ಕರ್ನಾಟಕ ಸರ್ಕಾರವು ರೇಷನ್ ಕಾರ್ಡ್ (Ration card) ಹೊಂದಿ ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥರ ಸ್ಥಾನದಲ್ಲಿರುವ ಮಹಿಳೆಗೆ ಪ್ರತಿ ತಿಂಗಳು ಕುಟುಂಬ ನಿರ್ವಹಣೆಗಾಗಿ ಸಹಾಯಧನವನ್ನು ನೀಡುತ್ತಿದೆ. ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಎಂದು ಹೆಸರಿಡಲಾಗಿರುವ ಈ ಯೋಜನೆಗೆ ಜುಲೈ 19, 2023 ರಿಂದ ಅರ್ಜಿ ಆಹ್ವಾನ ಮಾಡಲಾಗಿತ್ತು.
ಅಂತೆಯೇ ಆಗಸ್ಟ್ 30ರವರೆಗೆ ಅರ್ಜಿ ಸಲ್ಲಿಸಿದ್ದ 1.1 0 ಕೋಟಿ ಫಲಾನುಭವಿಗಳಿಗೆ ಆಗಸ್ಟ್ 30ರಂದು ಮೊದಲನೇ ಕಂತಿನ ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆಯಾಗಿತ್ತು. ಇದುವರೆಗೂ ಯಶಸ್ವಿಯಾಗಿ ನಾಲ್ಕು ತಿಂಗಳ ಹಣ ವರ್ಗಾವಣೆ ಆಗಿದ್ದು 5ನೇ ಕಂತಿನ ಹಣದ ನಿರೀಕ್ಷೆಯಲ್ಲಿ ಫಲಾನುಭವಿಗಳು ಇದ್ದಾರೆ.
ಆದರೆ ಈಗ ಒಟ್ಟು ಫಲಾನುಭವಿಗಳ ಸಂಖ್ಯೆ 1.17 ಕೋಟಿ ಆಗಿದ್ದು ಇದರಲ್ಲಿ ಕಾರಣಾಂತರಗಳಿಂದ ಲಕ್ಷಾಂತರ ಮಹಿಳೆಯರು ಇದುವರೆಗೂ ಒಂದು ಕಂತಿನ ಹಣ ಪಡೆಯಲಾಗದೆ ವಂಚಿತರಾಗಿದ್ದಾರೆ. ಇದಕ್ಕೆಲ್ಲ ಮುಖ್ಯ ಕಾರಣ ಏನೆಂದರೆ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗದೆ ಇರುವುದು, ಬ್ಯಾಂಕ್ ಖಾತೆಗಳು ಆಕ್ಟಿವ್ ಆಗಿ ಇರದೇ ಇರುವುದು.
ಮೊಬೈಲ್ ನಲ್ಲೇ ಉಚಿತವಾಗಿ ಪಡೆದುಕೊಳ್ಳಿ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್.! 5 ಲಕ್ಷದ ವರೆಗೆ ಉಚಿತ ಚಿಕಿತ್ಸೆ ಸಿಗಲಿದೆ
ರೇಷನ್ ಕಾರ್ಡ್ e-KYC ಆಗದೆ ಇರುವುದು ಮತ್ತು ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಯಶಸ್ವಿ ಆಗದೆ ಇರುವುದು ಮತ್ತು ರೇಷನ್ ಕಾರ್ಡ್, ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಈ ದಾಖಲೆಗಳಲ್ಲಿ ಹೆಸರಿನ ವ್ಯತ್ಯಾಸವಾಗಿರುವವರಿಗೂ ಕೂಡ ಹಣ ಬಂದಿಲ್ಲ ಮೊದಲನೇ ಕಂತಿನ ಹಣ ಸರ್ಕಾರದಿಂದ ಬಿಡುಗಡೆ ಹಾಕಿ ಪಡೆಯಲಾಗದಿದ್ದವರು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಂಡಿದ್ದಾರೆ.
ಇತ್ತೀಚೆಗೆ ಸರ್ಕಾರವು ಆಯಾ ಗ್ರಾಮ ಪಂಚಾಯಿತಿಗಳಲ್ಲಿ ಗೃಹಲಕ್ಷ್ಮಿ ಕ್ಯಾಂಪ್ (Gruhalakshmi caml) ನಡೆಸಿ ಫಲಾನುಭವಿಗಳ ಸಮಸ್ಯೆ ಬಗೆಹರಿಸಿ ಕೊಡಬೇಕು ಎನ್ನುವ ಸೂಚನೆಯನ್ನು ಕೊಟ್ಟಿದೆ. ಆ ಪ್ರಕಾರವಾಗಿ ಬ್ಯಾಂಕ್ ಖಾತೆ ಸಮಸ್ಯೆ ಇದ್ದವರಿಗೆ, e-KYC ಮಾಡದೆ ಇದ್ದವರಿಗೆ ಪರಿಹಾರ ಮಾಡಿಕೊಡಲಾಗಿದೆ.
