ಈಗಾಗಲೇ ಅಡುಗೆ ಅನಿಲದ ಮೇಲೆ ದೇಶದ ಬಹುತೇಕ ಕುಟುಂಬಗಳು ಡಿಪೆಂಡ್ ಆಗಿವೆ. ಆದರೆ ಇದೇ ಸಮಯಕ್ಕೆ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯು ಗಗನಕ್ಕೇರಿದ್ದು ಬಡ ಹಾಗೂ ಮಧ್ಯಮ ವರ್ಗದವರಿಗೆ ಹೊರೆಯಾಗುತ್ತಿದೆ. ಸರ್ಕಾರ ಕೂಡ ಈ ಬಗ್ಗೆ ಗಮನಹರಿಸಿ ಸಬ್ಸಿಡಿ ನೀಡಲು ಪ್ರಯತ್ನಿಸುತ್ತಿದೆಯಾದರೂ ಇದರ ಜೊತೆಗೆ ಮತ್ತೊಂದು ಪರ್ಯಾಯ ಮಾರ್ಗವನ್ನು ಕಂಡುಹಿಡಿಯಲಾಗಿದೆ.
ಅದೇನೆಂದರೆ ನವೀಕರಿಸಬಹುದಾದ ಸಂಪನ್ಮೂಲಗಳ ಬಳಕೆಯಿಂದ ಒಳಾಂಗಣ ಅಡಿಕೆ ಸ್ಟವ್ ಪರಿಚಯಿಸಲಾಗುತ್ತಿದೆ. ಇದು ಹೊಸತೇನು ಅನಿಸದೆ ಹೋದರು ಈ ಬಾರಿಯಲ್ಲಿ ಕೆಲ ವಿಶೇಷಗಳಿದೆ. ಈಗಾಗಲೇ ಹಲವು ವರ್ಷದಿಂದ ಸೋಲಾರ್ ಸ್ಟೌ ಬಳಕೆ ಚಾಲ್ತಿಯಲ್ಲಿದ್ದು ಈ ಬಾರಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸಂಸ್ಥೆಯ ಸೋಲಾರ್ ಒಳಾಂಗಣ ಅಡುಗೆ ಸ್ಟವ್ ದೀಪಾವಳಿ ಹಬ್ಬದ ಪ್ರಯುಕ್ತವಾಗಿ ಮನೆಮನೆಗೂ ತಲುಪಿಸುವ ಪ್ರಯತ್ನಕ್ಕೆ ಕೈ ಹಾಕಿದೆ.
ಹನಿ ನೀರಾವರಿ ಅಳವಡಿಸಿಕೊಳ್ಳಲು ಸರ್ಕಾರದಿಂದ ಸಹಾಯಧನ.! ಆಸಕ್ತ ರೈತರು ಅರ್ಜಿ ಸಲ್ಲಿಸಿ
ಕಂಪನಿಯು ಈಗ ಒಂದು ಹೊಸ ಶೈಲಿಯ ಸ್ಟೌವ್ ಪರಿಚಯಿಸಿದ್ದು ಇದು ಸ್ಥಾಯಿ ಮತ್ತು ಪುನರ್ಭರ್ತಿ ಮಾಡಬಹುದಾದ ಒಳಂಗಣ ಅಡುಗೆ ಸ್ಟವ್ ಆಗಿದೆ. ಇದರ ಮೂಲಕ ಅಡುಗೆ ಮಾಡುವುದು ಎಷ್ಟು ಸರಳವೆಂದರೆ ಹೊಗೆ ಮುಕ್ತವಾದ ವಾತಾವರಣದಲ್ಲಿ ಮಹಿಳೆಯರಿಗೆ ಯೂವುದೇ ಮಾಲಿನ್ಯವಿಲ್ಲದೇ ಆರೋಗ್ಯಕರ ಹಾಗೂ ಸುರಕ್ಷಿತ ವಾತಾವರಣದಲ್ಲಿ ಮಹಿಳೆಯರು ಆಹಾರ ತಯಾರಿಬಹುದಾಗಿದೆ.
ಈ ಸ್ಟೌವ್ ನಲ್ಲಿ ಉರಿಯುವ, ಬೇಯಿಸುವ ಮತ್ತು ಹಬೆಯಾಡುವ ಆಹಾರ ಪದಾರ್ಥಗಳನ್ನು ಸುಲಭವಾಗಿ ತಯಾರಿಸಬಹುದು. ಸಿಂಗಲ್ ಬರ್ನರ್ ಮತ್ತು ಡಬಲ್ ಬರ್ನರ್ ರೂಪಾಂತರಗಳಲ್ಲಿ ಲಭ್ಯವಿರುವುದು ಮತ್ತೊಂದು ಪ್ಲಸ್ ಪಾಯಿಂಟ್ ಆಗಿದೆ. ಇದರ ಸಾಮರ್ಥ್ಯದ ಪರೀಕ್ಷೆ ಕೂಡ ನಡೆದಿದ್ದು ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ತಮ್ಮ ಅಧಿಕೃತ ನಿವಾಸದಲ್ಲಿ ಕಾರ್ಯಕ್ರಮವನ್ನು ಇದನಕ ಆಯೋಜಿಸಿದ್ದರು, ಅಲ್ಲಿ ಒಲೆಯ ಮೇಲೆ ಬೇಯಿಸಿದ ಊಟಗಳಿಗೆ ಸೂರ್ಯ ನೂತನ್ ಎಂದು ಹೆಸರಿಸಲಾಗಿದೆ.
