ನಿಮ್ಮ ಗ್ಯಾಸ್ ಗೆ ಇ-ಕೆವೈಸಿ ಆಗಿದೆಯೇ.? ಇಲ್ಲವಾದಲ್ಲಿ ಉಚಿತವಾಗಿ ಮೊಬೈಲ್ ನಲ್ಲಿ ಇ-ಕೆವೈಸಿ ಮಾಡಿಕೊಳ್ಳಿ

ನಿಮ್ಮ ಗ್ಯಾಸ್ ಗೆ ಇ-ಕೆವೈಸಿ ಆಗಿದೆಯೇ.? ಇಲ್ಲವಾದಲ್ಲಿ ಉಚಿತವಾಗಿ ಮೊಬೈಲ್ ನಲ್ಲಿ ಇ-ಕೆವೈಸಿ ಮಾಡಿಕೊಳ್ಳಿ




 ಸರ್ಕಾರವು (Central Government) ಪ್ರತಿ ಗ್ಯಾಸ್ ಬುಕಿಂಗ್ ಮೇಲೆ ಎಲ್ಲರಿಗೂ ಸಬ್ಸಿಡಿ (Gas Subsidy) ಘೋಷಿಸಿದೆ ಮತ್ತು ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ (PMUY) ಗ್ರಾಹಕರು ಇನ್ನು ಹೆಚ್ಚಿನ ಸಬ್ಸಿಡಿ ಪಡೆಯುತ್ತಿದ್ದಾರೆ. ನೀವು ಯಾವುದೇ ಕಂಪನಿಯ ಗ್ಯಾಸ್ ಕನೆಕ್ಷನ್ ಹೊಂದಿದ್ದರು ಇ-ಕೆವೈಸಿ ಮಾಡಿಸಿದರೆ ಮಾತ್ರ dbt ಮೂಲಕ ಖಾತೆಗೆ ಸಬ್ಸಿಡಿ ಹಣ ವರ್ಗಾವಣೆ ಆಗಲು ಸಾಧ್ಯ.






ಇಂಡಿಯನ್ ಗ್ರಾಹಕರು ಹೇಗೆ ಸುಲಭವಾಗಿ ಮೊಬೈಲ್ ನಲ್ಲಿ e-KYC ಮಾಡಿಕೊಳ್ಳಬಹುದು ಎನ್ನುವ ವಿಧಾನವನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಒಂದು ವೇಳೆ ತಿಳಿಯದಿದ್ದರೆ ನೀವು ನಿಮ್ಮ ಏಜೆನ್ಸಿಗೆ ಭೇಟಿ ಕೊಡುವ ಮೂಲಕವೂ ಕೂಡ ಈ ಪ್ರಕ್ರಿಯೆ ಪೂರ್ತಿಗೊಳಿಸಬಹುದು.




ಬರ ಪರಿಹಾರದ ಹಣ ನಿಮ್ಮ ಖಾತೆಗೆ ಬರುತ್ತೋ ಇಲ್ಲವೋ ಮೊಬೈಲ್ ನಲ್ಲಿಯೇ ಈ ರೀತಿ ಚೆಕ್ ಮಾಡಿ





* ಪ್ಲೇ ಸ್ಟೋರ್ ಗೆ ಹೋಗಿ ಇಂಡಿಯನ್ ಆಯಿಲ್ ಎಂದು ಸರ್ಚ್ ಕೊಡಿ Indian Oil ONE ಎನ್ನುವ ಆಪ್ ಕಾಣುತ್ತದೆ ಡೌನ್ಲೋಡ್ ಮಾಡಿಕೊಳ್ಳಿ.

* ನಂತರ ಆಪ್ ಓಪನ್ ಮಾಡಿ ಕೆಲವೊಂದು ಪರ್ಮಿಷನ್ ಗಳನ್ನು ಕೇಳುತ್ತದೆ allow ಮಾಡಿ

* ಎಡ ಭಾಗದಲ್ಲಿ ಮೂರು ಚಿಕ್ಕ ಗೆರೆಗಳು ಇರುತ್ತದೆ ಅದನ್ನು ಕ್ಲಿಕ್ ಮಾಡಿದರೆ Login/Sign up ಈ ಕಾಲದಲ್ಲಿ ನೀವು ರಿಜಿಸ್ಟರ್ ಆಗಿ ID ಮತ್ತು Password ಹೊಂದಿದ್ದರೆ Login ಮೇಲೆ ಕ್ಲಿಕ್ ಮಾಡಿ ID & Password ಹಾಕಿ Login ಆಗಿ.






* ಇಲ್ಲವಾದಲ್ಲಿ Registration ಎನ್ನುವುದರ ಮೇಲೆ ಕ್ಲಿಕ್ ಮಾಡಿ Mobile No., E-mail ID, First Name, Last Name i agree ಚೆಕ್ ಬಾಕ್ಸ್ ಮೇಲೆ ರೈಟ್ ಮಾರ್ಕ್ ಕ್ಲಿಕ್ ಮಾಡಿ Register ಎನ್ನುವುದರ ಮೇಲೆ ಕ್ಲಿಕ್ ಮಾಡಿ.

* ಆಗ ನಿಮ್ಮ ಮೊಬೈಲ್ ನಂಬರ್ ಗೆ OTP ಬರುತ್ತದೆ, OTP ಹಾಕಿ ಕೊಟ್ಟಿರುವ ಸೂಚನೆಯ ಪ್ರಕಾರವಾಗಿ ಒಂದು Password ಜನರೇಟ್ ಮಾಡಿಕೊಳ್ಳಿ. ನಂತರ ಈಗ ಮೊದಲಿನಂತೆ ಲಾಗಿನ್ ಪೇಜ್ ಗೆ ಬಂದು Mobile no & Password ಹಾಕಿ ಲಾಗಿನ್ ಆಗಿ ಇಂಡಿಯನ್ ಆಯಿಲ್ ಮುಖಪುಟ ಓಪನ್ ಆಗುತ್ತದೆ.




