ಗೃಹಲಕ್ಷ್ಮಿ ಮೊದಲ ಕಂತಿನ 2,000ರೂ. ಇನ್ನೂ ಬಂದಿಲ್ವಾ.? ಎರಡು ಕಂತಿನ ಹಣ ಒಟ್ಟಿಗೆ ಬರಲು ಈ ರೀತಿ ಮಾಡಿ.!

ಗೃಹಲಕ್ಷ್ಮಿ ಮೊದಲ ಕಂತಿನ 2,000ರೂ. ಇನ್ನೂ ಬಂದಿಲ್ವಾ.? ಎರಡು ಕಂತಿನ ಹಣ ಒಟ್ಟಿಗೆ ಬರಲು ಈ ರೀತಿ ಮಾಡಿ.!


 ಆಗಸ್ಟ್ 30 ರಂದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ (Gruhalakshmi Scheme) ಹಣ ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡುವ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ಅಂದಿನಿಂದ ಹಂತ ಹಂತವಾಗಿ ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಂಡಿರುವ ಎಲ್ಲಾ ಅರ್ಹ ಮಹಿಳೆಯರು ಕೂಡ DBT ಮೂಲಕ ತಮ್ಮ ಬ್ಯಾಂಕ್ ಖಾತೆಗಳಿಗೆ ಸಹಾಯಧನ ಪಡೆದಿದ್ದಾರೆ Jewelry for the free-spirited you .

ಈಗಾಗಲೇ ಎರಡನೇ ಕಂತಿನ ಹಣ ಬಿಡುಗಡೆಗೆ ದಿನಗಣನೆ ಶುರುವಾಗಿದ್ದು ಸೆಪ್ಟೆಂಬರ್ ಅಂತ್ಯದ (2nd month money) ಒಳಗೆ ಎಲ್ಲರೂ ಎರಡನೇ ಕಂತಿನ ಹಣ ಕೂಡ ಪಡೆಯಲಿದ್ದಾರೆ ಎನ್ನುವ ಮಾಹಿತಿ ಇದೆ. ಆದರೆ ಇನ್ನು ಅನೇಕರಿಗೆ ಮೊದಲನೇ ಕಂತಿನ ಹಣವನ್ನೇ ಪಡೆಯಲು ಆಗಿಲ್ಲ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ ಮಂಜೂರಾತಿ ಪತ್ರ ಪಡೆದಿದ್ದರೂ ಕೂಡ ಅವರ ಖಾತೆಗೆ ಹಣ ಬಂದಿಲ್ಲ.


ಗೃಹಲಕ್ಷ್ಮಿ ಯೋಜನೆಯ 2ನೇ ಕಂತಿನ ಹಣ ಬಿಡುಗಡೆ.! ಮೊದಲನೇ ಕಂತಿನ ಹಣ ಬಂದಿದೆಯೋ, ಇಲ್ಲವೋ ಈ ರೀತಿಯಾಗಿ ಸ್ಟೇಟಸ್ ಚೆಕ್ ಮಾಡಿ

ಹಾಗಾದರೆ ಯಾವೆಲ್ಲ ತಪ್ಪುಗಳಿಂದ ಹಣ ಕೈತಪ್ಪಿರಬಹುದು ಎನ್ನುವುದರ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ನಿಮ್ಮ ದಾಖಲೆಗಳಲ್ಲಿ ಈ ರೀತಿ ಸಮಸ್ಯೆ ಇದ್ದರೆ ಕೂಡಲೇ ಸರಿಪಡಿಸಿಕೊಂಡು ಮತ್ತೊಮ್ಮೆ ಅರ್ಜಿ ಸಲ್ಲಿಸಿ.

● ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ (Women and Child welfare department) ಅಧಿಕಾರಿಗಳೇ ಮಾಹಿತಿ ಕೊಟ್ಟಿರುವ ಪ್ರಕಾರ ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಂಡು ಅರ್ಹರಾಗಿರುವ 7-8 ಲಕ್ಷ ಮಹಿಳೆಯರ ಬ್ಯಾಂಕ್ ಖಾತೆಗಳಲ್ಲಿ (bank account problem) ಸಮಸ್ಯೆಗಳಾಗಿವೆಯಂತೆ.

ಕೆಲವರ ಖಾತೆಗಳು ಓಪನ್ ಆಗಿ ಹಲವು ವರ್ಷಗಳಾಗಿದ್ದು ಹಣ ವಹಿವಾಟು ನಡೆಯದ ಕಾರಣ ಅವುಗಳು ಲಾಕ್ (account inactive) ಆಗಿವೆ, ಇನ್ನು ಕೆಲವು ಮಹಿಳೆಯರ ಖಾತೆಗಳಿಗೆ ಆಧಾರ್ ಸೀಡಿಂಗ್ NPCI ಮ್ಯಾಪಿಂಗ್ (aadhar Seeding NPCI Mapping) ಆಗಿಲ್ಲ, ಹಾಗಾಗಿ ಕುಟುಂಬದ ಮುಖ್ಯಸ್ಥರ ಖಾತೆ ಆಕ್ಟೀವ್ ಆಗಿದೆಯೇ ಎಂದು ಪರಿಶೀಲಿಸಿಕೊಳ್ಳಿ.



