ರಾಜ್ಯದಲ್ಲಿ ಮೇ 14 ರಿಂದ 20ರ ನಡುವಿನ ಅವಧಿಯಲ್ಲಿ ಹೊಸ ಬಿಪಿಎಲ್ ಕಾರ್ಡ್ಗಾಗಿ ಬರೋಬ್ಬರಿ 78 ಸಾವಿರ ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ, ತುರ್ತು ಆರೋಗ್ಯ ಚಿಕಿತ್ಸೆಗಾಗಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಮಾತ್ರ ಮೇ 18ರಿಂದ ವಿಲೇವಾರಿ ಮಾಡಿ ವಿತರಣೆ ಮಾಡಲಾಗುತ್ತಿದೆ. ಇನ್ನುಳಿದ ಹೊಸ ಅರ್ಜಿಗಳ ವಿಲೇವಾರಿ ಸ್ಥಗಿತಗೊಳಿಸಿದೆ. ಹೊಸ ಸರ್ಕಾರದ ಆದೇಶದ ಬಳಿಕ ಮುಂದಿನ ಅರ್ಜಿಗಳ ವಿಲೇವಾರಿ ಪ್ರಕ್ರಿಯೇ ಆರಂಭವಾಗಲಿದೆ.
ಸುಮಾರು 2.88 ಲಕ್ಷ ಬಿಪಿಎಲ್ ಕಾರ್ಡ್ ಅರ್ಜಿಗಳು ವಿಲೇವಾರಿಗಾಗಿ ಕಾಯುತ್ತಿವೆ.
ರಾಜ್ಯದಲ್ಲಿ 2023 ಜನವರಿಯಿಂದ ಮೇ 20ರವರೆಗೆ ತುರ್ತು ಆರೋಗ್ಯ ಸೇವಾ ಸೌಲಭ್ಯಕ್ಕಾಗಿ ಹೊಸ ಪಡಿತರ ಚೀಟಿ ಪಡೆಯಲು ಸುಮಾರು 4.25 ಲಕ್ಷ ಜನ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಎರಡು ತಿಂಗಳಿಂದ ಸರ್ವರ್, ದಾಖಲೆಗಳ ಸಮಸ್ಯೆ, ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಹೊಸ ಅರ್ಜಿಗಳ ವಿಲೇವಾರಿ, ಹೊಸ ಕಾರ್ಡ್ ವಿತರಣೆ ಕಾರ್ಯ ಸ್ಥಗಿತಗೊಂಡಿದೆ. ಇದರಿಂದಾಗಿ ಅರ್ಜಿ ಸಲ್ಲಿಸಿರುವ ಜನರು ಕಾರ್ಡ್ಗಳಿಗಾಗಿ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ.
ಗ್ಯಾರಂಟಿ ಯೋಜನೆಗಳಿಂದ ಬೇಡಿಕೆ: ಕಾಂಗ್ರೆಸ್ನ ಐದು ಗ್ಯಾರಂಟಿ ಯೋಜನೆಗಳ ಘೊಷಣೆ ನಂತರ ಮತ್ತು ಚುನಾವಣೆ ಫಲಿತಾಂಶದ ಬಳಿಕ ಬಿಪಿಎಲ್ ಕಾರ್ಡ್ಗಳಿಗೆ ಬೇಡಿಕೆ ಹೆಚ್ಚಿದೆ. ಅಲ್ಲದೆ, ಪ್ರತಿ ನಿತ್ಯ 8ರಿಂದ 10 ಜನರು ಹೊಸದಾಗಿ ಬಿಪಿಎಲ್ ಕಾರ್ಡ್ಗಾಗಿ ಅರ್ಜಿ ಸಲ್ಲಿಸುತ್ತಿದ್ದಾರೆ. ಇವರಲ್ಲಿ ನಗರ ಪ್ರದೇಶಗಳಲ್ಲಿನ ಜನರೇ ಅಧಿಕ ಸಂಖ್ಯೆಯಲ್ಲಿ ದ್ದಾರೆ. ನೂತನ ಸರ್ಕಾರದ ಸೂಚನೆಯ ಬಳಿಕ ಹೊಸ ಕಾರ್ಡ್ ಗಳ ವಿತರಣೆ, ಅರ್ಜಿಗಳ ವಿಲೇವಾರಿ ಕೆಲಸ ಆರಂಭವಾಗಲಿದೆ ಎಂದು ಆಹಾರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
