ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ (Gyarantee Scheme) ಒಂದಾದ ಗೃಹಲಕ್ಷ್ಮಿ ಯೋಜನೆಯ (Gruhalakshmi Scheme) ಮೂಲಕ ಕರ್ನಾಟಕದಲ್ಲಿ ಪಡಿತರ ಚೀಟಿ ಹೊಂದಿರುವ ಎಲ್ಲಾ ಮಹಿಳೆಯರು ಕೂಡ ಪ್ರತಿ ತಿಂಗಳು ಸರ್ಕಾರದಿಂದ 2000ರೂ. ಸಹಾಯಧನ ಪಡೆಯಬಹುದು.
ಈಗಾಗಲೇ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಂಡಿದ್ದ ಬಹುತೇಕ ಮಹಿಳೆಯರು ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ತಮ್ಮ ಮೊದಲನೇ ಕಂತಿನ ಹಣವನ್ನು (1st month amount) ಪಡೆದಿದ್ದಾರೆ ಮತ್ತು ಈಗ ಅಕ್ಟೋಬರ್ ತಿಂಗಳು ಬಂದಿರುವುದರಿಂದ ಎರಡನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ.
ಗಂಡು ಸಂತಾನ ಬೇಕು ಅಂದ್ರೆ ಈ ರೀತಿ ಮಾಡಿ, ಜ್ಯೋತಿಷ್ಯ ಶಾಸ್ತ್ರದ ಸೂಚನೆಯಂತೆ ಗಂಡ ಹೆಂಡತಿ ಸೇರಿದರೆ ತಾವು ಅಂದುಕೊಂಡ ಮಗು ಪಡೆಯಬಹುದು
ಅವರಿಗೆಲ್ಲ ಸಿಹಿ ಸುದ್ದಿ ಇದೆ ಅದೇನೆಂದರೆ ಗೃಹಲಕ್ಷ್ಮಿ ಯೋಜನೆಯ ಮೊದಲನೇ ಕಂತಿನ ಹಣವನ್ನು ಪಡೆದಿದ್ದ ಮಹಿಳೆಯರಲ್ಲಿ ಹಲವರು ಅಕ್ಟೋಬರ್ ತಿಂಗಳಿನಲ್ಲಿ ಎರಡನೇ ಕಂತಿನ ಹಣವನ್ನು (2nd month amount) ಕೂಡ ಪಡೆದಿದ್ದಾರೆ.
ಮೊದಲನೇ ಕಂತಿನ ಹಣ ಬಿಡುಗಡೆ ಆದ ಮೇಲೆ ಎರಡನೇ ಕಂತಿನ ಹಣ ಬಿಡುಗಡೆ ಮಾಡಲು ಸರ್ಕಾರ ಬಹಳ ಸಮಯ ತೆಗೆದುಕೊಂಡಿತ್ತು, ಯಾಕೆಂದರೆ ಆಹಾರ ಮತ್ತು ಮಹಿಳಾ ಕಲ್ಯಾಣ ಇಲಾಖೆ ಮಾಹಿತಿ ಪ್ರಕಾರ ಸಂಪೂರ್ಣವಾಗಿ ಎಲ್ಲರೂ ಕೂಡ ಮೊದಲನೇ ಕಂತಿನ ಹಣವನ್ನು ಪಡೆದಿರಲಿಲ್ಲ.
Beauty Tips | ತ್ವಚೆಯ ಹೊಳಪಿಗೆ ಉತ್ತಮ ಟಿಪ್ಸ್ ಗಳು | Best tips for glowing skin
ಕೆಲವರು ರೇಷನ್ ಕಾರ್ಡ್ ಇ-ಕೆವೈಸಿ (e-kyc) ಅಪ್ಡೇಟ್ ಮಾಡಿಸದ ಕಾರಣ, ಕೆಲವರ ಬ್ಯಾಂಕ್ ಖಾತೆಗಳು ಸಕ್ರಿಯವಾಗಿರದ (Bank account in active) ಕಾರಣ, ಇನ್ನೂ ಕೆಲವರ ಬ್ಯಾಂಕ್ ಖಾತೆಗಳಿಗೆ ಆಧಾರ್ ಕಾರ್ಡ್ ಸೀಡಿಂಗ್ ಮತ್ತು NPCI ಮ್ಯಾಪಿಂಗ್ ಆಗಿರದ (Adhar seeding NPCI Mapping ) ಕಾರಣ ಮತ್ತು ರೇಷನ್ ಕಾರ್ಡ್ ಆಧಾರ್ ಕಾರ್ಡ್ ಹಾಗೂ ಪಾಸ್ ಬುಕ್ ನಲ್ಲಿ ಮಾಹಿತಿ ಒಂದೇ ರೀತಿ ಇರದ (proofs mismatch) ಕಾರಣ ಇಂತಹ ಸಮಸ್ಯೆಗಳಿಂದ ಅವರು ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲಾಗದೆ ವಂಚಿತರಾಗಿದ್ದರು.
