ಗೃಹಲಕ್ಷ್ಮಿ ಯೋಜನೆಯಲ್ಲಿ ಮಹತ್ವದ ಬದಲಾವಣೆ / 2000 ನೀರಿಕ್ಷೆಯಲ್ಲಿ ಇದ್ದವರಿಗೆ ಬಿಗ್ ಶಾ-ಕ್. ಮನೆಯ ಯಜಮಾನಿಯರು ತಪ್ಪದೆ ಈ ಸುದ್ದಿ ನೋಡಿ

ಗೃಹಲಕ್ಷ್ಮಿ ಯೋಜನೆಯಲ್ಲಿ ಮಹತ್ವದ ಬದಲಾವಣೆ / 2000 ನೀರಿಕ್ಷೆಯಲ್ಲಿ ಇದ್ದವರಿಗೆ ಬಿಗ್ ಶಾ-ಕ್. ಮನೆಯ ಯಜಮಾನಿಯರು ತಪ್ಪದೆ ಈ ಸುದ್ದಿ ನೋಡಿ




 ಕಾಂಗ್ರೆಸ್ ಪಕ್ಷವು ಚುನಾವಣೆ ವೇಳೆ ಘೋಷಿಸಿಕೊಂಡಿದ್ದ 5 ಗ್ಯಾರಂಟಿ ಯೋಜನೆಗಳನ್ನು ಹಂತ ಹಂತವಾಗಿ ಜಾರಿಗೆ ತರುತ್ತಿದೆ. ಈಗಾಗಲೇ ಶಕ್ತಿ ಯೋಜನೆಯಡಿ ಕರ್ನಾಟಕದ ಮಹಿಳೆಯರು ಉಚಿತ ಪ್ರಯಾಣ ಮಾಡುತ್ತಿದ್ದಾರೆ. ಗೃಹಜೋತಿ ಯೋಜನೆಗೂ ಕೂಡ ಅರ್ಜಿ ಆಹ್ವಾನ ಆಗಿದ್ದು ಸರ್ಕಾರ ವಿಧಿಸಿರುವ ಷಲತ್ತಿನ ಒಳಗೆ ಜುಲೈ ತಿಂಗಳಿನಲ್ಲಿ ವಿದ್ಯುತ್ ಬಳಕೆ ಮಾಡುವವರಿಗೆ 200 ಯೂನಿಟ್ ವರೆಗೂ ಗೃಹಜ್ಯೋತಿ ಯೋಜನೆಗೆ ನೋಂದಾಯಿಸಿಕೊಂಡ ಕರ್ನಾಟಕದ ಎಲ್ಲಾ ಕುಟುಂಬಗಳು ಕೂಡ ಪಡೆಯಲಿವೆ.


ಹಾಗೆ ಅನ್ನಭಾಗ್ಯ ಯೋಜನೆ ಅಡಿ 10 ಕೆಜಿ ಪಡಿತರ ನೀಡಲಾಗುವುದು ಎಂದು ಹೇಳಿತ್ತಾದ್ದರೂ ದಾಸ್ತಾನು ಲಭ್ಯವಾಗದ ಕಾರಣ ಪ್ರತಿ ಸದಸ್ಯನಿಗೆ 170 ರೂಪಾಯಿಯಂತೆ ಹೆಚ್ಚುವರಿ ಅಕ್ಕಿಯ ಹಣವನ್ನು ಕುಟುಂಬದ ಮುಖ್ಯಸ್ಥರ ಖಾತೆಗೆ DBT ಮೂಲಕ ವರ್ಗಾವಣೆ ಮಾಡಲಾಗುತ್ತಿದೆ. ನವೆಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ಯುವನಿಧಿ ಯೋಜನೆ ಆರಂಭವಾಗುವ ಸಾಧ್ಯತೆ ಇದೆ.


ಅಂತಿಮವಾಗಿ ಕರ್ನಾಟಕದ ಮಹಿಳೆಯರೆಲ್ಲರೂ ಕಾಯುತ್ತಿರುವ ಕುಟುಂಬದ ಯಜಮಾನಿಗೆ 2000 ರೂ. ಸಹಾಯಧನವನ್ನು ಸಿಗುವ ಗೃಹಲಕ್ಷ್ಮಿ ಯೋಜನೆಗೆ ಯಾವಾಗ ಅರ್ಜಿ ಯಾವಾಗ ಆಹ್ವಾನ ಆಗುತ್ತದೆ ಎನ್ನುವುದರ ಕುರಿತು ಕೂಡ ಮಾಹಿತಿ ದಕ್ಕಿದೆ. ಆಗಸ್ಟ್ 16ರಂದು ಗೃಹಲಕ್ಷ್ಮಿ ಯೋಜನೆ ಲಾಂಚ್ ಆಗುತ್ತಿದೆ ಆ ದಿನ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು.


