ಮೊಬೈಲ್ ಟವರ್ ಸ್ಥಾಪಿಸಲು ಜಾಗ ಕೊಡಿ, ತಿಂಗಳಿಗೆ ಲಕ್ಷಗಟ್ಟಲೇ ಆದಾಯ ಗಳಿಸಿ.

ಮೊಬೈಲ್ ಟವರ್ ಸ್ಥಾಪಿಸಲು ಜಾಗ ಕೊಡಿ, ತಿಂಗಳಿಗೆ ಲಕ್ಷಗಟ್ಟಲೇ ಆದಾಯ ಗಳಿಸಿ.




ಹಣ ಮಾಡಬೇಕು ಅಂದರೆ ಶ್ರಮ ಬೇಕೇ ಬೇಕು. ಆದರೆ ಈಗಿನ ಕಾಲದಲ್ಲಿ ಬುದ್ಧಿಶಕ್ತಿ ಇದ್ದರೆ ಸಾಕು, ಹಣ ಮಾಡಬಹುದು. ನಮಗಿರುವ ಬುದ್ಧಿವಂತಿಕೆ ಉಪಯೋಗಿಸಿ ನಮ್ಮ ಬಳಿ ಇರುವ ಹಣ ಅಥವಾ ಆಸ್ತಿಯನ್ನು ಒಂದೊಳ್ಳೆ ಕಡೆ ಹೂಡಿಕೆ ಮಾಡಿದರೆ ಸಾಕು ಪ್ರತಿ ತಿಂಗಳು ಒಂದು ನಿಶ್ಚಿತ ಆದಾಯ ಬರುವಂತಹ ಉದ್ಯಮ ಆರಂಭಿಸಬಹುದು.






ನಮ್ಮ ಇಚ್ಛೆಯ ನಮ್ಮ ಕನಸಿನ ಸ್ವಂತ ಉದ್ಯೋಗ ಆರಂಭಿಸಿ ಅದನ್ನು ದೊಡ್ಡ ಮಟ್ಟಕ್ಕೆ ಬೆಳೆಸಿ ಒಂದಷ್ಟು ಉದ್ಯೋಗ ಸೃಷ್ಟಿಸಿ ಕೆಲವು ಕುಟುಂಬಕ್ಕಾದರೂ ನೆರವಾಗಬೇಕು ಎನ್ನುವುದು ಅನೇಕರ ಕನಸು. ಇದಕ್ಕಾಗಿ ಬುದ್ಧಿವಂತಿಕೆ ಶ್ರಮ ನಿರಂತರತೆ ಜೊತೆ ಬಂಡವಾಳದ ಅವಶ್ಯಕತೆಯೂ ಇರುತ್ತದೆ.


ಕುರಿ ಅಥವಾ ಧನದ ಕೊಟ್ಟಿಗೆ ನಿರ್ಮಾಣಕ್ಕೆ ಗ್ರಾಮಪಂಚಾಯತ್ ನಿಂದ ಸಹಾಯಧನ



ಆದರೆ ಇನ್ನೂ ಒಂದು ವರ್ಗವಿದೆ ಇವರು ಯಾವುದೇ ರೀತಿ ಶ್ರಮ ಪಡದೆ ತಿಂಗಳಿಗೆ ಲಕ್ಷ ಆದಾಯ ಕಳಿಸುತ್ತಾರೆ. ಇದಕ್ಕೆ ಹೂಡಿಕೆ ಎನ್ನುತ್ತಾರೆ. ಕೆಲವೊಮ್ಮೆ ಹಣವನ್ನು ಈ ರೀತಿ ಎಲ್ಲಾದರೂ ಹೂಡಿಕೆ ಮಾಡಿ ಬರುವ ಬಡ್ಡಿಯ ಮೂಲಕ ಲಾಭ ಮಾಡುತ್ತಾರೆ. ಇದಕ್ಕೆ ಹಣ ಬೇಕು, ಆದರೆ ಹಣದ ಹೊರತಾಗಿ ಇದಕ್ಕೆ ಅವಕಾಶ ಇದೆ. ಆಸ್ತಿಯನ್ನು ಕೂಡ ಹೂಡಿಕೆಯನ್ನಾಗಿ ಉಪಯೋಗಿಸಬಹುದು ಆದರೆ ಸ್ವಲ್ಪ ವಿಭಿನ್ನವಾಗಿರುತ್ತದೆ.


ಸ್ಪಷ್ಟವಾಗಿ ಹೇಳಬೇಕು ಎಂದರೆ ಈ ಉದಾಹರಣೆಯನ್ನು ನೋಡಿ. ನೀವು ನಿಮ್ಮ ಮನೆಯ ಮೇಲೆ 500 ಚದರ ಅಡಿ ಜಾಗ ಹೊಂದಿದ್ದರೆ ಅಥವಾ ನಿಮಗೆ ಸ್ವಂತವಾದ ಜಮೀನು ಅಥವಾ ಸೈಟ್ ಇದ್ದರೆ ಅದನ್ನು ಟೆಲಿಕಾಂ ಕಂಪನಿಗಳಿಗೆ ಟವರ್ ನಿರ್ಮಾಣ ಮಾಡುವುದಕ್ಕೆ ನೀಡಿ ನೀವು ಬಾಡಿಗೆ ರೂಪದಲ್ಲಿ ಹಣ ಪಡೆಯಬಹುದು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನೀವೇ ಮೊಬೈಲ್ ಟವರ್ ಕೂಡ ನಿರ್ಮಾಣ ಮಾಡಿ ಚಾರ್ಜ್ ಮಾಡಬಹುದು.



