ಬತ್ತಿ ಹೋದ ಬೋರವೆಲ್ ನಲ್ಲಿ 4 ಇಂಚು ನೀರು ಬರುವ ಹಾಗೆ ಮಾಡಿ ಯಶಸ್ಸು ಕಂಡ ರೈತ

ಬತ್ತಿ ಹೋದ ಬೋರವೆಲ್ ನಲ್ಲಿ 4 ಇಂಚು ನೀರು ಬರುವ ಹಾಗೆ ಮಾಡಿ ಯಶಸ್ಸು ಕಂಡ ರೈತ


 











ಕೃಷಿ ನಮ್ಮ ದೇಶದಲ್ಲಿ ಬಹುತೇಕ ಜನರು ಅವಲಂಬಿಸಿರುವ ಜೀವನದ ಅವಶ್ಯಕತೆಯಾಗಿದೆ. ಅದೇ ಸಮಯದಲ್ಲಿ ನಮ್ಮ ಆರ್ಥಿಕತೆಯ ಬೆನ್ನೆಲುಬು ಆಗಿರುವ ಕೃಷಿಯೂ ನಮ್ಮ ದೇಶದಲ್ಲಿ ಮಳೆ ಜೊತೆ ಆಡುವ ಜೂಜಾಟವು ಆಗಿದೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಕೃಷಿ ಚಟುವಟಿಕೆ ಬೇಕಾಗಿರುವ ಮೂಲಭೂತ ಅವಶ್ಯಕತೆಗಳಲ್ಲಿ ನೀರಿನ ಸೌಲಭ್ಯಕ್ಕೆ ಮೊದಲ ಆದ್ಯತೆ, ನೀರಿನ ಅನುಕೂಲತೆ ಇಲ್ಲದೆ ಇದ್ದಲ್ಲಿ ಕೃಷಿ ಅಸಾಧ್ಯ.








ಹೀಗಾಗಿ ಮಳೆ ನೀರನ್ನು ಅವಲಂಬಿಸುವುದಕ್ಕಿಂತ ತೋಟಗಾರಿಕೆ ಕೃಷಿ ಮಾಡಿದರೆ ಹೆಚ್ಚಿನ ಲಾಭ ಪಡೆಯಬಹುದು ಎಂದು ಎಲ್ಲ ರೈತರು ಈಗ ಬೋರ್ವೆಲ್ ಕೊರೆಸಿ ಪಂಪ್ಸೆಟ್ ಮಾಡಲು ಬಯಸುತ್ತಿದ್ದಾರೆ ಮಳೆ ಚೆನ್ನಾಗಿದ್ದಾಗ ಸರಿ. ಮಳೆ ಕಡಿಮೆಯಾಗಿ ಹೋದರೆ ಅಂತರ್ಜಲವೂ ಕುಸಿಯುತ್ತದೆ ಆಗ ಲಕ್ಷಾಂತರ ಹಣ ಸುರಿದು ಬೋರ್ ಕೊರಸಿದ್ದ ರೈತ ಕಂಗಾಲಾಗುತ್ತಾನೆ.


