ಸ್ಪರ್ಧಾತ್ಮಕ ಬದುಕಿನ ಈ ಓಟದಲ್ಲಿ ದಿನ ಬೆಳಗ್ಗೆ ಎದ್ದು ಕಚೇರಿ ಕೆಲಸಕ್ಕೆ ಹೋಗಲು ಆಸೆಪಡುವವರಿಗಿಂತ ಸ್ವಂತ ಉದ್ದಿಮೆ ಶುರು ಮಾಡಿ ಚಿಕ್ಕದಾದ ವ್ಯವಹಾರ ಆದರೂ ರಾಜನಂತೆ ಇರಬೇಕು ಎನ್ನುವುದು ಅನೇಕರ ಕನಸು. ಈ ರೀತಿ ವ್ಯಾಪಾರ ವ್ಯವಹಾರ ಶುರು ಮಾಡಲು ಯುವ ಜನತೆಗೆ ಅವರದ್ದೇ ಆದ ಐಡಿಯಾ ಇದ್ದರೂ ಬಂಡವಾಳ ಇರುವುದಿಲ್ಲ.
ಹೀಗೆ ಹಣಕಾಸಿನ ಕೊರತೆ ಕಾರಣದಿಂದಾಗಿ ಸ್ವಂತ ಉದ್ಯೋಗ ಆರಂಭಿಸುವ ಆಸಕ್ತಿ ಇದ್ದರು ಯುವಜನತೆ ಹಿಂದೆ ಸರಿಯಬಾರದು ಎನ್ನುವ ಕಾರಣಕ್ಕಾಗಿ ಸರ್ಕಾರವೂ ಕೂಡ ಅನೇಕ ಯೋಜನೆಗಳನ್ನು ರೂಪಿಸಿ ಯುವ ಜನತೆಗೆ ಸಹಾಯ ಹಸ್ತ ಚಾಚಿದೆ. ಹಾಗಯೇ 2023-24ನೇ ಸಾಲಿನಲ್ಲೂ ಕೂಡ ವಿವಿಧ ನಿಗಮಗಳಿಂದ ಸ್ವಯಂ ಉದ್ಯೋಗ ನೇರ ಸಾಲ (Government loan ) ನೀಡಲಾಗುತ್ತಿದೆ. ಅದರ ಕುರಿತ ವಿವರ ಹೀಗಿದೆ ನೋಡಿ.
ದನದ ಕೊಟ್ಟಿಗೆ, ಕುರಿ-ಮೇಕೆ ಶೆಡ್, ಕೃಷಿ ಹೊಂಡ, ನಿರ್ಮಾಣಕ್ಕೆ ಸರ್ಕಾರದಿಂದ 5 ಲಕ್ಷ ಸಹಾಯಧನ ಆಸಕ್ತರು ಅರ್ಜಿ ಸಲ್ಲಿಸಿ
ಕರ್ನಾಟಕ ಸರ್ಕಾರದ ಕೆಲ ಸಮುದಾಯ ಗಳಿಗೆ ಸೇರಿದ ಯುವ ಜನತೆಗೆ ಆಯಾ ನಿಗಮಗಳ ಮೂಲಕ ಈ ಸಾಲ ಸೌಲಭ್ಯ ನೀಡುತ್ತಿದೆ. ಸ್ವಯಂ ಉದ್ಯೋಗ ಸಾಲ ಯೋಜನೆಗೆ ನೋಂದಾಯಿಸಿಕೊಂಡು ಪೂರಕ ದಾಖಲೆಗಳ ಜೊತೆ ಅರ್ಜಿ ಸಲ್ಲಿಸುವ ಯುವಜನತೆ ಸರ್ಕಾರದ ನಿಯಮ ಹಾಗೂ ನಿಬಂಧನೆಗಳ ಪ್ರಯೋಜನ ಪಡೆದುಕೊಂಡು ತಮ್ಮ ಸ್ವಂತ ಉದ್ಯೋಗವನ್ನು ಆರಂಭಿಸಬಹುದು
ಸಣ್ಣದಾದ ಅಂಗಡಿ ಶುರು ಮಾಡುವವರು, ಕುರಿ ಕೋಳಿ ಸಾಕಾಣಿಕೆ ಮಾಡುವವರು, ಮೀನು ಮಾಂಸ ಮಾರಾಟ ಮಾಡುವವರು ಮುಂತಾದ ಈ ಸಣ್ಣ ವ್ಯಾಪಾರಿಗಳಿಗೆ ಈ ಯೋಜನೆಯಿಂದ ಪ್ರಯೋಜನ ಪಡೆಯಬಹುದು. ಇದಕ್ಕೆ ಹೇಗೆ ಅರ್ಜಿ ಸಲ್ಲಿಸಬೇಕು ಮತ್ತು ಏನೆಲ್ಲ ಕಂಡೀಶನ್ ಗಳಿವೆ. ಬೇಕಾಗುವ ದಾಖಲೆಗಳೇನು ಈ ಕುರಿತ ಪ್ರಮುಖ ವಿವರವನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ಅರ್ಜಿ ಸಲ್ಲಿಸಲು ಇರುವ ಮಾನದಂಡಗಳು:-
* 18 ರಿಂದ 55 ವರ್ಷ ವಯಸ್ಸಿನವರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.* ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಅವಕಾಶವಿರುತ್ತದೆ.