ಎರಡನೇ ಕಂತಿನ ಹಳಬಿಡುಗಡೆಯಾದರೆ ಮೊದಲನೇ ಕಂತಿನ ಹಣ ಪಡೆಯದವರಿಗೆ ಆ ಹಣ ಪಡೆದುಕೊಳ್ಳಲು ಸಮಸ್ಯೆಯಾಗುತ್ತದೆ ಎಂದು ವಿಳಂಬ ಮಾಡಲಾಯಿತು. ತಿದ್ದುಪಡಿ ಮಾಡಿಸಿಕೊಳ್ಳಲು ಸರ್ಕಾರ ಕಾಲಾವಕಾಶವನ್ನು ಕೂಡ ನೀಡಿತ್ತು.
ಅದರಂತೆ ತಮ್ಮ ಸಮಸ್ಯೆಗಳನ್ನು ಸರಿಪಡಿಸಿಕೊಂಡ ಮಹಿಳೆಯರು ಈಗ ಮೊದಲನೇ ಕಂತಿನ ಜೊತೆ ಎರಡನೇ ಕಂತಿನ ಹಣವನ್ನು ಕೂಡ ಪಡೆಯಲಿದ್ದಾರೆ ಮತ್ತು ಈಗಾಗಲೇ ಮೊದಲನೇ ಕಂತಿನ ಹಣವನ್ನು ಪಡೆದ ಮಹಿಳೆಯರು ಎರಡನೇ ಕಂತಿನ ಹಣವನ್ನು ಈ ತಿಂಗಳಿನಲ್ಲಿ ಪಡೆಯುತ್ತಿದ್ದಾರೆ.
ನಿಮಗೆ ಇನ್ನು ಗೃಹಲಕ್ಷ್ಮಿ ಯೋಜನೆ ಹಣ ಬಂದಿಲ್ಲ ಎಂದರೆ ಮತ್ತೆ ಎಲ್ಲಾ ದಾಖಲೆಗಳು ಸರಿ ಇದೆ ಎಂದರೆ ಈಗ ನಾವು ಹೇಳುವ ಈ ಕೆಲಸ ಮಾಡಿ. ಪ್ರತಿ ತಾಲ್ಲೂಕಿನಲ್ಲೂ ಕೂಡ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ CDPO ಅಧಿಕಾರಿಗಳು ಇರುತ್ತಾರೆ. ಇವರ ಬಳಿ ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಗಳ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಪಟ್ಟಿ ಇರುತ್ತದೆ.
ನೀವು ನಿಮ್ಮ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಮತ್ತು ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿರುವ ಮಂಜುರಾತಿ ಪತ್ರದ ಜೊತೆ ಭೇಟಿ ಕೊಟ್ಟರೆ ಅವರು ಅದನ್ನು ಪರಿಶೀಲಿಸಿ ನೋಡಿ ಯಾವ ಸಮಸ್ಯೆಯಿಂದ ಹಣ ಬಂದಿಲ್ಲ ಎಂದು ಮಾಹಿತಿ ನೀಡುತ್ತಾರೆ. ತಕ್ಷಣವೇ ನೀವು ಈ ಸಮಸ್ಯೆಗಳನ್ನು ತಿದ್ದುಪಡಿ ಮಾಡಿಸಿಕೊಂಡರೆ ಮುಂದಿನ ಕಂತುಗಳ ಹಣವನ್ನಾದರೂ ಪಡೆಯಬಹುದು. ಆದ್ದರಿಂದ ವಿಳಂಬ ಮಾಡದೆ ಆದಷ್ಟು ಶೀಘ್ರವಾಗಿ ಈ ಎಲ್ಲ ದಾಖಲೆಗಳ ಜೊತೆ ಕಚೇರಿಗೆ ಭೇಟಿ ಕೊಟ್ಟು ಸಮಸ್ಯೆ ಬಗೆ ಹರಿಸಿಕೊಂಡು ಮುಂದಿನ ಕಂತುಗಳ ಹಣವನ್ನು ಪಡೆಯಿರಿ
0 Comments