ಗೃಹಲಕ್ಷ್ಮಿ ಹಣ ಪಡೆಯುತ್ತಿರುವ ಎಲ್ಲಾ ಮಹಿಳೆಯರಿಗೂ ಒಂದೇ ಬಾರಿಗೆ ಸಿಗುತ್ತದೆ 90 ಸಾವಿರ.! ರಾಜ್ಯ ಸರ್ಕಾರದಿಂದ ಮಹಿಳೆಯರಿಗೆ ಬಂಪರ್ ಆಫರ್

ಗೃಹಲಕ್ಷ್ಮಿ ಹಣ ಪಡೆಯುತ್ತಿರುವ ಎಲ್ಲಾ ಮಹಿಳೆಯರಿಗೂ ಒಂದೇ ಬಾರಿಗೆ ಸಿಗುತ್ತದೆ 90 ಸಾವಿರ.! ರಾಜ್ಯ ಸರ್ಕಾರದಿಂದ ಮಹಿಳೆಯರಿಗೆ ಬಂಪರ್ ಆಫರ್




 ಕರ್ನಾಟಕದಲ್ಲಿ ಕಾಂಗ್ರೆಸ್ (Congress) ನೇತೃತ್ವದ ಸರ್ಕಾರವು ರೇಷನ್ ಕಾರ್ಡ್ ಹೊಂದಿರುವ ಕರ್ನಾಟಕದ ಎಲ್ಲಾ ಮಹಿಳೆಯರಿಗಾಗಿ ಗೃಹಲಕ್ಷ್ಮಿ ಯೋಜನೆಯನ್ನು (Gruhalakshmi Scheme) ಜಾರಿಗೆ ತಂದಿದೆ. ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬನೆಗಳಾಗಿ ಮಾಡಿ ಲಿಂಗ ಸಮಾನತೆ ಕಾಪಾಡುವ ಉದ್ದೇಶದಿಂದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿ ಗೃಹಲಕ್ಷ್ಮಿ ಯೋಜನೆ ಜಾರಿಗೆ ಬಂದಿದ್ದು.




ಈ ಯೋಜನೆ ಮೂಲಕ ಕುಟುಂಬದ ಮುಖ್ಯಸ್ಥೆ ಯಾಗಿರುವ ಮಹಿಳೆಯು ಪ್ರತಿ ತಿಂಗಳು ಕುಟುಂಬ ನಿರ್ವಹಣೆಗಾಗಿ ಸರ್ಕಾರದಿಂದ ರೂ.2,000 ಸಹಾಯಧನವನ್ನು dbt ಮೂಲಕ. ಬ್ಯಾಂಕ್ ಖಾತೆಗೆ ಪಡೆಯುತ್ತಿದ್ದಾರೆ. ಈ ರೀತಿ ಗೃಹಲಕ್ಷ್ಮಿ ಯೋಜನೆಗೆ ಅರ್ಹರಾಗಿರುವ ಮಹಿಳೆಯು ಸರ್ಕಾರದ ಮತ್ತೊಂದು ಯೋಜನೆ ಪ್ರಯೋಜನವನ್ನು ಕೂಡ ಪಡೆಯಬಹುದು.



ರೈತರಿಗೆ ನೀರಾವರಿ ಭಾಗ್ಯ.! ನಿಮ್ಮ ಹೊಲ ಗದ್ದೆ ಜಮೀನಿಗೆ ನೀರು ಪಡೆಯಲು ಹೀಗೆ ಅರ್ಜಿ ಸಲ್ಲಿಸಿ



ಈ ಯೋಜನೆ ಮೂಲಕ ಒಂದೇ ಬಾರಿಗೆ ರೂ.90,000 ಹಣವನ್ನು ಸರ್ಕಾರದಿಂದ ಪಡೆಯಬಹುದು. ಆ ಯೋಜನೆ ಯಾವುದು ಮತ್ತು ಅದಕ್ಕೆ ಅರ್ಹತೆಗಳೇನು? ಯಾವ ರೀತಿ ದಾಖಲೆಗಳನ್ನು ಕೊಡಬೇಕಾಗುತ್ತದೆ ಮತ್ತು ಎಲ್ಲಿ ಅರ್ಜಿ ಸಲ್ಲಿಸಬೇಕು ಎನ್ನುವ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸುತ್ತೇವೆ.






ಆದಾಯ ಉತ್ಪನ್ನ ಚಟುವಟಿಕೆಗಳಾದ ಟೈಲರಿಂಗ್ ಟೈಪಿಂಗ್ ಬ್ಯೂಟಿ ಪಾರ್ಲರ್ ಸಿದ್ದ ಉಡುಪುಗಳ ತಯಾರಿಕೆ ಬುಟ್ಟಿ ಎಣೆಯುವುದು ಹೇಗೆ ಇನ್ನು ಮುಂತಾದ ಹತ್ತಾರು ಉದ್ದಿಮೆಗಳಲ್ಲಿ ತೊಡಗಿಕೊಂಡಿರುವ ಮಹಿಳೆಗೆ ಪ್ರೋತ್ಸಾಹಿಸುವ ಸಲುವಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆ ಹೆಸರು ಉದ್ಯೋಗಿನಿ ಯೋಜನೆ (Udyogini Scheme).


