ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತದ (RGRHCL) ವತಿಯಿಂದ ಮುಖ್ಯಮಂತ್ರಿಗಳ ಬಹು ಮಹಡಿ ಬೆಂಗಳೂರು ವಸತಿ ಯೋಜನೆಯಡಿ (CM 1 lakh housing scheme) ಬೆಂಗಳೂರಿನಲ್ಲಿ (Bangalore) ಬೆಂಗಳೂರು ಪೂರ್ವ, ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಆನೇಕಲ್ ಮತ್ತು ಯಲಹಂಕ ವಿಧಾನಸಭಾ ಕ್ಷೇತ್ರದ ಹಲವು ಗ್ರಾಮಗಳಲ್ಲಿ ಬಹು ಮಹಡಿ ವಸತಿಗಳನ್ನು ನಿರ್ಮಿಸಿ ಬಡವರಿಗೆ ಹಂಚಲಾಗುತ್ತಿದೆ.
300×400sq.ft ವಿಸ್ತೀರ್ಣದ 1BHK ಮನೆಗಳಾಗಿದ್ದು ನೀವು ಒಂದು ಲಕ್ಷ ಹಣ ಪಾವತಿ (booking by pay 1 lakh) ಮಾಡುವ ಮೂಲಕ ಬುಕಿಂಗ್ ಮಾಡಿಕೊಳ್ಳಬಹುದು. https://ashraya.karnataka.gov.in ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ನೀವು ಈ ಯೋಜನೆಯಡಿ ನಿರ್ಮಾಣವಾಗುತ್ತಿರುವ ವಸತಿಗೃಹಗಳ ವಿನ್ಯಾಸವನ್ನು ನೋಡಬಹುದು ಮತ್ತು ಯೋಜನೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಕೂಡ ಪಡೆಯಬಹುದು.
ಮೊಬೈಲ್ ಟವರ್ ಸ್ಥಾಪಿಸಲು ಜಾಗ ಕೊಡಿ, ತಿಂಗಳಿಗೆ ಲಕ್ಷಗಟ್ಟಲೇ ಆದಾಯ ಗಳಿಸಿ.
ಇದರ ಜೊತೆಗೆ ಈ ಅಂಕಣದಲ್ಲೂ ಸಹ ಯೋಜನೆಯ ಕುರಿತು ಕೆಲ ಪ್ರಮುಖ ಅಂಶಗಳ ಬಗ್ಗೆ ತಿಳಿಸುತ್ತಿದ್ದೇವೆ. ಈ ಯೋಜನೆ ಪ್ರಮುಖ ಆಕರ್ಷಣೆ ವಿಷಯವೇನೆಂದರೆ 5 ಲಕ್ಷ ಹಣಕ್ಕೆ ಮಧ್ಯಮ ವರ್ಗದ ಕುಟುಂಬವೊಂದು ಸುಲಭವಾಗಿ ಮನೆ ಪಡೆಯಬಹುದಾಗಿದೆ. 1 ಲಕ್ಷ ಆರಂಭಿಕ ಮೊತ್ತದ ಹಣವನ್ನು ಪಾವತಿ ಮಾಡಿದ ನಂತರ 4 ಲಕ್ಷ ಹಣವು ಸರ್ಕಾರ ವತಿಯಿಂದಲೇ ಲೋನ್ (easy loan by government) ಆಗಿ ಸಿಗುತ್ತದೆ.
ಆಧಾರ್ ಕಾರ್ಡ್, ರೇಷನ್ ಕಾರ್ಡ್ ಹಾಗೂ ವಿಳಾಸ ಪುರಾವೆ ಮತ್ತಿತರ ದಾಖಲೆಗಳನ್ನು ನೀಡುವ ಮೂಲಕ ಈ ಯೋಜನೆಗೆ ಅರ್ಜಿ ಸಲ್ಲಿಸಿ ನೋಂದಣಿ ಮಾಡಿಕೊಳ್ಳಬಹುದು. ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬಹುದಾಗಿದ್ದು ಪ್ರತಿಯೊಂದು ಹಂತದಲ್ಲೂ ಕೂಡ ಆನ್ಲೈನ್ ಮೂಲಕವೇ ವ್ಯವಹಾರ ನಡೆಯುತ್ತದೆ.
ಇದರಿಂದ ಆಗುವ ಮತ್ತೊಂದು ಲಾಭವೇನೆಂದರೆ, ಯಾವುದೇ ಮಧ್ಯವರ್ತಿಯ ಕಾಟ ಇರುವುದಿಲ್ಲ ಮತ್ತು ಮಧ್ಯವರ್ತಿಗಳಿಂದ ಮೋ’ಸ ಹೋಗುವ ಅಥವಾ ಅವರಿಗೆ ಕಮಿಷನ್ ನೀಡುವ ಸಮಸ್ಯೆಯು ತಪ್ಪುತ್ತದೆ. ಖಜಾನೆ ಪೇಮೆಂಟ್ಸ್ (Pay amount through Khajane payments) ಮೂಲಕ ನೀವು ಹಣವನ್ನು ಪಾವತಿ ಮಾಡಬಹುದು.
