ಕಾಂಗ್ರೆಸ್ ಸರ್ಕಾರ ನೀಡಿರುವ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ ಯೋಜನೆಯ (Gruhalakshmi amount) ರೂ.2000 ಸಹಾಯಧನ ಮತ್ತು ಅನ್ನಭಾಗ್ಯ ಯೋಜನೆಯ ಹೆಚ್ಚುವರಿ ಅಕ್ಕಿ ಹಣ (Annabhagya) ಪಡೆಯಲು ಅರ್ಹತೆ ಇದ್ದರೂ ಕೂಡ ಹಣ ಖಾತೆಗೆ ಬರುತ್ತಿಲ್ಲ ಎಂದರೆ ದಾಖಲೆಗಳಲ್ಲಿ ಸಮಸ್ಯೆಯಾಗಿರುವುದು ಕಾರಣವಾಗಿದೆ.
ಒಂದು ವೇಳೆ ಎಲ್ಲಾ ದಾಖಲೆಗಳು ಸರಿಯಾಗಿದ್ದು ಅರ್ಜಿ ಸಲ್ಲಿಸಿರುವುದು ಕೂಡ ಸರಿಯಾಗಿದ್ದರೂ ರೇಷನ್ ಕಾರ್ಡ್ e-KYC (Ration Card e-KYC) ಆಗದಿರುವ ಕಾರಣದಿಂದ ಅನ್ನಭಾಗ್ಯ ಮತ್ತು ಗೃಹಲಕ್ಮಿ ಹಣ ಕೈತಪ್ಪಿರಬಹುದು. ಹಾಗಾಗಿ ಸರ್ಕಾರ ಈ ಯೋಜನೆಗಳ ಫಲಾನುಭವಿಗಳು e-KYC ಮಾಡಿಸುವುದು ಕಡ್ಡಾಯ ಎಂದು ಸೂಚಿಸಿದೆ.
ನೀವು ಕೂಡ ನಿಮ್ಮ ರೇಷನ್ ಕಾರ್ಡ್ e-KYC ಆಗಿದೆಯೇ? ಇಲ್ಲವೇ? ಎನ್ನುವುದನ್ನು ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ನಲ್ಲಿ ನಾವು ಹೇಳುವ ವಿಧಾನದ ಮೂಲಕ ತಿಳಿದುಕೊಂಡು e-KYC ಆಗದೆ ಇದ್ದರೆ ನ್ಯಾಯಬೆಲೆ ಅಂಗಡಿಗಳಿಗೆ (Fareprice Shop) ಹೋಗಿ ಪ್ರಕ್ರಿಯೆ ಪೂರ್ತಿಗೊಳಿಸಿ.
ಸ್ವಂತ ಮನೆ ಕಟ್ಟಲು ಸರ್ಕಾರದಿಂದ 6.5 ಲಕ್ಷ ರೂಪಾಯಿ ಸಹಾಯಧನ, ಆಸಕ್ತರು ಅರ್ಜಿ ಸಲ್ಲಿಸಿ.! ನಿಮ್ಮ ಕನಸಿನ ಮನೆ ನನಸಾಗಿಸಿಕೊಳ್ಳಿ
* ಮೊದಲಿಗೆ https://ahara.kar.nic.in/Home/EServices ಈ ಲಿಂಕ್ ಕ್ಲಿಕ್ ಮಾಡುವ ಮೂಲಕ ಆಹಾರ ಇಲಾಖೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ಕೊಡಿ
* ಎಡಭಾಗದ ಮೆನು ಬಾರ್ ನಲ್ಲಿ e-Status ಎನ್ನುವ ಆಪ್ಷನ್ ಕಾಣುತ್ತದೆ ಅದನ್ನು ಸೆಲೆಕ್ಟ್ ಮಾಡಿ, dbt Status ಎಂದು ಇರುವ ಆಯ್ಕೆ ಕ್ಲಿಕ್ ಮಾಡಿ ಆಗ ಜಿಲ್ಲಾವಾರು ಲಿಂಕ್ ಗಳು ಕಾಣುತ್ತವೆ. ಅದರಲ್ಲಿ ನಿಮ್ಮ ಜಿಲ್ಲೆಯನ್ನು ಸೆಲೆಕ್ಟ್ ಮಾಡಿ
* ಮತ್ತೊಂದು ಇಂಟರ್ ಫೇಸ್ ಓಪನ್ ಆಗುತ್ತದೆ ಅದರಲ್ಲಿ ಎಡಭಾಗದಲ್ಲಿರುವ ಆಪ್ಷನ್ಗಳಲ್ಲಿ ಪಡಿತರ ವಿವರ (Status of Rationcard) ಅನ್ನುವ ಆಪ್ಷನ್ ಕ್ಲಿಕ್ ಮಾಡಿ. ನಿಮಗೆ ಎರಡು ಆಪ್ಷನ್ ಗಳು ಇರುತ್ತವೆ With OTP and Without OTP.
