ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕೃಷಿ ಕ್ಷೇತ್ರಕ್ಕಾಗಿ ಸಾಕಷ್ಟು ಯೋಜನೆಗಳನ್ನು ರೂಪಿಸಿವೆ. ಅಂತೆಯೇ 2023-24ರ ಸಾಲಿನ ರಾಜ್ಯ ಬಜೆಟ್ ನಲ್ಲಿ ರೈತರ ಸಲುವಾಗಿ ಕೃಷಿಭಾಗ್ಯ ಯೋಜನೆಯನ್ನು ಪ್ಯಾಕೇಜ್ ಮಾದರಿಯಲ್ಲಿ
ಅನುಷ್ಠಾನಗೊಳಿಸಲು ಸರ್ಕಾರ ಘೋಷಣೆ ಮಾಡಿತ್ತು
ಇದರ ಪ್ರಕಾರವಾಗಿ ಕೃಷಿ ಭಾಗ್ಯ ಯೋಜನೆಯಡಿ ಮಳೆಯಾಶ್ರಿತ ಕೃಷಿ ಮಾಡುತ್ತಿರುವ ರೈತನಿಗೆ ನೀರಾವರಿ ಸೌಲಭ್ಯ ಒದಗಿಸಲು ಆತನ ಜಮೀನಿಗೆ ಬದು ನಿರ್ಮಾಣ, ಕೃಷಿ ಹೊಂಡ, ಪಂಪ್ ಸೆಟ್, ಹನಿ ನೀರಾವರಿ ಅಥವಾ ತುಂತುರು ನೀರಾವರಿ ಘಟಕ ಸ್ಥಾಪನೆ ಮಾಡಿಕೊಳ್ಳಲು ಸಹಾಯಧನ ನೀಡುವ ಉದ್ದೇಶದಿಂದ ಅರ್ಹ ರೈತರಿಂದ ಅರ್ಜಿ ಆಹ್ವಾನಿಸಿದೆ.
ಈ ಲಿಸ್ಟ್ ನಲ್ಲಿ ಹೆಸರು ಇರುವ ಲೇಬರ್ ಕಾರ್ಡ್ ರದ್ದು.! ಸರ್ಕಾರದಿಂದ ಖಡಕ್ ಆದೇಶ ಜಾರಿ
ಈ ಯೋಜನೆಗಳ ಅನುಷ್ಠಾನದಿಂದಾಗಿ ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಉತ್ಪಾದನೆಯಾಗಿ ರೈತನು ಕೂಡ ಆರ್ಥಿಕವಾಗಿ ಸಬಲನಾಗುತ್ತಾನೆ ಎಂದು ಊಹಿಸಲಾಗಿದೆ ಇದಕ್ಕಾಗಿ ಬರೋಬ್ಬರಿ 200 ಕೋಟಿ ರೂಪಾಯಿಗಳ ರಾಜ್ಯದ 24 ಜಿಲ್ಲೆಗಳ 106 ತಾಲ್ಲೂಕುಗಳ ಮಳೆಯಾಶ್ರಿತ ಕೃಷಿಕರಿಗೆ ಈ ಯೋಜನೆ ತಲುಪಿಸಲು ಯೋಜನೆ ಸಿದ್ಧವಾಗಿದೆ.
ಈ ಕೃಷಿ ಭಾಗ್ಯ ಯೋಜನೆಯು 6 ಕಡ್ಡಾಯ ಘಟಕಗಳನ್ನು ಒಳಗೊಂಡಿದ್ದು ಎಲ್ಲಾ ಘಟಕಗಳನ್ನು ಫಲಾನುಭವಿ ರೈತರು ತಪ್ಪದೇ ಅಳವಡಿಸಿಕೊಳ್ಳಲು ಕೋರಲಾಗಿದೆ. ಈ ಹಿಂದೆಯೂ ಕೂಡ ಇದೇ ಮಾದರಿಯ ಯೋಜನೆಗಳು ಇದ್ದವು ಆದರೆ ಪ್ರತಿಯೊಂದಕ್ಕೂ ಪ್ರತ್ಯೇಕವಾಗಿ ಅರ್ಜಿ ಆಹ್ವಾನ ಮಾಡಲಾಗುತ್ತಿತ್ತು ಆದರೆ ಈಗ ಪ್ಯಾಕೇಜ್ ಮಾದರಿಯಲ್ಲಿ ಯೋಜನೆ ಘೋಷಿಸಲಾಗಿದೆ.
