ಕಟ್ಟಡ ಕಾರ್ಮಿಕ ಮಕ್ಕಳಿಗೆ ಲ್ಯಾಪ್ಟಾಪ್ ವಿತರಣೆ ನಿಮ್ಮ ಜಿಲ್ಲೆಗೆ ಯಾವಾಗ ನೀಡುತ್ತಾರೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಕಟ್ಟಡ ಕಾರ್ಮಿಕ ಮಕ್ಕಳಿಗೆ ಲ್ಯಾಪ್ಟಾಪ್ ವಿತರಣೆ ನಿಮ್ಮ ಜಿಲ್ಲೆಗೆ ಯಾವಾಗ ನೀಡುತ್ತಾರೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

 




ಕರ್ನಾಟಕ ರಾಜ್ಯ ಸರ್ಕಾರವು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಸೃಷ್ಟಿಸುವ ಕಾರಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದು ವಿದ್ಯಾರ್ಥಿ ವಲಯಕ್ಕೆ ಅನುಕೂಲ ಮಾಡಿಕೊಡುತ್ತಿದೆ. ಉಚಿತ ಶಿಕ್ಷಣದಿಂದ ಹಿಡಿದು ಪಠ್ಯಪುಸ್ತಕ, ಸಮವಸ್ತ್ರಗಳ ಉಚಿತ ವಿತರಣೆ ಸೇರಿದಂತೆ ಸ್ಕಾಲರ್ಶಿಪ್ , ಬಿಸಿಯೂಟ ಮತ್ತಿತರ ಅನುಕೂಲತೆಗಳನ್ನು ನೀಡುತ್ತಿದೆ.





ಈಗ ಇನ್ನೂ ಒಂದು ಹೆಚ್ಚು ಮುಂದೆ ಹೋಗಿ ಈಗಿನ ಕಾಲದಲ್ಲಿ ತಂತ್ರಜ್ಞಾನ ಕಲಿಕೆ ಕೂಡ ವಿದ್ಯಾರ್ಥಿಗಳಿಗೆ ಅತಿ ಮುಖ್ಯ ಅಂಶವಾಗಿರುವ ಕಾರಣದಿಂದಾಗಿ ಇದನ್ನು ಕಲಿಯಲು ಉತ್ತೇಜಿಸಿ ಸಹಕಾರ ನೀಡುವ ಉದ್ದೇಶದಿಂದ ಉಚಿತ ಲ್ಯಾಪ್ಟಾಪ್ (free laptop) ವಿತರಣೆ ಕೂಡ ಮಾಡುತ್ತದೆ. ಎಲ್ಲಾ ಪೋಷಕರಿಗೂ ಕೂಡ ತಮ್ಮ ಮಕ್ಕಳಿಗೆ ಲ್ಯಾಪ್ಟಾಪ್ ನೀಡುವ ಶಕ್ತಿ ಇಲ್ಲದ ಕಾರಣ ಸರ್ಕಾರವು ಈ ಜವಾಬ್ದಾರಿ ನಿರ್ವಹಿಸುತ್ತಿದ್ದು ಮಾನದಂಡಗಳನ್ನು ರೂಪಿಸಿ ಆ ಆಧಾರದ ಮೇಲೆ ಉಚಿತ ಲ್ಯಾಪ್ಟಾಪ್ ನೀಡುತ್ತಿದೆ.

ದನದ ಕೊಟ್ಟಿಗೆ, ಕುರಿ-ಮೇಕೆ ಶೆಡ್, ಕೃಷಿ ಹೊಂಡ, ನಿರ್ಮಾಣಕ್ಕೆ ಸರ್ಕಾರದಿಂದ 5 ಲಕ್ಷ ಸಹಾಯಧನ ಆಸಕ್ತರು ಅರ್ಜಿ ಸಲ್ಲಿಸಿ

PUC ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳು ಮತ್ತು ಪದವಿ ಮೊದಲನೇ ವರ್ಷದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವಂತಹ ವಿದ್ಯಾರ್ಥಿ ವಿದ್ಯಾರ್ಥಿನಿಯರು ಈ ಯೋಜನೆಗೆ ಅರ್ಜಿ ಸಲ್ಲಿಸಿ ಉಚಿತ ಲ್ಯಾಪ್ಟಾಪ್ ಸೌಲಭ್ಯ ಪಡೆದುಕೊಳ್ಳಬಹುದು. ಅಂತೆಯೇ ಪ್ರತಿ ವರ್ಷ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಮಂಡಳಿ (Labour department) ವತಿಯಿಂದ ಅರ್ಜಿ ಆಹ್ವಾನ ಮಾಡಿ ಮಂಡಳಿಯಲ್ಲಿ ನೋಂದಣಿಯಾಗಿರುವ ಕಾರ್ಮಿಕರ ಮಕ್ಕಳಿಗೆ ಲ್ಯಾಪ್ಟಾಪ್ ವಿತರಣೆ ಮಾಡುತ್ತದೆ
ಈಗಾಗಲೇ ಕಾರ್ಮಿಕರ ಮಕ್ಕಳಿಗೆ ಅನೇಕ ಸವಲತ್ತುಗಳು ಮಂಡಳಿ ಕಡೆಯಿಂದಸಿಗುತ್ತಿದೆ. ಲ್ಯಾಪ್ಟಾಪ್ ಕೂಡ ಅವರ ವಿದ್ಯಾಭ್ಯಾಸಕ್ಕೆ ಪೂರಕವಾಗಲಿದೆ ಎಂದು ತೀರ್ಮಾನಿಸಿ ವಿತರಣೆ ಮಾಡಲು ಅರ್ಹರು ಪೂರಕ ದಾಖಲೆಗಳ ಜೊತೆ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಳ್ಳಲು ಸೂಚಿಸಿತ್ತು. ಇದಕ್ಕೆ ಸೆಪ್ಟೆಂಬರ್ ತಿಂಗಳ ಕೊನೆಯ ದಿನವನ್ನು ಅಂತ್ಯಮ ಗಡುವಾಗಿ ಸರ್ಕಾರ ಘೋಷಿಸಿತ್ತು.