ಈ ರೈತರಿಗೆ ಇಂದಿನಿಂದ ಬೆಳೆ ಪರಿಹಾರ ಹಣ ಬಿಡುಗಡೆ.! ನಿಮ್ಮ ಹೆಸರಿದಿಯೇ ಈ ರೀತಿ ಚೆಕ್ ಮಾಡಿ





* ಮುಖಪುಟದ ಎಡ ಭಾಗದಲ್ಲಿ ಮೂರು ಅಡ್ಡ ಗೆರೆಗಳು ಕಾಣುತ್ತದೆ ಅದನ್ನು ಕ್ಲಿಕ್ ಮಾಡಿದರೆ. My Profile ಎನ್ನುವ ಆಪ್ಷನ್ ಕಾಣುತ್ತದೆ ಕ್ಲಿಕ್ ಮಾಡಿ.

* ಇದರಲ್ಲಿ ಯಾರ ಹೆಸರಿಗೆ ಗ್ಯಾಸ್ ಕನೆಕ್ಷನ್ ಇದೆ, ಅವರ ಕೊನೆಯ ನಾಲ್ಕು ಮೊಬೈಲ್ ಸಂಖ್ಯೆ, LPG ID, ಸಬ್ಸಿಡಿ ಸೌಲಭ್ಯ ನಿಮಗೆ ಇದೆಯೇ ಇತ್ಯಾದಿ ಎಲ್ಲಾ ವಿವರ ಕೂಡ ಸ್ಕ್ರೀನ್ ಮೇಲೆ ಕಾಣುತ್ತದೆ. ನೀವು ಸಬ್ಸಿಡಿಗೆ ಅರ್ಹರಾಗಿದ್ದರೆ ಆ ಆಪ್ಷನ್ ಮುಂದೆ YES ಎಂದು ಕಾಣುತ್ತದೆ.






* ಪೇಜ್ ಸ್ಕ್ರೋಲ್ ಮಾಡಿ E-KYC Status ಎನ್ನುವ ಆಪ್ಷನ್ ಕಾಣುತ್ತದೆ ಅದರಲ್ಲಿ ಹಸಿರು ಬಣ್ಣದಲ್ಲಿ ರೈಟ್ ಮಾರ್ಕ್ ಇದ್ದರೆ ಈಗಾಗಲೇ ಇ-ಕೆವೈಸಿ ಆಗಿದೆ ಎಂದರ್ಥ. ಆಗಿಲ್ಲ ಎಂದರೆ ಕೆಳಗೆ ನೀಡಲಾಗಿರುವ Re-KYC ಎನ್ನುವ ಆಪ್ಷನ್ ಕ್ಲಿಕ್ ಮಾಡಿ

* ಆಧಾರ್ ಅಥೇಂಟಿಕೇಶನ್ ಮಾಡಿ e-KYC ಮಾಡಬೇಕಾಗುತ್ತದೆ ಅದರ ಕುರಿತು ವಿವರ ಬರುತ್ತದೆ. ಅದನ್ನು ಓದಿಕೊಂಡು ಪಕ್ಕದಲ್ಲಿ ನೀಡಲಾಗಿರುವ ಚೆಕ್ ಬಾಕ್ಸ್ ನಲ್ಲಿ ರೈಟ್ ಕ್ಲಿಕ್ ಮಾಡಿದರೆ, ಕೆಳಗೆ Face Scan ಆಪ್ಷನ್ ಕಾಣುತ್ತದೆ ಅದನ್ನು ಕ್ಲಿಕ್ ಮಾಡಬೇಕು.


* ಆದರೆ ನಿಮ್ಮ ಫೋನ್ ನಿಂದ face Scan ಮಾಡಲು ಸಾಧ್ಯವಾಗುವುದಿಲ್ಲ ಆಗ ಮತ್ತೊಮ್ಮೆ ಪ್ಲೇ ಸ್ಟೋರ್ ಗೆ ಹೋಗಿ face Authentication ಎಂದು ಸರ್ಚ್ ಕೊಡಿ, Aadhar faceRd(Early Access) install ಮಾಡಿ

* ಈಗ ನೀವು fave scan ಮೇಲೆ ಕ್ಲಿಕ್ ಮಾಡಿದರೆ ಫೇಸ್ ಅಥೆಂಟಿಕೇಷನ್ ಆಗುತ್ತದೆ face detect ನಿಮ್ಮ ಮೊಬೈಲ್ ನ ಫ್ರೆಂಟ್ ಕ್ಯಾಮೆರಾ ಮೂಲಕವೇ ಆಗುತ್ತದೆ.


* ನಂತರ ನಿಮ್ಮ ಆಧಾರ್ ಅಥೆಂಟಿಕೇಷನ್ ಪೂರ್ತಿ ಮಾಡಿ ಸಬ್ಮಿಟ್ ಕೊಟ್ಟರೆ e-KYC ಪ್ರಕ್ರಿಯೆ ಮುಗಿಯುತ್ತದೆ ಮತ್ತು ನೀವು ಅದನ್ನು ಹಿಂದೆ ಹೋಗಿ ಇ-ಕೆವೈಸಿ ಸ್ಟೇಟಸ್ ಆಪ್ಷನ್ ನಲ್ಲಿ ಕೂಡ ಚೆಕ್ ಮಾಡುವ ಮೂಲಕ ಧೃಡೀಕರಿಸಿಕೊಳ್ಳಬಹುದು.


Post a Comment

0 Comments