ರೈತರಿಗಾಗಿ ಅನೇಕ ಯೋಜನೆಗಳನ್ನು ರೂಪಿಸಿರುವ ಸರ್ಕಾರವು ಶೂನ್ಯ ಬಡ್ಡಿ ದರದಲ್ಲಿ ಸಹಕಾರ ಸಂಘಗಳ ಮೂಲಕ ಸಾಲ ಸೌಲಭ್ಯ ನೀಡುತ್ತಿವೆ. ಕೃಷಿ ಭೂಮಿ ಹೊಂದಿರುವ ರೈತನು ತನ್ನ ಕೃಷಿ ಚಟುವಟಿಕೆಗಾಗಿ ಈ ರೀತಿ ಸಹಕಾರ ಸಂಘಗಳ ಮೂಲಕ ಅತಿ ಕಡಿಮೆ ದಾಖಲೆ ಪತ್ರಗಳನ್ನು ಸಲ್ಲಿಸುವ ಮೂಲಕ ಸಕಾಲಕ್ಕೆ ಸಾಲ ಪಡೆಯಬಹುದಾಗಿದೆ.
ಸಹಕಾರಿ ಸಂಘಗಳಲ್ಲಿ ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲಗಳನ್ನು ನೀಡಲಾಗುತ್ತಿದ್ದು ಇದರಲ್ಲಿ ಅಲ್ಪಾವಧಿ ಸಾಲಕ್ಕೆ ಶೂನ್ಯ ಬಡ್ಡಿದರ ನಿಗದಿ ಆಗಿರುತ್ತದೆ ಮತ್ತು ಇದನ್ನು ಒಂದು ವರ್ಷದ ಅವಧಿಯೊಳಗೆ ಪೂರ್ತಿಗೊಳಿಸಬೇಕಾಗುತ್ತದೆ ಮತ್ತು ಮಧ್ಯಮಾವತಿ ಹಾಗೂ ದೀರ್ಘಾವಧಿ ಸಾಲಗಳಿಗೆ 3% ಬಡ್ಡಿದರ ಮತ್ತು 10 ವರ್ಷಗಳವರೆಗೆ ಸಮಯಾವಕಾಶ ಇರುತ್ತದೆ.
ರೇಷನ್ ಕಾರ್ಡ್ ಇಲ್ಲದವರಿಗೆ ಗುಡ್ ನ್ಯೂಸ್.! ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವುದರ ಬಗ್ಗೆ ಮಾಹಿತಿ
ಆ ಅವಧಿಯಲ್ಲಿ ತೀರಿಸದೆ ಇದ್ದಾಗ ಬಡ್ಡಿದರ ಹೆಚ್ಚಳವಾಗುತ್ತಾ ಹೋಗುತ್ತದೆ ಹಾಗಾಗಿ ರೈತರೆಲ್ಲರೂ ಅಲ್ಪಾವಧಿ ಸಾಲವನ್ನು ಪಡೆದುಕೊಂಡು ಅದರ ಮೂಲಕ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುತ್ತಾರೆ. ಆದರೆ ಅಲ್ಪಾವಧಿ ಸಾಲದಲ್ಲಿ ಕೊಡುತ್ತಿರುವ ಸಾಲದ ಮೊತ್ತ ಕಡಿಮೆ ಇರುವುದರಿಂದ ಅದನ್ನು ಹೆಚ್ಚಿಸಬೇಕು ಎನ್ನುವುದು ರೈತರ ಆಶಯವಾಗಿದೆ.
2012-13ನೇ ಸಾಲಿನಲ್ಲಿ ಈ ರೀತಿ ಸಹಕಾರ ಸಂಘಗಳ ಮೂಲಕ ನೀಡುವ ಶೂನ್ಯ ಬಡ್ಡಿದರ ಸಾಲವನ್ನು ಒಂದು ಲಕ್ಷ ರೂಪಾಯಿಗೆ ಏರಿಸಲಾಯಿತು, ಅದರ ಮುಂದಿನ ವರ್ಷ 2013-14ನೇ ಸಾಲಿನಲ್ಲೂ ಕೂಡ ಈ ಸಾಲದ ಮಿತಿಯನ್ನು 2 ಲಕ್ಷ ರೂಪಾಯಿಗೆ ಏರಿಸಿ ರೈತರಿಗೆ ಸಿಹಿಸುದ್ದಿ ನೀಡಲಾಗಿತ್ತು.
