ಬಸ್ ನಲ್ಲಿ ಪ್ರಯಾಣ ಮಾಡುವವರಿಗೆ ಹೊಸ ರೂಲ್ಸ್ ಜಾರಿ.! ಸರ್ಕಾರದಿಂದ ಕಟ್ಟುನಿಟ್ಟಿನ ಆದೇಶ

ಬಸ್ ನಲ್ಲಿ ಪ್ರಯಾಣ ಮಾಡುವವರಿಗೆ ಹೊಸ ರೂಲ್ಸ್ ಜಾರಿ.! ಸರ್ಕಾರದಿಂದ ಕಟ್ಟುನಿಟ್ಟಿನ ಆದೇಶ


 











ದೇಶದಲ್ಲಿ ಲೋಕಸಭಾ ಚುನಾವಣೆ ಸಮರಕ್ಕೆ (Parliment Election – 2024) ಅಖಾಡ ಸಿದ್ಧವಾಗಿದೆ. ಹಾಗಾಗಿ ಎಲ್ಲರ ಚಿತ್ತವು ದೆಹಲಿಯ (Dehli) ಕುರ್ಚಿಯತ್ತ ಇದೆ. ಏಪ್ರಿಲ್ 19, 2024 ರಿಂದಲೇ ಚುನಾವಣೆ ಆರಂಭವಾಗಲಿದ್ದು ದೇಶದಾದ್ಯಂತ 7 ಹಂತಗಳು ಹಾಗೂ ಕರ್ನಾಟಕದಲ್ಲಿ 2 ಹಂತದಲ್ಲಿ ಚುನಾವಣೆ ನಡೆಯಲಿದೆ.






ಈಗಾಗಲೇ ಚುನಾವಣಾ ವೇಳಾಪಟ್ಟಿ (Election Date Announce) ಕೂಡ ನಿಗದಿ ಆಗಿದ್ದು ದೇಶದಾದ್ಯಂತ ಚುನಾವಣೆ ನೀತಿ ಸಂಹಿತೆಗಳು (Code of Conduct) ಜಾರಿಯಲ್ಲಿವೆ. ಕೇಂದ್ರ ಚುನಾವಣಾ ಆಯೋಗದ (Central Election Commission) ಸುಪರ್ದಿಯಲ್ಲಿ ನಡೆಯುತ್ತಿರುವ ಈ ಚುನಾವಣೆಗೆ ಕಟ್ಟುನಿಟ್ಟಾದ ನೀತಿ ನಿಯಮಗಳನ್ನು ಜಾರಿಗೆ ತರಲಾಗಿದ್ದು.



ಮಹಿಳೆಯರಿಗೆ ಉಚಿತ ಹೋಲಿಗೆ ತರಬೇತಿ.! ಆಸಕ್ತರು ಅರ್ಜಿ ಸಲ್ಲಿಸಿ ನಿಮ್ಮ ಹೆಸರು ನೋಂದಾಯಿಸಿಕೊಳ್ಳಿ




ಆ ಪ್ರಯತ್ನವಾಗಿ ಸರ್ಕಾರಿ ಬಸ್ ಗಳಲ್ಲಿ ಪ್ರಯಾಣಿಸುವವರು ಹಾಗೂ ನಿಗಮಕ್ಕೂ ಕೂಡ ಕೆಲ ಸಂದೇಶ ರವಾನೆಯಾಗಿದೆ. ಪ್ರತಿ ಸಾಮಾನ್ಯನು ಕೂಡ ಇವುಗಳನ್ನು ತಿಳಿದುಕೊಂಡಿರಬೇಕು ಹಾಗಾಗಿ ಈ ಉಪಯುಕ್ತ ಮಾಹಿತಿ ಬಗ್ಗೆ ಈ ಲೇಖನದಲ್ಲಿ ಪ್ರಸ್ತಾಪಿಸುತ್ತಿದ್ದೇವೆ.





ಲೋಕಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಕೇಂದ್ರ ಚುನಾವಣಾ ಆಯೋಗ ಚುನಾವಣೆ ನೀತಿ ಸಂಹಿತೆಯ ನಿಯಮಗಳನ್ನು ಹೇರಿದೆ. ಸರ್ಕಾರಿ ಬಸ್ ಗಳಲ್ಲಿ ಪ್ರಯಾಣಿಸುವವರಿಗೆ ಈ ನಿಯಮಗಳು ಅನ್ವಯವಾಗುತ್ತವೆ.






ಒಂದು ಬಾರಿ ಈ ರೀತಿ ಚುನಾವಣೆ ನೀತಿ ಸಂಹಿತೆ ಜಾರಿ ಆದ ಮೇಲೆ ಆ ನಿಯಮಗಳ ಪ್ರಕಾರವಾಗಿ ಸಾರ್ವಜನಿಕ ಬಸ್ ಗಳಲ್ಲಿ ಯಾವುದೇ ಜನ ಪ್ರತಿನಿಧಿಯ ಫ್ಲೆಕ್ಸ್ ಗಳು ಬ್ಯಾನರ್ ಗಳು ಇವುಗಳನ್ನು ಇಟ್ಟುಕೊಂಡು ಪ್ರಯಾಣ ಮಾಡುವುದು ನಿಷಿದ್ಧ ಮತ್ತು ಚುನಾವಣೆಗೆ ಸಂಬಂಧಿಸಿದ ಯಾವುದೇ ವಸ್ತುಗಳನ್ನು ಸಾಗಿಸುವುದಕ್ಕೂ ಕೂಡ ನಿರ್ಬಂಧ ಹೇರಲಾಗಿದೆ ಮತ್ತು ದಾಖಲೆ ಇಲ್ಲದೆ ಬಹಳ ದೊಡ್ಡ ಪ್ರಮಾಣದ ಬೆಳ್ಳಿ ಚಿನ್ನ ಹಾಗೂ ಹಣ ಸಾಗಿಸುವಂತೆಯೂ ಇಲ್ಲ.