ಹೊಸ ರೇಷನ್ ಕಾರ್ಡ್ ಮತ್ತು ರೇಷನ್ ತಿದ್ದುಪಡಿಗೆ ಅರ್ಜಿ ಆರಂಭ, 2 ದಿನ ಮಾತ್ರ ಅವಕಾಶ




ಒಂದು ಕಡೆ ಸಾಲ ಏರಿಕೆ ಆದರೆ ಮತ್ತೊಂದು ಕಡೆ ಕೃಷಿ ಕೂಡ ಹದಗೆಟ್ಟು ಹೋಗುತ್ತದೆ ಇಂತಹ ಸಮಯಗಳಲ್ಲಿಯೇ ಕೃಷಿಯತ್ತ ಕೃಷಿಕರು ಹಾಗೂ ರೈತರ ಮಕ್ಕಳು ಆಸಕ್ತಿ ಕಳೆದುಕೊಂಡು ಪಟ್ಟಣಗಳತ್ತ ವಲಸೆ ಹೋಗುವ ನಿರ್ಧಾರಕ್ಕೆ ಬಂದುಬಿಡುತ್ತಾರೆ. ಆದರೆ ಇಲ್ಲೊಬ್ಬರು ಇದೆಲ್ಲದಕ್ಕಿಂತ ಭಿನ್ನವಾಗಿ ಯೋಚಿಸಿ ಬತ್ತಿ ಹೋದ ಬೋರ್ವೆಲ್ ನಲ್ಲಿ ನಾಲ್ಕು ಇಂಚು ನೀರು ಬರುವಂತೆ ಮಾಡಿ ಯಶಸ್ಸು ಕಂಡಿದ್ದಾರೆ ಇದು ಹೇಗೆ ಸಾಧ್ಯವಾಯಿತು ಎನ್ನುವ ವಿವರ ಹೀಗಿದೆ ನೋಡಿ.
ಹಾವೇರಿ ಜಿಲ್ಲೆಯ ಶಿಗ್ಗಾಂವ್ ಎನ್ನುವ ಗ್ರಾಮದ ಶಂಕರ್ ಎಂಬ ರೈತನು ವ್ಯವಸಾಯದ ಬಗ್ಗೆ ಬಹಳ ಆಸಕ್ತಿ ಹೊಂದಿದ್ದ. ತನ್ನ ಬಳಿ ಇದ್ದ ಸ್ವಲ್ಪ ಮಟ್ಟದ ಜಮೀನಿನಲ್ಲಿ ವ್ಯವಸಾಯ ಮಾಡೋಣ ಎಂದು ಒಂದು ಬೋರ್ವೆಲ್ ತೆಗೆಸುವ ನಿರ್ಧಾರಕ್ಕೆ ಬರುತ್ತಾನೆ. ಆರಂಭದಲ್ಲಿ ಪರಿಸ್ಥಿತಿ ಚೆನ್ನಾಗಿರುತ್ತದೆ ಬೋರ್ವೆಲ್ ನಿಂದ 2 ಇಂಚು ನೀರು ಬರುತ್ತಿರುತ್ತದೆ.







ಆದರೆ ದಿನಗಳು ಕಳೆದಂತೆ ಅಂತರ್ಜಲ ಮಟ್ಟ ಕುಸಿದು ಪರಿಸ್ಥಿತಿ ಹೇಗಾಯಿತು ಎಂದರೆ ಇರುವ ಸ್ವಲ್ಪ ಜಮೀನಿಗೂ ಕೂಡ ಬೋರ್ವೆಲ್ ನಿಂದ ಬರುವ ನೀರು ಸಾಕಾಗುತ್ತಿರಲಿಲ್ಲ. ಬೋರ್ವೆಲ್ ನಂಬಿ ಜಮೀನಿಗೆ ಬಿತ್ತನೆ ಮಾಡಿದ್ದ ರೈತ ಕಂಗಾಲಾಗಿ ಹೋದ. ಕೂಡಲೇ ತನ್ನ ಕಷ್ಟಕ್ಕೆ ಪರಿಹಾರ ಪಡೆದುಕೊಳ್ಳಲು ಕೃಷಿ ಅಧಿಕಾರಿಗಳ ಕಚೇರಿಗೆ ಭೇಟಿ ಕೊಟ್ಟ. ಅಲ್ಲಿ ಅವರು ನೀಡಿದ ಮಾಹಿತಿ ಪ್ರಕಾರ ಒಂದು ಪ್ರಯೋಗ ಕೈಗೊಳ್ಳಲು ಮುಂದಾದನು ರೈತ.