2023 ಜನವರಿಗೆ ರಾಜ್ಯದಲ್ಲಿ ಬಿಪಿಎಲ್, ಅಂತ್ಯೋದಯ, ಎಪಿಎಲ್ ಸೇರಿ ಸುಮಾರು 5.28 ಕೋಟಿ ಜನರು ರೇಷನ್ ಕಾರ್ಡ್ ಫಲಾನುಭವಿಗಳಾಗಿದ್ದು, ಇವರಲ್ಲಿ ಸುಮಾರು 4.50ಲಕ್ಷಕ್ಕೂ ಅಧಿಕ ಅನರ್ಹ ಬಿಪಿಎಲ್ ಕಾರ್ಡ್ಗಳನ್ನು ರದ್ದುಪಡಿಸಲಾಗಿದೆ. ಜತೆಗೆ ಹೊಸ ಬಿಪಿಎಲ್ ಕಾರ್ಡ್ಗಾಗಿ ಸುಮಾರು 4.25 ಲಕ್ಷ ಜನರು ಅರ್ಜಿ ಸಲ್ಲಿಸಿದ್ದಾರೆ. ಇವರಲ್ಲಿ ಕೆಲ ಅನರ್ಹಗೊಂಡಿರುವ ಕಾರ್ಡ್ದಾರರು ಮತ್ತೆ ಅರ್ಜಿ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲ ಹೊಸ ಬಿಪಿಎಲ್ ಅರ್ಜಿಗಳನ್ನು ಮರು ಪರಿಶೀಲನೆ ನಡೆಸಲಾಗುತ್ತಿದೆ. ಸದ್ಯ ಹೊಸದಾಗಿ ಬಿಪಿಎಲ್ ಕಾರ್ಡ್ಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ಸಮಸ್ಯೆ ಇಲ್ಲ. ಆದರೆ, ಹೊಸ ಬಿಪಿಎಲ್ ಕಾರ್ಡ್ ಗಳ ವಿತರಣೆ, ಅರ್ಜಿಗಳ ವಿಲೇವಾರಿ ಕೆಲಸ ಬಂದ್ ಆಗಿದೆ ಎಂದು ಆಹಾರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಬಿಪಿಎಲ್ ಕಾರ್ಡ್ ಅರ್ಜಿ ಹಾಕಿದವರ ವಿವರಣೆ
ಜಿಲ್ಲೆ ಅರ್ಜಿಗಳು
ಬೆಳಗಾವಿ 86.072
ಕಲಬುರಗಿ 61.736
ರಾಯಚೂರು 40.009
ಬೆಂಗಳೂರು 43.692
ಬಾಗಲಕೋಟೆ 40.206
ವಿಜಯಪೂರ. 36.306
ತುಮಕೂರು 39.439
ಧಾರವಾಡ. 33.383
ಕರ್ನಾಟಕ ರಾಜ್ಯದ ಜನರಿಗೆ ಬಡತನದಲ್ಲಿ ಇರುವ ಬಿಪಿಎಲ್ ಕಾರ್ಡ್ ಯೋಜನೆ ರಾಜ್ಯ ಸರ್ಕಾರದ ಕಡೆಯಿಂದ ಅರ್ಜಿ ಹಾಕೋಕೆ ಯಾವುದೇ ರೀತಿಯ ಸಮಸ್ಯೆ ಇಲ್ದೇನೆ ಅರ್ಜಿಗಳನ್ನು ಹಾಕುವಂಥದ್ದು ಅರ್ಜಿ ಹಾಕಿರುವ ಅಭ್ಯರ್ಥಿಗಳಿಗೆ ಸರಿಯತಕ್ಕಂತಹ ಅರ್ಜಿಗಳನ್ನು ಪರಿಶೀಲನೆ ಮಾಡಿ ಅಪ್ರೋವೆಲ್ ಕೊಡುವಂತದ್ದು ರಾಜ್ಯ ಸರ್ಕಾರದ ಜನರಿಗೆ ಬಡತನದಲ್ಲಿ ಇರುವ ಬಿಪಿಎಲ್ ಕಾರ್ಡ್ ರಾಜ್ಯ ಸರ್ಕಾರ ಕಡು ಬಡವರಿಗೆ ಒದಗಿಸುತ್ತದೆ.
1 Comments
Renuka Mahadev Chana
ReplyDelete