ಕೊಳವೆಬಾವಿ ತೆಗೆದು ಪಂಪ್ ಅಳವಡಿಸಿ ನೀರಾವರಿ ಮಾಡುತ್ತಿರುವ ರೈತರಿಗೆ(Farmer) ತಮ್ಮ ಕೊಳವೆಬಾವಿ(Tubewell)ಯಿಂದ ಎಷ್ಟು ಪ್ರಮಾಣದ ನೀರು(Water level) ಹೊರ ಬರುತ್ತಿದೆ ಎಂದರೆ ಇಂಚ್ ಲೆಕ್ಕದಲ್ಲಿ ಹೇಳುತ್ತಾರೆ ಆದರೆ ಅದು ನೀರಿನ ನಿಖರವಾದ ಅಳತೆಯಾಗುವುದಿಲ್ಲ.
ತಮ್ಮ ಜಮೀನಿನ ನೀರಿನ ಇಳುವರಿಯ ಲೆಕ್ಕಾಚಾರ ಸರಿಯಾಗಿ ಗೊತ್ತಿದ್ದರೆ ಬೆಳೆ ಆಯೋಜನೆ, ಹನಿ ಅಥವಾ ತುಂತುರು ನೀರಾವರಿ(Drip irrigation, sprinkler irrigation) ಮಾಡಲು ಸರಿಯಾದ ವಿನ್ಯಾಸ ರೂಪಿಸಲು ಸರಿಯಾದ ನೀರಾವರಿ ವಿನ್ಯಾಸ ರಚನೆ ಮಾಡಲು ಅನುಕೂಲಕರ.
ಸ್ವಂತ ವ್ಯಾಪಾರ ಮಾಡಲು ಸರ್ಕಾರದಿಂದ 1 ಲಕ್ಷ ಹಣ ಘೋಷಣೆ.
ತಮ್ಮ ಜಮೀನಿನ ನೀರಿನ ಇಳುವರಿಯ ಲೆಕ್ಕಾಚಾರ ಸರಿಯಾಗಿ ಗೊತ್ತಿದ್ದರೆ ಬೆಳೆ ಆಯೋಜನೆ, ಹನಿ ಅಥವಾ ತುಂತುರು ನೀರಾವರಿ(Drip irrigation, sprinkler irrigation) ಮಾಡಲು ಸರಿಯಾದ ವಿನ್ಯಾಸ ರೂಪಿಸಲು ಸರಿಯಾದ ನೀರಾವರಿ ವಿನ್ಯಾಸ ರಚನೆ ಮಾಡಲು ಅನುಕೂಲಕರ.
ಇದೆಲ್ಲವನ್ನು ಸರಿಯಾಗಿ ನಿರ್ವಹಿಸಿದರೆ ನೀರು ವ್ಯರ್ಥವಾಗುವುದನ್ನು ತಡೆದು ಅದನ್ನು ಸರಿಯಾಗಿ ನಿರ್ವಹಣೆ ಮಾಡಿ ಉತ್ತಮ ಬೆಳೆಯ ಇಳುವರಿ ಪಡೆಯಬಹುದು. ಜಮೀನಿನಲಿ ಚಾಲ್ತಿಯಲ್ಲಿರುವ ಕೊಳವೆ ಬಾವಿ ಅಥವಾ ತೆರೆದ ಬಾವಿಯಿಂದ ಮೋಟಾರ್ ಅಥವಾ ಪಂಪ್ ಮೂಲಕ ಬರುತ್ತಿರುವ ನೀರಿನ ಅಳತೆ ಮಾಡುವುದನ್ನು ನೀರಿನ ಇಳುವರಿ ಪರೀಕ್ಷೆ (Water Yielding Test) ಎಂದು ಹೇಳಲಾಗುತ್ತದೆ.