ನಿಮ್ಮ ಗ್ಯಾಸ್ ಗೆ ಇ-ಕೆವೈಸಿ ಆಗಿದೆಯೇ.? ಇಲ್ಲವಾದಲ್ಲಿ ಉಚಿತವಾಗಿ ಮೊಬೈಲ್ ನಲ್ಲಿ ಇ-ಕೆವೈಸಿ ಮಾಡಿಕೊಳ್ಳಿ
ಕ್ಷೇತ್ರ ಬದು ನಿರ್ಮಾಣ, ನೀರು ಸಂಗ್ರಹಣಾ ರಚನೆ ಅಂದರೆ ಕೃಷಿ ಹೊಂಡ, ನೀರು ಇಂಗದ೦ತೆ ತಡೆಯಲು ಪಾಲಿಥೀನ್ ಹೊದಿಕೆ, ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿ, ಹೊಂಡದಿ೦ದ ನೀರು ಎತ್ತಲು ಡೀಸೆಲ್ ಅಥವಾ ಸೋಲಾರ್ ಪಂಪ್‌ಸೆಟ್, ನೀರನ್ನು ಬೆಳೆಗೆ ಹಾಯಿಸಲು ಹನಿ ನೀರಾವರಿ / ತುಂತುರು ನೀರಾವರಿ ಘಟಕಗಳ ಪರಿಕರಗಳನ್ನು ಸಬ್ಸಿಡಿಯಲ್ಲಿ ವಿತರಣೆ ಮಾಡಲಾಗುತ್ತದೆ.
ರೈತರು ಎಲ್ಲಾ ಘಟಕಗಳನ್ನು ಅಳವಡಿಕೆ ಮಾಡಿಕೊಂಡರೆ ಯೋಜನೆ ಉದ್ದೇಶ ಸಫಲವಾಗುತ್ತದೆ ಹಾಗಾಗಿ ರೈತರಿಗೆ ಮನವರಿಕೆ ಮಾಡುವಂತೆ ಕೃಷಿ ಅಧಿಕಾರಿಗಳಿಗೆ ಮಾರ್ಗಸೂಚಿ ಹೊರಡಿಸಲಾಗಿದೆ.
ಸಹಾಯಧನ:-
* ಕ್ಷೇತ್ರ ಬದು ನಿರ್ಮಾಣ ಘಟಕ ಸ್ಥಾಪನೆಗೆ ಸಾಮಾನ್ಯ ರೈತರಿಗೆ ಘಟಕ ವೆಚ್ಚದ 80%, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರೈತರಿಗೆ 90% ಸಹಾಯಧನ
* ನೀರು ಸಂಗ್ರಹಣ ರಚನೆ (ಕೃಷಿ ಹೊಂಡ) ಸ್ಥಾಪಿಸಲು ಸಾಮಾನ್ಯ ವರ್ಗದ ರೈತನಿಗೆ ಘಟಕ ವೆಚ್ಚದ 80% ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ರೈತನಿಗೆ 90%.
ಬರ ಪರಿಹಾರದ ಹಣ ನಿಮ್ಮ ಖಾತೆಗೆ ಬರುತ್ತೋ ಇಲ್ಲವೋ ಮೊಬೈಲ್ ನಲ್ಲಿಯೇ ಈ ರೀತಿ ಚೆಕ್ ಮಾಡಿ
* ನೀರು ಇಂಗದಂತೆ ತಡೆಯಲು ಪಾಲಿಥಿನ್ ಹೊದಿಕೆ (ಯೋಜನೆ ಗರಿಷ್ಠ ಮೊತ್ತ ರೂ.50,000) ಇದರಲ್ಲಿ ಸಾಮಾನ್ಯ ವರ್ಗದ ರೈತನಿಗೆ ಘಟಕ ವೆಚ್ಚದ 80%, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರೈತರಿಗೆ 90%.
* ಕೃಷಿಹೊಂಡದ ಸುತ್ತಲು ತಂತಿ ಬೇಲಿ ನಿರ್ಮಿಸಲು ಸಾಮಾನ್ಯ ವರ್ಗದ ರೈತರಿಗೆ ಘಟಕ ವೆಚ್ಚದ 40%, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ರೈತನಿಗೆ 50%.
