ಲೊಕಸಭೆಯಲ್ಲಿ ನಡೆಯುತ್ತಿರುವ ಕಲಾಪದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ (NREGA) ಜಾಬ್ ಕಾರ್ಡ್ (Job card) ಪಡೆದಿದ್ದ 5.18 ಕೋಟಿ ಕಾರ್ಮಿಕರ ಜಾಬ್ ಕಾರ್ಡ್ ರದ್ದು (delete) ಮಾಡಿರುವ ಬಗ್ಗೆ ಸದಸ್ಯರು ಪ್ರಶ್ನೆ ಕೇಳಿ ಚರ್ಚಿಸಿದರು. ಇದಕ್ಕೆ ಕೇಂದ್ರ ಪಂಚಾಯತ್ ರಾಜ್ ಸಚಿವರಾದ (Union minister of panchayath raj ) ಗಿರಿರಾಜ್ ಸಿಂಗ್ (Giriraj Singh) ಅವರು ವಿವರದ ಸಮೇತ ಉತ್ತರ ಕೊಟ್ಟಿದ್ದಾರೆ.
ಎಲ್ಲರಿಗೂ ತಿಳಿದಿರುವಂತೆ ನರೇಗಾ ಯೋಜನೆ ಅಡಿ ಈ ರೀತಿ ಜಾಬ್ ಕಾರ್ಡ್ ಪಡೆದ ಕಾರ್ಮಿಕರಿಗೆ ಅವರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಲ್ಲಿ ವಾರ್ಷಿಕವಾಗಿ 100 ದಿನಗಳ ಉದ್ಯೋಗದ ಗ್ಯಾರೆಂಟಿ ಸಿಗುತ್ತದೆ. ಉದ್ಯೋಗ ಸೃಷ್ಟಿ ಮಾಡಿಕೊಡಲು ಸಾಧ್ಯವಾಗದೇ ಇದ್ದ ಸಮಯದಲ್ಲೂ ಕೂಡ ಜಾಬ್ ಕಾರ್ಡ್ ಹೊಂದಿದ್ದ ಕಾರ್ಮಿಕರಿಗೆ ಸರ್ಕಾರ ಪರಿಹಾರ ಹಣ ವರ್ಗಾವಣೆ ಮಾಡಿದೆ. ಗ್ರಾಮೀಣ ಪ್ರದೇಶದಲ್ಲಿರುವ ಯುವ ಜನತೆಗೆ ಇದೊಂದು ಖಾತರಿ ಉದ್ಯೋಗದ ಭರವಸೆಯೂ ಆಗಿದೆ.
ಈ ಸುದ್ದಿ ತಪ್ಪದೆ ನೋಡಿ:-ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸದ ಮಾತ್ರಕ್ಕೆ ಹಣ ಜಮೆ ಆಗಲ್ಲ ಅದರ ಜೊತೆ ತಪ್ಪದೇ ಈ ಕೆಲಸ ಮಾಡಬೇಕು, ಸರ್ಕಾರದ ಹೊಸ ರೂಲ್ಸ್.! ಇಲ್ಲದಿದ್ರೆ 2000 ಸಿಗಲ್ಲ.!
ಆದರೆ ವರ್ಷದಿಂದ ವರ್ಷಕ್ಕೆ ಈ ರೀತಿ ರದ್ದಾಗುತ್ತಿರುವ ಜಾಬ್ ಕಾರ್ಡ್ ಗಳ ಅಂಕಿ ಅಂಶಗಳು ಹೆಚ್ಚಾಗುತ್ತಿದೆ. ಈ ಬಗ್ಗೆ ಲೋಕಸಭೆಯಲ್ಲಿ ಸಂಸದರು ಕೇಳಿದ ಪ್ರಶ್ನೆಗಳಿಗೆ ಪಂಚಾಯತ್ ರಾಜ್ ಸಚಿವರು ಕೊಟ್ಟ ಉತ್ತರ ಹೀಗಿತ್ತು. ರಾಜ್ಯ ಸರ್ಕಾರಗಳು ಪ್ರತಿ ವರ್ಷವೂ ಕೂಡ ಜಾಬ್ ಕಾರ್ಡ್ ಗಳ ನವೀಕರಣ ಮಾಡುತ್ತವೆ, ಹಾಗೆಂದು ಅವುಗಳನ್ನು ಅಳಿಸಿ ಹಾಕಲು ವ್ಯವಸ್ಥೆಯಲ್ಲಿನ ಲೋಪ ನಿರ್ದಿಷ್ಟ ಕಾರಣ ಅಲ್ಲ.