ರೈತರಿಗೆ ಬಡ್ಡಿ ಇಲ್ಲದೆ 5 ಲಕ್ಷದವರೆಗೆ ಸಾಲ ನೀಡುವುದಾಗಿ ಅಧಿಕೃತ ಆದೇಶ ಹೊರಡಿಸಿದ ಸರ್ಕಾರ.! ಅರ್ಜಿ ಸಲ್ಲಿಸೋದು ಹೇಗೆ ಬೇಕಾಗುವ ದಾಖಲೆಗಳೇನು ನೋಡಿ



ಒಂದು ವೇಳೆ ಇದರಲ್ಲಿ ಸಮಸ್ಯೆ ಇದ್ದರೆ ಕೂಡಲೇ ಆ ಬ್ಯಾಂಕ್ ಶಾಖೆಗೆ ಭೇಟಿ ಕೊಟ್ಟು, ದಾಖಲೆಗಳ ಜೊತೆ ಅರ್ಜಿ ಸಲ್ಲಿಸಿ ಸಮಸ್ಯೆ ಸರಿಪಡಿಸಿಕೊಂಡರೆ ಅಂತಹ ಫಲಾನುಭವಿಗಳ ಒಟ್ಟಿಗೆ ಎರಡು ತಿಂಗಳ ಹಣವು ವರ್ಗಾವಣೆ ಆಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


● ಮತ್ತೊಂದು ಮುಖ್ಯವಾದ ಸಮಸ್ಯೆ ಎಂದರೆ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಮೂರರಲ್ಲಿ ಕೂಡ ಕುಟುಂಬದ ಮುಖ್ಯಸ್ಥೆಯ ಹೆಸರು ಒಂದೇ ರೀತಿ ಇರಬೇಕು (name mismatch at documents) ಉದಾಹರಣೆಗೆ, ಆಧಾರ್ ಕಾರ್ಡ್ ನಲ್ಲಿ ಉಮಾ ಮಹೇಶ್ವರಿ ಎಂದು ಇದ್ದರೆ ರೇಷನ್ ಕಾರ್ಡ್ ನಲ್ಲಿ ಉಮಾ ಎಂದು ಇರುತ್ತದೆ ಮತ್ತು ಬ್ಯಾಂಕ್ ಪಾಸ್ ಬುಕ್ ನಲ್ಲಿ ಉಮಾಮಹೇಶ್ವರಿ. ಎಸ್ ಎಂದು ಇನಿಷಿಯಲ್ ಸಮೇತ ಇರುತ್ತದೆ.

ಈ ರೀತಿ ಸಮಸ್ಯೆ ಇದ್ದವರು ಎಲ್ಲಾ ದಾಖಲೆಗಳನ್ನು ಒಂದೇ ರೀತಿ ಹೆಸರು ಇರುವಂತೆ ತಿದ್ದುಪಡಿ (Correction) ಮಾಡಿಸಿಕೊಂಡು ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕು ಆಗ ಮಾತ್ರ ಅವರ ಖಾತೆಗೆ ಹಣ ವರ್ಗಾವಣೆಯಾಗಲು ಸಾಧ್ಯವಾಗುತ್ತದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
● ಈ ಮೇಲೆ ತಿಳಿಸಿದ ಎಲ್ಲಾ ದಾಖಲೆಗಳು ಸರಿ ಇದ್ದರೂ ಕೂಡ ಹಣ ವರ್ಗಾವಣೆ ಆಗಿಲ್ಲ ಎಂದರೆ ನಿಮ್ಮ ರೇಷನ್ ಕಾರ್ಡ್ ಸ್ಥಿತಿ ಸಕ್ರಿಯವಾಗಿದೆ ಎನ್ನುವುದನ್ನು ಪರಿಶೀಲಿಸಿಕೊಳ್ಳಬೇಕು. ಜೊತೆಗೆ ನಿಮ್ಮ ರೇಷನ್ ಕಾರ್ಡ್ ಇ-ಕೆವೈಸಿ (Ration card e-kyc ) ಆಗಿದೆಯೇ ಎನ್ನುವುದನ್ನು ಧೃಡಪಡಿಸಿಕೊಳ್ಳಬೇಕು.

. ರೇಷನ್ ಕಾರ್ಡ್ ಇ-ಕೆವೈಸಿ ಅಪ್ಡೇಟ್ ಆಗದೆ ಇದ್ದ ಕಾರಣ ದಿಂದಲೂ ನಿಮ್ಮ ಅರ್ಜಿ ತಿರಸ್ಕೃತವಾಗಿರಬಹುದು ಹಾಗಾಗಿ ಹತ್ತಿರದ ಸೇವಾ ಕೇಂದ್ರ ಅಥವಾ ನ್ಯಾಯಬೆಲೆ ಅಂಗಡಿಗೆ ಹೋಗಿ ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ಮತ್ತು ಬಯೋಮೆಟ್ರಿಕ್ (Aadharcard and biometric ) ಮಾಹಿತಿ ಕೊಟ್ಟು ರೇಷನ್ ಕಾರ್ಡ್ ಇ-ಕೆವೈಸಿ ಮಾಡಿಸಿ

Post a Comment

0 Comments