ಆಗಸ್ಟ್ ತಿಂಗಳಿಂದ ಕರ್ನಾಟಕದ ಎಲ್ಲಾ ಕುಟುಂಬದ ಯಜಮಾನಿಯರಿಗೂ ಕೂಡ ಕುಟುಂಬ ನಿರ್ವಹಣೆಗಾಗಿ 2,000ರೂ. ಸಹಾಯಧನವನ್ನು ಪ್ರತಿ ತಿಂಗಳು ಕುಟುಂಬದ ಯಜಮಾನಿ ಖಾತೆಗೆ DBT ಮೂಲಕ ವರ್ಗಾಯಿಸಲು ಸರ್ಕಾರ ನಿರ್ಧಾರ ಮಾಡಿದೆ. ಈ ಪ್ರಯೋಜನವನ್ನು ಪಡೆಯಲು ಅರ್ಹ ಮಹಿಳೆಯರು ಅರ್ಜಿ ಸಲ್ಲಿಸಿ ಗೃಹಲಕ್ಷ್ಮಿ ಯೋಜನೆಗೆ ನೋಂದಣಿಯಾಗಬೇಕು.
ಈ ಸುದ್ದಿ ತಪ್ಪದೆ ನೋಡಿ:-ಹೈನುಗಾರಿಕೆಗೆ ಮಾಡುವವರಿಗೆ ಸರ್ಕಾರದಿಂದ ಸಿಗಲಿದೆ 3 ಲಕ್ಷ ರೂಪಾಯಿ ಅರ್ಜಿ ಸಲ್ಲಿಸುವುದು ಹೇಗೆ ನೋಡಿ
ಆದರೆ ಅರ್ಜಿ ಸಲ್ಲಿಸಿದ ಮಾತ್ರಕ್ಕೆ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗವುದಿಲ್ಲ ಮಹಿಳೆಯರು ತಪ್ಪದೆ ಈ ಕೆಲಸವನ್ನು ಮಾಡಲೇಬೇಕು. ಅದರ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಗೃಹಲಕ್ಷ್ಮಿ ಯೋಜನೆಯನ್ನು ಪಡೆಯಲು ಸರ್ಕಾರ ಸೂಚಿಸಿರುವ ಅರ್ಹತೆಗಳನ್ನು ಹೊಂದಿರುವ ಕುಟುಂಬದ ಯಜಮಾನಿಯರು ಸರ್ಕಾರ ಸೂಚಿಸಿರುವ ಸೇವಾ ಕೇಂದ್ರಗಳಾದ.
ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಮತ್ತು ಸೇವಾ ಸಿಂಧು ಕೇಂದ್ರಗಳಲ್ಲಿ (Sevasindhu centre) ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ ಮತ್ತು ಪ್ರಜಾ ಪ್ರತಿನಿಧಿಗಳನ್ನು (Citizens representative) ಕೂಡ ನೇಮಿಸಿಕೊಂಡು ಅವರಿಗೆ ಮೊಬೈಲ್ ಆಪ್ (Mobile app) ನೀಡುವ ಮೂಲಕ ಅರ್ಜಿ ಸಲ್ಲಿಸುವುದಕ್ಕೆ ಅವಕಾಶ ನೀಡಿದೆ.
ಆರಂಭದ ದಿನಗಳಲ್ಲಿ ಒಂದು ಸೇವಾ ಕೇಂದ್ರದಲ್ಲಿ ಒಂದು ದಿನಕ್ಕೆ ಅರ್ಜಿ ಸಲ್ಲಿಸುವುದಕ್ಕೆ SMS ಕಳುಹಿಸಿ ವೇಳಾಪಟ್ಟಿಯನ್ನು ಪಡೆದಿದ್ದ 60 ಜನರಿಗೆ ಮಾತ್ರ ಅವಕಾಶ ಇತ್ತು. ಈಗ ಸರ್ಕಾರ ಎಲ್ಲರಿಗೂ ಮುಕ್ತವಾಗಿ ಅವಕಾಶ ಮಾಡಿಕೊಟ್ಟಿದೆ. SMS ಇಲ್ಲದೆ ಇದ್ದರೂ ಕೂಡ ಈ ಮೇಲೆ ಸೂಚಿಸಿದ ಯಾವುದಾದರೂ ಒಂದು ಸೇವಾ ಕೇಂದ್ರದಲ್ಲಿ ಪೂರಕ ದಾಖಲೆಗಳ ಜೊತೆ ಹೋಗಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಅರ್ಜಿ ಸ್ವೀಕೃತಿ ಪತ್ರವೂ ಕೂಡ ಸಿಗುತ್ತಿದೆ. ಈ ರೀತಿ ಅರ್ಜಿ ಸಲ್ಲಿಕೆ ಪೂರ್ತಿಯಾದ ಮೇಲೆ ಆಗಸ್ಟ್ ತಿಂಗಳಿನಿಂದ ಪ್ರತಿ ತಿಂಗಳು ಸಹಾಯಧನವನ್ನು ಅವರು ಪಡೆಯಬಹುದು. ಆದರೆ ಹಲವರು ಅರ್ಜಿ ಸಲ್ಲಿಸಿದರೂ ಕೂಡ ಈ ಅವಕಾಶದಿಂದ ವಂಚಿತರಾಗುತ್ತಾರೆ ಯಾಕೆಂದರೆ, ಆಧಾರ್ ಕಾರ್ಡ್ ಅನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡದೆ ಇರುವುದು.
