ಈ ಜಿಲ್ಲೆಯ ಮಹಿಳೆಯರಿಗೆ ಗೃಹಲಕ್ಷ್ಮಿ ಮತ್ತು ಅನ್ನ ಭಾಗ್ಯ ಯೋಜನೆಯ ಎಲ್ಲಾ ತಿಂಗಳ ಹಣ ಜಮೆ ಆಗಿದೆ.! ಮೊಬೈಲ್ ನಲ್ಲಿಯೇ ಹಣ ಜಮೆ ಆಗಿರುವ ವಿವರ ನೋಡಿ

ಈ ಜಿಲ್ಲೆಯ ಮಹಿಳೆಯರಿಗೆ ಗೃಹಲಕ್ಷ್ಮಿ ಮತ್ತು ಅನ್ನ ಭಾಗ್ಯ ಯೋಜನೆಯ ಎಲ್ಲಾ ತಿಂಗಳ ಹಣ ಜಮೆ ಆಗಿದೆ.! ಮೊಬೈಲ್ ನಲ್ಲಿಯೇ ಹಣ ಜಮೆ ಆಗಿರುವ ವಿವರ ನೋಡಿ





 

ಕರ್ನಾಟಕ ಸರ್ಕಾರ (Karnataka Government) ಘೋಷಿಸಿದ್ದ ಗ್ಯಾರಂಟಿ ಯೋಜನೆಗಳಲ್ಲಿ (Guarantee) ಒಂದಾದ ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಮೊದಲನೇ ಕಂತಿನ ಹಣವು 30ನೇ ಆಗಸ್ಟ್ 2023 ರಂದು ಬಿಡುಗಡೆ ಆಗಿದ್ದು ಇಲ್ಲಿಯವರೆಗೆ ಯಶಸ್ವಿಯಾಗಿ 5 ತಿಂಗಳು ಕಳೆದಿವೆ.






ಇಲ್ಲಿವರೆಗೆ ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಂಡಿದ್ದ ಫಲಾನುಭವಿಗಳು ಜನವರಿ 15ರ ಒಳಗೆ 4ನೇ ಕಂತಿನ ಹಣವನ್ನು ಸಂಪೂರ್ಣವಾಗಿ ಪಡೆದಿದ್ದಾರೆ. ಮತ್ತು ಕೆಲ ಫಲಾನುಭವಿಗಳ ಖಾತೆಗೆ 5ನೇ ಕಂತಿನ ಹಣವು ಕೂಡ ವರ್ಗಾವಣೆ ಆಗಿದೆ. ಜನವರಿ ಅಂತ್ಯದ ಒಳಗಡೆ ಯಶಸ್ವಿಯಾಗಿ ಎಲ್ಲಾ ಮಹಿಳಾ ಫಲಾನುಭವಿಗಳಿಗೂ 5ನೇ ಕಂತಿನ ಹಣವು ತಲುಪಲಿದೆ.



16 ನೇ ಕಂತಿನ ಕಿಸಾನ್ ಹಣ ಬಿಡುಗಡೆ.! ನಿಮ್ಮ ಹೆಸರು ಈ ಲಿಸ್ಟ್ ನಲ್ಲಿ ಇದೆಯೇ ಈ ರೀತಿ ಚೆಕ್ ಮಾಡಿ