ಈ ದಿನಾಂಕದಂದು ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ 7ನೇ ಕಂತಿನ 2,000 ಹಣ ಜಮೆ ಆಗುತ್ತೆ



ಕೃಷಿ ಅಧಿಕಾರಿಗಳು ನೀಡಿದ ಸಲಹೆ ಏನೆಂದರೆ ಬೋರ್ವೆಲ್ ಪಕ್ಕದಲ್ಲಿ 2ಮೀಟರ್ ಆಳ, 2ಮೀಟರ್ ಅಗಲದ 2 ಇಂಗು ಗುಂಡಿಗಳನ್ನು ನಿರ್ಮಿಸಿ, 3ಫೀಟ್ ವರೆಗೂ ಮರಳು, ಇದ್ದಿಲು, ದಪ್ಪದಾದ ಜಲ್ಲಿಕಲ್ಲುಗಳನ್ನು ತುಂಬಿಸಿ ಇದರಿಂದ ಮಳೆಗಾಲದಲ್ಲಿ ವ್ಯರ್ಥವಾಗಿ ಹೋಗುವ ನೀರನ್ನು ಮತ್ತು ಜಮೀನಿನ ಸುತ್ತ ಹರಿದು ಹೋಗುವ ನೀರನ್ನು ಇಂಗಿಸಬಹುದು ಎನ್ನುವ ಸಲಹೆಗಳನ್ನು ನೀಡಿದರು ಅಧಿಕಾರಿಗಳು.

ಇದನ್ನು ಪಾಲಿಸಿದ ರೈತನಿಗೆ ಪ್ರತಿಫಲವಾಗಿ ಇಂದು 2ಇಂಚು ನೀರು ಕೂಡ ಬರದ ಬೋರ್ವೆಲ್ ನಿಂದ 4ಇಂಚು ನೀರು ಬರುತ್ತಿದೆ. ಅಷ್ಟೇ ಅಲ್ಲದೆ ವರ್ಷ ಪೂರ್ತಿಯಾಗಿ ನೀರು ಬರುತ್ತಿದೆ. ಇಂಗುಗುಂಡಿಯಲ್ಲಿ ವರ್ಷಕ್ಕೆ ಸುಮಾರು 90ಲಕ್ಷ ಲೀಟರ್ ನೀರು ಇಂಗುತ್ತದೆ. ಇದರಿಂದ ವರ್ಷದ ಮೂರು ಬೆಳೆಯನ್ನು ಬೆಳೆಯುವ ಮೂಲಕ ಲಾಭಪಡೆಯುತ್ತಿದ್ದಾರೆ ರೈತ ಶಂಕರ್ ಕೃಷಿ ವಿಚಾರವಾಗಿ ಸದ್ಯಕ್ಕೆ ಎಲ್ಲರೂ ಇಸ್ರೇಲ್ ಪದ್ಧತಿಯ ಹಿಂದೆ ಬಿದ್ದಿದ್ದಾರೆ.









ಆದರೆ ಈಗ ನಮ್ಮ ರಾಜ್ಯದ ರೈತ ಶಂಕರ್ ಮಾಡಿರುವ ಹೊಸ ಪ್ರಯೋಗದ ಬಗ್ಗೆ ತಿಳಿಯಲು ಆಸ್ಟ್ರೇಲಿಯಾ, ಇಸ್ರೇಲ್, ಕೆನಡಾ ಸೇರಿದಂತೆ ವಿವಿಧ ದೇಶಗಳಿಂದ ಆ ದೇಶದ ಕೃಷಿ ಪ್ರತಿನಿಧಿಗಳು ಶಂಕರ್ ಅವರ ತೋಟಕ್ಕೆ ಬಂದು ಮಾಹಿತಿ ಪಡೆಯುತ್ತಿದ್ದಾರೆ. ರೈತ ಶಂಕರ್ ಗೆ ಕೃಷಿ ಅಧಿಕಾರಿಗಳ ನೀಡಿದ ಸಲಹೆ ಪ್ರಯೋಗವು ಇವರ ಜೀವನದ ದಿಕ್ಕನ್ನೇ ಬದಲಾಯಿಸಿ ಬಿಟ್ಟಿದೆ. ಈ ಮಾಹಿತಿಯನ್ನು ತಪ್ಪದೆ ಹೆಚ್ಚಿನ ರೈತರೊಡನೆ ಹಂಚಿಕೊಂಡು ಅವರಿಗೂ ಈ ಅನುಕೂಲ ಮಾಡಿಕೊಡಿ.

Post a Comment

0 Comments