ಇದೊಂದು ಕಾರ್ಡ್ ಇದ್ರೆ ಸಾಕು, 3 ಲಕ್ಷ ಸಾಲ ಸಿಗುತ್ತೆ ರೈತರಿಗಾಗಿ ಇರುವ ವಿಶೇಷ ಯೋಜನೆ

ಇದೊಂದು ಕಾರ್ಡ್ ಇದ್ರೆ ಸಾಕು, 3 ಲಕ್ಷ ಸಾಲ ಸಿಗುತ್ತೆ ರೈತರಿಗಾಗಿ ಇರುವ ವಿಶೇಷ ಯೋಜನೆ

 



ರೈತರಿಗಾಗಿ (farmers) ಸರ್ಕಾರದಿಂದ ಸಾಕಷ್ಟು ಸವಲತ್ತುಗಳು ಸಿಗುತ್ತಿವೆ. ಸರ್ಕಾರಗಳು ಮಾತ್ರವಲ್ಲದೆ ಬ್ಯಾಂಕ್ ಗಳು ಮತ್ತು ಕೆಲ ಸಂಸ್ಥೆಗಳು ಕೂಡ ರೈತನಿಗೆ ನೆರವಾಗುವಲ್ಲಿ ಮುಂದಿವೆ. ಈ ರೀತಿ ಕೃಷಿ ಸಾಲ (Agriculture Loan) ಪಡೆಯುವ ರೈತರಿಗೆ ಹೆಚ್ಚಿನ ಅನುಕೂಲತೆ ನೀಡಲು ರೂಪಿಸಿರುವ ಸಾಲ ಯೋಜನೆಯೊಂದರ ಬಗ್ಗೆ ಈ ಲೇಖನದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ.




ರೈತನ ಕೃಷಿ ಖರ್ಚು ವೆಚ್ಚಗಳಿಗೆ ಕಡಿಮೆ ಬಡ್ಡಿದರಲ್ಲಿ ಸಾಲವನ್ನು ಕೃಷಿ ಕ್ರೆಡಿಟ್ ಕಾರ್ಡ್ ಯೋಜನೆ (Kisan Credit Card Scheme) ಮೂಲಕ ಬ್ಯಾಂಕ್ ಗಳು ನೀಡುತ್ತಿವೆ. ಈ ಯೋಜನೆ ನೆರವು ಪಡೆಯುವುದು ಹೇಗೆ? ಇದರ ಪ್ರಯೋಜನಗಳೇನು? ಏನೆಲ್ಲಾ ದಾಖಲೆಗಳನ್ನು ನೀಡಬೇಕು ಎನ್ನುವ ವಿವರ ಹೀಗಿದೆ.



ಈ ಸುದ್ದಿ ಓದಿ  :-   ಬಾರ್ ಓಪನ್ ಮಾಡಲು ಬಂಡವಾಳ ಎಷ್ಪು ಬೇಕು ಹಾಗೂ ಲೈಸನ್ಸ್ ಪಡೆಯೋದು ಹೇಗೆ. ಒಂದು ದಿನಕ್ಕೆ ಎಷ್ಟು ಲಾಭ ಸಿಗುತ್ತೆ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ.



ಯೋಜನೆ ಹೆಸರು:- ಕಿಸಾನ್ ಕ್ರೆಡಿಟ್ ಕಾರ್ಡ್ (Kisan Credit Card)

ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಲು ಅರ್ಹತೆಗಳು:-

* ರೈತನ ಹೆಸರಿನಲ್ಲಿ ಕೃಷಿ ಭೂಮಿ ಇರಬೇಕು ಮತ್ತು ರೈತನು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿರಬೇಕು, ಕೃಷಿಯಿಂದ ಸ್ಥಿರ ಆದಾಯದ ಮೂಲ ಹೊಂದಿರಬೇಕು.

* ಕನಿಷ್ಠ 1 ಎಕರೆಯಿಂದ ಗರಿಷ್ಠ 10 ಹೆಕ್ಟರ್ ಒಳಗೆ ಕೃಷಿ ಭೂಮಿ ಹೊಂದಿರಬೇಕು

* 18 ರಿಂದ 70 ವಯೋಮಾನದ ಒಳಗಿರುವ ರೈತನು ಆರ್ಹರಾಗಿರುತ್ತಾರೆ.







ಬೇಕಾಗುವ ದಾಖಲೆಗಳು:-

* ರೈತನ ಆಧಾರ್ ಕಾರ್ಡ್

* ಬ್ಯಾಂಕ್ ಪಾಸ್ ಬುಕ್ ವಿವರ

* ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ

* ಆದಾಯ ಪ್ರಮಾಣ ಪತ್ರ

* ಭೂಮಿಗೆ ಸಂಬಂಧಿಸಿದ ದಾಖಲೆಗಳು

* ಇನ್ನಿತರ ಯಾವುದೇ ಬ್ಯಾಂಕ್ ಕೇಳುವ ಪ್ರಮುಖ ದಾಖಲೆಗಳು




ಈ ಸುದ್ದಿ ಓದಿ  :-  ಬಸ್ ನಲ್ಲಿ ಪ್ರಯಾಣ ಮಾಡುವವರಿಗೆ ಹೊಸ ರೂಲ್ಸ್ ಜಾರಿ.! ಸರ್ಕಾರದಿಂದ ಕಟ್ಟುನಿಟ್ಟಿನ ಆದೇಶ