ಹಾಗಾಗಿ ಪ್ರಯಾಣಿಕರು ಇನ್ನು ಮುಂದೆ ಇವುಗಳನ್ನು ಸರ್ಕಾರಿ ಬಸ್ ಗಳಲ್ಲಿ ಇಟ್ಟುಕೊಂಡು ಪ್ರಯಾಣ ಮಾಡುವಂತಿಲ್ಲ. ಇದರ ಬಗ್ಗೆ ನಿಖಾ ವಹಿಸುವಂತೆ ರಾಜ್ಯದ ನಾಲ್ಕು ನಿಕಮಗಳಿಗೆ ಚುನಾವಣಾ ಆಯೋಗದಿಂದ ಹೊಸ ನಿಯಮಗಳನ್ನು ಪರಿಚಯಿಸಲಾಗಿದೆ.


ಎಕರೆಗೆ 50 ಲಕ್ಷ ಆದಾಯ ಕೊಡುವ ಅಗರ್ ವುಡ್ ಕೃಷಿಯ ಸಂಪೂರ್ಣ ಮಾಹಿತಿ




ಈ ಮೇಲೆ ತಿಳಿಸಿದಂತೆ ಚುನಾವಣೆಗೆ ಸಂಬಂಧಿಸಿದ ದಾಖಲೆಗಳನ್ನು ಅಥವಾ ನೀತಿ ಸಂಹಿತೆ ನಿಯಮಗಳನ್ನು ಉಲ್ಲಂಘಿಸುವ ಸರಕುಗಳನ್ನು ಸಾಗಿಸುವುದಕ್ಕೆ ಅನುಮತಿಸದ ಕಾರಣ ಸರ್ಕಾರಿ ಬಸ್ ನ ಸಿಬ್ಬಂದಿಗಳು ಪ್ರಯಾಣಿಕರು ಲಗೇಜ್ ಶೇಖರಿಸುವ ಮತ್ತು ಹಿಂಪಡೆಯುವಾಗ ಸರಿಯಾಗಿ ಅವರ ದಾಖಲೆಗಳನ್ನು ಪಡೆಯಬೇಕು.






ಯಾವುದೇ ವ್ಯಕ್ತಿ ಅನುಮಾನಾಸ್ಪದವಾಗಿ ನಡೆದುಕೊಂಡರೆ ಅಂತಹ ವ್ಯಕ್ತಿಯ ಲಗೇಜ್ ಗಳನ್ನು ಪರಿಶೀಲನೆ ನಡೆಸಬೇಕು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ಈ ಕ್ರಮ ಅನಿವಾರ್ಯ ಎಂದು ಚುನಾವಣಾ ಆಯೋಗವು ಬಸ್ ಸಿಬ್ಬಂದಿಗಳಿಗೆ ಸೂಚನೆ ನೀಡಿದೆ.







ಒಂದು ವೇಳೆ ಪ್ರಯಾಣಿಕರು ಏನಾದರೂ ಯಾವುದೇ ರಾಜಕೀಯ ವ್ಯಕ್ತಿ ಅಥವಾ ಪಕ್ಷಕ್ಕೆ ಸಂಬಂಧಿಸಿದ ಬ್ರೋಷರ್ ಮತ್ತು ಬ್ಯಾನರ್ ಅಥವಾ ಇನ್ನಿತರ ಪ್ರಚಾರದ ವಸ್ತುಗಳನ್ನು ಹೊಂದಿದ್ದಲ್ಲಿ ಅವುಗಳಿಗೆ ದಾಖಲೆಗಳನ್ನು ನೀಡಲೇಬೇಕಾಗುತ್ತದೆ ಮತ್ತು ಇವುಗಳಿಗೆ ಅನುಮತಿ ಇಲ್ಲ ಎನ್ನುವುದನ್ನು ಮರೆಯುವಂತಿಲ್ಲ.

ಈಗಾಗಲೇ ಹಲವು ಕಡೆಗಳಲ್ಲಿ ದಾಖಲೆಗಳು ಇಲ್ಲದೆ ಸಾಗಿಸುತ್ತಿದ್ದ ಹಣ ಜಪ್ತಿ ಮಾಡಿರುವ ಬಗ್ಗೆ ಮಾಧ್ಯಮಗಳಲ್ಲಿ ಬಿತ್ತರವಾಗಿರುವುದನ್ನು ನೀವು ನೋಡಿರಬಹುದು. ಹಾಗಾಗಿ ಗೊತ್ತೋ ಗೊತ್ತಿಲ್ಲದೆಯೋ ಈ ರೀತಿ ಸಮಸ್ಯೆಗಳಿಗೆ ಸಿಲುಕಬೇಡಿ. ಜಾಗೃತಿಯಿಂದ ಇರಿ ಮತ್ತು ಸರ್ಕಾರದ ನಿಯಮಗಳಿಗೆ ಬೆಲೆ ಕೊಡಿ. ಒಂದು ವೇಳೆ ನಿಮ್ಮ ಸ್ವಂತ ಕಾರಣದಿಂದ ಬೆಲೆಬಾಳುವ ವಸ್ತು ಅಥವಾ ಹೆಚ್ಚಿನ ಮೊತ್ತದ ಹಣ ಸಾಗಿಸುತ್ತಿದ್ದರೆ ಸೂಕ್ತ ದಾಖಲೆಗಳನ್ನು ಇಟ್ಟುಕೊಂಡು ವರದಿ ಮಾಡಿ.


Post a Comment

0 Comments