ಮಾರ್ಚ್ 31 ರೊಳಗೆ ಈ ಕೆಲಸ ಮಾಡದಿದ್ದರೆ ನಿಮಗೆ ಸಿಗಲ್ಲ ಗ್ಯಾಸ್ ಸಬ್ಸಿಡಿ ಹಣ

ಮಾರ್ಚ್ 31 ರೊಳಗೆ ಈ ಕೆಲಸ ಮಾಡದಿದ್ದರೆ ನಿಮಗೆ ಸಿಗಲ್ಲ ಗ್ಯಾಸ್ ಸಬ್ಸಿಡಿ ಹಣ






ಈಗ ಮಾರುಕಟ್ಟೆಯಲ್ಲಿ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಇದರಿಂದ ಬಡ ಹಾಗೂ ಸಾಮಾನ್ಯ ಜನರ ಬದುಕು ದುಸ್ತರವಾಗಿದೆ. ದಿನೇ ದಿನ ಹೆಚ್ಚಾಗುತ್ತಿರುವ ಈ ಬೆಲೆ ಏರಿಕೆಗೆ ಜನ ತತ್ತರಿಸುತ್ತಿದ್ದಾರೆ. ಮನುಷ್ಯನ ಮೂಲಭೂತ ಅವಶ್ಯಕತೆ ಆಗಿರುವ ಆಹಾರದ ವಸತಿ ಬಟ್ಟೆ ಇವುಗಳು ಕೂಡ ಕೈಗೆಟುಕದ ಬೆಲೆಯಲ್ಲಿರುವುದು ದುಃ’ಖದ ಸಂಗತಿ ಆಗಿದೆ.









ಅದರಲ್ಲೂ ಆಹಾರ ತಯಾರಿಕೆಗೆ ಬೇಕಾಗಿರುವ ಅಡುಗೆ ಎಣ್ಣೆ, ಅಡುಗೆ ಅನಿಲ, ಬೇಳೆ ಕಾಳುಗಳು ಇವುಗಳ ಬೆಲೆಯು ಯಾವುದೇ ಕಂಟ್ರೋಲ್ ಇಲ್ಲದಂತೆ ಬೆಳೆಯುತ್ತಾ ಹೋಗುತ್ತಿದೆ. ಈಗ ಇದನ್ನು ನಿಯಂತ್ರಣಕ್ಕೆ ತರಲು ಕೇಂದ್ರ ಸರ್ಕಾರವು ಕೆಲ ಪ್ರಮುಖ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಇವುಗಳಲ್ಲಿ ಒಂದು ಅಡಿಕೆ ‌ಅನಿಲದ ಬೆಲೆ ಇಳಿಸುವುದು. ಇದಕ್ಕಾಗಿ ಪ್ರಧಾನಮಂತ್ರಿ ಉಜ್ವಲ್ ಯೋಜನೆ (PMUJ) ಎನ್ನುವ ಜನಪ್ರಿಯ ಯೋಜನೆಯನ್ನು ಪರಿಚಯಿಸಿದೆ.



ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್, ತಪ್ಪದೇ ಇಂದೇ ಅರ್ಜಿ ಸಲ್ಲಿಸಿ




ಪ್ರಧಾನಮಂತ್ರಿ ಉಜ್ವಲ್ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ತಮ್ಮ ಮನೆಗಳಿಗೆ ಉಚಿತವಾಗಿ ಗ್ಯಾಸ್ ಸಂಪರ್ಕ ಪಡೆಯಬಹುದು ಮತ್ತು ಪ್ರಧಾನ ಮಂತ್ರಿ ಉಜ್ವಲ ಯೋಜನೆಯಲ್ಲಿ ಪ್ರತಿ ತಿಂಗಳ ಬಳಕೆಗೆ ಸಿಲಿಂಡರ್ ಬುಕ್ ಮಾಡುವ ಮಹಿಳೆಯರು ವರ್ಷಕ್ಕೆ 12 ಸಿಲಿಂಡರ್ ವರೆಗೆ ಸರ್ಕಾರ ನೀಡಿರುವ ಸಬ್ಸಿಡಿಯನ್ನು ಕೂಡ ಪಡೆಯುತ್ತಾರೆ.








ಬಹಳ ಕಡಿಮೆ ಬೆಲೆಗೆ ಇವರಿಗೆ ಸಿಲಿಂಡರ್ ಸಿಗುತ್ತದೆ ಈ ಸಬ್ಸಿಡಿ ಹಣವು ಫಲಾನುಭವಿಗಳ ಖಾತೆಗೆ DBT ಮೂಲಕ ವರ್ಗಾವಣೆ ಆಗುತ್ತದೆ. ಇದುವರೆಗೂ PMUY ರೂ.200 ಸಬ್ಸಿಡಿ ಪಡೆಯುತ್ತಿದ್ದವರು ಕಳೆದ ವರ್ಷ ಸಾರ್ವತ್ರಿಕವಾಗಿ ಎಲ್ಲಾ ಬಳಕೆದಾರರಿಗೆ ಕೂಡ ಸಬ್ಸಿಡಿ ಘೋಷಿಸಿರುವುದರಿಂದ ಈಗ ಒಟ್ಟಾರೆಯಾಗಿ ರೂ.400 ಸಬ್ಸಿಡಿ ಪಡೆಯುತ್ತಿದ್ದಾರೆ.