ಯೋಜನೆ ಕುರಿತ ಪ್ರಮುಖ ಅಂಶಗಳು:-

* ನಬಾರ್ಡ್ (NABARD) ಈ ಯೋಜನೆಯನ್ನು ರೂಪಿಸಿದೆ

* ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಕಡಿಮೆ ದಾಖಲೆ ಪತ್ರಗಳಲ್ಲಿ ಬಿತ್ತನೆ ಬೀಜ ರಸಗೊಬ್ಬರ ಖರೀದಿ ಸೇರಿದಂತೆ ಇನ್ನಿತರ ಕೃಷಿ ಖರ್ಚು ವೆಚ್ಚಗಳಿಗೆ ತ್ವರಿತವಾಗಿ ಸಣ್ಣ ಪ್ರಮಾಣದ ಸಾಲ ಸಿಗುತ್ತದೆ, ರೈತನ ತನ್ನ ಬೆಳೆಯ ಕಟಾವು ಆದ ನಂತರ ಸಾಲ ಮರುಪಾವತಿ ಮಾಡಬಹುದು







* ಎರಡು ರೀತಿಯಲ್ಲಿ ಈ ಯೋಜನೆಯಡಿ ಸಾಲ ಸಿಗುತ್ತದೆ. ಮೂರು ವರ್ಷಗಳವರೆಗೆ ಕೃಷಿ ಚಟುವಟಿಕೆಗಳಿಗೆ ಅಲ್ಪಾವಧಿ ಸಾಲ, 3 – 5 ವರ್ಷಗಳಿಗೆ ಪಶು ಸಾಕಾಣಿಕೆ, ಮೀನುಗಾರಿಕೆ ಉದ್ದೇಶಗಳಿಗಾಗಿ ಎರಡನೇ ಅವಧಿ ಸಾಲ.

* ಕನಿಷ್ಠ ರೂ.20,000 ದಿಂದ ಕೇವಲ 4% ಬಡ್ಡಿದರದಲ್ಲಿ ಸಾಲ ಸಿಗುತ್ತದೆ, ಗರಿಷ್ಠ ಮಿತಿಯು ರಾಜ್ಯ ಮತ್ತು ರೈತನು ಹೊಂದಿರುವ ಹಿಡುವಳಿ ಗಾತ್ರ ಹಾಗೂ ಉದ್ದೇಶಗಳ ಮೇಲೆ ನಿರ್ಧಾರ ಆಗುತ್ತದೆ.

* ಬ್ಯಾಂಕ್ ಗಳಲ್ಲಿ ಅರ್ಜಿ ಸಲ್ಲಿಸಿ ಪೂರಕ ದಾಖಲೆಗಳನ್ನು ನೀಡಿ ಕಿಸಾನ್ ಕ್ರೆಡಿಟ್ ಕಾರ್ಡ್ ಗಳನ್ನು ಪಡೆಯಬಹುದಾಗಿದೆ. ಬ್ಯಾಂಕ್ ಗಳು ಸಾಲ ನೀಡುವ ಗರಿಷ್ಠ ಮೊತ್ತ ಹಾಗೂ ಅನ್ವಯಿಸುವ ಬಡ್ಡಿದರವು ಬ್ಯಾಂಕ್ ನಿಂದ ವ್ಯತ್ಯಾಸವಿರುತ್ತದೆ. ಈ ನಿಟ್ಟಿನಲ್ಲಿ ಕೆಲವು ಪ್ರಮುಖ ಬ್ಯಾಂಕ್ ಗಳ ಪಟ್ಟಿ ಹೀಗಿದೆ ನೋಡಿ.

1. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) 2% ಬಡ್ಡಿದರದಲ್ಲಿ ಗರಿಷ್ಠ ರೂ. 3 ಲಕ್ಷದವರೆಗೆ 5 ವರ್ಷಗಳ ಅವಧಿಗೆ ಸಾಲ ನೀಡುತ್ತದೆ.






2. HDFC 9% ಬಡ್ಡಿದರದಲ್ಲಿ ಗರಿಷ್ಠ ರೂ. 3 ಲಕ್ಷದವರೆಗೆ ಅಲ್ಪಾವಧಿ ಸಾಲ ನೀಡುತ್ತದೆ. ಕೆಲವು ಸಂದರ್ಭಗಳಲ್ಲಿ 4 – 5 ವರ್ಷದವರೆಗೆ ಇದನ್ನು ವಿಸ್ತರಿಸಿಕೊಳ್ಳಬಹುದು.

* AXIS ಬ್ಯಾಂಕ್ ನಲ್ಲಿ 8.55% ಬಡ್ಡಿದರದಲ್ಲಿ ಗರಿಷ್ಠ ರೂ.2,50,000 ದವರೆಗೆ 5 ವರ್ಷದ ಅವಧಿಗೆ ಸಾಲ ಸಿಗುತ್ತದೆ, ರೂ.50,000 ವರೆಗೆ ವಿಮಾ ರಕ್ಷಣೆ ಕೂಡ ಸಿಗುತ್ತದೆ

* Bank Of India 25% ಬಡ್ಡಿದರದಲ್ಲಿ 5 ವರ್ಷಗಳವರೆಗೆ ಸಾಲ ನೀಡುತ್ತದೆ. ಆದರೆ ನಿಮ್ಮ ಆದಾಯದ ಮಿತಿ ರೂ.50,000 ದ ಮೇಲಿರಬಾರದು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಬ್ಯಾಂಕ್ ಶಾಖೆಗೆ ಭೇಟಿ ನೀಡಿ.


Post a Comment

0 Comments