ಫೇಕ್ ಮಾಹಿತಿಗಳನ್ನು ನೀಡಿ ಜಾಬ್ ಕಾರ್ಡ್ ಗಳನ್ನು ಹೊಂದಿರುವವರು, ಡುಬ್ಲಿಕೇಟ್ ಜಾಬ್ ಕಾರ್ಡ್ಗಳನ್ನು ಹೊಂದಿರುವವರು, ಜಾಬ್ ಕಾರ್ಡ್ ಇದ್ದರೂ ಕೆಲಸ ಮಾಡಲು ಇಚ್ಛೆ ಪಡೆದ ಜನರು, ಜಾಬ್ ಕಾರ್ಡ್ ಪಡೆದ ಸದಸ್ಯರ ಕುಟುಂಬವು ಶಾಶ್ವತವಾಗಿ ಆ ಪಂಚಾಯಿತಿಯಿಂದ ಬೇರೆಡೆಗೆ ಸ್ಥಳಾಂತರಗೊಂಡಿದ್ದರೆ ಆ ಕುಟುಂಬದ ನರೇಗ ಜಾಬ್ ಕಾರ್ಡ್ಗಳು ಮತ್ತು ಜಾಬ್ ಕಾರ್ಡ್ ಹೊಂದಿದ ವ್ಯಕ್ತಿಯು ಮ.ರಣ ಹೊಂದಿದ್ದರೆ ಅವರ ಜಾಬ್ ಕಾರ್ಡ್ ಗಳನ್ನು ರದ್ದು ಮಾಡಲಾಗಿದೆ ಎಂದು ಸಚಿವರು ಉತ್ತರಿಸಿದ್ದಾರೆ.
ಈ ಸುದ್ದಿ ತಪ್ಪದೆ ನೋಡಿ:-ಹೈನುಗಾರಿಕೆಗೆ ಮಾಡುವವರಿಗೆ ಸರ್ಕಾರದಿಂದ ಸಿಗಲಿದೆ 3 ಲಕ್ಷ ರೂಪಾಯಿ ಅರ್ಜಿ ಸಲ್ಲಿಸುವುದು ಹೇಗೆ ನೋಡಿ
ಇದರ ಜೊತೆಗೆ ದೇಶದ ಯಾವುದೇ ರಾಜ್ಯದಲ್ಲೂ ಕೂಡ ನರೇಗಾ ಯೋಜನೆಯಡಿ ಕಾರ್ಮಿಕರ ವೇತನಗಳನ್ನು ಬಾಕಿ ಉಳಿಸಿಕೊಂಡಿಲ್ಲ. ಜುಲೈ 21ರ ವರೆಗಿನ ಕೂಲಿ ಸಾಮಾಗ್ರಿಗಳಲ್ಲಿನ 579 ಕೋಟಿ ರೂ ಅಷ್ಟೇ ಬಾಕಿ ಇದೆ ಎಂದು ಸ್ಪಷ್ಟಪಡಿಸಿದ್ದರು. ಇದರೊಂದಿಗೆ ಕರ್ನಾಟಕದ ಜನತೆಗೆ ಅನುದಾನದ ವಿಚಾರವಾಗಿ ಕೂಡ ಸಿಹಿ ಸುದ್ದಿ ಕೊಟ್ಟ ಅವರು 2014-15 ನೇ ಸಾಲಿನಲ್ಲಿ 1,602 ಕೋಟಿ ನೀಡುತ್ತಿದ್ದ ಅನುದಾನವು ಕಳೆದ ವರ್ಷ ಎಂದರೆ 2022 23ನೇ ಸಾಲಿನಲ್ಲಿ 8,107 ಕೋಟಿಗೆ ಏರಿದೆ.
ಮುಂದಿನ ವರ್ಷಗಳಲ್ಲಿ ಅದು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸುಳಿವು ನೀಡಿದರು. ಇನ್ನು ಪ್ರತಿ ವರ್ಷ ರದ್ದಾಗುತ್ತಿರುವ ಜಾಬ್ ಕಾರ್ಡ್ ಗಳ ಪ್ರಮಾಣವನ್ನು ನೋಡುವುದಾದರೆ, ಕರ್ನಾಟಕ ರಾಜ್ಯದಲ್ಲಿ 2021-22 ನೇ ಸಾಲಿನಲ್ಲಿ 2.50 ಲಕ್ಷ ಮಂದಿಯ ಜಾಬ್ ಕಾರ್ಡ್ ಡಿಲೀಟ್ ಆಗಿತ್ತು, 2022-23ನೇ ಸಾಲಿನಲ್ಲೂ ಕೂಡ ನಾನಾ ಕಾರಣಗಳಿಂದ 8.07 ಲಕ್ಷ ಕಾರ್ಮಿಕರ ಜಾಬ್ ಕಾರ್ಡ್ ಡಿಲೀಟ್ ಆಗಿದೆ. ಒಟ್ಟಾರೆಯಾಗಿ ದೇಶದಲ್ಲಿ 2022-23 ನೇ ಸಾಲಿನಲ್ಲಿ ರಾಜ್ಯಗಳಿಂದ 5.18 ಕೋಟಿ ಜಾಬ್ ಕಾರ್ಡ್ ಗಳು ಡಿಲೀಟ್ ಆಗಿದೆ ಇದು ಹಿಂದಿನ ವರ್ಷದ 247ರಷ್ಟು ಹೆಚ್ಚಿನ ಪ್ರಮಾಣದಲ್ಲಿ ಇದೆ ಎಂದು ಅವರು ಸಚಿವರು ಕೊಟ್ಟಿದ್ದಾರೆ.
0 Comments