ದನದ ಕೊಟ್ಟಿಗೆ, ಕುರಿ-ಮೇಕೆ ಶೆಡ್, ಕೃಷಿ ಹೊಂಡ, ನಿರ್ಮಾಣಕ್ಕೆ ಸರ್ಕಾರದಿಂದ 5 ಲಕ್ಷ ಸಹಾಯಧನ ಆಸಕ್ತರು ಅರ್ಜಿ ಸಲ್ಲಿಸಿ
ನೀರಿನ ಇಳುವರಿ ಪರೀಕ್ಷೆ ಮಾಡಿ ನೀರಿನ ಪ್ರಮಾಣವನ್ನು ಲೆಕ್ಕ ಹಾಕಿ, ನಿಮಗೆ ಸಿಗುತ್ತಿರುವ ವಿದ್ಯುತ್ ಪೂರೈಕೆ ಅವಧಿ ಆಧಾರದ ಮೇಲೆ ನಿಮ್ಮ ಪರಿಸ್ಥಿತಿಗೆ ಹೊಂದಿಕೆ ಆಗುವಂತೆ ಡ್ರಿಪ್ ಅಥವಾ ಸ್ಪ್ರಿಂಕ್ಲೆರ್ ನೀರಾವರಿ ವಿನ್ಯಾಸ ಮಾಡಿಕೊಂಡರೆ ಉತ್ತಮ ಇಲ್ಲವಾದಲ್ಲಿ ನೀರಿನ ಅಳತೆ ಮಾಡದೇ ವಿನ್ಯಾಸ ಮಾಡುವುದರಿಂದ ಬೆಳೆಗಳಿಗೆ ಅವಶ್ಯಕತೆಗೆ ಅನುಗುಣವಾದ ನೀರು ಪೂರೈಕೆಯಾಗದೆ.
ಕಡಿಮೆ ಒತ್ತಡವಾದಾಗ ನೀರು ಡ್ರಿಪ್ ಪೈಪ್ ಅಥವಾ ಸ್ಪ್ರಿಂಕ್ಲೆರ್ ಪೈಪ್ ಮೂಲಕ ಆ ಪೈಪ್ ಸಾಮರ್ಥ್ಯಕ್ಕೆ ತಕ್ಕ ನೀರು ಹೊರಬಾರದೆ ಬೆಳೆಗಳಿಗೆ ನೀರಿನ ಕೊರತೆ ಉಂಟಾಗುತ್ತದೆ ಅಥವಾ ಅಧಿಕ ಒತ್ತಡವಾದಾಗ ಪೈಪ್ ಲೈನ್ ಒತ್ತಡಕ್ಕೆ ಸಿಲುಕಿ ಹೊಡೆದು ಹೋಗಿ ಅದು ಕೂಡ ನಷ್ಟವೇ ಆಗುತ್ತದೆ. ಇದನ್ನು ತಪ್ಪಿಸಲು ನೀರಿನ ಲಭ್ಯತೆಗೆ ತಕ್ಕಂತೆ ವಿಭಾಗ ಮಾಡಿಕೊಂಡು(Section) ಪ್ರತಿ ವಿಭಾಕ್ಕೆ ಗೇಟ್ ವಾಲ್ ಹಾಕಿ ಕೊಳ್ಳಬೇಕು.
ಅಳತೆ ಪರೀಕ್ಷೆ ಮಾಡುವ ನೀರಿನವಿಧಾನ:-
* 200 ಲೀಟರ್ ಅಳತೆಯ ಡ್ರಮ್ ಅಥವಾ ನಿಮ್ಮಲ್ಲಿ ಲಭ್ಯವಿರುವ ಯಾವುದೇ ಅಳತೆಯ ಡ್ರಮ್ ತೆಗೆದುಕೊಂಡು, ನಿಮ್ಮ ಮೊಬೈಲ್ ನಲ್ಲಿರುವ ಸ್ಟಾಪ್ ವಾಚ್ ಸಿದ್ದ ಮಾಡಿಟ್ಟಿಕೊಳ್ಳಬೇಕು.