ಉದ್ಯೋಗಿನಿ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆಗಳು:-

* ಅಭ್ಯರ್ಥಿಯು ಮಹಿಳೆಯಾಗಿರಬೇಕು

* ಯಾವುದೇ ವರ್ಗಕ್ಕೆ ಸೇರಿದ ಮಹಿಳೆಯು ಕೂಡ ಅರ್ಹರಾಗಿರುತ್ತಾರೆ







* 18 ರಿಂದ 55 ವರ್ಷ ವಯೋಮಾನದ ಒಳಗಿನ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಬಹುದು.

* ಎಲ್ಲ ಮೂಲಗಳಿಂದ ಕುಟುಂಬದ ವಾರ್ಷಿಕ ಆದಾಯ ಮಿತಿ ರೂ. 1.5 ಲಕ್ಷ

* ಈ ಮೇಲೆ ತಿಳಿಸಿದಂತೆ ಯಾವುದಾದರೂ ಒಂದು ಉದ್ದಿಮೆಗಳಲ್ಲಿ ತೊಡಗಿರುವವರು ಮಾತ್ರ ಅರ್ಜಿ ಸಲ್ಲಿಸಬಹುದು

* ಹೆಚ್ಚಿನ ಸಿಬಿಲ್ ಸ್ಕೋರ್ ಹೊಂದಿರುವವರಿಗೆ ಆದ್ಯತೆ ಇರುತ್ತದೆ ಮತ್ತು ಅರ್ಜಿ ಸಲ್ಲಿಸುವವರು ಯಾವುದೇ ಬ್ಯಾಂಕ್ ನಲ್ಲಿ ಲೋನ್ ಡಿಫಾಲ್ಟರ್ ಆಗಿರಬಾರದು.




ಈ ಲಿಸ್ಟ್ ನಲ್ಲಿ ಹೆಸರು ಇರುವ ಲೇಬರ್ ಕಾರ್ಡ್ ರದ್ದು.! ಸರ್ಕಾರದಿಂದ ಖಡಕ್ ಆದೇಶ ಜಾರಿ




ಸಿಗುವ ಸಹಾಯಧನ:-

* ಕನಿಷ್ಠ 3 ಲಕ್ಷದವರೆಗೆ ಸಾಲ ಸೌಲಭ್ಯ ಇರುತ್ತದೆ

* ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 1.50 ಲಕ್ಷ ರೂಪಾಯಿ ಸಬ್ಸಿಡಿ ಇರುತ್ತದೆ ಉಳಿದ ಹಣವನ್ನು ಕೊಟ್ಟಿರುವ ಕಾಲವಧಿಯೊಳಗೆ EMI ರೂಪದಲ್ಲಿ ತೀರಿಸಬೇಕು

* ಇನ್ನಿತರ ಸಾಮಾನ್ಯ ವರ್ಗಕ್ಕೆ ಸೇರಿದ ಮಹಿಳೆಯರಿಗೆ ರೂ 90,000 ಸಾವಿರ ಸಬ್ಸಿಡಿ ಸಂಪೂರ್ಣ ಉಚಿತ. ಉಳಿದ ಹಣವನ್ನು EMI ರೂಪದಲ್ಲಿ ತೀರಿಸಬೇಕು.

* ನೀಡಿರುವ ಕಾಲದೊಳಗೆ ಸಾಲದ ಕಂತುಗಳನ್ನು ಪೂರೈಸುವ ಮಹಿಳೆಗೆ ನಂತರದ ದಿನಗಳಲ್ಲಿ ಗರಿಷ್ಠ 5 ಲಕ್ಷದವರೆಗೆ ಸಾಲ ಪಡೆಯಬಹುದು.



ಬೇಕಾಗುವ ದಾಖಲೆಗಳು:-

* ಪಾಸ್ಪೋರ್ಟ್ ಅಳತೆಯ ಭಾವಚಿತ್ರಗಳು

* ಅರ್ಜಿದಾರರ ಆಧಾರ್ ಕಾರ್ಡ್ ಪ್ರಮಾಣಪತ್ರ

* ಸರಿಯಾಗಿ ಭರ್ತಿ ಮಾಡಿದ ಉದ್ಯೋಗಿನಿ ಯೋಜನೆ ಅರ್ಜಿ ನಮೂನೆ

* ವಿಳಾಸ ಪುರಾವೆ

* ಜಾತಿ ಮತ್ತು ಆದಾಯ ಪ್ರಮಾಣ ಪತ್ರ

* ಬಡತನ ರೇಖೆಗಿಂತ ಕೆಳಗಿರುವ ಅರ್ಜಿದಾರರ (BPL) ಕಾರ್ಡ್

* ಬ್ಯಾಂಕ್ ಪಾಸ್‌ಬುಕ್‌ನ ವಿವರ

* ಅಗತ್ಯವಿರುವ ಯಾವುದೇ ಇನ್ನಿತರ ದಾಖಲೆಗಳು


ಅರ್ಜಿ ಸಲ್ಲಿಸುವ ವಿಧಾನ:-

* ಈ ಮೇಲೆ ತಿಳಿಸಿದ ಎಲ್ಲಾ ದಾಖಲೆ ಜೊತೆ ಹತ್ತಿರದಲ್ಲಿರುವ ಬ್ಯಾಂಕ್ ಗಳನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದು.

* ಆನ್ಲೈನ್ನಲ್ಲಿ ಕೂಡ ಈ ಯೋಜನೆಗೆ ಸಾಲ ಸೌಲಭ್ಯ ನೀಡುವ ಬ್ಯಾಂಕ್ ಗಳ ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಟ್ಟು ಅರ್ಜಿ ಸಲ್ಲಿಸಬಹುದು


Post a Comment

0 Comments