ಈ ಯೋಜನೆಯ ಫಲಾನುಭವಿಗಳಾದ ಎಲ್ಲಾ ಮಹಿಳೆಯರ ಖಾತೆಗೂ ಕೂಡ ಸಹಾಯವನ್ನು ನೇರ ವರ್ಗಾವಣೆ ಮೂಲಕ ಜಮೆ ಮಾಡಲಿದ್ದಾರೆ ಎಂದು ವಿಧಾನ ಪರಿಷತ್ ಅಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿದ್ದಾರೆ. ಹಾಗೆ ಈ ಯೋಜನೆ ಆರಂಭವಾಗುವ ದಿನಾಂಕದ ಬಗ್ಗೆ ಕೂಡ ಕೆಲ ಪ್ರಮುಖ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.


ಇನ್ನೆರಡು ದಿನಗಳಲ್ಲಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಆಹ್ವಾನದ ದಿನಾಂಕ ಅನೌನ್ಸ್ ಮಾಡಲಾಗುವುದು. ಈಗಾಗಲೇ ಸರ್ಕಾರ ಇದಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಮತ್ತು ಬಾಪೂಜಿ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಳ್ಳಲಾಗಿದೆ, ಸ್ವಯಂ ಪ್ರೇರಿತರಾಗಿ ಅರ್ಜಿ ಸಲ್ಲಿಸುವ ಮಹಿಳೆಯರಿಗೆ ಮೊಬೈಲ್ ಆಪ್ ಲಾಂಚ್ ಮಾಡಲಾಗುತ್ತದೆ.


ಆ ಮೂಲಕ ಕೂಡ ಅರ್ಜಿ ಸಲ್ಲಿಸಲು ಅವಕಾಶ ಇದೆ. ಮತ್ತು 1000 ಜನಸಂಖ್ಯೆಗೆ ಇಬ್ಬರಂತೆ ಪ್ರಜಾಪ್ರತಿನಿಧಿಗಳನ್ನು ಕೂಡ ನೇಮಕ ಮಾಡಿಕೊಳ್ಳುತ್ತಿದ್ದೇವೆ ಅವರು ಪ್ರತಿ ಮನೆಗಳಿಗೆ ತೆರಳಿ ಅರ್ಜಿ ಸಲ್ಲಿಸುವವರಿಗೆ ನೆರವಾಗುತ್ತಾರೆ ಎಂದು ತಿಳಿಸಿದ ಅವರು ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್, ರೇಷನ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಬುಕ್ ಮುಖ್ಯ ಎಂದು ತಿಳಿಸಿದ್ದಾರೆ.


ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿ ಎರಡರ ಮುಖಾಂತರ ಕೂಡ ಅರ್ಜಿ ಸಲ್ಲಿಸಲು ಅವಕಾಶ ಇದೆ. ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿದ್ದರು ಆಗದಿದ್ದರೂ ಕೂಡ ಅರ್ಜಿ ಸಲ್ಲಿಸಬಹುದು ಎಂದು ಹೇಳಿದ್ದಾರೆ. ಅನೇಕರು ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿರುತ್ತಾರೆ. ಒಂದು ವೇಳೆ ಅವರು ಈಗಾಗಲೇ ಲೋನ್ ಪಡೆದಿದ್ದರೆ ಅಂತಹ ಸಮಯದಲ್ಲಿ ಮಹಿಳೆಗೆ ಗೃಹಲಕ್ಷ್ಮಿ ಯೋಜನೆ ಸಹಾಯಧನ ದಕ್ಕುವುದಿಲ್ಲ.


ಆ ಕಾರಣಕ್ಕಾಗಿ ಆಧಾರ್ ಕಾರ್ಡ್ ಲಿಂಕ್ ಆಗದ ಖಾತೆ ಇದ್ದರೆ ಅದನ್ನು ಕೂಡ ಕೊಟ್ಟು ಅರ್ಜಿ ಸಲ್ಲಿಸಬಹುದು ಎನ್ನುವ ಸಿಹಿ ಸುದ್ದಿಯನ್ನು ಸಚಿವೆ ತಿಳಿಸಿದ್ದಾರೆ. ಇದರ ಜೊತೆ APL ಕಾರ್ಡ್ ಹೊಂದಿರುವ ಮಹಿಳೆಯರು ಕೂಡ ಅರ್ಜಿ ಸಲ್ಲಿಸಬಹುದು ಎನ್ನುವುದು ರಾಜ್ಯದ ಇನ್ನಷ್ಟು ಮಹಿಳೆಯರಿಗೆ ಸಮಾಧಾನ ತಂದಿದೆ. ಇದೇ ವಾರದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಆಹ್ವಾನ ಮಾಡುವ ಸಾಧ್ಯತೆ ಕೂಡ ಇದೆ ಕಾದು ನೋಡೋಣ


Post a Comment

0 Comments