* ಮೋಟಾರ್ ಅಥವಾ ಪಂಪ್ ಸ್ಟಾರ್ಟ್ ಮಾಡಿ ಕನಿಷ್ಠ 15 ನಿಮಿಷ ನೀರು ಹೊರಗೆ ಹರಿಯಲು ಬಿಡಬೇಕು. ಬೋರ್ವೆಲ್ ಸ್ಟಾರ್ಟ್ ಮಾಡುವ ಮುನ್ನ ಮೇಲ್ಮಟ್ಟದಲ್ಲಿ ಹೆಚ್ಚು ನೀರು ಸಂಗ್ರಹವಾಗಿರುವುದರಿಂದ ಮೊದಲ 15 ನಿಮಿಷ ಹೆಚ್ಚು ನೀರು ಹೊರ ಬರುತ್ತದೆ,ಆನಂತರ ನೀರಿನ ಹೊರ ಹರಿವು ಸ್ಥಿರವಾಗುವುದರಿಂದ ಈ ಸಮಯದಲ್ಲಿ ಅಂದರೆ ಬೋರ್ವೆಲ್ ಸ್ಟಾರ್ಟ್ ಮಾಡಿದ 15 ನಿಮಿಷಗಳ ನಂತರ ನೀರಿನ ಅಳತೆಯನ್ನು ಮಾಡಬೇಕು.
* ಬೋರ್ವೆಲ್ ನಲ್ಲಿ ಹೊರ ಬರುವ ನೀರನ್ನು ಸಂಗ್ರಹ ಮಾಡಲು 200 ಲೀಟರ್ ಡ್ರಮ್ ಕೆಳಗಿಟ್ಟು ಅದು ತುಂಬುವ ಸಮಯವನ್ನು ಸ್ಟಾಪ್ ವಾಚ್ ಮೂಲಕ ಗುರುತು ಹಾಕಿಕೊಳ್ಳಬೇಕು.
* ಡ್ರಮ್ ನಲ್ಲಿ ತುಂಬಿದ ನೀರನ್ನು ಖಾಲಿ ಮಾಡಿಕೊಂಡು ಒಟ್ಟು 03 ಬಾರಿ ಡ್ರಮ್ ತುಂಬಲು ತೆಗೆದುಕೊಳ್ಳುವ ಸಮಯವನ್ನು ಗುರುತು ಹಾಕಿ ಅದು ತೆಗೆದುಕೊಳ್ಳುವ ಸರಾಸರಿ ಸಮಯ ಕಂಡು ಹಿಡಿಯಬೇಕು.
ಉದಾಹರಣೆಗೆ 200 ಲೀಟರ್ ಡ್ರಮ್ ತುಂಬಲು 60 ಸೆಕೆಂಡ್ ತೆಗೆದುಕೊಂಡರೆ,
200 ltr/60 sec =3.3 ltr/sec
1 ನಿಮಿಷಕ್ಕೆ ,
3.3*60=200 ltr/min
1 ಗಂಟೆಗೆ,
200*60 =12,000 ltr/hr
ಈ ರೀತಿಯಾಗಿ ನಿಮ್ಮ ಬೋರ್ವೆಲ್ ನಿಂದ ಬರುವ ನೀರಿನ ಪ್ರಮಾಣವನ್ನು ಲೆಕ್ಕ ಹಾಕಬೇಕು.
* ನೀರಿನ ಹೊರ ಹರಿವಿನ ಪ್ರಮಾಣ ಆಧರಿಸಿ (Drip Irrigation ) ಮಾಡಲು ಶೇ 80% ಮತ್ತು ತುಂತುರು ನೀರಾವರಿ (Sprinkler irrigation) ಮಾಡಲು ಶೇ 60% ಗಣನೆಗೆ ತೆಗೆದುಕೊಂಡು ವಿನ್ಯಾಸ ಮಾಡಬೇಕು.
0 Comments