ರೈಲ್ವೆ ಪೊಲೀಸ್ ಇಲಾಖೆಯಲ್ಲಿ 4660 ಹುದ್ದೆಗಳ ಬೃಹತ್ ನೇಮಕಾತಿ. 10ನೆ ತರಗತಿ, PUC, ಪದವಿ ಆದವರು ಅರ್ಜಿ ಸಲ್ಲಿಸಿ ವೇತನ 35400

ರೈಲ್ವೆ ಪೊಲೀಸ್ ಇಲಾಖೆಯಲ್ಲಿ 4660 ಹುದ್ದೆಗಳ ಬೃಹತ್ ನೇಮಕಾತಿ. 10ನೆ ತರಗತಿ, PUC, ಪದವಿ ಆದವರು ಅರ್ಜಿ ಸಲ್ಲಿಸಿ ವೇತನ 35400


 







ರೈಲ್ವೆ ರಕ್ಷಣೆ ಪಡೆಯು ಕೇಂದ್ರ ಸರ್ಕಾರದ (Central Government) ಅಡಿಯಲ್ಲಿ ಕಾರ್ಯ ನಿರ್ವಹಿಸುವ ಸಂಸ್ಥೆಯಾಗಿದ್ದು ಪ್ರತಿ ವರ್ಷವೂ ಕೂಡ ತನ್ನಲ್ಲಿ ಖಾಲಿ ಆಗುವ ಸಾವಿರಾರು ಹುದ್ದೆಗಳಿಗೆ ದೇಶದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ (RRB Receuitment) ಮಾಡುತ್ತಿದೆ.





ದೇಶದಾದ್ಯಂತ ಇರುವ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಹಾಗೂ ಎಲ್ಲಾ ನಿರುದ್ಯೋಗಿಗಳಿಗೆ ಇದೊಂದು ಸದಾವಕಾಶವಾಗಿದ್ದು ಈ ಸಮಯದಲ್ಲಿ ಅರ್ಜಿ ಸಲ್ಲಿಸಿ ಉದ್ಯೋಗ ಪಡೆದುಕೊಳ್ಳಲು ಪ್ರಯತ್ನಿಸಬಹುದು. ಯುವಕರು ಈ ಕುರಿತಾದ ಮಾಹಿತಿ ತಿಳಿದುಕೊಂಡು ಪರೀಕ್ಷೆಗೆ ಸಿದ್ಧರಾಗಲಿ ಎನ್ನುವ ಉದ್ದೇಶದಿಂದಾಗಿ ಮತ್ತೊಮ್ಮೆ ರೈಲ್ವೆ ಇಲಾಖೆಯಿಂದ ಆಗಿರುವ ನೋಟಿಫಿಕೇಶನ್ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ.



ರೈತರಿಗೆ ಗುಡ್ ನ್ಯೂಸ್.! ಪ್ರತಿ ಎಕರೆಗೆ ಸಿಗಲಿದೆ 10 ಸಾವಿರ




ಈ ವರ್ಷದಲ್ಲಿ ರೈಲ್ವೆ ಇಲಾಖೆಯಿಂದ ಮಾಡಲಾಗುತ್ತಿರುವ ಮೂರನೇ ನೇಮಕಾತಿಯಾಗಿದ್ದು ಈ ಬಾರಿ ರೈಲ್ವೆಯ ರಕ್ಷಣಾ ಸಿಬ್ಬಂದಿ ಪಡೆಯ ರೈಲ್ವೆ ಸಬ್‌ಇನ್ಸ್‌ಪೆಕ್ಟರ್, ರೈಲ್ವೆ ಕಾನ್ಸ್‌ಟೇಬಲ್‌ಗಳ ಭರ್ತಿಗಾಗಿ ನೋಟಿಫಿಕೇಶನ್‌ ಬಿಡುಗಡೆ ಮಾಡಲಾಗಿದೆ.

ನೇಮಕಾತಿ ಸಂಸ್ಥೆ: ಭಾರತೀಯ ರೈಲ್ವೆ ಇಲಾಖೆ
ಹುದ್ದೆಗಳ ಹೆಸರು:

* RPF ಸಬ್ ಇನ್ಸ್ಪೆಕ್ಟರ್
* RPF ಕಾನ್ಸ್ಟೇಬಲ್







ಒಟ್ಟು ಹುದ್ದೆಗಳ ಸಂಖ್ಯೆ: 4660

ಹುದ್ದೆಗಳ ವಿವರ:-
* RPF ಸಬ್ ಇನ್ಸ್ಪೆಕ್ಟರ್ – 452
* RPF ಕಾನ್ಸ್ಟೇಬಲ್ – 4208

ಉದ್ಯೋಗ ಸ್ಥಳ:- ಭಾರತದಾದ್ಯಂತ…

ವೇತನ ಶ್ರೇಣಿ:-
* RPF ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ಆಯ್ಕೆ ಆದ ಅಭ್ಯರ್ಥಿಗಳಿಗೆ ಮಾಸಿಕವಾಗಿ ಆರಂಭಿಕ ವೇತನವೇ ರೂ. 35400 ಇರುತ್ತದೆ.

* RPF ಕಾನ್ಸ್ಟೇಬಲ್ ಹುದ್ದೆಗಳಿಗೆ ಆಯ್ಕೆ ಆದ ಅಭ್ಯರ್ಥಿಗಳಿಗೆ ಮಾಸಿಕವಾಗಿ ಆರಂಭಿಕ ವೇತನವೇ ರೂ.21,700 ಇರುತ್ತದೆ.

* ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ 7ನೇ ವೇತನ ಆಯೋಗದ ಪೇ ಲೆವೆಲ್ 6ರ ಪ್ರಕಾರ ಮತ್ತು ಕಾನ್ಸ್‌ಟೇಬಲ್‌ ಹುದ್ದೆಗೆ 7ನೇ ವೇತನ ಆಯೋಗದ ಪೇ ಲೆವೆಲ್ 3 ರ ಪ್ರಕಾರ ವೇತನ ಶ್ರೇಣಿ ನಿಗದಿಪಡಿಸಲಾಗಿದೆ.
* ಈ ಆರಂಭಿಕ ವೇತನದ ಜತೆಗೆ, ಇತರೆ ಭತ್ಯೆಗಳು, ಸೌಲಭ್ಯಗಳು ಇರಲಿವೆ.








ಶೈಕ್ಷಣಿಕ ವಿದ್ಯಾರ್ಹತೆ:-

* RPF ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದಾದರು ವಿಷಯದಲ್ಲಿ ಪದವಿ ಪಾಸ್‌ ಮಾಡಿರಬೇಕು.
* RPF ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮರೆತ ಪಡೆದ ಯಾವುದೇ ಮಂಡಳಿ ಅಥವಾ ಶಿಕ್ಷಣ ಸಂಸ್ಥೆಗಳಿಂದ 10ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆ ಪಾಸ್‌ ಮಾಡಿರಬೇಕು.







ವಯೋಮಿತಿ:-

* ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18 ವರ್ಷಗಳು
* ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 28 ವರ್ಷಗಳು.

ವಯೋಮಿತಿ ಸಡಿಲಿಕೆ:-
* ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಮತ್ತು ಪ್ರವರ್ಗ – 1ರ ಅಭ್ಯರ್ಥಿಗಳಿಗೆ 05 ವರ್ಷಗಳ ಸಡಲಿಕೆ ಇರುತ್ತದೆ
* OBC ಅಭ್ಯರ್ಥಿಗಳಿಗೆ 03 ವರ್ಷಗಳ ಸಡಿಲಿಕೆ ಇರುತ್ತದೆ.



ಮಾರ್ಚ್ 31 ರೊಳಗೆ ಈ ಕೆಲಸ ಮಾಡದಿದ್ದರೆ ನಿಮಗೆ ಸಿಗಲ್ಲ ಗ್ಯಾಸ್ ಸಬ್ಸಿಡಿ ಹಣ




ಅರ್ಜಿ ಸಲ್ಲಿಸುವ ವಿಧಾನ:-

* www.rrbbnc.gov.in ವೆಬ್ ಸೈಟ್ ಗೆ ಭೇಟಿ ನೀಡಿದ ಮೂಲಕ ಆಸಕ್ತರು ಅರ್ಜಿ ಸಲ್ಲಿಸಬಹುದು
* ಈ ಮೇಲಿನ ಲಿಂಕ್ ಕ್ಲಿಕ್ ಮಾಡಿದರೆ ರೈಲ್ವೆ ರಕ್ಷಣೆ ಇಲಾಖೆ ವೆಬ್ಸೈಟ್ ಅಧಿಕೃತ ವೆಬ್ಸೈಟ್ ಓಪನ್ ಆಗುತ್ತದೆ. ಅರ್ಜಿ ಸಲ್ಲಿಸುವ ಲಿಂಕ್ ಕ್ಲಿಕ್ ಮಾಡಿ ಕೇಳಲಾಗುವ ವೈಯುಕ್ತಿಕ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ, ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
* ವರ್ಗಕ್ಕೆ ಅನುಗುಣವಾಗಿ ಅರ್ಜಿಶುಲ್ಕ ಪಾವತಿ ಮಾಡಿ ಇ-ರಶೀದಿ ಪಡೆಯಿರಿ.
* ಅರ್ಜಿ ಸಲ್ಲಿಕೆ ಯಶಸ್ವಿಯಾದ ಮೇಲೆ ತಪ್ಪದೇ ಅರ್ಜಿ ಸ್ವೀಕೃತಿ ಪ್ರತಿ ಪಡೆದುಕೊಳ್ಳಿ.

ಆಯ್ಕೆ ವಿಧಾನ:-

* ಸ್ಪರ್ಧಾತ್ಮಕ ಪರೀಕ್ಷೆ
* ದೈಹಿಕ ಪರೀಕ್ಷೆ
* ವೈದ್ಯಕೀಯ ಪರೀಕ್ಷೆ
* ದಾಖಲೆಗಳ ಪರಿಶೀಲನೆ
* ಸಂದರ್ಶನ

ಅರ್ಜಿ ಶುಲ್ಕ:-

* ಸಾಮಾನ್ಯ ಮತ್ತು OBC ವರ್ಗದ ಅಭ್ಯರ್ಥಿಗಳಿಗೆ ರೂ.500
* ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ, ಮಾಜಿ ಸೈನಿಕ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ರೂ.250

ಪ್ರಮುಖ ದಿನಾಂಕಗಳು:-

* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 15 ಏಪ್ರಿಲ್, 2024
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 14 ಮೇ, 2024.


Post a Comment

0 Comments