ಪ್ರತಿಯೊಂದಕ್ಕೂ ನಿಮಗೆ ದಾಖಲೆ ಕೂಡ ಸಿಗುತ್ತದೆ. ಒಂದೊಂದು ಟವರ್ ನಲ್ಲು 250 ಮನೆಗಳಿದ್ದು, ಒಂದು ಪ್ರದೇಶದಲ್ಲಿ 7-8 ಟವರ್ ಗಳು ತಲೆ ಎತ್ತುತ್ತಿವೆ. ಪ್ರತಿಯೊಂದು ಮನೆಯು ಕೂಡ ಗಾಳಿ, ನೀರು, ಬೆಳಕು ಮತ್ತು ಇತರ ಎಲ್ಲ ಮೂಲಭೂತ ಸೌಕರ್ಯಗಳಿಂದ ಕೂಡಿದೆ.
ಕುರಿ ಅಥವಾ ಧನದ ಕೊಟ್ಟಿಗೆ ನಿರ್ಮಾಣಕ್ಕೆ ಗ್ರಾಮಪಂಚಾಯತ್ ನಿಂದ ಸಹಾಯಧನ
ಈ ಮೇಲೆ ತಿಳಿಸಿದಂತೆ 1BHK ಮನೆ ಇದಾಗಿತ್ತು, ಕಿಚನ್ ಮತ್ತು ಕಿಚನ್ ಪಕ್ಕ ಯುಟಿಲಿಟಿ, ಸಪರೇಟ್ ಆದ ವಾಶಂ ಹಾಗು ಟಾಯ್ಲೆಟ್ ದೊಡ್ಡದಾಗ ಲಿವಿಂಗ್ ರೂಮ್ ಹಾಗೂ ಒಂದು ಬೆಡ್ರೂಮ್ ಅನ್ನು ಒಳಗೊಂಡಿದೆ. ಬಾಲ್ಕನಿ, ಕಾಲಿಡಾರ್, ಲಿಫ್ಟ್ ವ್ಯವಸ್ಥೆ ಎಲ್ಲವೂ ಕೂಡ ಇದ್ದು ಸಮುದಾಯವಾಗಿ ಬದುಕುವುದಕ್ಕೆ ಅಚ್ಚುಕಟ್ಟಾದ ವ್ಯವಸ್ಥೆಯಂತೆ ರೂಪುಗೊಳ್ಳುತ್ತಿದೆ.
ಟವರ್ ಗಳನ್ನು ಹೊರತುಪಡಿಸಿ ವಿಲ್ಲಾ ರೂಪದಲ್ಲೂ ಕೂಡ ಮನೆಗಳು ನಿರ್ಮಾಣ ಆಗುತ್ತಿವೆ. ಈಗ ನಿರ್ಮಾಣ ಹಂತದಲ್ಲಿ ಇದ್ದು ಇನ್ನು ಆರು ತಿಂಗಳೊಳಗೆ ಇದು ವಿತರಣೆಗೂ ರೆಡಿ ಆಗುವಷ್ಟು ಶೀಘ್ರವಾಗಿ ನಿರ್ಮಾಣ ಕಾರ್ಯ ನಡೆಯುತ್ತಿದೆ. ಬೆಂಗಳೂರಿನಂತಹ ಮಹಾನಗರದಲ್ಲಿ ಇಷ್ಟು ಕಡಿಮೆ ಬೆಲೆಗೆ ಅಪಾರ್ಟ್ಮೆಂಟ್ ನಲ್ಲಿ ಮನೆ ಸಿಗವುದು ಬಹಳ ದೊಡ್ಡ ವಿಚಾರವಾಗಿದ್ದು, ಸರ್ಕಾರವೇ ಬಡವರಿಗೆ ಆಶ್ರಯ ಕಟ್ಟಿ ಕೊಡುವ ಸಲುವಾಗಿ ಈ ರೀತಿ ಯೋಜನೆಯನ್ನು ನಿರ್ಮಿಸಿದೆ.
ಬೆಂಗಳೂರಿನ ಹಲವು ವಿಭಾಗಗಳಲ್ಲಿ ಈ ರೀತಿ ಮನೆ ನಿರ್ಮಾಣವಾಗುತ್ತಿದ್ದು ನಿಮ್ಮ ಅನುಕೂಲದ ಸ್ಥಳ ಆರಿಸಿಕೊಂಡು ನೀವು ಈ ಯೋಜನೆ ಮೂಲಕ ಸ್ವಂತ ಮನೆ ಕನಸನ್ನು ನನಸಾಗಿಸಿಕೊಳ್ಳಬಹುದು. ಇದು ಬೆಂಗಳೂರಿಗರಿಗೆ ಉಪಯುಕ್ತವಾಗುವ ಮಾಹಿತಿ ಆಗಿದ್ದು ತಪ್ಪದೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೆ ಮಾಹಿತಿ ಹಂಚಿಕೊಳ್ಳಿ.
0 Comments