಿಯನ್ನು ಗಮನದಲ್ಲಿ ಇಟ್ಟುಕೊಂಡು ಕಾಂಗ್ರೆಸ್ ಪಕ್ಷವು ಚುನಾವಣೆಗೆ ಮುನ್ನ ಇವುಗಳ ಭರವಸೆ ನೀಡಿತ್ತು. ಈಗ ಅವರದ್ದೇ ಸರ್ಕಾರ (government) ಜಾರಿಗೆ ಬಂದ ಮೇಲೆ ಹಂತ ಹಂತವಾಗಿ ಎಲ್ಲಾ ಯೋಜನೆಗಳನ್ನು ಜಾರಿಗೆ ತರುತ್ತಿದೆ.

ಈ ಪೈಕಿ ಈಗಾಗಲೇ ಗೃಹಜ್ಯೋತಿ ಯೋಜನೆ, ಶಕ್ತಿ ಯೋಜನೆ, ಅನ್ನ ಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆಗೆ ಚಾಲ್ತಿ ಸಿಕ್ಕಿದೆ. ಗ್ಯಾರಂಟಿ ಕಾರ್ಡ್ ಯೋಜನೆಗಳಲ್ಲಿ ಮೊದಲನೆಯದಾದ ಗೃಹಜ್ಯೋತಿ (Gruhajyothi Scheme) ಯೋಜನೆಯಡಿ ಕರ್ನಾಟಕದ ಪ್ರತಿ ಕುಟುಂಬಗಳು 200 ಯೂನಿಟ್ ವರೆಗೆ ಉಚಿತವಾಗಿ ವಿದ್ಯುತ್ ಪಡೆಯಬಹುದು (Free current) ಎಂದು ಸರ್ಕಾರ ಘೋಷಣೆ ಮಾಡಿತ್ತು


ಈ ಸುದ್ದಿ ತಪ್ಪದೆ ನೋಡಿ:-ಸಾಮಾನ್ಯ ಜನರಿಗೆ ಶಾ-ಕಿಂಗ್ ನ್ಯೂಸ್ ಜಾಬ್ ಕಾರ್ಡ್ ಪಡೆದಿದ್ದ ಕರ್ನಾಟಕದ ಸುಮಾರು 8.7 ಲಕ್ಷ ಕಾರ್ಮಿಕರ ಕಾರ್ಡ್ ಡಿಲಿಟ್ ಆಗಿದೆ ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದಿಯಾ ಚೆಕ್ ಮಾಡಿ


ಸ್ವಂತ ಮನೆಯಲ್ಲಿ ಇರುವವರು ಮಾತ್ರವಲ್ಲದೆ, ಬಾಡಿಗೆ ಮನೆಯಲ್ಲಿ ಇರುವವರು ಅಥವಾ ಸಂಬಂಧಿಗಳ ಮನೆಗಳಲ್ಲಿ ಇರುವವರು ಈ ರೀತಿ ಕರ್ನಾಟಕದ ಪ್ರತಿ ಕುಟುಂಬಗಳಿಗೂ ಕೂಡ ಈ ಯೋಜನೆಗೆ ನೋಂದಣಿ ಮಾಡಿಕೊಳ್ಳುವುದಕ್ಕೆ ಸರ್ಕಾರ ಅವಕಾಶ ನೀಡಿತ್ತು ಮನೆಯ ವಿದ್ಯುತ್ ಖಾತೆ ನಂಬರ್ ಮತ್ತು ಆಧಾರ್ ಕಾರ್ಡ್ ನಂಬರ್ ಕೊಟ್ಟು ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿ ಯೋಜನೆಯ ರೆಫರೆನ್ಸ್ ನಂಬರನ್ನು ಕೂಡ ಅನೇಕರು ಪಡೆದುಕೊಂಡಿದ್ದಾರೆ.

ಕರ್ನಾಟಕವನ್ನು ಕತ್ತಲೆ ಮುಕ್ತ ಮಾಡುವ ಧ್ಯೇಯದಿಂದ ಕಾಂಗ್ರೆಸ್ ಪಕ್ಷವು ಗೃಹಜ್ಯೋತಿ ಯೋಜನೆಯನ್ನು ಘೋಷಿಸಿತ್ತು. ಈ ಯೋಜನೆಯನ್ನು ಘೋಷಣೆ ಮಾಡಿದ ಪ್ರಕಾರ ಜುಲೈ ತಿಂಗಳಲ್ಲಿ ಬಳಸಿರುವ ಗೃಹಬಳಕೆಯ ವಿದ್ಯುತ್ ಬಿಲ್ ಗೆ ಆಗಸ್ಟ್ ತಿಂಗಳಲ್ಲಿ ಜೀರೋ ಬಿಲ್ ಬರಬೇಕು ಆದರೆ ಸರ್ಕಾರವು ಗೃಹಜೋತಿ ಯೋಜನೆಗೆ ಮಾರ್ಗಸೂಚಿ ಹೊರಡಿಸಿದಾಗಲೇ ಯಾರು ಮಾತ್ರ ಸಂಪೂರ್ಣ ಉಚಿತ ವಿದ್ಯುತ್ ಪಡೆಯಲು ಅರ್ಹರು ಎನ್ನುವುದನ್ನು ಸೂಕ್ಷ್ಮವಾಗಿ ತಿಳಿಸಿತ್ತು. ಆ ಪ್ರಕಾರವಾಗಿ ಯಾರೆಲ್ಲಾ ಆಗಸ್ಟ್ ತಿಂಗಳಲ್ಲಿ ವಿದ್ಯುತ್ ಬಿಲ್ ಅನ್ನು ಜೀರೋ ಬಿಲ್ ಪಡೆಯಲಿದ್ದಾರೆ ಎನ್ನುವುದರ ವಿವರವನ್ನು ತಿಳಿಸುತ್ತಿದ್ದೇವೆ.