ಹಾಗೆಯೇ ಅನ್ನಭಾಗ್ಯ ಯೋಜನೆ (Annabhagya) ಆರಂಭವಾದಾಗಲಿಂದ ಕುಟುಂಬದ ಪ್ರತಿ ಸದಸ್ಯನ 5Kg ಹೆಚ್ಚುವರಿ ಅಕ್ಕಿ ಹಣವು ಕೂಡ ಅದೇ ಕುಟುಂಬದ ಮುಖ್ಯಸ್ಥ ಖಾತೆಗೆ ವರ್ಗಾವಣೆ ಆಗುತ್ತಿದೆ.
ಈ ಯೋಜನೆಗಳ ಹಣ ಪಡೆಯಲು ಇರುವ ಸಮಸ್ಯೆಗಳನ್ನು ಪರಿಹರಿಸಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗೃಹಲಕ್ಷ್ಮಿ ಕ್ಯಾಂಪ್ ಗಳನ್ನು ಕೂಡ ನಡೆಸಿ ಅರ್ಜಿ ಸಲ್ಲಿಸಿದ್ದರೂ ಯಾವೆಲ್ಲಾ ಮಹಿಳೆಯರಿಗೆ ಹಣ ಬರಲಿಲ್ಲ ಅವರ ಬ್ಯಾಂಕ್ ಖಾತೆ ಸಂಸ್ಥೆಗಳು ಮತ್ತು ಇನ್ನಿತರ ತಾಂತ್ರಿಕ ಸಂಸ್ಥೆಗಳನ್ನು ಪರಿಹರಿಸಿ ಹಣ ಬರುವಂತೆ ವ್ಯವಸ್ಥೆ ಮಾಡಿಕೊಡಲಾಗಿದೆ.








ಇವುಗಳ ಕುಂದು ಕೊರತೆಗಳ ನಿವಾರಣೆಗೆ ತಾಲ್ಲೂಕಿನ CDPO ಅಧಿಕಾರಿಗಳನ್ನು ಸಂಪರ್ಕಿಸಬಹುದು ನೀವು ಕೂಡ ಗೃಹಲಕ್ಷ್ಮಿ ಯೋಜನೆಗೆ ಅರ್ಹರಾಗಿದ್ದು, ನಿಮಗೆ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆ ಹಣ ಜಮೆ ಆಗಿರುವುದರ ಕುರಿತು ಯಾವುದೇ SMS ಸಂದೇಶ ತಲುಪದೇ ಇದ್ದರೆ ಅಥವಾ ನಿಮ್ಮ ಬ್ಯಾಂಕ್ ಶಾಖೆಗಳು ದೂರವಿದ್ದು ನೀವು ನಿಮ್ಮ ಅಕೌಂಟ್ ವಿವಾರ ಪಡೆಯಲು ಸಾಧ್ಯವಾಗದೇ ಇದ್ದರೆ ಈಗ ನಾವು ಹೇಳುವ ಈ ವಿಧಾನದ ಮೂಲಕ ಮನೆಯಲ್ಲಿಯೇ ಕುಳಿತು ಎರಡು ನಿಮಿಷಗಳಲ್ಲಿ ನಿಮ್ಮ ಮೊಬೈಲ್ ನಲ್ಲಿ ಇದರ ವಿವರವನ್ನು ಚೆಕ್ ಮಾಡಬಹುದು.




ಗ್ಯಾಸ್ ಸಿಲಿಂಡರ್ ಸಬ್ಸಿಡಿ HP Gas ರೂ.600, ಭಾರತ್ ರೂ.400, ಇಂಡಿಯನ್ ಗ್ಯಾಸ್ ರೂ.300, ನಿಮಗೆ ಹಣ ಬಂತಾ ಇಲ್ವಾ.? ನಿಮ್ಮ ಮೊಬೈಲ್ ನಲ್ಲೇ ಈ ರೀತಿ ಚೆಕ್ ಮಾಡಿ




* ಮೊದಲಿಗೆ Playstore ಗೆ ಹೋಗಿ ಕರ್ನಾಟಕ ಸರ್ಕಾರದ ಡಿಬಿಟಿ ಕರ್ನಾಟಕ ಆಪ್ (DBT Karnataka app) ಡೌನ್ಲೋಡ್ ಮಾಡಿಕೊಳ್ಳಿ
* ನಿಮ್ಮ ಕುಟುಂಬದ ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥರ ಸ್ಥಾನದಲ್ಲಿರುವ ಮಹಿಳೆಯ ಆಧಾರ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಬೇಕಾಗುತ್ತದೆ. ಆ ಮಹಿಳೆ ಆಧಾರ್ ಸಂಖ್ಯೆಯನ್ನು ಕೇಳಲಾಗುತ್ತದೆ ನಮೂದಿಸಿ, ಆಧಾರ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ OTP ಬರುತ್ತದೆ, ಅದನ್ನು ಎಂಟ್ರಿ ಮಾಡಿ ಲಾಗಿನ್ ಆಗಿ.