* ಇದರಲ್ಲಿ ಮೊದಲಿಗೆ Without OTP ಸೆಲೆಕ್ಟ್ ಮಾಡಿ Ration card No. ಕೇಳಿರುತ್ತದೆ ಎಂಟ್ರಿ ಮಾಡಿ Go ಕ್ಲಿಕ್ ಮಾಡಿ.
* Ration Card Status ಇಂಟರ್ ಫೇಸ್ ಓಪನ್ ಆಗುತ್ತದೆ ಸ್ಕ್ರೀನ್ ಎಡ ಭಾಗದಲ್ಲಿ ನಿಮ್ಮ ರೇಷನ್ ಕಾರ್ಡ್ ವಿವರ ಮತ್ತು ಬಲಭಾಗದಲ್ಲಿ ನೀವು ಪ್ರತಿ ತಿಂಗಳು ಪಡೆಯುವ ಪಡಿತರದ ವಿವರ ಕಾಣುತ್ತದೆ. ಮಧ್ಯದಲ್ಲಿ ನಿಮ್ಮ ರೇಷನ್ ಕಾರ್ಡ್ ನಲ್ಲಿ ಎಷ್ಟು ಜನ ಸದಸ್ಯರಿದ್ದಾರೆ (Member Count) ಎಷ್ಟು ಜನರ e-KYC ಆಗಿದೆ ( e-KYC Done), ಎಷ್ಟು ಜನರದ್ದು ಬಾಕಿ ಇದೆ(e-KYC Remaining) ಅನ್ನುವ ಮಾಹಿತಿ ಇರುತ್ತದೆ.
* ಉದಾಹರಣೆಗೆ ಇದರಲ್ಲಿ ನಾಲ್ಕು ಜನ ಸದಸ್ಯರ ಸಂಖ್ಯೆ ತೋರಿಸಿ ನಾಲ್ಕು ಜನರ ಇ-ಕೆವೈಸಿ ಆಗಿದೆ ಎಂದು ತೋರಿಸಿದರೆ ಸಮಸ್ಯೆ ಇಲ್ಲ ಆದರೆ e-KYC Remaining ಆಪ್ಷನ್ ನಲ್ಲಿ 1 or 2 ಸಂಖ್ಯೆ ಇದ್ದರೆ ನಿಮ್ಮ ರೇಷನ್ ಕಾರ್ಡ್ ನಲ್ಲಿ ಇಬ್ಬರು ಸದಸ್ಯರ e-KYC ಮಾಡಿಸುವುದು ಬಾಕಿ ಇದೆ ಎಂದರ್ಥ. ಆದರೆ ನೀವು ಈ ವಿಧಾನದಲ್ಲಿ ಯಾವ ಸದಸ್ಯರ e-KYC ಬಾಕಿ ಇದೆ ಎಂದು ಸರಿಯಾಗಿ ತಿಳಿದುಕೊಳ್ಳಲು ಆಗುವುದಿಲ್ಲ ನೀವು ಯಾವ ಸದಸ್ಯರ e-KYC ಆಗಿಲ್ಲ ಎನ್ನುವುದನ್ನು ತಿಳಿದುಕೊಳ್ಳಲು indiviual ಆಗಿ ಚೆಕ್ ಮಾಡಬೇಕು.