ಈ ಸುದ್ದಿ ತಪ್ಪದೆ ನೋಡಿ:-ಪದವೀಧರರಿಗೆ ಸಿಹಿ ಸುದ್ದಿ, ಯುವನಿಧಿ ಯೋಜನೆ ಜಾರಿ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿದ ಸರ್ಕಾರ
ಗೃಹಲಕ್ಷ್ಮಿ ಯೋಜನೆಯ ಅಕ್ನಾಲೆಜ್ ಮೆಂಟ್ ಪ್ರತಿಯಲ್ಲೂ ಕೂಡ ನೀವು ಗೃಹಲಕ್ಷ್ಮಿ ಯೋಜನೆಯ ಮಂಜೂರಾತಿಗೆ ಅರ್ಹರಾಗಿದ್ದೀರಿ ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುವುದು ಎಂದು ತಿಳಿಸಲಾಗಿದೆ. ಹಾಗಾಗಿ ತಪ್ಪದೆ ಮಹಿಳೆಯರು ಈ ಪ್ರಕ್ರಿಯೆಯನ್ನು ಪೂರ್ತಿಗೊಳಿಸಬೇಕು. ಇಲ್ಲವಾದಲ್ಲಿ ಗೃಹಲಕ್ಷ್ಮಿ ಯೋಜನೆಯ ಸಹಾಯಧನದಿಂದ ವಂಚಿತರಾಗುತ್ತಾರೆ.
ಸೇವಾ ಸಿಂಧು ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸುವಾಗ ದಾಖಲೆಗಳಾಗಿ ಕುಟುಂಬದ ಪಡಿತರ ಚೀಟಿ ಸಂಖ್ಯೆ, ಆಧಾರ್ ಕಾರ್ಡ್ ಸಂಖ್ಯೆ, ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯನ್ನು ಮಾತ್ರ ಕೇಳಲಾಗುತ್ತಿದೆ ಎಲ್ಲೂ ಕೂಡ ಬ್ಯಾಂಕ್ ಖಾತೆ ನಂಬರ್ ಅಥವಾ ವಿವರವನ್ನು ನಮೂದಿಸಲಾಗುತ್ತಿಲ್ಲ. ಹಾಗಾಗಿ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡುತ್ತಾರೆ ಎನ್ನುವುದು ಖಚಿತ.
ಅರ್ಜಿ ಸಲ್ಲಿಸಿದ್ದರು ಕೂಡ ನಿಮ್ಮ ಬ್ಯಾಂಕ್ ಶಾಖೆಗೆ ಹೋಗಿ ಆಧಾರ್ ಸೀಡಿಂಗ್ ಗಾಗಿ ಅರ್ಜಿ ಸಲ್ಲಿಸಿ, ನಿಮ್ಮ ಬ್ಯಾಂಕ್ ಖಾತೆಗೆ (Bank account ) ಆಧಾರ್ ಸೀಡಿಂಗ್ (Aadhar seeding) ಮತ್ತು NPCI ಮ್ಯಾಪಿಂಗ್ (NPCI Mapping) ಮಾಡಿಸಿ ಅಥವಾ ಆನ್ಲೈನ್ ನಲ್ಲೂ ಮೊಬೈಲ್ ಆಪ್ ಗಳ ಮೂಲಕ ಈ ಪ್ರಕ್ರಿಯೆ ಪೂರ್ತಿಗೊಳಿಸಲು ಅವಕಾಶವಿದೆ ತಪ್ಪದೆ ಮಾಡಿ.
0 Comments