* ಕುಟುಂಬದ ಆದಾಯವು ಎಲ್ಲಾ ಮೂಲಗಳಿಂದ 3.5 ಲಕ್ಷ ಮೀರಿರಬಾರದು.
ಸರ್ಕಾರವು ಸೂಚಿಸಿರುವ ಸಮುದಾಯಗಳಿಗೆ ಸೇರಿದವರು ಮಾತ್ರ ಅರ್ಜಿ ಸಲ್ಲಿಸಬಹುದು.
1. ಡಾ. ಬಿ ಆರ್ ಅಂಬೇಡ್ಕರ್ ನಿಗಮ
2. ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ
3. ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ
4. ಆದಿ ಜಾಂಬವ ಅಭಿವೃದ್ಧಿ ನಿಗಮ
5. ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ
6. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮ
7. ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ.
ಕಟ್ಟಡ ಕಾರ್ಮಿಕ ಮಕ್ಕಳಿಗೆ ಲ್ಯಾಪ್ಟಾಪ್ ವಿತರಣೆ ನಿಮ್ಮ ಜಿಲ್ಲೆಗೆ ಯಾವಾಗ ನೀಡುತ್ತಾರೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಸಹಾಯಧನ:-
* 1 ಲಕ್ಷ ರೂ. ವರೆಗೆ ಸಾಲ ಪಡೆದುಕೊಳ್ಳಬಹುದು.* ಇದರಲ್ಲಿ 50,000ರೂ. ಸಹಾಯಧನ ಹಾಗೂ ಉಳಿದ 50,000ರೂ. ನ್ನು 4% ಬಡ್ಡಿ ದರದಲ್ಲಿ 30 ಕಂತುಗಳಲ್ಲಿ ಸಾಲ ಹಿಂತಿರುಗಿಸಲು ಅವಕಾಶ ಕೊಡಲಾಗುತ್ತದೆ.
ಬೇಕಾಗುವ ದಾಖಲೆಗಳು:-
* ಆಧಾರ್ ಕಾರ್ಡ್* ಸಕ್ಷಮ ಪ್ರಾಧಿಕಾರದಿಂದ ನೀಡಿದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ
* ನೀವು ಆರಂಭಿಸಲು ಇಚ್ಚಿಸಿರುವ ಯೋಜನೆ ವಿವರ ಮತ್ತು ಅದಕ್ಕೆ ಸಂಬಂಧಪಟ್ಟ ಪುರಾವೆಗಳು
* ಬ್ಯಾಂಕ್ ಪಾಸ್ ಬುಕ್ ವಿವರ
* ಮೊಬೈಲ್ ಸಂಖ್ಯೆ
* ಇತ್ತೀಚಿನ ಭಾವಚಿತ್ರ
ಅರ್ಜಿ ಸಲ್ಲಿಸುವ ವಿಧಾನ:-
* ಸರ್ಕಾರದ ಸೇವಾ ಸಿಂಧು ಪೋರ್ಟಲ್ ಗೆ ಭೇಟಿ ಕೊಡುವ ಮೂಲಕ ಆನ್ಲೈನ್ ನಲ್ಲಿಯೇ ಅರ್ಜಿ ಸಲ್ಲಿಸಬಹುದು.https://sevasindhu.karnataka.gov.in/Sevasindhu/Kannada?ReturnUrl=%2F
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:- ನವೆಂಬರ್ 29, 2023.
0 Comments