ಮೊಬೈಲ್ ನಲ್ಲೇ ಉಚಿತವಾಗಿ ಪಡೆದುಕೊಳ್ಳಿ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್.! 5 ಲಕ್ಷದ ವರೆಗೆ ಉಚಿತ ಚಿಕಿತ್ಸೆ ಸಿಗಲಿದೆ
* ನೀವು ಮತ್ತೆ Menu ವಿಗೆ ಬಂದು e-Ration card ಆಪ್ಷನ್ ನಲ್ಲಿ Linking UID ಆಪ್ಷನ್ ಮೇಲೆ ಕ್ಲಿಕ್ ಮಾಡಿ, ಜಿಲ್ಲಾವಾರು ಲಿಂಕ್ ಇರುತ್ತದೆ ನಿಮ್ಮ ಜಿಲ್ಲೆಯನ್ನು ಸೆಲೆಕ್ಟ್ ಮಾಡಿ
* ಮತ್ತೊಂದು ಪುಟ ಓಪನ್ ಆಗುತ್ತದೆ ಅದರಲ್ಲಿ UID linking for RC Members ಎನ್ನುವುದನ್ನು ಕ್ಲಿಕ್ ಮಾಡಿ
* Aadhar Number or Vurtual ID ಎರಡು ಆಪ್ಷನ್ ಇರುತ್ತದೆ Aadhar Number ಆಪ್ಷನ್ ಕ್ಲಿಕ್ ಮಾಡಿ
* ನಿಮ್ಮ ಆಧಾರ್ ಸಂಖ್ಯೆ ಹಾಕಿ GO ಕ್ಲಿಕ್ ಮಾಡಿ, ಆ ಮೊಬೈಲ್ ಸಂಖ್ಯೆಗೆ OTP ಬರುತ್ತದೆ, OTP ಎಂಟ್ರಿ ಮಾಡಿ GO ಕ್ಲಿಕ್ ಮಾಡಿ, Ration Card Number ಎಂಟ್ರಿ ಮಾಡಿ Go ಕ್ಲಿಕ್ ಮಾಡಿ.
* Status of Ration Card interface ಓಪನ್ ಆಗುತ್ತದೆ. ಈ ಮೊದಲು ಕಾಣಿಸಿದ ರೀತಿಯಲ್ಲಿಯೇ ಎಡಭಾಗದಲ್ಲಿ ರೇಷನ್ ಕಾರ್ಡ್ ವಿವರ, ಬಲಭಾಗದಲ್ಲಿ ಪಡಿತರ ತೆಗೆದುಕೊಂಡಿರುವ ವಿವರ ಮತ್ತು ಮಧ್ಯದಲ್ಲಿ Member details ಇರುತ್ತದೆ. Member name, Adhar Last 4 digit and e-KYC ಆಗಿದ್ದರೆ YES ಎಂದು ಬರುತ್ತದೆ. ಆ ರೇಷನ್ ಕಾರ್ಡ್ ನಲ್ಲಿರುವ ಎಲ್ಲಾ ಸದಸ್ಯರ ವಿವರವು ಈ ರೀತಿ ಬರುತ್ತದೆ. ಯಾವ ಸದಸ್ಯನ e-KYC ಆಗಿಲ್ ಅವರ ಹೆಸರಿನ ಮುಂದೆ NO ಎಂದು ಇರುತ್ತದೆ. ತಪ್ಪದೇ ಅವರೆಲ್ಲರೂ ತಮ್ಮ ಬಯೋಮೆಟ್ರಿಕ್ ಮತ್ತು ಆಧಾರ್ ದಾಖಲೆ ನೀಡುವ ಮೂಲಕ e-KYC ಮಾಡಿಸಿಕೊಳ್ಳಿ.
0 Comments