ಈ ಸೋಲಾರ್ ಚಾಲಿತ ಸ್ಟೌವ್ ಗಳಿಂದ ಇರುವ ಮತ್ತಷ್ಟು ಉಪಯೋಗ ಏನೆಂದರೆ ಇದು ಯಾವುದೇ ಪಳೆಯುಳಿಕೆ ಇಂಧನ ಅಥವಾ ವಿದ್ಯುತ್ ಸಂಪರ್ಕ ಇಲ್ಲದೆ ಕಾರ್ಯನಿರ್ವಹಿಸುತ್ತದೆ. ಇದನ್ನು ಒಮ್ಮೆ ಖರೀದಿಸಿದರೆ ಸಾಕು ಮತ್ತೆ ಇದಕ್ಕಾಗಿ ಖರ್ಚು ಮಾಡುವ ಅಗತ್ಯವೇ ಬರುವುದಿಲ್ಲ, ಹಾಗಾಗಿ ಇದನ್ನು ಉಚಿತ ಎಂದು ಕೂಡ ಪರಿಗಣಿಸಬಹುದಾಗಿದೆ.
6-12ನೇ ತರಗತಿ ವಿದ್ಯಾರ್ಥಿಗಳಿಗೆ SBI ಫೌಂಡೇಶನ್ ವತಿಯಿಂದ 10,000 ಸ್ಕಾಲರ್ ಶಿಪ್, ಮೊಬೈಲ್ ಮೂಲಕವೇ ಅರ್ಜಿ ಸಲ್ಲಿಸಬಹುದು
ಸೂರ್ಯನ ಸಹಾಯದಿಂದ ಶಕ್ತಿಯನ್ನು ಸ್ಟೋರ್ ಮಾಡಿಕೊಂಡು ಸೌರಶಕ್ತಿ ಸಹಾಯಕ ಶಕ್ತಿಯಿಂದ ಇದು ರಾತ್ರಿ ಸಮಯದಲ್ಲಿ ಕಾರ್ಯ ನಿರ್ವಹಿಸುತ್ತದೆ ಹಾಗೂ ಹಗಲಿನ ಸಮಯದಲ್ಲಿ ಇನ್ನು ಹೆಚ್ಚು ಚುರುಕಾಗಿ ಕಾರ್ಯ ನಿರ್ವಹಿಸುತ್ತದೆ. ಈಗ ಕಂಪನಿಯು ಈ ಪ್ರಾಡಕ್ಟ್ ಬುಕಿಂಗ್ ಮಾಡಿಕೊಳ್ಳಲು ಮುಕ್ತ ಅವಕಾಶ ತೆರೆದಿದ್ದು ಈ ಸಮಯದಲ್ಲಿ ಬುಕಿಂಗ್ ಮಾಡಿಕೊಳ್ಳುವವರಿಗೆ ಹಬ್ಬದ ಪ್ರಯುಕ್ತ ಹೆಚ್ಚಿನ ರಿಯಾಯಿತಿಯನ್ನು ನೀಡುತ್ತಿದೆ.
ನೀವು ನಿಮ್ಮ ಹತ್ತಿರದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಕಚೇರಿಗೆ ಭೇಟಿ ಕೊಟ್ಟು ಹೆಚ್ಚಿನ ಮಾಹಿತಿ ಪಡೆಯಬಹುದು ಅಥವಾ ಆನ್ಲೈನ್ ಮೂಲಕ ಖರೀದಿಸುವುದಾದರೆ ಆನ್ಲೈನ್ ಮೂಲಕವೇ ಬುಕಿಂಗ್ ಮಾಡಿಕೊಳ್ಳಬಹುದು. ಇದರ ಕುರಿತಾಗಿ ಇನ್ನು ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ IOC ಅಧಿಕೃತ ವೆಬ್ ಸೈಟ್ ಗೆ ಭೇಟಿ ಕೊಡಿ.
ಸೋಲಾರ್ ಸ್ಟೌವ್ ಬುಕ್ಕಿಂಗ್ ಮಾಡಲು ಬೇಕಾಗುವ ದಾಖಲೆಗಳು:-
● ಅರ್ಜಿದಾರರ ಇ-ಮೇಲ್ ವಿಳಾಸ
● ಮೊಬೈಲ್ ಸಂಖ್ಯೆ
●ಜಿಲ್ಲೆ ಮತ್ತು ರಾಜ್ಯದ ಹೆಸರು
● ಕುಟುಂಬದಲ್ಲಿ ಎಷ್ಟು ಸದಸ್ಯರಿದ್ದಾರೆ ಎನ್ನುವುದರ ವಿವರ
● ಈ ಮೇಲಿನ ಮಾಹಿತಿಗಳೊಂದಿಗೆ ವರ್ಷಕ್ಕೆ ಎಷ್ಟು ಗ್ಯಾಸ್ ಬಳಸುತ್ತಿದ್ದೀರಿ ಸೌರಫಲಕ ಜೋಡಿಸಲು ವ್ಯವಸ್ಥೆ ಇದೆಯೇ ಎನ್ನುವ ಇನ್ನಿತರ ಪ್ರಶ್ನೆಗಳಿಗೆ ಉತ್ತರಿಸಿ ಆನ್ಲೈನ್ ಬುಕಿಂಗ್ ಮಾಡಬಹುದು.
0 Comments