* ಹೋಂಡತಿಂದ ನೀರು ಎತ್ತಲು ಡೀಸೆಲ್ ಅಥವಾ ಪೆಟ್ರೋಲ್ ಅಥವಾ ಸೋಲಾರ್ ಚಾಲಿತ ಪಂಪ್ ಸೆಟ್ (Upto 10HP) ಸಾಮಾನ್ಯ ವರ್ಗದ ರೈತನಿಗೆ ಘಟಕ ವೆಚ್ಚದ 50%, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರೈತನಿಗೆ 90%
* ನೀರನ್ನು ಬೆಳೆಗಳಿಗೆ ಹಾಯಿಸಲು ಸೂಕ್ಷ್ಮ ತುಂತುರು ನೀರಾವರಿ ಅಥವಾ ಹನಿ ನೀರಾವರಿ (PMKSY-PDMC / Atal Bhoo jal Scheme) ಒಗ್ಗೂಡಿಯಸುವಿಕೆಗೆ ಎಲ್ಲ ರೈತರಿಗೂ ಘಟಕ ವೆಚ್ಚದ 90% ಸಹಾಯಧನ ಸಿಗುತ್ತದೆ.
ಅರ್ಜಿ ಸಲ್ಲಿಸಲು ಇರುವ ಕಂಡೀಷನ್ ಗಳು:-
* ರೈತರ ಒಟ್ಟು ಸಾಗುವಳಿ ಕ್ಷೇತ್ರದ ಒಂದು ಸರ್ವೆ ನಂಬರ್ ನಲ್ಲಿ ಕನಿಷ್ಠ 1 ಎಕರೆ ಇರಬೇಕು. ಅಥವಾ ರೈತರ 1 ಎಕರೆ ಸಾಗುವಳಿ ಕ್ಷೇತ್ರವು ಒಂದಕ್ಕಿ೦ತ ಹೆಚ್ಚು ಸರ್ವೆ ನಂಬರ್ ನಲ್ಲಿ ಒಂದೇ ಪ್ರದೇಶದಲ್ಲಿ ಇರುಬೇಕು. ಇದು ಕನಿಷ್ಠ ಐದು ಎಕರೆ ಪ್ರದೇಶದಿಂದ ನೀರು ಶೇಖರಣೆಯಾಗುವಂತಿರಬೇಕು.
* ಈಗಾಗಲೇ ಈ ಯೋಜನೆ ಅಥವಾ ಇದೇ ಮಾದರಿಯ ಇತರೆ ಯೋಜನೆಯಡಿ ಕೃಷಿ ಹೊಂಡ ಫಲಾನುಭವಿಯಾಗಿರುವ ರೈತರು ಈ ಯೋಜನೆಗೆ ಅರ್ಜಿ ಸಲ್ಲಿಸುವಂತಿಲ್ಲ.
* ಫಲಾನುಭವಿಯು ಒಂದೇ ಇಲಾಖೆಯಿಂದ ಹಾಗೂ ಒಂದೇ ಯೋಜನೆಯಿಂದ ಸಹಾಯಧನವನ್ನು ಪಡೆಯುವುದನ್ನು ಖಾತ್ರಿಪಡಿಸಲು ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವ ಇತರೆ ಇಲಾಖೆಗಳಿಂದ ದೃಢೀಕರಣ ಸಲ್ಲಿಸಬೇಕು.
* ಸದ್ಯಕ್ಕೆ ರಾಜ್ಯದಲ್ಲಿ ಬಾಗಲಕೋಟೆ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬೆಳಗಾವಿ, ಬಳ್ಳಾರಿ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಧಾರವಾಡ, ದಾವಣಗೆರೆ, ಗದಗ, ಹಾಸನ, ಕಲಬುರಗಿ, ಕೋಲಾರ, ಕೊಪ್ಪಳ ಮಂಡ್ಯ, ಮೈಸೂರು, ರಾಯಚೂರು, ರಾಮನಗರ, ತುಮಕೂರು, ವಿಜಯಪುರ, ವಿಜಯನಗರ, ಯಾದಗಿರಿ ಜಿಲ್ಲೆಗಳ 106 ಆಯ್ದ ತಾಲ್ಲೂಕುಗಳ ರೈತರು ಈ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ.
* ಹೆಚ್ಚಿನ ಮಾಹಿತಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಿ.
0 Comments