ಕಾಂಗ್ರೆಸ್ ಸರ್ಕಾರ ಹೊರಡಿಸಿದ ಗ್ಯಾರಂಟಿ ಕಾರ್ಡ್ ಗಳಲ್ಲಿ ಗೃಹಲಕ್ಷ್ಮಿ ಯೋಜನೆ ಅಡಿ ಮನೆಯ ಒಡತಿಗೆ ಮನೆ ನಿರ್ವಹಣೆಗಾಗಿ ಪ್ರತಿ ತಿಂಗಳು 2,000 ವಾರ್ಷಿಕವಾಗಿ 24,000ಗಳನ್ನು ನೀಡಲಾಗುವುದು ಎಂದು ಘೋಷಣೆ ಮಾಡಿತ್ತು. ಈಗ ಈ ಯೋಜನೆಗಳಿಗೆ ಸರ್ಕಾರವು ಏನೆಲ್ಲಾ ಕಂಡಿಷನ್ ಗಳನ್ನು ಹಾಕಬಹುದು, ಅರ್ಜಿ ಹೇಗೆ ಸಲ್ಲಿಸಬೇಕು ಮತ್ತು ಸರ್ಕಾರ ಫಲಾನುಭವಿಗಳನ್ನು ಹೇಗೆ ಗುರುತಿಸುತ್ತದೆ ಎಂದು ಗೃಹಲಕ್ಷ್ಮಿಯರು ಚಿಂತೆಗೀಡಾಗಿದ್ದಾರೆ.
ಜಿ. ಪರಮೇಶ್ವರ್ ಅವರು ಮಾಧ್ಯಮಗಳ ಎದುರು ಮೊದಲ ಕ್ಯಾಬಿನೆಟ್ ಅಲ್ಲಿಯೇ ಈ ಯೋಜನೆಗಳ ಜಾರಿಗೆ ಆದೇಶ ಮಾಡಲಾಗುತ್ತದೆ, ಕೆಲ ಕಂಡೀಷನ್ ಗಳ ಜೊತೆ ಯೋಜನೆ ಜಾರಿಗೆ ಬರುವುದು ಕಡಾ ಖಂಡಿತ ಎಂದು ಹೇಳಿದ್ದಾರೆ. ಕರ್ನಾಟಕದ ಜನತೆ ಈಗ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷವು ಎಲ್ಲರಿಗೂ ಉಚಿತ ಎಂದು ಹೇಳಿ ಈಗ ಏನೆನ್ನು ಕಂಡಿಷನ್ ಗಳನ್ನು ಹೇರಬಹುದು ಎಂದು ಚರ್ಚಿಸುತ್ತಿದ್ದಾರೆ.
ಇದಕ್ಕಾಗಿ ಮತ್ತೊಮ್ಮೆ ಮಗದೊಮ್ಮೆ ಅರ್ಜಿಗಳನ್ನು ಹಾಕುವ ಅವಶ್ಯಕತೆ ಇರುವುದಿಲ್ಲ. ಇನ್ನು ಮುಂದೆ ಕೂಡ ಇದು ಹೀಗೆ ಮುಂದುವರಿಯಲಿದೆ. ಕಾಂಗ್ರೆಸ್ ಸರ್ಕಾರ ಮನೆ ಒಡತಿಗೆ ಅಥವಾ ಮನೆ ಯಜಮಾನನಿಗೆ ಗೃಹಲಕ್ಷ್ಮಿ ಯೋಜನೆ ಹಣವನ್ನು ಮನೆ ಒಡತಿ ಅಥವಾ ಯಜಮಾನನಿಗೆ ಕೊಡುವುದು ಎಂದು ಸ್ಪಷ್ಟವಾಗಿ ಹೇಳಿರುವುದಿಂದ ಇದನ್ನು ಸದ್ಯಕ್ಕೆ ಜಾರಿಯಲ್ಲಿರುವ ರೇಷನ್ ಕಾರ್ಡ್ ಗಳ ಮೂಲಕ ಸುಲಭವಾಗಿ ಕಂಡುಹಿಡಿಯಬಹುದು.