2014-15 ಸಾಲಿನಲ್ಲಿ ಕೂಡ ಸತತ ಮೂರನೇ ಬಾರಿಗೆ ಈ ಮಿತಿಯನ್ನು 3 ಲಕ್ಷಕ್ಕೆ ಏರಿಸುವ ಮೂಲಕ ರೈತರ ಪಾಲಿಗೆ ಈ ಯೋಜನೆ ವರದಾನವಾಗಿತ್ತು. ಕೊನೆಯದಾಗಿ ಕಡೆಯ ವರ್ಷ ಈ ಯೋಜನೆ ಮಿತಿಯನ್ನು 5 ಲಕ್ಷಕ್ಕೆ ವಿಸ್ತರಿಸಲು BJP ಸರ್ಕಾರ ಎಲ್ಲಾ ರೀತಿ ಸಿದ್ಧತೆ ಮಾಡಿಕೊಂಡಿತ್ತು ಆದರೆ ಅಷ್ಟರಲ್ಲಿ ಚುನಾವಣೆ ನಡೆದು ನೂತನ ಸರ್ಕಾರ ಜಾರಿಗೆ ಬಂತು ಕಾಂಗ್ರೆಸ್ ಸರ್ಕಾರದ ಚುನಾವಣೆ ಪ್ರಣಾಳಿಕೆಯಲ್ಲೂ ಕೂಡ ಈ ವಿಷಯ ಪ್ರಸ್ತಾಪವಾಗಿತ್ತು.
ಒಂದೇ ಕುಟುಂಬದವರು ಎರಡು ಮೂರು ರೇಷನ್ ಕಾರ್ಡ್ ಪಡೆದವರಿಗೆ ಬಿಗ್ ಶಾ-ಕ್, ಸರ್ಕಾರದಿಂದ ಬಂದಿದೆ ಹೊಸ ರೂಲ್ಸ್.
ಹಾಗಾಗಿ ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹಕಾರ ಸಂಘಗಳ ಸಾಲದ ಮಿತಿ ಹೆಚ್ಚಳ ಮಾಡಿ ಈ ವಿಷಯವನ್ನು ಕೂಡ ತಮ್ಮ ಬಜೆಟ್ ಒಳಗೆ ಸೇರಿಸಿದ್ದಾರೆ. ರೈತರಿಗಾಗಿಯೇ ಘೋಷಿಸಿರುವ ಯೋಜನೆ ಇದಾಗಿತ್ತು ಈ ಬಾರಿ 2023-24ನೇ ಸಾಲಿನಲ್ಲಿ ರೈತರಿಗೆ ಸಹಕಾರಿ ಸಂಘಗಳಲ್ಲಿ ಶೂನ್ಯ ಬಡ್ಡಿ ದರದಲ್ಲಿ ಗರಿಷ್ಠ 5 ಲಕ್ಷದವರೆಗೆ ಅಲ್ಪಾವಧಿ ಸಾಲವನ್ನು ನೀಡಲಾಗುತ್ತಿದೆ ಯೋಜನೆಯ ಪ್ರಯೋಜನವನ್ನು ಪಡೆಯಲು ರೈತರು ಸಹಾ ಸಿದ್ಧವಾಗಿದ್ದಾರೆ.
ಆದರೆ ಇನ್ನೂ ಸಹ ಸಹಕಾರಿ ಸಂಘಗಳಿಗೆ ಇದಕ್ಕೆ ಬೇಕಾದ ನಿಧಿಯ ವರ್ಗಾವಣೆ ಆಗದೆ ಇರುವ ಕಾರಣಕ್ಕಾಗಿ ಯೋಜನೆ ಅನುಕೂಲತೆ ಪಡೆಯಲಾಗದೆ ರೈತರು ಈ ವಿಷಯದಲ್ಲಿ ಗೊಂದಲಕ್ಕೆ ಒಳಗಾಗಿದ್ದಾರೆ. ಸಹಕಾರ ಸಂಘಗಳು ಕೂಡ ತಮ್ಮ ಸ್ವಂತ ಹಣದಲ್ಲಿ ಇದನ್ನು ಮುಂದುವರಿಸುವುದಕ್ಕೆ ಹಿಂದೆಟು ಹಾಕುತ್ತಿದ್ದು ಸರ್ಕಾರದಿಂದ ನೆರವಿಗಾಗಿ ಕಾಯುತ್ತಿವೆ.
ಹಾಗಾಗಿ ರೈತರು ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ ಸದ್ಯದಲ್ಲಿಯೇ ಸರ್ಕಾರ ಕೂಡ ಹಣ ಬಿಡುಗಡೆ ಮಾಡಲಿದ್ದು ಬಜೆಟ್ ಅಲ್ಲಿ ಘೋಷಣೆ ಮಾಡಿದಂತೆಯೇ 2023-24ನೇ ಸಾಲಿನಿಂದ ಗರಿಷ್ಠ 5 ಲಕ್ಷದವರೆಗೆ ರೈತರು ಶೂನ್ಯ ಬಡ್ಡಿದರದಲ್ಲಿ ಅಲ್ಪಾವಧಿ ಸಾಲವನ್ನು ಪಡೆಯಲು ಇನ್ನು ಕೆಲವೇ ದಿನಗಳಲ್ಲಿ ಅವಕಾಶ ಸಿಗಲಿದೆ.
0 Comments