* ನಿಮ್ಮ ಇಚ್ಛೆಯ ಯಾವುದೇ ನಾಲ್ಕು ಅಂಕೆ ಹಾಕಿ m-pin (Password) ಸೆಟ್ ಮಾಡಿ ಅದನ್ನು ಮತ್ತೊಮ್ಮೆ ಹಾಕುವ ಮೂಲಕ ದೃಢಪಡಿಸಿಕೊಳ್ಳಿ.
* Login ಸಕ್ಸಸ್ ಆದಮೇಲೆ ಟಿಬಿಟಿ ಕರ್ನಾಟಕ ಆಪ್ ಮುಖಪುಟ ಓಪನ್ ಆಗುತ್ತದೆ. ಅದರಲ್ಲಿ ಪೇಮೆಂಟ್ (Payment), ಬ್ಯಾಂಕ್ ಅಕೌಂಟ್ (Bank account details), ಪ್ರೊಫೈಲ್ (Profile), ಕಾಂಟಾಕ್ಟ್ (Contact) ಎನ್ನುವ ನಾಲ್ಕು ಆಪ್ಷನ್ ಇರುತ್ತದೆ.








ಬ್ಯಾಂಕ್ ಅಕೌಂಟ್ ಆಪ್ಷನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಯಾವ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿದೆ ಎನ್ನುವ ವಿವರ ಬರುತ್ತದೆ. ಪ್ರೊಫೈಲ್ ಕ್ಲಿಕ್ ಮಾಡಿದರೆ ನಿಮ್ಮ ಹೆಸರು, ವಿಳಾಸ, ಜನ್ಮ ದಿನಾಂಕ, ಮೊಬೈಲ್ ಸಂಖ್ಯೆ ಇತ್ಯಾದಿ ಪ್ರೊಫೈಲ್ ವಿವರ ಕಾಣಬಹುದು. ಹಾಗೆ ಕಾಂಟಾಕ್ಟ್ ಕಾಲಿಕ್ ಮಾಡಿದರೆ ನಿಮ್ಮ ಮೊಬೈಲ್ ಸಂಖ್ಯೆ ಕಾಣಿಸುತ್ತದೆ.

* ಅದರಲ್ಲಿ ನೀವು ಪೇಮೆಂಟ್ ಎನ್ನುವ ಆಪ್ಷನ್ ಕ್ಲಿಕ್ ಮಾಡಿದರೆ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಎನ್ನುವ ಎರಡು ವಿಭಾಗ ಕಾಣುತ್ತದೆ. ಅದರಲ್ಲಿ ನಿಮಗೆ ಯಾವುದು ಚೆಕ್ ಮಾಡಬೇಕಿದೆ ಅದನ್ನು ಸೆಲೆಕ್ಟ್ ಮಾಡಿ, ಯಾವ ತಿಂಗಳಿನಲ್ಲಿ ಎಷ್ಟು ಹಣ ಜಮೆ ಆಗಿದೆ, ಯಾವ ದಿನಾಂಕದಂದು ಆಗಿದೆ, ನಿಮ್ಮ ಯಾವ ಬ್ಯಾಂಕ್ ಶಾಖೆಗೆ ಆಗಿದೆ ಮತ್ತು ಆ ಬ್ಯಾಂಕ್ ಖಾತೆಯ ಕೊನೆಯ ನಾಲ್ಕು ಸಂಖ್ಯೆ ಸಮೇತ ವಿವರ ಸ್ಕ್ರೀನ್ ಮೇಲೆ ಬರುತ್ತದೆ.

Post a Comment

0 Comments