ಆದರೆ ಹೊಸ ರೇಷನ್ ಕಾರ್ಡ್ ಪಡೆದವರು, ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥೆ ಹೆಸರು ತಿದ್ದುಪಡಿ ಮಾಡಿಕೊಂಡವರು, ರೇಷನ್ ಕಾರ್ಡಿಗೆ ಈಗ ಸೇರ್ಪಡೆಯಾದವರು ಮತ್ತು ಮೊದಲ ಬಾರಿ ಅರ್ಜಿ ಸಲ್ಲಿಸಿದಾಗ ಸರ್ವರ್ ಒತ್ತಡದಿಂದ ಅಥವಾ ಇನ್ಯಾವುದೇ ಟೆಕ್ನಿಕಲ್ ಇಶ್ಯು ಇಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆಯಲ್ಲಿ ಸಮಸ್ಯೆಯಾಗಿ ಅರ್ಜಿ ಸಲ್ಲಿಸಲಾಗದಿದ್ದವರು ಮತ್ತೆ ಅರ್ಜಿ ಸಲ್ಲಿಸಲಾಗದೆ ಹಣ ಪಡೆಯಲು ಸಾಧ್ಯವಾಗಿರಲಿಲ್ಲ
ಯಾಕೆಂದರೆ ಕಳೆದ ಕೆಲವು ತಿಂಗಳಿಂದ ಸರ್ಕಾರವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ನಿಲ್ಲಿಸಿತ್ತು, ಈಗ ಇದರ ಕುರಿತು ಮಹತ್ವದ ಪ್ರಕಟಣೆ ಇದೆ. ಅದೇನೆಂದರೆ, ಸರ್ಕಾರವು ಮತ್ತೊಮ್ಮೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸ್ವೀಕಾರ ಮಾಡುತ್ತಿದೆ.
ಇನ್ಮುಂದೆ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಹಣ ಪಡೆಯಲು e-KYC ಕಡ್ಡಾಯ.! ನಿಮ್ಮ ಖಾತೆಗೆ e-KYC ಆಗಿದಿಯೋ ಇಲ್ಲವೋ ಎನ್ನುವುದನ್ನು ಈ ರೀತಿ ಚೆಕ್ ಮಾಡಿ
ಯಾರಿಗೆಲ್ಲಾ ಅರ್ಜಿ ಸಲ್ಲಿಸಿಯಾಗುವಾಗ ಸಮಸ್ಯೆಯಾಗಿದೆ ಮತ್ತು ಇನ್ನು ಅರ್ಜಿ ಸಲ್ಲಿಸಿಲ್ಲ ಅವರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಅರ್ಜಿ ಸಲ್ಲಿಸಿದರೆ ಜನವರಿ ತಿಂಗಳಲ್ಲಿ ಅವರಿಗೆ 5ನೇ ಕಂತಿನ ಹಣ ಸಿಗಲಿದೆ. ಆದರೆ ಈವರೆಗೂ ಯಾವುದೇ ತೊಂದರೆ ಇಲ್ಲದೆ ಗೃಹಲಕ್ಷ್ಮಿ ಯೋಜನೆ ಎಲ್ಲಾ ಕಂತುಗಳ ಹಣ ಪಡೆದವರು ಮತ್ತೆ ಅರ್ಜಿ ಸಲ್ಲಿಸುವ ಅವಶ್ಯಕತೆ ಇಲ್ಲ.
ಇದರಲ್ಲಿ ಕೆಲವರು 3 ಕಂತುಗಳ ಹಣ ಪಡೆದಿದ್ದೇವೆ 4ನೇ ಕಂತಿನ ಹಣ ಪಡೆಯಲಾಗಿಲ್ಲ ಎಂದು ದೂರು ಹೇಳಬಹುದು, 4ನೇ ಕಂತಿನ ಹಣ ಹಂತ ಹಂತವಾಗಿ ಫಲಾನುಭವಿಗಳ ಖಾತೆಗೆ ತಲುಪುತ್ತಿದೆ. ಸರ್ಕಾರದಿಂದ ಈಗಾಗಲೇ ನಾಲ್ಕನೇ ಕಂತಿನ ಹಣಕ್ಕೆ ಹಣ ಮಂಜೂರಾಗಿರುವುದರಿಂದ ಈಗ ಅರ್ಜಿ ಸಲ್ಲಿಸುವವರು 5ನೇ ಕಂತಿನ ಹಣ ಪಡೆಯಲು ಅರ್ಹರಾಗಲಿದ್ದಾರೆ ಮತ್ತು ಇವರಿಗೆ 5ನೇ ಕಂತಿನ ಹಣ ಮಾತ್ರ ಸಿಗಲಿದೆ 5ನೇ ಕಂತಿನ ಹಣ ಪಡೆಯಬೇಕು ಎಂದರೆ ಜನವರಿ 15ರ ಒಳಗಡೆ ಅರ್ಜಿ ಸಲ್ಲಿಸಬೇಕು.
ಹಾಗಾಗಿ ಮಹಿಳೆಯರು ತಮ್ಮ ಆಧಾರ್ ಕಾರ್ಡ್, ಆಧಾರ್ ಕಾರ್ಡ್ ಲಿಂಕ್ ಆಗಿರುವ ಬ್ಯಾಂಕ್ ಖಾತೆ ವಿವರ ಮತ್ತು ರೇಷನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಮೂಲಕ ಹತ್ತಿರದಲ್ಲಿರುವ ಯಾವುದೇ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಅಥವಾ ಬಾಪೂಜಿ ಸೇವಕೇಂದ್ರಗಳಿಗೆ ಹೋಗಿ ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ತಪ್ಪದೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.
0 Comments