ಎಲ್ಲಾ ರೈತರಿಗೂ ಗುಡ್ ನ್ಯೂಸ್. ಕುರಿ, ಕೋಳಿ, ಹಸು, ಎಮ್ಮೆ ಸಾಕಾಣಿಕೆಗೆ ಸರ್ಕಾರದಿಂದ 10 ಲಕ್ಷ ಸಾಲ 3 ಸಬ್ಸಿಡಿ ಉಚಿತ ಆಸಕ್ತರು ಅರ್ಜಿ ಸಲ್ಲಿಸಿ




ಮೊಬೈಲ್ ಟವರ್ ಸ್ಥಾಪನೆಯನ್ನು ಎರಡು ರೀತಿ ಮಾಡಬಹುದು. ಈ ಮೇಲೆ ತಿಳಿಸಿದಂತೆ ಮನೆ ಮೇಲ್ಛಾವಣಿ ಮೇಲೆ ಅಥವಾ ಜಮೀನು ಅಥವಾ ಸೈಟ್ಗಳಲ್ಲಿ. ಆದರೆ ನೀವು ನಿರ್ಮಾಣ ಮಾಡುವ 100 ಚದರ ಮೀಟರ್ ಆಸು ಪಾಸಿನಲ್ಲಿ ಯಾವುದೇ ಆಸ್ಪತ್ರೆ ಶಾಲೆ ಇರಬಾರದು. ಒಂದು ವೇಳೆ ಮನೆ ಮೇಲೆ ಮೊಬೈಲ್ ಟವರ್ ನಿರ್ಮಾಣ ಮಾಡುವುದಾದರೆ ಸಂಬಂಧ ಪಟ್ಟ ಇಲಾಖೆಗಳಿಗೆ ಹೋಗಿ ಸುರಕ್ಷಿತ ಪ್ರಮಾಣ ಪತ್ರವನ್ನು ಕೂಡ ಪಡೆದುಕೊಳ್ಳಬೇಕು.






ಯಾವ ಜಾಗದಲ್ಲಿ ಮೊಬೈಲ್ ಟವರ್ ಸ್ಥಾಪಿಸುತ್ತಿದ್ದೀರಿ ಅದರ ಎತ್ತರ ಗಾತ್ರ ಸಾಮರ್ಥ್ಯ ಎಷ್ಟಿದೆ, ಯಾವ ಖಂಪನಿ ಎನ್ನುವುದರ ಮೇಲೆ ನಿಮ್ಮ ಲಾಭ ನಿರ್ಧಾರ ಆಗುತ್ತದೆ. ಕನಿಷ್ಠ 10 ಸಾವಿರದಿಂದ ಒಂದು ಲಕ್ಷದವರೆಗೂ ಕೂಡ ಆದಾಯ ಮಾಡಬಹುದು. ಗ್ರಾಮೀಣ ಪಟ್ಟಣ ನಗರ ಹೀಗೆ ಯಾವ ಪ್ರದೇಶದಲ್ಲಿ ಇದೆ ಎನ್ನುವುದರ ಮೇಲೆ ನಿರ್ಧಾರವಾಗುತ್ತದೆ.


ನಿಮಗೆ ಮೊಬೈಲ್ ಟವರ್ ನಿರ್ಮಿಸುವುದಕ್ಕೆ ಒಪ್ಪಿಗೆ ಇದೆ ಎನ್ನುವುದಾದರೆ ಸಂಬಂಧಿಸಿದ ಟೆಲಿಕಾಂ ಕಂಪನಿಗಳಿಗೆ ಹೋಗಿ ವಿಚಾರಿಸಬಹುದು, ಅದಕ್ಕಿರುವ ಮಾರ್ಗ ಸೂಚಿಗಳನ್ನು ಅವರು ತಿಳಿಸುತ್ತಾರೆ. ನೀವು ಒಪ್ಪಿ ಒಪ್ಪಂದ ಮಾಡಿಕೊಂಡರೆ ಅಧಿಕಾರಿಗಳು ಬಂದು ಸ್ಥಳ ಪರಿಶೀಲನೆ ನಡೆಸಿ ನಂತರ ನಿಮ್ಮ ಅರ್ಜಿಯನ್ನು ಅನುಮೋದನೆ ಮಾಡಿ ಒಪ್ಪಿಗೆ ಹಾಗೂ ಬೆಂಬಲ ನೀಡುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಟೆಲಿಕಾಂ ಕಂಪನಿ ಕಚೇರಿಗೆ ಭೇಟಿ ಕೊಡಿ. ಸದ್ಯಕ್ಕೆ ಜಿಯೋ ಟೆಲಿಕಾಂ ಕಂಪನಿಯು ಮೊಬೈಲ್ ಟವರ್ ಸ್ಥಾಪಿಸಲು ಆಸಕ್ತಿ ಹೊಂದಿರುವವರಿಗೆ ಅವಕಾಶ ನೀಡುತ್ತಿದೆ.



 

Post a Comment

0 Comments