ಈ ಹಣವನ್ನು ಪಡೆಯಲು ಇ-ಕೆವೈಸಿ ಮಾಡಿಸುವುದು ಕಡ್ಡಾಯ ಎಂದು ಕಂಡೀಶನ್ ಹಾಕಿ ಸಾಕಷ್ಟು ಸಮಯಾವಕಾಶವನ್ನು ಸರ್ಕಾರ ನೀಡಿದೆ. ಅಂತಿಮವಾಗಿ ಮಾರ್ಚ್ 31ನ್ನು ಕಡೆ ದಿನಾಂಕ ಎಂದು ಘೋಷಿಸಿದ್ದು ಇದರಂತೆ ಮ್ಯಾಚ್ 31ರ ಒಳಗೆ ನೀವೇನಾದರೂ ನಿಮ್ಮ ಗ್ಯಾಸ್ ಕನೆಕ್ಷನ್ ಗೆ ಇ-ಕೆವೈಸಿ ಮಾಡಿಸದೆ ಇದ್ದರೆ ಸಬ್ಸಿಡಿ ಹಣ ಪಡೆಯಲು ಆಗುವುದಿಲ್ಲ ಎಂದು ವಾರ್ನಿಂಗ್ ಕೂಡ ನೀಡಿದೆ.




ಕೇವಲ 5 ನಿಮಿಷದಲ್ಲಿ ಮೊಬೈಲ್ ಮೂಲಕವೇ ಅಪ್ಲೈ ಮಾಡಿ ನಿಮ್ಮ ವಾಹನದ HSRP ನಂಬರ್ ಪ್ಲೇಟ್ ಪಡೆಯಬಹುದು





ನಿಮ್ಮ ಏಜೆನ್ಸಿಗಳಿಗೆ ಹೋಗಿ ಆಧಾರ್ ಕಾರ್ಡ್ ಹಾಗೂ ನಿಮ್ಮ ಗ್ಯಾಸ್ ಕಲೆಕ್ಷನ್ ID ನೀಡುವ ಮೂಲಕ ಈ ಪ್ರಕ್ರಿಯೆ ಪೂರ್ತಿಗೊಳಿಸಬಹುದು ಅಥವಾ ಆನ್ ‌ಲೈನ್‌ನಲ್ಲಿ ಕೂಡ ಮನೆಯಲ್ಲಿ ಕುಳಿತು ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕ e-KYC ಮಾಡಬಹುದು.
* ಮೊದಲಿಗೆ https://www.mylpg.in/ ವೆಬ್ ಸೈಟ್ ಗೆ ಭೇಟಿ ನೀಡಿ
* ಮುಂದಿನ ಹಂತದಲ್ಲಿ ನಿಮ್ಮ ಮನೆಗೆ ಯಾವ ಕಂಪನಿಯಿಂದ ಗ್ಯಾಸ್ ಕನೆಕ್ಷನ್ ಮಾಡಿದ್ದೀರಾ ಭಾರತ್, ಇಂಡಿಯನ್ ಅಥವಾ HP ಆ ಕಂಪನಿ ಲಿಂಕ್ ಮೇಲೆ ಕ್ಲಿಕ್ ಮಾಡಿ
* e-KYC ಲಿಂಕ್ ಆಪ್ಷನ್ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ಮುಂದುವರೆಯಿರಿ.

* ನಿಮ್ಮ ಮೊಬೈಲ್ ಸಂಖ್ಯೆ, ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ, ಗ್ಯಾಸ್ ಕನೆಕ್ಷನ್ ID ಇನ್ನಿತರ ಮಾಹಿತಿಯನ್ನು ಕೂಡ ನೀವು ನಮೂದಿಸಬೇಕಾಗಿರುತ್ತದೆ. ಆ ಸಮಯದಲ್ಲಿ ನೀವು ನೀಡಿದ ಮೊಬೈಲ್ ಸಂಖ್ಯೆಗೆ OTP ಕೂಡ ಬರುತ್ತದೆ ಅದನ್ನು ಎಂಟ್ರಿ ಮಾಡಿ ಮುಂದುವರೆಯಿರಿ.








* ಕೊನೆಯಲ್ಲಿ ನಿಮ್ಮ ವೈಯಕ್ತಿಕ ವಿವರಗಳನ್ನು ಕೂಡ ನೀಡಿ ಮತ್ತೊಮ್ಮೆ ಪರಿಶೀಲಿಸಿ, ಸಬ್ಮಿಟ್ ಕ್ಲಿಕ್ ಮಾಡಿದರೆ e-KYC ಪ್ರಕ್ರಿಯೆ ಪೂರ್ತಿಗೊಳ್ಳುತ್ತದೆ. ತಪ್ಪದೆ ಈ ಮಾಹಿತಿಯನ್ನು ನಿಮ್ಮ ಕುಟುಂಬ ಹಾಗೂ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ.


Post a Comment

0 Comments