ಕೇಂದ್ರ ಸರ್ಕಾರದ್ದೇ ಆಗಲೇ ರಾಜ್ಯ ಸರ್ಕಾರದ್ದೇ ಆಗಲಿ ಯಾವುದೇ ಯೋಜನೆಗಳ ಹಣವು ಈಗ ಆ ಫಲಾನುಭವಿಗಳ ಖಾತೆಗೆ DBT ಮೂಲಕ ನೇರವಾಗಿ ವರ್ಗಾವಣೆ ಆಗುತ್ತಿದೆ. ರೈತರ ಕಿಸಾನ್ ಸಮ್ಮಾನ್ ನಿಧಿ ಹಣ, ಕಾರ್ಮಿಕರ ಮಕ್ಕಳ ಸ್ಕಾಲರ್ ಶಿಪ್ ಮುಂತಾದವು ಎಲ್ಲವೂ ಕೂಡ ಫಲಾನುಭವಿಗಳು ಯಾವ ಬ್ಯಾಂಕ್ ಖಾತೆ NPCI ಗೆ ಲಿಂಕ್ ಆಗಿರುತ್ತದೆಯೋ ಆ ಖಾತೆಗೆ ವರ್ಗಾವಣೆ ಆಗುತ್ತಿದೆ.
ಹೀಗೆ ಮನೆಯೊಡತಿ ಮಹಿಳೆಯ ಆಗಿರುವುದರಿಂದ ರೇಷನ್ ಕಾರ್ಡ್ ಗೆ ಆಕೆಯ ಆಧಾರ್ ಕಾರ್ಡ್ ಲಿಂಕ್ ಆಗಿದ್ದರೆ ಮತ್ತು ಆಧಾರ್ ಕಾರ್ಡ್ ಲಿಂಕ್ ಆಗಿರುವ ಬ್ಯಾಂಕ್ ಅಕೌಂಟ್ ಗೆ ಯಾವ ಅರ್ಜಿ ಇಲ್ಲದೆ ಸರ್ಕಾರ ಉಚಿತವಾಗಿ ಗೃಹಲಕ್ಷ್ಮಿ ಯೋಜನೆ ಹಣ ಹಾಕಬಹುದು. ಆದರೆ ಇದು ಬಡವರಿಗಾಗಿ ಇರುವ ಯೋಜನೆ ಆಗಿರುವುದರಿಂದ APL ಕಾರ್ಡ್ ಹೊಂದಿರುವವರಿಗೆ ಈ ಸಹಾಯಧನ ಸಿಗುವುದಿಲ್ಲ.
ಯಾಕೆಂದರೆ ಈಗ ರೇಷನ್ ಕಾರ್ಡ್ ಗಳು ಯಜಮಾನನ ಹೆಸರಿನಲ್ಲಿರುತ್ತದೆ, ಕುಟುಂಬದ ಇತರ ಸದಸ್ಯರ ಹೆಸರುಗಳು ನಂತರ ಇರುತ್ತದೆ. ಹಾಗಾಗಿ ರೇಷನ್ ಕಾರ್ಡ್ ಅಲ್ಲಿ ಮೊದಲ ಹೆಸರು ಮೊದಲಿದೆಯೋ ಅವರೇ ಯಜಮಾನರಾಗುತ್ತಾರೆ. ಇತ್ತೀಚೆಗೆ ಅಪ್ಡೇಟ್ ಆಗಿರುವ ಹೊಸ ತಿದ್ದುಪಡಿ ಪ್ರಕಾರ ಎಲ್ಲರೂ ರೇಷನ್ ಕಾರ್ಡ್ ಕೂಡ ಮಹಿಳೆಯರ ಹೆಸರಿಗೆ ಆಗುತ್ತಿದೆ.
ಒಂದು ವೇಳೆ ಅರ್ಜಿ ಸಲ್ಲಿಸುವ ಮೂಲಕ ಸರ್ಕಾರ ಫಲಾನುಗಳನ್ನು ಪತ್ತೆ ಹಚ್ಚಲು ನಿರ್ಧರಿಸಿದರೆ ಇನ್ನಿತರ ಹೆಚ್ಚುವರಿ ಕಂಡೀಶನ್ ಗಳು ಇರಬಹುದು. ಅದಕ್ಕಾಗಿ ಇನ್ಯಾವುದೇ ಹೆಚ್ಚುವರಿ ದಾಖಲೆ ಪತ್ರಗಳನ್ನು ಕೂಡ ಕೇಳಬಹುದು. ಶೀಘ್ರದಲ್ಲಿಯೇ ಈ ಎಲ್ಲಾ ಗೊಂದಲಗಳಿಗೂ ಕೂಡ ತೆರೆ ಬೀಳಲಿದೆ, ಅಲ್ಲಿವರೆಗೂ ಕಾದು ನೋಡೋಣ.
0 Comments