ಈ ಸಮಯದಲ್ಲಿ ಯಾರೆಲ್ಲಾ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಂಡಿದ್ದರು ಅವರಿಗೆಲ್ಲ ಬಹಳ ಶೀಘ್ರವಾಗಿ ಸರ್ಕಾರದ ವತಿಯಿಂದ ಲ್ಯಾಪ್ಟಾಪ್ ವಿತರಣೆಯಾಗುತ್ತಿದೆ. ಯಾಕೆಂದರೆ ಈಗಾಗಲೇ ತರಗತಿಗಳು ಆರಂಭವಾಗಿತ್ತು ವಿಳಂಬವಾದಲ್ಲಿ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತದೆ ಎನ್ನುವ ಕಾರಣಕ್ಕಾಗಿ ವೇಗವಾಗಿ ಲ್ಯಾಪ್ಟಾಪ್ ವಿತರಣೆ ಮಾಡಲಾಗುತ್ತಿದೆ

HDFC ಪರಿವರ್ತನಾ ಸ್ಕಾಲರ್ಶಿಪ್ ಪ್ರತಿ ವಿದ್ಯಾರ್ಥಿಗೂ 75,000 ಸಹಾಯಧನ ಸಿಗಲಿದೆ.! ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ ನೋಡಿ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಲ್ಯಾಪ್ಟಾ ವಿತರಣೆ ನಡೆದಿದ್ದು ನವೆಂಬರ್ 6ರಂದು ತುಮಕೂರಿನಲ್ಲೂ ಕಾರ್ಮಿಕರ ಮಕ್ಕಳಿಗೆ ಲ್ಯಾಪ್ಟಾಪ್ ನೀಡಲಾಗಿದೆ. ತುಮಕೂರು ನಗರದಲ್ಲಿ (Thumakur district ) ನಡೆದ ಆರೋಗ್ಯ ತುಮಕೂರು ಅಭಿಯಾನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಚಿವ ಜಿ. ಪರಮೇಶ್ವರ್ (G. Parameshwar) ಅವರು ತುಮಕೂರು ಜಿಲ್ಲೆಯ ಕಟ್ಟಡ ಕಾರ್ಮಿಕ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ಈ ಉಚಿತ ಲ್ಯಾಪ್ಟಾಪ್ ವಿತರಣೆ ಮಾಡಿ ಹರಸಿದ್ದಾರೆ.





ಆರೋಗ್ಯ ಇಲಾಖೆ ಏರ್ಪಡಿಸಿದ ಈ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಅನೇಕ ನಾಯಕರುಗಳು ಬಾಗಿಯಾಗಿ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ವಿತರಣೆ ಬಳಿಕ ವಿದ್ಯಾರ್ಥಿಗಳನ್ನು ಉದ್ದೇಶದಿಂದ ಮಾತನಾಡಿದ ಅವರು ವಿದ್ಯಾರ್ಥಿಗಳು ಸಂಪನ್ಮೂಲಗಳನ್ನು ಸರಿಯಾಗಿ ಬಳಸಿಕೊಂಡು ಟೆಕ್ನಾಲಜಿ ಸಹಾಯದಿಂದ ವಿದ್ಯಾಭ್ಯಾಸದಲ್ಲಿ ಮುಂದೆ ಬರಬೇಕು.

ಮತ್ತು ಕಲಿತ ವಿದ್ಯೆಯನ್ನು ಮುಂದಿನ ಜೀವನದಲ್ಲಿ ಉತ್ತಮವಾಗಿ ಬಳೆಸಿಕೊಂಡು ಜೀವನದಲ್ಲಿ ಯಶಸ್ವಿ ಆಗಬೇಕು ಎಂದು ತಿಳಿ ಹೇಳಿದರು. ತುಮಕೂರು ಜಿಲ್ಲೆಯಲ್ಲಿ ನಿನ್ನೆ ಈ ಕಾರ್ಯಕ್ರಮ ನಡೆದಿದ್ದು ಇನ್ನು ಯಾವ ಜಿಲ್ಲೆಗಳು ಬಾಕಿ ಉಳಿದಿವೆ ಆ ಜಿಲ್ಲೆಗಳಲ್ಲಿ ಅತಿ ಶೀಘ್ರವಾಗಿ ವಿತರಣೆ ಆಗುವಂತೆ ಕ್ರಮ ಕೈಗೊಳ್ಳುವುದಾಗಿ ಇಲಾಖೆ ತಿಳಿಸಿದೆ. ಈ ಕುರಿತು ಯಾವುದೇ ಮಾಹಿತಿ ಬೇಕಾದಲ್ಲಿ ನಿಮ್ಮ ತಾಲೂಕು ವ್ಯಾಪ್ತಿಗೆ ಬರುವ ಕಾರ್ಮಿಕ ಇಲಾಖೆಗೆ ಭೇಟಿ ಕೊಟ್ಟು ಹೆಚ್ಚಿನ ಮಾಹಿತಿ ಪಡೆಯಿರಿ.


Post a Comment

0 Comments