ಈ ಸುದ್ದಿ ತಪ್ಪದೆ ನೋಡಿ:-ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸದ ಮಾತ್ರಕ್ಕೆ ಹಣ ಜಮೆ ಆಗಲ್ಲ ಅದರ ಜೊತೆ ತಪ್ಪದೇ ಈ ಕೆಲಸ ಮಾಡಬೇಕು, ಸರ್ಕಾರದ ಹೊಸ ರೂಲ್ಸ್.! ಇಲ್ಲದಿದ್ರೆ 2000 ಸಿಗಲ್ಲ




● ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಕಡೆಯ ದಿನಾಂಕ ಇಲ್ಲ, ಆದರೆ ಜುಲೈ 25ರ ಒಳಗೆ ಅರ್ಜಿ ಸಲ್ಲಿಸಿದ ಫಲಾನುಭವಿಗಳು ಮಾತ್ರ ಜುಲೈ ತಿಂಗಳ ಗೃಹ ಜ್ಯೋತಿ ಯೋಜನೆಗೆ ಅರ್ಹರಾಗಿರುತ್ತಾರೆ. ಯಾಕೆಂದರೆ ಪ್ರತಿ ತಿಂಗಳ 25ನೇ ತಾರೀಖಿನಿಂದ ಮುಂದಿನ ತಿಂಗಳ 25ನೇ ತಾರೀಕಿನನ್ನು ವಿದ್ಯುತ್ ಬಳಕೆ ಮಾಪನ ಮಾಡಲು ಪರಿಗಣಿಸಲಾಗುತ್ತದೆ. ಜುಲೈ ತಿಂಗಳ ಬಳಕೆಯನ್ನು ಜೂನ್ 25ರಿಂದ ಜುಲೈ 25ರ ಒಳಗೆ ನಿಗದಿಪಡಿಸಲಾಗಿರುತ್ತದೆ ಹಾಗಾಗಿ ಈ ಸಮಯದ ಒಳಗೆ ಅರ್ಜಿ ಸಲ್ಲಿಸಿದರು ಮಾತ್ರ ರಿಯಾಯಿತಿ ಪಡೆಯುತ್ತಾರೆ.


● ಸರ್ಕಾರ ಗರಿಷ್ಠ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡುವುದಾಗಿ ಘೋಷಿಸಿದೆ ಹಾಗಾಗಿ 200 ಯೂನಿಟ್ ಒಳಗೆ ವಿದ್ಯುತ್ ಬಳಕೆ ಮಾಡುವವರಿಗೆ ಮಾತ್ರ ಈ ಯೋಜನೆಯ ಫಲಾನುಭವಿಗಳಾಗಲು ಅವಕಾಶ ಇರುತ್ತದೆ.


● ಆದರೆ ಇದರಲ್ಲೂ ಕೂಡ ಸರ್ಕಾರ ಒಂದು ಕಂಡೀಶನ್ ಹಾಕಿದೆ, ಗರಿಷ್ಠ 200 ಯೂನಿಟ್ ವರೆಗೆ ವಿದ್ಯುತ್ ಉಚಿತ ಇದ್ದರೂ ಕೂಡ ಕುಟುಂಬವು ಹಿಂದಿನ 12 ತಿಂಗಳಿನಲ್ಲಿ ಬಳಸಿರುವ ವಿದ್ಯುತ್ ಬಳಕೆಯ ಸರಾಸರಿಯಲ್ಲಿ 10 ಯೂನಿಟ್ ವರೆಗೆ ಮಾತ್ರ ಹೆಚ್ಚುವರಿಯಾಗಿ ಪಡೆಯಬಹುದು. ಅದಕ್ಕಿಂತಲೂ ಹೆಚ್ಚಿಗೆ ಬಳಕೆ ಮಾಡಿದವರಿಗೆ ಆ ಹೆಚ್ಚಿನ ಬಳಕೆಯ ವಿದ್ಯುತ್ ಬಿಲ್ ನೀಡಲಾಗುವುದು ಎಂದು ಹೇಳಿತ್ತು. ಅದರ ಆಧಾರದ ಮೇಲೆ ಹೆಚ್ಚಿನ ಬಳಕೆ ವಿದ್ಯುತ್ ಗೆ ಮಾತ್ರ ವಿದ್ಯುತ್ ಬಿಲ್ ನೀಡಬಹುದು.


ಈ ಬಗ್ಗೆ ಇನ್ನು ಸಾಕಷ್ಟು ಗೊಂದಲಗಳು ಜನಸಾಮಾನ್ಯರಿಗಿದೆ ಆದರೆ ಒಂದು ಅಥವಾ ಎರಡು ತಿಂಗಳು ವಿದ್ಯುತ್ ಬಿಲ್ ಬಂದ ನಂತರ ಅದನ್ನು ಗಮನಿಸಿದ ಮೇಲೆ ಈ ಎಲ್ಲ ಗೊಂದಲಗಳು ಸ್ಪಷ್ಟವಾಗಲಿದೆ. ಹಾಗಾಗಿ ಜುಲೈ ತಿಂಗಳಲ್ಲಿ ನಾವು ಬಳಕೆ ಮಾಡಿರುವ ವಿದ್ಯುತ್ ಬಿಲ್ ಪಡೆಯುವವರೆಗೂ ಕೂಡ ಕಾದು ನೋಡೋಣ.
 

Post a Comment

0 Comments